ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ರನ್ನು ಹಾಸ್ಯನಟ ಸಾಧುಕೋಕಿಲ ಭೇಟಿ ಮಾಡಿ ಸಮಾಧಾನ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್ರನ್ನು ನೋಡಲು ಸೆಲೆಬ್ರಿಟಿಗಳು ಸೇರಿದಂತೆ ಕುಟುಂಬಸ್ಥರು ಆಗಾಗ್ಗೆ ಭೇಟಿ ನೀಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿಂದು ಸಾಧುಕೋಕಿಲ ಅವರು, ಮೊದಲ ಬಾರಿಗೆ ದರ್ಶನ್ ಭೇಟಿ ಮಾಡಲು ಪರಪ್ಪನ ಅಗ್ರಹಾರ ಜೈಲಿಗೆ ವಕೀಲರ ಜೊತೆ ಆಗಮಿಸಿದ್ದರು.
ಇಂದು ಬೆಳಿಗ್ಗೆಯೇ ಜೈಲಿಗೆ ಆಗಮಿಸಿದ್ದ ಸಾಧುಕೋಕಿಲ ಅವರು, ದರ್ಶನ್ರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದು, ಈ ವೇಳೆ ವಕೀಲರ ಜೊತೆ ಮುಂದಿನ ಕಾನೂನು ಹೋರಾಟದ ಬಗ್ಗೆಯೂ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ನಿನ್ನೆ ದಿನಕರ್ ತೂಗುದೀಪ್ ಕುಟುಂಬದ ಜೊತೆ ವಿನೋದ್ ರಾಜ್ ಕೂಡ ಜೈಲಿಗೆ ಭೇಟಿ ನೀಡಿದ್ದರು. ಈ ಬೆನ್ನಲ್ಲೇ ಇಂದು ಸಾಧುಕೋಕಿಲ ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ್ದಾರೆ.
ನವದೆಹಲಿ: ಡಾ.ಬಿ.ಆರ್.ಅಂಬೇಡ್ಕರ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸದನದಲ್ಲಿ ಅಗೌರವದ ಹೇಳಿಕೆ ನೀಡಿರುವುದಕ್ಕೆ ದೇಶಾದ್ಯಂತ ಆಕ್ರೋಶ…
ದೇಶಿಯ ಮಿನಿ ಚುಟುಕು ಕ್ರಿಕೆಟ್ ಟೂರ್ನಿಗಳಲ್ಲಿ ಯಶಸ್ಸು ಕಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಸೀಸನ್ 18ರ ಆರಂಭಕ್ಕೆ ದಿನಾಂಕ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಎಂಎಲ್ಸಿ ಸಿ.ಟಿ.ರವಿ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಅವರ ವಿರುದ್ಧ ಅಗತ್ಯವಾಗಿ ಕಾನೂನು…
ಮಂಡ್ಯ: ಪ್ರಾಜೆಕ್ಟ್ ವರ್ಕ್ ಜೊತೆಯಲ್ಲಿ ಪ್ರವಾಸ ಮಾಡಲೆಂದು ಹೊರಟಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಇಂದು ಸಚಿವ ಚಲುವರಾಯಸ್ವಾಮಿ…
ಬೆಂಗಳೂರು: ಭಾರತದ ರನ್ ಮೆಷಿನ್ ಎಂದು ಖ್ಯಾತಿ ಪಡೆದಿರುವ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಬೆಂಗಳೂರಿನ ಒನ್…