rajanikath
ರಜನಿಕಾಂತ್ ಅಭಿನಯದ ‘ಕೂಲಿ’ ಹೊಸ ದಾಖಲೆ ಬರೆಯುವುದಕ್ಕೆ ಮುಂದಾಗಿದೆ. ಚಿತ್ರವು ಆಗಸ್ಟ್.14ರಂದು ಬಿಡುಗಡೆಯಾಗುತ್ತಿದ್ದು, ಜಗತ್ತಿನಾದ್ಯಂತ ಮೊದಲ ದಿನದ ಅಡ್ವಾನ್ಸ್ ಬುಕ್ಕಿಂಗ್‍ನಿಂದ 50 ಕೋಟಿ ರೂ. ಗಳಿಕೆಯಾಗಿದೆ. ಈ ಮೊತ್ತ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದ್ದು, ಮೊದಲ ದಿನವೇ ಚಿತ್ರದ ಗಳಿಕೆ 100 ಕೋಟಿ ರೂ. ಮೀರಬಹುದು ಎಂದು ಅಂದಾಜಿಸಲಾಗಿದೆ.
ತಮಿಳು ಚಿತ್ರಗಳು ನೂರು ಕೋಟಿ ಕ್ಲಬ್‍ಗೆ ಸೇರುತ್ತಿರುವುದು ಹೊಸ ವಿಷಯವೇನಲ್ಲ. ಅಂಥದ್ದೊಂದು ಸಾಹಸ ಮೊದಲಿಗೆ ಮಾಡಿದ್ದು ರಜನಿಕಾಂತ್ ಅಭಿನಯದ ‘ಶಿವಾಜಿ – ದಿ ಬಾಸ್’. ಅಲ್ಲಿಂದ ಇಲ್ಲಿಯವರೆಗೂ ಹಲವು ತಮಿಳು ಚಿತ್ರಗಳು ನೂರು ಕೋಟಿ ರೂ. ಕ್ಲಬ್ ಸೇರಿವೆ.
100 ಕೋಟಿ ರೂ. ಕ್ಲಬ್‍ನಲ್ಲಿ ಕೆಲವು ತಮಿಳು ಚಿತ್ರಗಳಿದ್ದರೂ, ಮೊದಲ ದಿವಸವೇ ಅಂಥದ್ದೊಂದು ದಾಖಲೆ ಮಾಡಿದ್ದು ವಿಜಯ್ ಅಭಿನಯದ ‘ಲಿಯೋ’. ಈ ಚಿತ್ರವು ಮೊದಲ ದಿನವೇ 100 ಕೋಟಿ ರೂ. ಕ್ಲಬ್ ಸೇರಿತ್ತು. ಆ ಚಿತ್ರವನ್ನು ನಿರ್ದೇಶಿಸಿದ್ದವರು ಲೋಕೇಶ್ ಕನಕರಾಜ್. ಈಗ ಅವರದ್ದೇ ನಿರ್ದೇಶನದ ‘ಕೂಲಿ’ ಸಹ ಮೊದಲ ದಿನವೇ 100 ಕೋಟಿ ಕ್ಲಬ್ ಸೇರುವ ಸೂಚನೆ ನೀಡಿದೆ. ಹಾಗೊಂದು ಪಕ್ಷ ಸೇರಿದರೆ, ಲೋಕೇಶ್ ಕನಕರಾಜ್ ತಾವೇ ಮಾಡಿದ ದಾಖಲೆಯನ್ನು ತಾವೇ ಮುರಿದಂತಾಗುತ್ತದೆ.
ಇದುವರೆಗೂ ಸುಮಾರು 6.8 ಲಕ್ಷ ಟಿಕೆಟ್‍ಗಳು ಮಾರಾಟವಾಗಿವೆ ಎಂದು ಹೇಳಲಾಗುತ್ತಿದೆ. ಆ ಸಂಖ್ಯೆ ಮುಂದಿನ ದಿನಗಳಲ್ಲಿ 10 ಲಕ್ಷ ಆಗುವ ನಿರೀಕ್ಷೆ ಇದೆ. ಚಿತ್ರಕ್ಕೆ ಇಷ್ಟೊಂದು ಹೈಪ್ ಆಗುವುದಕ್ಕೆ ಪ್ರಮುಖ ಕಾರಣ ಚಿತ್ರದ ತಾರಾಗಣ ಮತ್ತು ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನದ ಹಾಡುಗಳು.
‘ಕೂಲಿ’ ಚಿತ್ರದಲ್ಲಿ ರಜನಿಕಾಂತ್, ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್, ಶ್ರುತಿ ಹಾಸನ್, ಶೌಭಿನ್ ಶಾಹಿರ್ ಮುಂತಾದವರು ನಟಿಸಿದ್ದು, ಲೋಕೇಶ್ ಕನಕರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನು, ಸನ್ ಪಿಕ್ಚರ್ಸ್ ಕಲಾನಿಧಿ ಮಾರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್‌ನಲ್ಲಿ ಖತರ್ನಾಕ್ ರಾಬರಿ ಗ್ಯಾಂಗ್ ಒಂದಲ್ಲ, ಎರಡಲ್ಲ ಬರೋಬರಿ 400 ಕೋಟಿ…
ಮೂವರು ಕನ್ನಡಿಗರಿವರು ; ಮಂಡ್ಯದ ಅಂಕೇಗೌಡ, ದಾವಣಗೆರೆಯ ಡಾ. ಸುರೇಶ್ ಹನಗವಾಡಿ, ಬೆಂಗಳೂರಿನ ಎಸ್.ಜಿ. ಸುಶೀಲಮ್ಮ ಬೆಂಗಳೂರು : ದೇಶದ…
ಮೈಸೂರು : ಮುಂದಿನ ಬಜೆಟ್ ಮಂಡನೆಗೆ ಫೆ.2 ರಿಂದ ಇಲಾಖಾವಾರು ಅಧಿಕಾರಿಗಳ ಸಭೆ ನಡೆಸಿ ತಯಾರಿ ಶುರು ಮಾಡಲಿದ್ದೇನೆ ಎಂದು…
ಮೈಸೂರು : ಕರ್ನಾಟಕದಲ್ಲಿ ಬಿಜೆಪಿ-ಜಾ.ದಳ ಒಂದಾದರೂ ಅಧಿಕಾರಕ್ಕೆ ಬರಲ್ಲವೆಂದು ಭವಿಷ್ಯ ನುಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 2028ಕ್ಕೂ ನಾವೇ ಅಧಿಕಾರಕ್ಕೆ ಬರುವುದು…
ಬೆಂಗಳೂರು : ಪ್ರತಿವರ್ಷ ಗಣರಾಜ್ಯೋತ್ಸವ ದಿನದಂದು ಪೊಲೀಸರಿಗೆ ತಾವು ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಕೊಡಮಾಡುವ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು,…
ಬೆಳಗಾವಿ : ಕರ್ನಾಟಕ-ಗೋವಾ-ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ದೇಶದ ಇತಿಹಾಸದಲ್ಲೇ ಅತಿದೊಡ್ಡ ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ…