ಮನರಂಜನೆ

ರಜನಿಕಾಂತ್ ಚಿತ್ರದಿಂದ ಹೊರಬಂದ ನಿರ್ದೇಶಕ ಸುಂದರ್ ಸಿ

ಒಂದು ವಾರದ ಹಿಂದಷ್ಟೇ, ತಮಿಳು ಚಿತ್ರರಂಗದ ಜನಪ್ರಿಯ ನಟರಾದ ರಜನಿಕಾಂತ್‍ ಮತ್ತು ಕಮಲ್‍ ಹಾಸನ್‍ ಇಬ್ಬರೂ ಹೊಸ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಕಮಲ್‍ ಹಾಸನ್‍ ನಿರ್ಮಾಣದ ಈ ಚಿತ್ರವನ್ನು ಸುಂದರ್ ಸಿ ನಿರ್ದೇಶಿಸಬೇಕಿತ್ತು. ಸ್ವತಃ ಕಮಲ್‍ ಹಾಸನ್‍ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಆದರೆ, ಇದೀಗ ಈ ಚಿತ್ರತಂಡದಿಂದ ಸುಂದರ್‍ ಹೊರಬಂದಿದ್ದಾರೆ.

ಹೌದು, ‘ತಲೈವರ್ 173’ ಚಿತ್ರವನ್ನು ನಿರ್ದೇಶಿಸಬೇಕಿದ್ದ ಸುಂದರ್ ಸಿ, ಆ ಚಿತ್ರ ಶುರುವಾಗುವ ಮೊದಲೇ ಅದರಿಂದ ಹೊರಬಂದಿದ್ದಾರೆ. ಅನಿವಾರ್ಯ ಕಾರಣಗಳಿಂದ ಚಿತ್ರದಿಂದ ಹೊರಬರಬೇಕಾಯಿತು ಎಂದು ಸೋಷಿಯಲ್‍ ಮೀಡಿಯಾದಲ್ಲಿ ಘೋಷಿಸಿದ್ದಾರೆ. ಅಲ್ಲಿಗೆ ರಜನಿಕಾಂತ್ ಅಭಿನಯದ ಚಿತ್ರ ಶುರುವಾಗುವ ಮೊದಲೇ ವಿವಾದಕ್ಕೀಡಾಗಿದೆ.

ಇದನ್ನು ಓದಿ: ನವೆಂಬರ್.14ರಂದು ತೆರೆಮೇಲೆ ಫ್ಯಾಂಟಸಿ ‘ಗತವೈಭವ’

ಹಾಗೆ ನೋಡಿದರೆ, ಈ ಚಿತ್ರದಿಂದ ನಿರ್ದೇಶಕರು ಹೊರಬರುತ್ತಿರುವುದು ಹೊಸದೇನಲ್ಲ. ಮೊದಲಿಗೆ ಈ ಚಿತ್ರವನ್ನು ಲೋಕೇಶ್‍ ಕನಕರಾಜ್‍ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ನಂತರ ನೆಲ್ಸನ್‍ ದಿಲೀಪ್‍ ಕುಮಾರ್ ನಿರ್ದೇಶಿಸುತ್ತಾರೆ ಎಂದು ಹೇಳಲಾಗಿತ್ತು. ಕೊನೆಗೆ ಅವರಿಬ್ಬರನ್ನೂ ಬಿಟ್ಟು, ಸುಂದರ್ ಸಿ ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂದು ಹೇಳಲಾಯಿತು.

ನಟಿ-ರಾಜಕಾರಣಿ ಖುಷ್ಬೂ ಅವರ ಪತಿಯಾಗಿರುವ ಸುಂದರ್, ಈ ಹಿಂದೆ ರಜನಿಕಾಂತ್‍ ಅಭಿನಯದಲ್ಲಿ ‘ಅರುಣಾಚಲಂ’ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರ 1997ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್‍ ಆಗಿತ್ತು. ಇದೀಗ 28 ವರ್ಷಗಳ ನಂತರ ರಜನಿಕಾಂತ್‍ ಅಭಿನಯದಲ್ಲಿ ಸುಂದರ್‍ ಹೊಸ ಚಿತ್ರ ಅವರು ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿ ತಣ್ಣಗಾಗುವ ಮೊದಲೇ ಅವರು ಈ ಚಿತ್ರದಿಂದ ಹೊರಬರುತ್ತಿದ್ದಾರೆ. ಅವರ ಬದಲು ಈ ಚಿತ್ರವನ್ನು ಯಾರು ನಿರ್ದೇಶಿಸಬಹುದು ಎಂಬ ಪ್ರಶ್ನೆ ಕೇಳಿ ಬರುತ್ತಿದ್ದು, ಈ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಈ ಚಿತ್ರವನ್ನು ಕಮಲ್ ಹಾಸನ್ ತಮ್ಮದೇ ನಿರ್ಮಾಣ ಸಂಸ್ಥೆಯಾದ ರಾಜ್‌ ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಕಂಪನಿ ಮೂಲಕ ಚಿತ್ರ ನಿರ್ಮಿಸುತ್ತಿದ್ದಾರೆ. ಈ ಹಿಂದೆ ರಾಜ್‍ ಕಮಲ್‍ ಸಂಸ್ಥೆಯು ಕಮಲ್‍ ಹಾಸನ್‍ ಸೇರಿದಂತೆ ತಮಿಳು ಚಿತ್ರರಂಗದ ಹಲವು ಜನಪ್ರಿಯ ನಟರ ಚಿತ್ರಗಳನ್ನು ನಿರ್ಮಿಸಿತ್ತು. ಇದೇ ಮೊದಲ ಬಾರಿಗೆ ರಜನಿಕಾಂತ್‍ ಅಭಿನಯದ ಚಿತ್ರವನ್ನು ರಾಜ್‍ ಕಮಲ್‍ ನಿರ್ಮಿಸುತ್ತಿದೆ.

ಆಂದೋಲನ ಡೆಸ್ಕ್

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

15 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

15 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

17 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

19 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

22 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

22 hours ago