Andolana originals

ಮತ್ತೆ ಚಿಗುರೊಡೆದ ಎಂಡಿಎ ಹೊಸ ಬಡಾವಣೆಯ ಕನಸು

ಅಧಿಕಾರಿಗಳ ಮನವೊಲಿಕೆಗೆ ಸಮ್ಮತಿಸುತ್ತಿರುವ ಭೂ ಮಾಲೀಕರು

ಕೆ.ಬಿ.ರಮೇಶನಾಯಕ

ಮೈಸೂರು : ದಶಕಗಳಿಂದಲೂ ಬಡ-ಮಧ್ಯಮ ವರ್ಗದ ಜನರಿಗೆ ನಿವೇಶನ ಹಂಚಿಕೆ ಮಾಡಲು, ಹೊಸ ಬಡಾವಣೆ ರಚಿಸಲು ಸಾಧ್ಯವಾಗದೆ ಕೈ ಚೆಲ್ಲಿದ್ದ ಎಂಡಿಎ ಅಧಿಕಾರಿ ವರ್ಗ ಕೊನೆಗೂ ಹೊಸ ಬಡಾವಣೆ ರಚನೆಗೆ ಮುಂದಾಗಿರುವುದರಿಂದ ನಿವೇಶನಾಕಾಂಕ್ಷಿಗಳಲ್ಲಿ ಮತ್ತೆ ಕನಸು ಚಿಗುರೊಡೆದಿದೆ.

ಮುಡಾವು ಮೈಸೂರು ಅಭಿವೃದ್ಧಿ ಪ್ರಾಧಿಕಾರವಾಗಿ ಪುನಾರಚನೆಯಾದ ಮೇಲೆ ಆಡಳಿತಾತ್ಮಕ ಮತ್ತು ಕಾರ್ಯಶೈಲಿಯಲ್ಲಿ ಬದಲಾವಣೆ ತರಲು ರೂಪಿಸಿರುವ ಹೊಸ ಬಡಾವಣೆಗಳ ರಚನೆಯನ್ನು ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತರಲು ಬರೋಬ್ಬರಿ 460 ಕೋಟಿ ರೂಪಾಯಿ ಮೀಸಲಿಟ್ಟಿರುವುದು ಗಮನಾರ್ಹವಾಗಿದೆ. ಇದರಿಂದಾಗಿಯೇ 50:50 ಅನುಪಾತದಲ್ಲಿ ಬಡಾವಣೆ ರಚಿಸಲು ಹೊರಟಿರುವ ಎಂಡಿಎ ಕಾರ್ಯಕ್ಕೆ ಭೂ ಮಾಲೀಕರು ಕೈ ಜೋಡಿಸಿ ಭೂಮಿ ಕೊಡಲು ಸಮ್ಮತಿ ಸುತ್ತಿರುವುದು ಅಧಿಕಾರಿಗಳ ವಲಯದಲ್ಲಿ ಸಂತಸವನ್ನುಂಟು ಮಾಡಿದೆ.

ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರ ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿ ರುವುದರಿಂದ ಹೊರವಲಯದಲ್ಲಿ ನಿವೇಶನಗಳಿಗೂ ಭಾರೀ ಬೇಡಿಕೆ ಬಂದಿದೆ. ಹೊರ ವಲಯದಲ್ಲಿ ರಚನೆಯಾಗಿದ್ದ ಆರ್.ಟಿ.ನಗರ, ಸರ್ದಾರ್ ವಲ್ಲಭಬಾಯ್ ಪಟೇಲ್ ನಗರ ಬಡಾವಣೆಯೇ ಕೊನೆಯಾಗಿತ್ತು. ಕಳೆದ ಒಂದೂವರೆ ದಶಕಗಳಿಂದಲೂ ಬಡಾವಣೆಗಳನ್ನು ರಚಿಸಲು ರೈತರು ಭೂಮಿ ಕೊಡಲು ಹಿಂದೇಟು ಹಾಕುತ್ತಿದ್ದರು. ಸಕಾಲಕ್ಕೆ ಭೂಮಿ ಪರಿಹಾರ ಕೊಡದೆ ಇರುವುದು ಸೇರಿದಂತೆ ನಾನಾ ಕಾರಣಕ್ಕಾಗಿ ಅಧಿಕಾರಿಗಳು ಅರ್ಧಕ್ಕೆ ಪ್ರಯತ್ನವನ್ನು ಕೈಚೆಲ್ಲಿ ಕುಳಿತುಕೊಳ್ಳುತ್ತಿದ್ದರು. ಹೀಗಾಗಿ, ಖಾಸಗಿ ಬಡಾವಣೆ ಗಳಲ್ಲಿ ನಿವೇಶನ ಖರೀದಿ ಸುವುದು ದುಸ್ತರವಾಗುತ್ತಿತ್ತು. ಅದರಲ್ಲೂ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದೊಂದು ನಿವೇಶನ ಖರೀದಿಸಬೇಕಾದರೂ ಕೋಟಿಗಟ್ಟಲೆ ಬಂಡವಾಳ ಹಾಕಬೇಕಾದ ಸನ್ನಿವೇಶ ನಿರ್ಮಾಣವಾಗಿದ್ದರಿಂದ ಸರ್ಕಾರದಿಂದ ರಚನೆ ಮಾಡುವ ಬಡಾವಣೆಗಳ ನಿವೇಶನಗಳನ್ನು ಕಾದು ಕುಳಿತಿದ್ದಾರೆ. ಹಿಂದಿನ ಮುಡಾದಲ್ಲಿ ಉಂಟಾದ ಹಲವು ಅಕ್ರಮ, ಅವ್ಯವಹಾರಗಳಿಂದ ಸಾರ್ವಜನಿಕ ವಲಯದಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದರಿಂದ ಮುಡಾ ವಿಸರ್ಜಿಸಿ ರಾಜ್ಯ ಸರ್ಕಾರ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿತ್ತು. ಇದೀಗ ಸಾರ್ವಜನಿಕ ವಲಯದಲ್ಲಿ ಉಂಟಾಗಿರುವ ಹಲವು ಅಪವಾದಗಳನ್ನು ದೂರ ಮಾಡಲು ಮುಂದಾಗಿರುವ ಎಂಡಿಎ ಗುಂಪು ಮನೆಗಳ ನಿರ್ಮಾಣಕ್ಕಿಂತಲೂ ನಿವೇಶನ ರಚನೆ ಮಾಡಲು ವಸತಿ ಬಡಾವಣೆ ಅಭಿವೃದ್ಧಿಪಡಿಸಲು ನಿರ್ಧರಿಸಿರುವುದು ಆಕಾಂಕ್ಷಿಗಳ ಕನಸು ಮತ್ತೆ ಗರಿಗೆದರುವಂತೆ ಮಾಡಿದೆ.

ಅನುದಾನ ಮೀಸಲು: ಮೈಸೂರಿನ ಹೊರವಲಯದ ಬೊಮ್ಮೇನಹಳ್ಳಿ, ಕಮರಹಳ್ಳಿ ಹಾಗೂ ಇತರೆ ಗ್ರಾಮಗಳಲ್ಲಿ ರೈತರ ಸಹಭಾಗಿತ್ವದಲ್ಲಿ ಬಡಾವಣೆ ನಿರ್ಮಾಣ ಯೋಜ ನೆಗೆ 460 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಅಂದಾಜು 2,500 ಎಕರೆ ಪ್ರದೇಶದಲ್ಲಿ ವಿವಿಧ ಅಳತೆಯ 40 ಸಾವಿರ ನಿವೇಶನಗಳನ್ನು ರಚಿಸಲು ನೀಲನಕ್ಷೆ ರೂಪಿಸುತ್ತಿರುವ ಅಧಿಕಾರಿಗಳು ಈಗಾಗಲೇ ರೈತರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಬೊಮ್ಮೇನಹಳ್ಳಿಯ ಭೂಮಾಲೀಕರು ಜಮೀನು ಕೊಡಲು ಸಮ್ಮತಿಸುತ್ತಿದ್ದಂತೆ ಈತನಕ 500 ಎಕರೆ ಪ್ರದೇneಶ ವನ್ನು ಕೊಡಲು ಸಮ್ಮತಿಸಿದ್ದು ಶೀಘ್ರದಲ್ಲೇ ಒಪ್ಪಂದ ಪತ್ರಸಹಿ ಹಾಕುವ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.

ಅಭಿವೃದ್ಧಿಪಡಿಸಿದ ನಿವೇಶನ ಹಂಚಿಕೆ: ಎಂಡಿಎನಿಂದ 50:50 ಅನುಪಾತದಲ್ಲಿ ಹೊಸ ಬಡಾವಣೆಗಳನ್ನು ರಚಿಸುವ ಕಾರಣ ಭೂ ಪರಿಹಾರದ ಜತೆಗೆ, ರೈತರಿಗೆ ಶೇ.50ರಷ್ಟು ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ. ಭೂ ಪರಿಹಾರದ ಜತೆಗೆ ಅಭಿವೃದ್ಧಿಪಡಿಸಿದ ನಿವೇಶನಗಳು ಕೂಡ ದೊರೆಯುವುದರಿಂದ ಮಾರುಕಟ್ಟೆ ದರಕ್ಕೆ ತಕ್ಕಂತೆ ನಿವೇಶನ ಮಾರಾಟ ಮಾಡಬಹುದಾಗಿರುವ ಕಾರಣ ದೊಡ್ಡ ಆದಾಯವೂ ಬರಲಿದೆ. ಯಾವ ಗೊಂದಲವೂ ಇಲ್ಲದೆ ಬಡಾವಣೆ ಕೆಲಸ ಪೂರ್ಣಗೊಳಿಸಿ ನಿವೇಶನ ಹಂಚಿಕೆ ಮಾಡಲು ಸುಲಭವಾಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಶೀಘ್ರದಲ್ಲೇ ಪ್ರಸ್ತಾವನೆ: ಹೊಸ ಬಡಾವಣೆ ರಚನೆ ಸಂಬಂಧ 460ಕೋಟಿ ರೂ.ಅನುದಾನ ಕಾಯ್ದಿರಿಸಿರುವು ದರಿಂದ ಸರ್ಕಾರಕ್ಕೆ ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಸಲಾ ಗುತ್ತದೆ. 50:50 ಅನುಪಾತದಲ್ಲಿ ಬಡಾವಣೆ ರಚಿಸಲು ಎಂಡಿಎ ಕಾಯ್ದೆಯಲ್ಲಿ ಅವಕಾಶ ಇದ್ದರೂ ಸರ್ಕಾರದ ಒಪ್ಪಿಗೆ ಪಡೆಯಬೇಕಿದೆ. ಭೂಮಾಲೀಕರೊಂದಿಗೆ ಒಡಂ ಬಡಿಕೆ ಪತ್ರವನ್ನು ಮಾಡಿಕೊಂಡು ಅದರಂತೆ ಕೆಲಸ ಶುರು ವಾಗಲಿದೆ. ಈಗಾಗಲೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಕೂಡ ಉತ್ಸುಕತೆ ತೋರಿರುವು ದರಿಂದ ಯುಗಾದಿ ಹಬ್ಬದ ಹೊತ್ತಿಗೆ ಸಿಹಿ ಸುದ್ದಿ ದೊರೆಯಲಿದೆ.

50:50 ಅನುಪಾತದಲ್ಲಿ ಹೊಸ ಬಡಾವಣೆಗಳನ್ನು ರಚಿಸಲು ರೈತರು ಸಮ್ಮತಿಸುತ್ತಿದ್ದು, ಈ ತನಕ 500 ಎಕರೆಯಷ್ಟು ಭೂಮಿ ಕೊಡಲು ಒಪ್ಪಿಗೆ ದೊರೆತಿದೆ. ಅಭಿವೃದ್ಧಿಪಡಿಸಿದ ನಿವೇಶನವನ್ನು ರೈತರಿಗೆ ಬಿಟ್ಟು ಕೊಡುವ ಕಾರಣ ಮಾಲೀಕರು ಹಾಗೂ ಎಂಡಿಎಗೂ ಅನುಕೂಲವಾಗಲಿದೆ.
ಕೆ.ಆರ್.ರಕ್ಷಿತ್, ಆಯುಕ್ತರು, ಎಂಡಿಎ

ಆಂದೋಲನ ಡೆಸ್ಕ್

Recent Posts

ಮೈಸೂರು: ಹೊಸ ಮಠದ ಚಿದಾನಂದ ಸ್ವಾಮೀಜಿ ಲಿಂಗೈಕ್ಯ

ಮೈಸೂರು: ಮೈಸೂರಿನ ಶಂಕರ ಮಠದ ರಸ್ತಯಲ್ಲಿರುವ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ…

4 hours ago

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

10 hours ago

ಓದುಗರ ಪತ್ರ: ವೈದ್ಯಕೀಯ ಸೀಟು ಹೆಚ್ಚಳ: ಪ್ರಶಂಸನೀಯ ನಡೆ

೨೦೨೮ - ೨೯ ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ ಹೆಚ್ಚುವರಿಯಾಗಿ ೫,೦೦೦ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ…

10 hours ago

ಓದುಗರ ಪತ್ರ: ಬಂದ್ ಮಾಡುವುದರಿಂದ ನಮಗೇ ತೊಂದರೆ ಅಲ್ಲವೇ?

ಪ್ರಸ್ತುತ ವರ್ಷ ಮುಂಗಾರು ಕೈಕೊಟ್ಟಿದ್ದು ಎಲ್‌ನಿನೋ ಪರಿಣಾಮ ಎಂದು ವರದಿಗಳು ಹೇಳಿವೆ. ಜೊತೆಗೆ ಹವಾಮಾನ ಇಲಾಖೆ ಅದನ್ನು ಪುಷ್ಟೀಕರಿಸಿದ್ದು, ಈ…

10 hours ago

ತಂಬಾಕು ನಿಯಂತ್ರಣ: ಕೇಂದ್ರ ದ್ವಂದ್ವ ನೀತಿ

ವಸಂತಕುಮಾರ ಮೈಸೂರು ಮಠ, ತಂಬಾಕು ವಿರೋಧಿ ಹೋರಾಟಗಾರ ಗುಣಮಟ್ಟದ ತಂಬಾಕು ಬೆಳೆ ಸಂಬಂಧ ರಾಜಕೀಯ ಹಸ್ತಕ್ಷೇಪ ಸಲ್ಲದು ಯಾವುದೇ ರೀತಿಯ…

11 hours ago

ಮಳೆಗಾಲದಲ್ಲಿ ಶುದ್ಧ ಕುಡಿಯುವ ನೀರು, ಬಿಸಿ ನೀರು ಒದಗಿಸಿ

ನವೀನ್ ಡಿಸೋಜ ಸಾಂಕ್ರಾಮಿಕ ಕಾಯಿಲೆಯಲ್ಲಿ ಹಿನ್ನೆಲೆ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಆಹಾರ ಸುರಕ್ಷತೆ ಇಲಾಖೆ ಸೂಚನೆ  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ…

11 hours ago