ಮನರಂಜನೆ

ಶ್ರೀಮುರಳಿ ಹೊಸ ಚಿತ್ರ ‘ಉಗ್ರಾಯುಧಮ್’ಗೆ ಚಾಲನೆ

ಶ್ರೀಮುರಳಿ ಅಭಿನಯದ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆ ಕಳೆದೊಂದು ವರ್ಷದಿಂದ ಕೇಳಿಬರುತ್ತಲೇ ಇತ್ತು. ಅದಕ್ಕೆ ಉತ್ತರ ಮಾತ್ರ ಸಿಕ್ಕಿರಲಿಲ್ಲ. ಇದೀಗ ಶ್ರೀಮುರಳಿ ಅಭಿನಯದ ಎರಡು ಚಿತ್ರಗಳು ಒಂದು ವಾರದ ಅಂತರದಲ್ಲಿ ಶುರುವಾಗಿವೆ. ಕಳೆದ ವಾರವಷ್ಟೇ ಶ್ರೀಮುರಳಿ ಅಭಿನಯದ ‘ಪರಾಕ್‍’, ಶ್ರೀ ಬಂದೆ ಮಹಾಂಕಾಳಿ ದೇವಸ್ಥಾನದಲ್ಲಿ ಪ್ರಾರಂಭವಾಗಿತ್ತು. ಈಗ ಅದೇ ಸ್ಥಳದಲ್ಲಿ ಹೊಸ ಚಿತ್ರ ‘ಉಗ್ರಾಯುಧಮ್‍’ ಪ್ರಾರಂಭವಾಗಿದೆ.

‘ಉಗ್ರಾಯುಧಮ್‍’ ಚಿತ್ರಕ್ಕೆ ಶ್ರೀಮುರಳಿ ಅವರ ತಂದೆ ಹಾಗೂ ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಅವರು ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಎಸ್ ಎ.‌ಚಿನ್ನೇಗೌಡ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಜೊತೆಗೂಡಿ ಶೀರ್ಷಿಕೆ ಅನಾವರಣ ಮಾಡಿದರು.

‘ನಿದ್ರಾದೇವಿ ನೆಕ್ಸ್ಟ್ ಡೋರ್’ ಚಿತ್ರವನ್ನು ನಿರ್ಮಿಸಿದ್ದ ಜಯರಾಮ್‍ ದೇವಸಮುದ್ರ ಈ ‘ಉಗ್ರಾಯುಧಮ್‍’ ಚಿತ್ರವನ್ನು ನಿರ್ಮಿಸಿದರೆ, ಪುನೀತ್‍ ರುದ್ರನಾಗ್‍ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ‘ಪರಾಕ್‍’ ಮೊದಲು ಪ್ರಾರಂಭವಾಗಿದ್ದರೂ, ‘ಉಗ್ರಾಯುಧಮ್‍’ ಚಿತ್ರೀಕರಣ ಮೊದಲು ಪ್ರಾರಂಭವಾಗಲಿದ್ದು, ಮೊದಲು ಬಿಡುಗಡೆಯಾಗಲಿದೆ.

ಇದನ್ನು ಓದಿ : ‘ಜೋಡೆತ್ತು’ ಜತೆ ಬಂದ ಚಿಕ್ಕಣ್ಣ: ಮೂರು ಭಾಷೆಗಳಲ್ಲಿ ಮಹೇಶ್‍ ಸಿನಿಮಾ

‘ಉಗ್ರಾಯುಧಮ್‍’ ಕುರಿತು ಮಾತನಾಡಿದ ಪುನೀತ್‍ ರುದ್ರನಾಗ್‍, ‘ಇದೊಂದು 700 ವರ್ಷಗಳ ಹಿಂದಿನ ಪಿರಿಯಾಡಿಕ್ ಡ್ರಾಮ ಕಥಾಹಂದರ ಹೊಂದಿರುವ ಚಿತ್ರ. ನವೆಂಬರ್ ನಿಂದ ಚಿತ್ರೀಕರಣ ಆರಂಭವಾಗುತ್ತಿದೆ. ಸಕಲೇಶಪುರದ ಬಳಿ 135 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಅದ್ದೂರಿ ಸೆಟ್ ಹಾಕಲಾಗುತ್ತಿದ್ದು, ಅಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ. ನಾನು ಡಾ. ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಅವರ ಅಭಿನಯದ ಸಾಕಷ್ಟು ಐತಿಹಾಸಿಕ ಚಿತ್ರಗಳನ್ನು ನೋಡಿದ್ದೇನೆ. ಅದೇ ನನಗೆ ಈ ಚಿತ್ರ ನಿರ್ದೇಶನ ಮಾಡಲು ಸ್ಪೂರ್ತಿ’ ಎಂದರು.

ನಾನು ‘ಬಘೀರ’ ಚಿತ್ರದ ನಂತರ ಸುಮಾರು 200 ಕಥೆ ಕೇಳಿದ್ದೇನೆ ಎಂದು ಮಾತು ಪ್ರಾರಂಭಿಸಿದ ಶ್ರೀಮುರಳಿ, ‘ಅದರಲ್ಲಿ ನನಗೆ ಇಷ್ಟ ಆಗಿದ್ದು ಮೂರು ಕಥೆಗಳು ಮಾತ್ರ. ಆ ಪೈಕಿ ಎರಡು ಚಿತ್ರಗಳ ಮುಹೂರ್ತ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಇತ್ತೀಚೆಗೆ ನೆರವೇರಿದೆ. ‘ಬಘೀರ’ ಚಿತ್ರದ ನಂತರ ಬಿಡುಗಡೆಯಾಗುತ್ತಿರುವ ಶ್ರೀಮುರಳಿ ಅವರ ಚಿತ್ರ ಯಾವುದು ಅಂತ ಕೇಳಿದರೆ, ಅದು ‘ಉಗ್ರಾಯುಧಮ್’ ಅಂತ ಹೇಳಬಹುದು. ನಿರ್ದೇಶಕ ಪುನೀತ್ ರುದ್ರನಾಗ್ 700 ವರ್ಷಗಳ ಹಿಂದಿನ ಕಥೆಯನ್ನು ತೆರೆಯ ಮೇಲೆ ತರಲು ಮುಂದಾಗಿದ್ದಾರೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಹಂತಹಂತವಾಗಿ ನೀಡುತ್ತೇವೆ’ ಎಂದರು.

ಚಿತ್ರಕ್ಕೆ ದುಡಿಯುತ್ತಿರುವ ಇತರೆ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿ ಇನ್ನಷ್ಟೇ ಹೊರಬೀಳಬೇಕಿದೆ.

ಆಂದೋಲನ ಡೆಸ್ಕ್

Recent Posts

ಡಿಕೆಶಿ ಸಂಪುಟದಲ್ಲಿ ಡಾ.ಎಚ್‌ಸಿಎಂ ಕೈ ಬಿಟ್ಟಿದ್ದಕ್ಕೆ ದಸಂಸ ತೀವ್ರ ಅಸಮಾಧಾನ

ಮೈಸೂರು:  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ, ಅನುಭವಿ, ಹಾಗೂ ವೈಚಾರಿಕ ಪ್ರಜ್ಞೆಯ   ಸಮರ್ಥ ದಲಿತ ರಾಜಕಾರಣಿಯಾಗಿದ್ದ ಮಾಜಿ…

7 hours ago

ನನ್ನ ಗೆಲುವು ಜೆಡಿಎಸ್ ಭಿಕ್ಷೆ ಅಲ್ಲ, ನಾಗಮಂಗಲ ಜನರ ಭಿಕ್ಷೆ : ಸಚಿವ ಚಲುವರಾಯಸ್ವಾಮಿ

ನಾಗಮಂಗಲ : ನಾಲ್ಕನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರ ನಾಗಮಂಗಲಕ್ಕೆ ಆಗಮಿಸಿದ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ…

7 hours ago

ಓದುಗರ ಪತ್ರ: ಪುಷ್ಪ ವೃಷ್ಟಿ..!

ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…

18 hours ago

ಓದುಗರ ಪತ್ರ: ರೈತ ಮಕ್ಕಳ ವಿದ್ಯಾಭ್ಯಾಸ ಶುಲ್ಕದಲ್ಲಿ

ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…

18 hours ago

ಓದುಗರ ಪತ್ರ: ಧಾರ್ಮಿಕ ಮುಖಂಡರು ರೈತರ ಬೆನ್ನಿಗೆ ನಿಲ್ಲಬೇಕು

ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…

18 hours ago

ಧ್ರುವೀಕರಣದ ನೆಲೆಗಟ್ಟಿನ ಮೇಲೆ ರಾಜ್ಯ ರಾಜಕಾರಣ

ಆರ್.‌ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…

18 hours ago