ಮನರಂಜನೆ

ಸೌಂದರ್ಯ ಅವರನ್ನು ನೋಡೋಕೆ ಭಯವಾಗುತ್ತಿತ್ತು: ರಮೇಶ್‍ ನೆನಪು

‘ಭೈರಾದೇವಿ’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ರಮೇಶ್‍ಗೆ ‘ಆಪ್ತಮಿತ್ರ’ ಚಿತ್ರ ಪದೇಪದೇ ನೆನಪಗಾಗುತ್ತಿದೆ. ಅದಕ್ಕೆ ಕಾರಣವೂ ಇದೆ. ಆ ಕಾರಣವನ್ನು ರಮೇಶ್‍ ಇತ್ತೀಚೆಗೆ ಟ್ರೇಲರ್‍ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರವ ರಮೇಶ್ ಅರವಿಂದ್, ‘ಕಾಳಿ ಮೇಕಪ್‍ನಲ್ಲಿ ರಾಧಿಕಾ ಅವರನ್ನು ನೋಡಿದಾಗ, ‘ಮೇಡಂ ದಯವಿಟ್ಟು ಮೇಕಪ್‍ ತೆಗೆದು ಬನ್ನಿ ಎಂದು ಹೇಳಿದೆ. ‘ಆಪ್ತಮಿತ್ರ’ ಚಿತ್ರದಲ್ಲೂ ಸೌಂದರ್ಯ ಅವರಿಗೂ ಇದೇ ಹೇಳಿದ್ದೆ. ಕ್ಲೈಮ್ಯಾಕ್ಸ್ನಲ್ಲಿ ನಾಗವಲ್ಲಿ ಭಾಗದ ಚಿತ್ರೀಕರಣ ಮುಗಿಸಿ ಬಂದಾಗ, ಸೌಂದರ್ಯ ಅವರನ್ನು ನೋಡೋಕೆ ಭಯವಾಗುತ್ತಿತ್ತು. ಮೇಕಪ್‍ ತೆಗೆದು ಬನ್ನಿ ಆಮೇಲೆ ಮಾತಾಡೋಣ ಎಂದು ಹೇಳಿದ್ದೆ. ಆ ತರಹದ ಒಂದು ಶಕ್ತಿ ಕೆಲವು ಪಾತ್ರಗಳಿಗೆ ಇರುತ್ತದೆ’ ಎಂದರು.

ಈ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡುವ ಅವರು, ‘ಈ ಚಿತ್ರದಲ್ಲಿ ನಾನು ಖಡಕ್‍ ಪೊಲೀಸ್‍ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಚಿತ್ರದಲ್ಲಿ ಅವನು ಬೇರೆ ಲೋಕದಿಂದ ಬಂದ ಒಂದು ಶಕ್ತಿಯ ವಿರುದ್ಧ ಹೋರಾಡಬೇಕು. ಆಗ ಆ ಪೊಲೀಸ್‍ ಅಧಿಕಾರಿ ಏನು ಮಾಡುತ್ತಾನೆ ಎನ್ನುವುದು ಕಥೆ. ‘ಆಪ್ತಮಿತ್ರ’ ಚಿತ್ರದಲ್ಲಿ ನಮ್ಮ ಮನೆಯಲ್ಲೊಂದು ಸಮಸ್ಯೆ ಇರುತ್ತದೆ. ಆಗ ಅವಿನಾಶ್‍ ಅವರು ಬಂದು ಇಲ್ಲಿ ಏನೋ ಸಮಸ್ಯೆ ಇದೆ ಎಂದು ಹೇಳುತ್ತಾರೆ. ಅದೇ ರೀತಿ, ಈ ಚಿತ್ರದಲ್ಲಿ ಇನ್ನೊಂದು ಸಮಸ್ಯೆ ಎದುರಿಸುತ್ತಿರುತ್ತೇನೆ. ಅದನ್ನು ಪರಿಹರಿಸೋಕೆ ‘ಭೈರಾದೇವಿ’ ಬರುತ್ತಾರಾ, ಇಲ್ಲವೋ’ ಎಂಬುದೇ ಕಥೆ ಎಂದರು ರಮೇಶ್.

ಈ ಚಿತ್ರ ಇರೋದೇ ಸಾವಿನ ನಂತರ ಏನಾದರೂ ಇದೆಯಾ? ಎಂಬ ಕುತೂಹಲದ ಸುತ್ತ ಎನ್ನುವ ಅವರು, ‘ಒಂದು ವೇಳೆ ಸಾವಿನ ನಂತರ ಯಾರಾದರೂ ಮತ್ತೆ ಬಂದರೆ ಏನಾಗುತ್ತದೆ? ಎಂಬ ವಿಷಯದ ಬಗ್ಗೆ ಹೇಳುವ ಪ್ರಯತ್ನ ಮಾಡಲಾಗಿದೆ. ಈ ಚಿತ್ರಕ್ಕಾಗಿ ಶಾಂತಿನಗರದ ಸ್ಮಶಾನದಲ್ಲಿ ರಾತ್ರಿ ಚಿತ್ರೀಕರಣ ಮಾಡುತ್ತಿದ್ದೆವು. ಒಂದು ರಾತ್ರಿ ಒಬ್ಬರು ಲೇಡಿ ಕಾನ್ಸಟಬಲ್‍ ಬಂದರು. ನನ್ನ ಹತ್ತಿರ ಬಂದು ಒಂದು ಸೆಲ್ಫಿ ಬೇಕು ಎಂದರು. ‘ಮೂರು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಒಂದು ದಿನ ಒಳಗೆ ಬಂದಿರಲಿಲ್ಲ. ಪೊಲೀಸರೇ ಹಾಗೆ ಹೇಳುವಾಗ, ಚಿತ್ರತಂಡ ಅಲ್ಲಿ 10 ದಿನಗಳ ಕಾಲ ಚಿತ್ರೀಕರಣ ಮಾಡಿದೆ. ಹಗಲು-ರಾತ್ರಿ, ಹೀರೋ-ವಿಲನ್‍, ಹುಟ್ಟು-ಸಾವು ತರಹ ದಿವ್ಯಶಕ್ತಿ ಮತ್ತು ದುಷ್ಟಶಕ್ತಿ ಸಹ ಒಂದುದು ವೈರುಧ್ಯ. ಅವೆರಡೂ ಸವಾಲು ಹಾಕಿಕೊಂಡರೆ ಏನಾಗುತ್ತದೆ ಎನ್ನುವ ಚಿತ್ರವೇ ‘ಭೈರಾದೇವಿ’’ ಎಂದರು.

ಭೂಮಿಕಾ

Recent Posts

ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ ಜೊತೆಗೆ ಹೆಚ್ಚಿನ ಆದಾಯ ಪಡೆಯರಿ : ರೈತರಿಗೆ ಸಿಎಂ ಕರೆ

ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…

5 mins ago

ಟಿ-20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ :ಸೂರ್ಯಕುಮಾರ್ ಯಾದವ್ ನಾಯಕ

ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್‌ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…

16 mins ago

ಮೊಟ್ಟೆ ಕ್ಯಾನ್ಸರ್‌ ಕಾರಕವಲ್ಲ : ಕೇಂದ್ರ ವರದಿ

ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…

19 mins ago

‘ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಿ’ : ಶಿವಶಂಕರ್ ಸೂಚನೆ

ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…

24 mins ago

ಮೈಸೂರು | ನಾಳೆಯಿಂದ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ

ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…

48 mins ago

ರೇಸ್‌ಕ್ಲಬ್‌ ಸುತ್ತಮುತ್ತ ಕುದುರೆ ಚಟುವಟಿಕೆಗಳಿಗೆ ನಿರ್ಬಂಧ

ಮೈಸೂರು : ಮೈಸೂರಿನ ರೇಸ್‌ಕ್ಲಬ್‌ನ ಪ್ರದೇಶದ ಸುತ್ತಲಿನ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಕುದುರೆ, ಕತ್ತೆ, ಹೇಸರಗತ್ತೆ ಪ್ರಾಣಿಗಳ ಚಲನವಲನ, ಕುದುರೆಗಳನ್ನು…

1 hour ago