ಮನರಂಜನೆ

ವಾರದ ಪಂಚಾಯಿತಿಗೆ ಕಿಚ್ಚನ ಆಗಮನ : ಹಿಡಿದ ದೆವ್ವ ಬಿಡಿಸಿದ ಸುದೀಪ್..‌

ಬೆಂಗಳೂರು : ಕನ್ನಡ ಬಿಗ್‌ಬಾಸ್‌ ಸೀಸನ್‌ 12ರ ಇಂದಿನ ವೀಕೆಂಡ್ ಎಪಿಸೋಡ್ಗೆ ಇಡೀ ಕರ್ನಾಟಕ ಜನತೆ ಕಾಯುತ್ತಿದೆ. ಈ ವಾರ ದೊಡ್ಮನೆಯೊಳಗೆ ಸಾಕಷ್ಟು ಘಟನೆಗಳು ನಡೆದಿವೆ. ಮುಖ್ಯವಾಗಿ ದೆವ್ವದ ಮ್ಯಾಟರ್ ವಾರಪೂರ್ತಿ ಮನೆಯೊಳಗೆ ಸೌಂಡ್ ಮಾಡಿತ್ತು. ತನ್ನಪಾಡಿಗಿದ್ದ ರಕ್ಷಿತಾ ಶೆಟ್ಟಿ ಅವರನ್ನು ಅಶ್ವಿನಿ ಗೌಡ ಹಾಗೂ ಜಾನ್ವಿ ಈ ದೆವ್ವದ ಮ್ಯಾಟರ್ ಒಳಗೆ ಕರೆತಂದು ಅತಂತ್ರ ಮಾಡಿಬಿಟ್ಟರು. ಇಲ್ಲಿಗೆ ನಿಲ್ಲದ ಅಶ್ವಿನಿ-ಜಾನ್ವಿ ಆಟ ರಕ್ಷಿತಾಗೆ ಅವಮಾನ ಆಗುವಂತೆ ನಡೆದುಕೊಂಡರು. ಈ ಎಲ್ಲ ವಿಚಾರದಿಂದ ಕಿಚ್ಚ ಸುದೀಪ್ ಕೆರಳಿ ಕೆಂಡವಾಗಿದ್ದಾರೆ.

ಅಶ್ವಿನಿ ಹಾಗೂ ಜಾನ್ವಿ ಅವರು ಬಿಗ್ ಬಾಸ್ ಮನೆಯಲ್ಲಿ ಗೆಜ್ಜೆ ಶಬ್ದ ಮಾಡಿ, ಅದನ್ನು ರಕ್ಷಿತಾ ಮೇಲೆ ಹಾಕಿದ್ದರು. ರಕ್ಷಿತಾ ನಾಗವಲ್ಲಿ ರೀತಿ ಆಡ್ತಾರೆ ಎಂದೆಲ್ಲ ಸುಳ್ಳು ಆರೋಪ ಮಾಡಿದ್ದರು. ಇದೇ ವಿಚಾರ ಇಟ್ಟುಕೊಂಡ ವಾರ ಪೂರ್ತಿ ಎಳೆದಾಡಿದ್ದರು. ರಕ್ಷಿತಾಗೆ ಪದೇ ಪದೇ ಕಿರುಕುಳ ಕೊಡುವ ಪ್ರಯತ್ನ ಮಾಡಿದ್ದರು. ಅಷ್ಟೇ ಅಲ್ಲದೆ ರಕ್ಷಿತಾಗೆ ಈಡಿಯೆಟ್, ಮುಚ್ಕೊಂಡು ಮಲ್ಕೋ ಎಂಬ ಪದವನ್ನೆಲ್ಲ ಉಪಯೋಗಿಸಿದ್ದಾರೆ.

ಇದೀಗ ಇಂದಿನ ಪ್ರೋಮೋ ಬಿಡುಗಡೆಯಾಗಿದೆ. ‘‘ನಾವು ಕೊಟ್ಟಿರೋ ಮಾತನ್ನು ತಪ್ಪಲ್ಲ, ತಪ್ಪಾಗಿ ಆಡಿರೋ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ. ಒಳ್ಳೆಯ ಕೆಲಸ ಮಾಡಿದಾಗ ನಾವು ಕೈ ತಟ್ಟಿ ಚಪ್ಪಾಳೆಯನ್ನು ಸಹ ಕೊಡ್ತೀವಿ. ಎಲ್ಲಿದ್ದೀವಿ ಅನ್ನೋದನ್ನು ಮರೆತು ಬಾಯಿಗೆ ಬಂದ ಹಾಗೆ ಮಾತಾಡಿದವರಿಗೆ ಚೂರು ತಲೆ ಮೇಲೆ ತಟ್ಟಿ ಬುದ್ದಿ ಹೇಳಬೇಕಾಗುತ್ತದೆ’’ ಎಂದು ಸುದೀಪ್ ಹೇಳಿ ವಿಷಯ ಕೈಗೆತ್ತಿಕೊಂಡಿದ್ದಾರೆ.

ಅಶ್ವಿನಿ ಅವರೆ ನಿಮ್ಮ ಸ್ಟೇಟ್ಮೆಂಟ್ ಹೇಳ್ತಾ ಹೋಗ್ತೀನಿ, ಇದನ್ನ ನೋಡಿದ್ರೆ ಹೇಳಬಹುದು ಇಲ್ಲಿಂದ ಬಂದಿದ್ಯಾ ನೀನು.. ಕಾರ್ಟೂನ್.. ಈ ಯಮ್ಮ ಅಂದಾಕ್ಷಣ ನೀವು ನನ್ನನ್ನ ಯಮ್ಮ.. ಗಿಮ್ಮ ಅಂತ ಕರೀಬೇಡಿ ನನ್ಗೆ ಒಂದು ಹೆಸರು ಇದೆ ಅಂತ ಹೇಳ್ತೀರ.. ಆದ್ರೆ ನೀವು ಅವರನ್ನು ಈಡಿಯೆಟ್ ಅಂತೀರಿ. ತಮಾಷೆ ಮಾಡ್ಕೊಂಡು ನಿಮ್ಮ ಪರ್ಸನಾಲಿಟಿಯನ್ನು ಕೊಲೆ ಮಾಡ್ತಾ ಇದ್ದೀರಾ.. ಒಬ್ಬರ ಮರಿಯಾದೆ.. ಒಬ್ಬರ ಅಸ್ತಿತ್ವ.. ಒಬ್ಬನ ಗೌರವ. ಇನ್ನೊಬ್ಬನ ಆಸ್ತಿ ಆಟಸಾಮಾನು ಆಗಬಾರದು.. ಯಾರ ಅಪ್ಪನ ಆಸ್ತಿನೂ ಅಲ್ಲ ಅದು’’ ಎಂದು ಕಿಚ್ಚ ಸುದೀಪ್ ಖಡಕ್ ಆಗಿ ಹೇಳಿದ್ದಾರೆ.

ಆಂದೋಲನ ಡೆಸ್ಕ್

Recent Posts

ಪ್ರಮಾಣ ವಚನ ಸಮಾರಂಭಕ್ಕೆ ವಿಜಯ್‌ ಪತ್ನಿ, ಮಕ್ಕಳು ಗೈರು

ಚೆನ್ನೈ : ದಳಪತಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಮಾರಂಭದಲ್ಲಿ ಅನೇಕ ಗಣ್ಯರು ಸೇರಿದ್ದರು.…

4 hours ago

ಮಡಿಕೇರಿ | ನೀರಿನಲ್ಲಿ ಮುಳುಗಿ ಯುವಕ ಸಾವು

ಮಡಿಕೇರಿ : ಸ್ನಾನಕ್ಕೆ ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿಗೆ ಸಮೀಪದ ಬಲಮುರಿ ಗ್ರಾಮದಲ್ಲಿ ಭಾನುವಾರ ನಡೆದಿದೆ.…

5 hours ago

ಗಡಿ ಜಿಲ್ಲೆಯಲ್ಲೂ ತಮಿಳು ಸಿಎಂ ವಿಜಯ್‌ ಹವಾ!

ಹನೂರು : ತಮಿಳುನಾಡಿನ ಮುಖ್ಯಮಂತ್ರಿಯಾಗಿ ಟಿವಿಕೆ ಪಕ್ಷದ ಮುಖ್ಯಸ್ಥ ಹಾಗೂ ನಟ ಸಿ.ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ಹಿನ್ನೆಲೆ ಪಟ್ಟಣದಲ್ಲಿ…

5 hours ago

ಪ್ರಧಾನಿ ಸಂಚಾರ ಮಾರ್ಗದಲ್ಲಿ ಜಿಲಿಟೆನ್ ಕಡ್ಡಿ ಪತ್ತೆ ; ಕೆಲಕಾಲ ಆತಂಕ ; ಓರ್ವ ವಶಕ್ಕೆ

ಬೆಂಗಳೂರು : ಪ್ರಧಾನಿ ನರೇಂದ್ರಮೋದಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ವೇಳೆ ಜಿಲಿಟಿನ್ ಕಡ್ಡಿಗಳು ಪತ್ತೆಯಾಗಿ ಕೆಲಕಾಲ…

5 hours ago

ತಮಿಳುನಾಡು | ತಿರುಚಿರಾಪಳ್ಳಿ ಕ್ಷೇತ್ರಕ್ಕೆ ವಿಜಯ್ ರಾಜೀನಾಮೆ

ಚೆನ್ನೈ : ಟಿವಿಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಭಾನುವಾರ ತಿರುಚಿರಾಪಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ…

6 hours ago

ಹುಣಸೂರು | ಭಾರೀ ಗಾಳಿ-ಮಳೆಗೆ ಹಾರಿಹೋದ ಚಾವಣಿ

ಹುಣಸೂರು : ಬಿರುಗಾಳಿ ಮಳೆಗೆ ತಾಲ್ಲೂಕಿನ ಹನಗೋಡು ಹೋಬಳಿಯ ವದ್ಲಿ ಮನುಗನಹಳ್ಳಿಯಲ್ಲಿ ಮನೆಯ ಚಾವಣಿಗೆ ಹಾಕಿದ್ದ ಕಲ್ನಾರ್ ಶೀಟ್ ಹಾರಿಹೋಗಿದ್ದು,…

7 hours ago