ಮನರಂಜನೆ

ಡಿಜಾಂಗೋ ಕೃಷ್ಣಮೂರ್ತಿಯಾದ ಗಣೇಶ್‍: ಶೀರ್ಷಿಕೆ ಅನಾವರಣ

ಈಗಾಗಲೇ ಗಣೇಶ್‍ ಅಭಿನಯದ ಹೊಸ ಚಿತ್ರದ ಮುಹೂರ್ತ ಕೆಲವು ತಿಂಗಳುಗಳ ಹಿಂದೆಯೇ ಆಗಿದ್ದು, ಚಿತ್ರದ ಒಂದು ಹಂತದ ಚಿತ್ರೀಕರಣ ಸಹ ಆಗಿದೆ. ಆದರೆ, ಚಿತ್ರತಂಡ ಮಾತ್ರ ಇದುವರೆಗೂ ಚಿತ್ರದ ಶೀರ್ಷಿಕೆಯನ್ನು ಘೋಷಿಸಿರಲಿಲ್ಲ. ಇಂದು ಗಣೇಶ್‍ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಹೆಸರನ್ನು ಅನಾವರಣ ಮಾಡಲಾಗಿದ್ದು, ಚಿತ್ರಕ್ಕೆ ‘ಡಿಜಾಂಗೋ ಕೃಷ್ಣಮೂರ್ತಿ’ ಎಂಬ ಹೆಸರನ್ನು ಇಡಲಾಗಿದೆ.

ಎಸ್.ಎನ್.ಟಿ ಎಂಟರ್ಪ್ರೈಸಸ್ ಲಾಂಛನದಲ್ಲಿ ಎಸ್.ಸಿ. ರವಿ ಭದ್ರಾವತಿ ಅವರು ನಿರ್ಮಿಸುತ್ತಿರುವ, ಅರಸು ಅಂತಾರೆ ನಿರ್ದೇಶಿಸುತ್ತಿರುವ ಹೊಸ ಚಿತ್ರದ ಶೀರ್ಷಿಕೆ ಅನಾವರಣವು ಗಣೇಶ್‍ ಹುಟ್ಟುಹಬ್ಬದ ಪ್ರಯುಕ್ತ ಆಗಿದೆ. ಚಿತ್ರತಂಡವು ಚಿತ್ರದ ಹೆಸರು ಅನಾವರಣ ಮಾಡುವುದರ ಜೊತೆಗೆ, ಚಿತ್ರದ ಪೋಸ್ಟರ್‍ ಬಿಡುಗಡೆ ಮಾಡುವ ಮೂಲಕ ಗಣೇಶ್‍ ಅವರಿಗೆ ಶುಭ ಕೋರಿದೆ.

‘ಡಿಜಾಂಗೋ ಕೃಷ್ಣಮೂರ್ತಿ’ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣವಾಗಿದ್ದು, ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ‌‌.

ಈ ಚಿತ್ರದಲ್ಲಿ ಗಣೇಶ್‍ಗೆ ನಾಯಕಿಯಾಗಿ ‘ಹನುಮಾನ್’ ಖ್ಯಾತಿಯ ಅಮೃತ ಅಯ್ಯರ್ ಅಭಿನಯಿಸುತ್ತಿದ್ದಾರೆ‌. ರಂಗಾಯಣ ರಘು, ರವಿಶಂಕರ್ ಗೌಡ, ಕಾಕ್ರೋಜ್ ಸುಧೀ, ಅರುಣ ಬಾಲರಾಜ್ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ, ಸುಜ್ಞಾನ್ ಛಾಯಾಗ್ರಹಣ, ಅಕ್ಷಯ್ ಪಿ. ರಾವ್ ಸಂಕಲನವಿದೆ.

ಆಂದೋಲನ ಡೆಸ್ಕ್

Recent Posts

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್!

ಬೆಂಗಳೂರು: ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಗೆ ತಡೆ…

17 hours ago

ಮೈಸೂರು–ಮಾನಂದವಾಡಿ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು!

ಮೈಸೂರು: ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕೋಹಳ ಬಳಿಯ ಮೈಸೂರು–ಮಾನಂದವಾಡಿ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೆಎಸ್ಆರ್‌ಟಿಸಿ ಬಸ್…

18 hours ago

174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ಗೆ ಇಸ್ರೇಲ್‌ನ ಶೌರ್ಯ ಪ್ರಶಸ್ತಿ!

ಜೆರುಸೇಲಂ: ಭೀಕರ ವಿಮಾನ ಅವಘಡವನ್ನು ತಪ್ಪಿಸಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ…

19 hours ago

ರಾಜ್ಯ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್‌ಗೆ ಸಂಚು?: ಶಾಸಕ ಗಣಿಗ ರವಿ ಗಂಭೀರ ಆರೋಪ!

ಮಂಡ್ಯ: ರಾಜ್ಯದ ಸಚಿವರಿಗೆ ಮುಜುಗರ ಉಂಟುಮಾಡಲು ಕೇಂದ್ರ ಸಚಿವರೊಬ್ಬರು ಹಾಗೂ ಕರ್ನಾಟಕದ ಬಿಜೆಪಿ ನಾಯಕರೊಬ್ಬರು ಸ್ಟಿಂಗ್ ಆಪರೇಷನ್‌ಗೆ ಸಂಚು ರೂಪಿಸಿದ್ದಾರೆ…

19 hours ago

ಸಿದ್ದಾಪುರ ಮೈಸೂರು ಮುಖ್ಯ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ

ಸಿದ್ದಾಪುರ: ಸಿದ್ದಾಪುರ ಮೈಸೂರು ಮುಖ್ಯ ರಸ್ತೆಯ ಘಟ್ಟತಳ ಹೇರೂರು ಎಸ್ಟೇಟ್ ಬಳಿ ಗುರುವಾರ ರಾತ್ರಿ ಹುಲಿ ಕಾಣಿಸಿಕೊಂಡಿದ್ದು ಬಳಿಕ ಸಮೀಪದ…

19 hours ago

ಓದುಗರ ಪತ್ರ: ಬಂತು ಎಟಿಎಂನಲ್ಲಿ ‘ತೇಪೆ’ ಹಾಕಿದ ನೋಟು!

ಒಂದು ಕಾಲದಲ್ಲಿ (ಒಂದಾನೊಂದು ಕಾಲದಲ್ಲಿ ಎಂಬ ಮಾತಿನಂತೆ) ಎಟಿಎಂ ಯಂತ್ರಗಳಿಂದ ಹಣ ಡ್ರಾ ಮಾಡಿದಾಗ ಸಾಮಾನ್ಯವಾಗಿ ಹೊಸ ಗರಿಗರಿನೋಟುಗಳು ಬರುತ್ತಿದ್ದವು.…

20 hours ago