ಅಮೇಜಾನ್ ಪ್ರೈಮ್‍ನಲ್ಲಿರುವ ಜನಪ್ರಿಯ ವೆಬ್ ಸರಣಿಗಳ ಪೈಕಿ ಪಂಕಜ್ ತ್ರಿಪಾಠಿ ಅಭಿನಯದ ‘ಮಿರ್ಜಾಪುರ್’ ಸಹ ಒಂದು. ಈಗ ಈ ವೆಬ್‍ಸರಣಿಯು ಸಿನಿಮಾ ಆಗಿ ರೂಪುಗೊಳ್ಳುತ್ತಿದ್ದು, ಇದನ್ನು ಅಮೇಜಾನ್ MGM ಸ್ಟುಡಿಯೋಸ್ ಮತ್ತು ಎಕ್ಸೆಲ್ ಎಂಟರ್‍ಟೈನ್‍ಮೆಂಟ್ ಸಂಸ್ಥೆಗಳು ಜೊತೆಯಾಗಿ ನಿರ್ಮಿಸುತ್ತಿದೆ. ಈ ಚಿತ್ರವು 2026ರಲ್ಲಿ ತೆರೆಗೆ ಬರಲಿದೆ.
‘ಮಿರ್ಜಾಪುರ್’ ಒಂದು ಕ್ರೈಂ ಥ್ರಿಲ್ಲರ್ ಸರಣಿಯಾಗಿದ್ದು, 2018ರಲ್ಲಿ ಅಮೇಜಾನ್ ಪ್ರೈಮ್‍ನಲ್ಲಿ ಮೊದಲು ಬಿಡುಗಡೆಯಾಗಿತ್ತು. ಪಂಕಜ್ ತ್ರಿಪಾಠಿ, ಅಲಿ ಫಜಲ್, ದಿವ್ಯೆಂದು, ಅಭಿಷೇಕ್ ಬ್ಯಾನರ್ಜಿ ಮುಂತಾದವರು ಈ ಸರಣಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸರಣಿಯು ಅದೆಷ್ಟು ಜನಪ್ರಿಯವಾಗಿತ್ತು ಎಂದರೆ, 2020ರ ಅಕ್ಟೋಬರ್‍ನಲ್ಲಿ ಎರಡನೇ ಸೀಸನ್ ಪ್ರಸಾರವಾಗಿತ್ತು. ಇದೂ ಸಹ ಜನಪ್ರಿಯವಾಗಿ ಮೂರನೇ ಸೀಸನ್ ಈ ವರ್ಷದ ಜುಲೈ ತಿಂಗಳಲ್ಲಿ ಬಂದಿತ್ತು.
ಇದೀಗ ಈ ಸರಣಿಯನ್ನು ಸಿನಿಮಾ ಮಾಡುವುದಕ್ಕೆ ತಂಡ ನಿರ್ಮಿಸಿದೆ. ಅದರಂತೆ, ಇದೇ ಕಥೆಯನ್ನಿಟ್ಟುಕೊಂಡು ಒಂದು ಚಿತ್ರ ಮಾಡಲಾಗುತ್ತದೆ. ವೆಬ್ ಸರಣಿಯಲ್ಲಿ ಇರುವ ಪಾತ್ರಧಾರಿಗಳು ಮತ್ತು ಕಲಾವಿದರೇ ಇಲ್ಲೂ ಮುಂದುವರೆಯುತ್ತಾರೆ. ಈ ಸಂಬಂಧ ಅಮೇಜಾನ್ ಪ್ರೈಮ್‍ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹೊಸದೊಂದು ಟೀಸರ್ ಬಿಡುಗಡೆಯಾಗಿದೆ. ಅದರಲ್ಲಿ ಪಂಕಜ್ ತ್ರಿಪಾಠಿ, ಅಲಿ ಫಜಲ್, ದಿವ್ಯೆಂದು ಮತ್ತು ಅಭಿಷೇಕ್ ಬ್ಯಾನರ್ಜಿ ಕಾಣಿಸಿಕೊಂಡಿದ್ದು, ‘ಮಿರ್ಜಾಪುರ್’ ಸಿನಿಮಾ ಆಗುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಇದುವರೆಗೂ ‘ಮಿರ್ಜಾಪುರ್’ ಸರಣಿಯನ್ನು ಟಿವಿ ಮತ್ತು ಮೊಬೈಲ್‍ನಲ್ಲಿ ನೋಡಿದ್ದು ಸಾಕು, ಇನ್ನು ಚಿತ್ರಮಂದಿರಗಳಲ್ಲಿ ಸಿನಿಮಾ ಆಗಿ ನೋಡಿ ಎಂದು ಕರೆ ನೀಡಿದ್ದಾರೆ.
‘ಮಿರ್ಜಾಪುರ್’ ವೆಬ್ ಸರಣಿಯನ್ನು ನಿರ್ದೇಶನ ಮಾಡಿದ್ದ ಗುರ್ಮೀಸ್ ಸಿಂಗ್ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಘೋಷಣೆಯಾಗಿದ್ದು, 2025ರಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಆ ನಂತರ 2026ರಲ್ಲಿ ಚಿತ್ರ ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿ ಎಂಟು ವಾರಗಳ ನಂತರ ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ.
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…
ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…
ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…
ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…
ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…