ಮೈಸೂರು ನಗರ

ಜೈಲಿಗೆ ಹೋಗಿ ಬಂದ್ರೂ ಬುದ್ಧಿ ಕಲಿಯದ ರಜತ್:‌ ಮತ್ತೊಂದು ಯಡವಟ್ಟು.!

ಮೈಸೂರು: ಪಾರಂಪರಿಕ ಕಟ್ಟಡದ ಬಳಿ ಸಿಗರೇಟ್‌ ಸೇದುತ್ತಾ ರಜತ್‌ ಫೋಟೋಶೂಟ್‌ ಮಾಡಿಸಿದ್ದು, ಬಿಗ್‌ಬಾಸ್‌ ಹುಡುಗನ ಹುಚ್ಚಾಟಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಪಾರಂಪರಿಕ ಕಟ್ಟಡವಾದ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿ ರಜತ್ ಸಿಗರೇಟ್ ಸೇದುತ್ತಾ ಕಾರಿನಿಂದ ಇಳಿಯುವ ವಿಲನ್ ಲುಕ್ಕಿನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಎರಡು ರೀತಿಯ ಫೋಟೋಶೂಟ್‌ ಮಾಡಿಸಿ ತಮ್ಮ ಅಧಿಕೃತ ಇನ್ಸ್‌ಸ್ಟಾಗ್ರಾಮ್‌ ಖಾತೆಗೆ ಶೇರ್‌ ಮಾಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವುದು ನಿಷೇಧ. ಈ ಎಲ್ಲಾ ವಿಷಯಗಳು ಗೊತ್ತಿದ್ದರೂ ರಜತ್‌ ಶೋಕಿಗಾಗಿ ರೀಲ್ಸ್ ಮಾಡಿ ಫೋಟೊಶೂಟ್ ಮಾಡಿಸಿದ್ದಾರೆ.

ಈ ಹಿಂದೆ ಶೂಟಿಂಗ್ ಸೆಟ್‌ನಲ್ಲಿ ಮಚ್ಚು ಹಿಡಿದು ಫೋಟೋಶೂಟ್ ಮಾಡಿಸಿಕೊಂಡು ಜೈಲಿಗೆ ಹೋಗಿ ಬೇಲ್ ಮೇಲೆ ಹೊರಬಂದಿದ್ದರು. ಆದರೂ ಬುದ್ಧಿ ಕಲಿಯದ ರಜತ್‌ ಈಗ ಮತ್ತೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾಡಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ನಮ್ಮ ತಂದೆ ಯಾವುದೇ ತಪ್ಪು ಮಾಡಿಲ್ಲ: ಯತೀಂದ್ರ ಸಿದ್ದರಾಮಯ್ಯ

ಮೈಸೂರು: “ನಮ್ಮ ತಂದೆ ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿಯೇ ಅವರು ಧೈರ್ಯವಾಗಿ ಮಾತನಾಡುತ್ತಿದ್ದಾರೆ!” ಸ್ಟಿಂಗ್ ಕಾರ್ಯಾಚರಣೆ ವಿಚಾರವಾಗಿ ಮೈಸೂರಿನಲ್ಲಿ ಯತೀಂದ್ರ…

10 hours ago

ನಮ್ಮದು ಸೌಜನ್ಯದ ಭೇಟಿಯಷ್ಟೇ: ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು:  ಭೇಟಿ ಮಾಡೋಕೆ ಬರ್ತಾರೆ ಕಣಯ್ಯ… ಅದರಲ್ಲೇನು?” ರಮೇಶ್ ಜಾರಕಿಹೊಳಿ ಹಾಗೂ ನರೇಂದ್ರ ಸ್ವಾಮಿ ಭೇಟಿ ವಿಚಾರವಾಗಿ ಮಾಧ್ಯಮಗಳು ಕೇಳಿದ…

10 hours ago

ಸ್ಟೇ ತಗೋಬಾರದಿತ್ತು, ಫೈಟ್ ಮಾಡಬೇಕಿತ್ತು – ಮೈಸೂರಿನಲ್ಲಿ ಸಿದ್ದು ಭೇಟಿಯಾದ ರಮೇಶ್‌ ಜಾರಕಿಹೊಳಿ

ಮೈಸೂರು: “ಸ್ಟೇ ತಗೋಬಾರದಿತ್ತು, ಧೈರ್ಯವಾಗಿ ಫೈಟ್ ಮಾಡಬೇಕಿತ್ತು!” ವಿವಾದಿತ ಸ್ಟಿಂಗ್ ಕಾರ್ಯಾಚರಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ನಡೆ ಕುರಿತು ಮಾಜಿ…

10 hours ago

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಈ ಬಾರಿ ಚಿನ್ನದ ಅಂಬಾರಿ ಹೊರಲಿದ್ದಾನೆ ಪ್ರಶಾಂತ

ಮೈಸೂರು: ಅಭಿಮನ್ಯು ಆನೆ ನಿವೃತ್ತಿಯಾದ ಬಳಿಕ ದಸರಾ ಗಜಪಡೆಯ ಮುಂದಿನ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಭಾರೀ ಕುತೂಹಲ…

10 hours ago

ರೇಣುಕಾಸ್ವಾಮಿಗೆ ಕುಟುಕು ಜೀವ; ದರ್ಶನ್ ರೋಷ ಭಾವ

ರೇಣುಕಾಸ್ವಾಮಿ ಕತ್ತಿನ ಮೇಲೆ ಕಾಲಿಟ್ಟು ಅದುಮುತ್ತಿದ್ದ ದರ್ಶನ್ ತನ್ನ ಕೈಯಲ್ಲಿದ್ದ ಸಿಗರೇಟ್‌ನಿಂದ ರೇಣುಕಾಸ್ವಾಮಿಯ ಎದೆಯ ಭಾಗಕ್ಕೆ ಸುಟ್ಟರು  " ನಾನು…

10 hours ago

ರೇಣುಕಾಸ್ವಾಮಿ ಎದೆಯ ಮೇಲೆ ನಿಂತು ಅದುಮುತ್ತಿದ್ದ ದರ್ಶನ್

ಕಾಫಿ ಜೊತೆ ಸಿಗರೇಟ್ ಸೇದುತ್ತಾ ದಿಢೀರನೆ ಬಂದು ಒದ್ದ ದರ್ಶನ್, ನಂತರ ಮರ್ಮಾಂಗಕ್ಕೆ ಎರಡು ಬಾರಿ ಒದೆತ ರೇಣುಕಾಸ್ವಾಮಿಗೆ ಬೀಳುತ್ತಿದ್ದ…

10 hours ago