ಬೇಸಿಗೆ ಆರಂಭವಾಗುವುದೇ ತಡ ಪ್ರತಿಯೊಬ್ಬರಿಗೂ ಬಾಯಾರಿಕೆ ಹೆಚ್ಚಾಗಿ, ಜಾಸ್ತಿ ನೀರು ಕುಡಿಯಬೇಕಾಗುತ್ತದೆ. ಬಿಸಿಲಿನ ಬೇಗೆ ಹೆಚ್ಚಾಗುವುದರಿಂದ ಎಂತಹವರಿಗೂ ವಿವಿಧ ರೀತಿಯ ತಂಪು ಪಾನೀಯ ಕುಡಿಯಬೇಕು ಎನಿಸುತ್ತದೆ. ಮನುಷ್ಯರಾದ ನಮಗೇ ಹೀಗೆ ಅನಿಸಬೇಕಾದರೆ, ನಮ್ಮಂತೆಯೇ ಜೀವಿಸುವ ಪ್ರಾಣಿ, ಪಕ್ಷಿಗಳ ಪಾಡು ಯಾವ ರೀತಿ ಇರಬಹುದೆಂದು ಊಹಿಸಿ.
ಇಂತಹ ಬಿಸಿಲಿಗೆ ಪ್ರಾಣಿ, ಪಕ್ಷಿಗಳು ತಮ್ಮ ದಾಹವನ್ನು ನೀಗಿಸಿಕೊಳ್ಳಲು ನೀರಿಗಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸುತ್ತವೆ. ಬಿಸಿಲಿನ ಬೇಗೆಗೆ ಹಲವು ಕಡೆ ಕೆರೆ-ಕಟ್ಟೆಗಳಲ್ಲಿನ ನೀರೂ ಬತ್ತಿ ಹೋಗಿರುತ್ತದೆ. ಹೀಗೆ ನೀರಿಲ್ಲದೆ ಪ್ರಾಣಿ, ಪಕ್ಷಿಗಳು ಪರದಾಡಬೇಕಾಗುತ್ತದೆ. ಆದ್ದರಿಂದ ಕನಿಷ್ಠಪಕ್ಷ ನಮ್ಮ ಸುತ್ತಮುತ್ತ ವಿವಿಧ ರೀತಿಯ ಪಕ್ಷಿಗಳು ಹಾರಾಡುತ್ತಿದ್ದಾರೆ, ಅವುಗಳನ್ನು ಗಮನಿಸಿ ಮನೆ ಮುಂದೆ, ಅಥವಾ ಮನೆಯ ಮೇಲೆ ಒಂದು ಚೆಂಬು ನೀರು ಇಟ್ಟರೆ ಅವುಗಳ ದಾಹವನ್ನು ಸ್ವಲ್ಪಮಟ್ಟಿಗಾದರೂ ನೀಗಿಸುವಂತಾಗುತ್ತದೆ. ಜೊತೆಗೆ ಬೇಸಿಗೆ ಮುಗಿಯುವವರೆಗೂ ದಿನನಿತ್ಯ ಮನೆ ಮುಂದೆ ನೀರು ಇಡುವ ಮುಖಾಂತರ ಮಾನವೀಯತೆ ತೋರಿಸುವುದು ಮನುಷ್ಯ ಧರ್ಮ ಎಂದು ಭಾವಿಸಬಹುದು.
– ಬಿ.ಎಸ್.ಸಾಯಿ ಸಂದೇಶ್, ಮೈಸೂರು
ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…
ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…
ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…
ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…
ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…