ಒಂದು ಕಡೆ ಕಾಳಿದಾಸ, ‘ಕೆಡಿ – ದಿ ಡೆವಿಲ್’ ಆಗಿ ಹವಾ ಸೃಷ್ಟಿಸುವುದಕ್ಕೆ ನೋಡುತ್ತಿದ್ದರೆ, ಇನ್ನೊಂದು ಕಡೆ ಕನಕನಹಳ್ಳಿ ದಾಸೆಗೌಡರ ಮಗ ‘ಮೈ ನೇಮ್ ಈಸ್ ಕಡೆ’ ಆಗುವುದಕ್ಕೆ ತಯಾರಿ ನಡೆಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಚಿತ್ರ ಸಹ ಬಿಡುಗಡೆಯಾಗಲಿದೆ.
ಈ ಹಿಂದೆ ’ಇಂತಿ ನಿಮ್ಮ ಭೈರಾ’ ಚಿತ್ರವನ್ನು ಮಾಡಿದ್ದ ತಂಡವು, ಇದೀಗ ‘ಮೈ ನೇಮ್ ಈಸ್ ಕೆಡಿ’ ಚಿತ್ರ ಮಾಡಿದೆ. SSKB ಪ್ರೊಡಕ್ಷನ್ಸ್ ಅಡಿಯಲ್ಲಿ ವೆಂಕಟೇಶ್.ಡಿ ನಿರ್ಮಾಣ ಮಾಡಿದ್ದಾರೆ. ಕೆ.ಜೆ.ಚಿಕ್ಕು ನಿರ್ದೇಶನ ಮಾಡಿದ್ದಾರೆ.
ಇದೊಂದು ಕಾಮಿಡಿ ಚಿತ್ರವಾಗಿದ್ದು, ಕನಕಪುರ, ಹೆಸರುಘಟ್ಟ, ಆನೇಕಲ್, ಬೆಂಗಳೂರು ಕಡೆಗಳಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳು ಇರಲಿದ್ದು, ಡಿಸೆಂಬರ್ ತಿಂಗಳಲ್ಲಿ ಚಿತ್ರ ಬಿಡುಡೆಯಾಗಲಿದೆ.
ಇದನ್ನೂ ಓದಿ:-‘ಸಾಲಗಾರರ ಸಹಕಾರ ಸಂಘ’ ಎಂಬುದೊಂದಿದೆ; ನಿಮಗೆ ಗೊತ್ತಿದೆಯಾ?
ಈ ಚಿತ್ರದಲ್ಲಿ ಆರ್ಯನ್ ವೆಂಕಟೇಶ್ ನಾಯಕನಾಗಿ ಅಭಿನಯಿಸಿದರೆ, ’ಗಿಡುಗ’ದಲ್ಲಿ ಕಾಣಿಸಿಕೊಂಡಿದ್ದ ಭವಾನಿ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಹೊನ್ನವಳ್ಳಿ ಕೃಷ್ಣ, ಗಿರೀಶ್ ಜತ್ತಿ, ವಿಶ್ವ, ಯತಿರಾಜ್, ಅರಸು ಮಹಾರಾಜ್, ಸುಪ್ರೀತ್ ಕಾಟಿ, ರೋಹಿಣಿ ಮುಂತಾದವರು ನಟಿಸಿದ್ದಾರೆ. ಹಿತನ್ ಹಾಸನ್ ಸಂಗೀತ ಮತ್ತು ಸಂತೋಸ ಪಂಡಿ ಛಾಯಾಗ್ರಹಣವಿದೆ.
ಆರ್ಯನ್ ವೆಂಕಟೇಶ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ‘ಇಂತಿ ನಿಮ್ಮ ಭೈರಾ’ ಸಿನಿಮಾ ಗಳಿಕೆ ಕಡಿಮೆ ಬಂದಿತ್ತು. ಒಟಿಟಿಗೆ ಬಿಟ್ಟಾಗ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಇದರ ಸ್ಪೂರ್ತಿಯಿಂದಲೇ ಈಗ ಮತ್ತೊಮ್ಮೆ ಚಿತ್ರ ಮಾಡಿದ್ದೇವೆ. ಕನಕನಹಳ್ಳಿ ದಾಸೆಗೌಡರ ಮಗ ಎಂಬುದನ್ನು ಚಿಕ್ಕದಾಗಿ ಕೆಡಿ ಎಂದು ಹೆಸರನ್ನು ಇಡಲಾಗಿದೆ. ಅಮ್ಮನನ್ನು ಉಳಿಸಿಕೊಳ್ಳುವ ಸಲುವಾಗಿ ಏಳನೇ ತರಗತಿ ಓದುತ್ತಿರುವ ಪುತ್ರನು ಶಾಸಕನ ಬಳಿ ಸಹಾಯಕ್ಕೆ ಹೋಗುತ್ತಾನೆ. ಆದರೆ, ಆತ ಅವಮಾನ ಮಾಡಿ ಕಳಿಸುತ್ತಾನೆ. ಇದರಿಂದ ಕುಪಿತಕೊಂಡು ನಾನು ಮುಂದೆ ಒಳ್ಳೆಯ ರೀತಿಯಲ್ಲಿ ಹಣ ಗಳಿಸಿ MLA ಆಗಬೇಕೆಂದು ಪಣ ತೊಡುತ್ತಾನೆ. ಅದಕ್ಕಾಗಿ ಯಾವ ರೀತಿಯ ಸವಾಲುಗಳನ್ನು ಎದುರಿಸುತ್ತಾನೆ, ಅಂತಿಮವಾಗಿ ತನ್ನ ಹಾದಿಯಲ್ಲಿ ಯಶಸ್ಸು ಗಳಿಸುತ್ತಾನಾ ಎಂಬುದು ಚಿತ್ರದ ಸಾರಾಂಶ’ ಎಂದರು.
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…
ಮಂಡ್ಯ: ಸುಮಾರು 15 ತಿಂಗಳಿನಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ…
ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…
ಬಳ್ಳಾರಿ: ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಜಲಾಶಯದ ಮೇಲ್ಬಾಗದಲ್ಲಿ ಗೇಟ್ ಮುಂದೆ…
ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಮಹಿಳಾ ವಕೀಲೆಯೊಬ್ಬರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಕೀಲ…
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ…