ಮಂಡ್ಯ

ದೇವರ ದರ್ಶನಕ್ಕೆ ಹೊರಟವರ ಬಾಳಲ್ಲಿ ದುರಂತ: ದಶಪಥ ಹೆದ್ದಾರಿ ಅಪಘಾತದಲ್ಲಿ ಬಾಲಕಿ ಸೇರಿ ಇಬ್ಬರು ಬಲಿ!

ಶ್ರೀರಂಗಪಟ್ಟಣ: ನಂಜನಗೂಡಿನ ದೇವಸ್ಥಾನಕ್ಕೆ ಹೊರಟಿದ್ದ ಎರಡು ಕುಟುಂಬಗಳ ಪ್ರಯಾಣ ದುರಂತದಲ್ಲಿ ಅಂತ್ಯಗೊಂಡಿದೆ.

ಮೈಸೂರು–ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದ ಸರಕು ಸಾಗಣೆ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದು, ಬಾಲಕಿ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗೇಟ್‌ ಬಳಿಯ ಫ್ಲೈಓವರ್‌ ಮೇಲೆ ಅಪಘಾತ ಸಂಭವಿಸಿದೆ. ಗುತ್ತಲು ಬಡಾವಣೆಯ ಮಹದೇವು, 49 ವರ್ಷ ಹಾಗೂ ತೈಲೂರು ಗ್ರಾಮದ ಎಂಟು ವರ್ಷದ ರಿತ್ವಿಕಾ ಮೃತರು.

ಗೌರಿ, ಲತಾ, ಶಿವರಾಜು ಹಾಗೂ ಪ್ರಾರ್ಥವ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರಯಾಣದ ದೃಶ್ಯಗಳನ್ನು ಕುಟುಂಬದವರು ರೀಲ್ಸ್‌ ಮಾಡಿ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದರು ಎನ್ನಲಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

ಆಂದೋಲನ ಡೆಸ್ಕ್

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ: ಎರಡನೇ ಬಾರಿ ಜಾಮೀನಿಗಾಗಿ ಹೈಕೋರ್ಟ್‌ ಮೊರೆಹೋದ ಪವಿತ್ರಾ ಗೌಡ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಮತ್ತೆ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್‌ ಈ…

21 mins ago

ಚಳಿಯ ನಡುವೆ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಬೆಂಗಳೂರು: ರಾಜ್ಯದಲ್ಲಿ ಮೈ ಕೊರೆವ ಚಳಿಯ ನಡುವೆ ಮಳೆಯ ಮುನ್ಸೂಚನೆಯೂ ಬಂದಿದೆ. ನವೆಂಬರ್‌ 24 ಮತ್ತು 25ರಂದು ಬೆಂಗಳೂರು ಸೇರಿದಂತೆ ದಕ್ಷಿಣ…

45 mins ago

ಓದುಗರ ಪತ್ರ: ಹೋಟೆಲುಗಳಲ್ಲಿ ಬಾಟಲ್ ನೀರು ಖರೀದಿಸಲು ಬಲವಂತ ಸಲ್ಲದು

ರಾಜ್ಯದ ಕೆಲವು ಹೋಟೆಲ್ಲುಗಳಲ್ಲಿ ಗ್ರಾಹಕರಿಗೆ ಕುಡಿಯಲು ನೀರು ಕೊಡದೇ ಬಾಟಲ್ ನೀರು ಖರೀದಿಸುವಂತೆ ಹೇಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ…

2 hours ago

ಓದುಗರ ಪತ್ರ: ರಾಗಿಮುದ್ದೆಗೆ ಪ್ಯಾನ್ ಇಂಡಿಯಾ ಗರಿ

ರಾಗಿಮುದ್ದೆ ಕರ್ನಾಟಕದ ಸಾಂಪ್ರದಾಯಿಕ ಆಹಾರ. ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ರಾಗಿಮುದ್ದೆ ರಾಷ್ಟ್ರಮಟ್ಟದಲ್ಲಿ ಪರಿಚಯಗೊಂಡಿತ್ತು. ಆದರೂ ಅದರ ಬಳಕೆ ವ್ಯಾಪಕವಾಗಿರಲಿಲ್ಲ. ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರೂ…

2 hours ago

ಓದುಗರ ಪತ್ರ: ಶಾಸಕರ ಲಭ್ಯತೆಯ ಮಾಹಿತಿ ಕ್ಷೇತ್ರದ ಜನರಿಗೆ ಅಗತ್ಯ

ಜನರಿಂದ ಆಯ್ಕೆಯಾದ ಶಾಸಕರು ತಮ್ಮ ಕ್ಷೇತ್ರದ ಜನರಿಗೆ ಯಾವ ದಿನ, ಯಾವ ಸಮಯದಲ್ಲಿ ಲಭ್ಯವಿರುತ್ತಾರೆ ಎಂಬ ಮಾಹಿತಿ ತಿಳಿದಿರಬೇಕು. ತಮ್ಮ…

2 hours ago

ಓದುಗರ ಪತ್ರ: ಬಾಟಲಿ ನೀರು: ಬಳಕೆ ಮುನ್ನ ಎಚ್ಚರ ಇರಲಿ

ಇಂದಿನ ಜೀವನಶೈಲಿಯಲ್ಲಿ ಬಾಟಲಿ ನೀರಿನ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಯಾಣದ ಸಮಯದಲ್ಲಿ, ಶಾಲಾ-ಕಾಲೇಜುಗಳಲ್ಲಿ, ಕಚೇರಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ…

2 hours ago