Andolana originals

ಓದುಗರ ಪತ್ರ: ಭಲೆ ದರ್ಶನ್…ಭಲೆ ಭಲೆ…

ಕೆಲವು ದಿನಗಳ ಹಿಂದೆ ನಂಜನಗೂಡು ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ಡಾ. ಅಂಬೇಡ್ಕರ್ ಉದ್ಯಾನವನದಲ್ಲಿ ಅಭಿವೃದ್ಧಿ ಕಾರ್ಯಗಳ ನಿಮಿತ್ತ ಸ್ಥಳೀಯ ಶಾಸಕ ದರ್ಶನ್ ಧ್ರುವ ನಾರಾಯಣ ಆಗಮಿಸಿದ್ದರು. ಸಮಾರಂಭದ ಬಳಿಕ ಸಾರ್ವಜನಿಕರ ಅಹವಾಲುಗಳು ಹಾಗೂ ಕುಂದು ಕೊರತೆಗಳನ್ನು ವಿಚಾರಿಸಿ, ಪರಿಹರಿಸುತ್ತಿದ್ದರು. ಅದೇ ಸಮಯದಲ್ಲಿ ನಾನು ಅವರನ್ನು ಭೇಟಿಯಾಗಿ ನಂಜನಗೂಡಿನ ತಾಲ್ಲೂಕಿನ ಪ್ರತಿಷ್ಠಿತ ಸರ್ಕಾರಿ ಆದರ್ಶ ವಿದ್ಯಾಲಯ ಶಾಲೆ ಬಳಿ ರಸ್ತೆ ಉಬ್ಬು ಹಾಗೂ ಬಸ್ ಶೆಲ್ಟರ್ ನಿರ್ಮಿಸುವ ವಿಚಾರ ಸಂಬಂಧ ಮನವರಿಕೆ ಮಾಡಿದೆ.

ವಿಷಯಕ್ಕೆ ಸ್ಪಂದಿಸಿ ಅದರ ಮರುದಿನವೇ ಶಾಲೆಯ ಬಳಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಅಲ್ಲಿ ರಸ್ತೆ ಉಬ್ಬು ಹಾಗೂ ಬಸ್ ಶೆಲ್ಟರ್ ನಿರ್ಮಾಣ ಆಗಲಿರುವ ಮಾಹಿತಿ ಲಭ್ಯವಾಗಿದೆ.

ದರ್ಶನ್ ಮೊದಲ ಬಾರಿಗೆ ಶಾಸಕರಾಗುತಿದ್ದಂತೆ ಕ್ಷೇತ್ರದಲ್ಲಿ ಬಹುತೇಕ ಸಾರ್ವಜನಿಕರ ಅಭಿಪ್ರಾಯ ರಾಜಕೀಯದಲ್ಲಿ ಅನುಭವ ಇಲ್ಲ, ವಯಸ್ಸು ಕೂಡ ಚಿಕ್ಕದು, ಇವರು ಹೇಗೆ ನಿಭಾಯಿಸಬಲ್ಲರು ಎಂಬುದಾಗಿತ್ತು. ಅವರ ಉತ್ಸಾಹ ಕಾರ್ಯ ನಿರ್ವಹಣೆ, ಪರಿಶ್ರಮವನ್ನು ನೋಡುತ್ತಿದ್ದರೆ ಎಲ್ಲವನ್ನೂ ಸುಳ್ಳು ಮಾಡಿ ಜನರ ನಾಡಿ ಮಿಡಿತ, ಕಷ್ಟ ಕಾರ್ಪಣ್ಯಗಳು ಅಭಿವೃದ್ಧಿ ಕಾರ್ಯ, ಕುಂದು ಕೊರತೆ ಸಂಬಂಧಿಸಿದಂತೆ ನಿರಂತರವಾಗಿ ಕೆಲಸ ಕಾರ್ಯಗಳು ಆಗುತ್ತಿವೆ. ಸಾಮಾನ್ಯ ಜನರ ಕೈಗೂ ಸಿಗುವ ಇವರ ಜನಪರಧೋರಣೆ ನಿಜಕ್ಕೂ ಮೆಚ್ಚುವಂತಹದ್ದು.

– ಅನಿಲ್ ಕುಮಾರ್, ನಂಜನಗೂಡು

ಆಂದೋಲನ ಡೆಸ್ಕ್

Recent Posts

ಸಿಇಸಿ ಜ್ಞಾನೇಶ್​ ಕುಮಾರ್​ರನ್ನು ಹುದ್ದೆಯಿಂದ ಕೆಳಗಿಳಿಸುವ ನಿರ್ಣಯ; ಕೇರಳಂ ವಿಧಾನಸಭೆಯಲ್ಲಿ ಪಾಸ್​​

ಕೇರಳಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಆಗ್ರಹಿಸಿ ಕೇರಳಂ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಎಸ್‌ಐಆರ್‌…

17 hours ago

ಧನಂಜಯ ಆನೆಯ ಹೆಗಲಿಗೆ ಶ್ರೀರಂಗಪಟ್ಟಣ ದಸರಾ ಜವಾಬ್ದಾರಿ

ಶ್ರೀರಂಗಪಟ್ಟಣ: ಇಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಧನಂಜಯ, ಲಕ್ಷ್ಮಿ ಹಾಗೂ ರೂಪ ಆನೆಗಳು ಈ…

19 hours ago

ದಸರಾ ಗಜಪಡೆಗೆ 3ನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಿದ್ಧತೆಗಳು ಬಿರುಸುಗೊಂಡಿವೆ. ದಸರಾ ಗಜಪಡೆ ಹಾಗೂ ಅಶ್ವಪಡೆಗೆ ನಡೆದ ಮೂರನೇ ಹಂತದ ಕುಶಾಲತೋಪು…

19 hours ago

ಸತ್ಯಕ್ಕೆ ಅಂತಿಮ ಗೆಲುವಾಗಲಿದೆ: ರಾಹುಲ್‌ ಗಾಂಧಿ

ನವದೆಹಲಿ: ಸತ್ಯಕ್ಕೆ ಅಂತಿಮ ಗೆಲುವಾಗಲಿದೆ. ಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್…

19 hours ago

ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಟ ಪ್ರಭುದೇವ್

ಮೈಸೂರು: ಬಹುಭಾಷಾ ನಟ ಪ್ರಭುದೇವ್‌ ಅವರು ತಮ್ಮ ತಾಯಿಯೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು. ನಾಳೆ…

19 hours ago

ಹೆಣ ಹಾಕಬೇಕಿದ್ದು ತೋಪಿನಲ್ಲಿ; ಬಿಸಾಕಿದ್ದು…?

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…

23 hours ago