ಮುಂಬೈ : ರಣವೀರ್ ಸಿಂಗ್ ಅಭಿನಯದ ಬಹು ನಿರೀಕ್ಷಿತ ‘ಧುರಂಧರ್ : ದಿ ರೆವೆಂಜ್‌ನ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಸಿನಿಮಾ ಮಾರ್ಚ್ 19 ರಂದು ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಬಿಡುಗಡೆಗೂ ಮುನ್ನವೇ ದಾಖಲೆ ಪ್ರಮಾಣದ ಟಿಕೆಟ್‌ಗಳು ಮಾರಾಟವಾಗಿದೆ.
ಚಿತ್ರದ ಪ್ರೀಮಿಯರ್ ಹಾಗೂ ಮೊದಲ ದಿನದ ಪ್ರದರ್ಶನಗಳಿಗಾಗಿ ಈಗಾಗಲೇ ಲಕ್ಷಾಂತರ ಟಿಕೆಟ್‌ಗಳು ಮಾರಾಟವಾಗಿವೆ. ಮುಂಗಡ ಬುಕ್ಕಿಂಗ್ ಮೂಲಕವೇ ಚಿತ್ರವು ಕೋಟ್ಯಂತರ ರೂಪಾಯಿ ಸಂಗ್ರಹಿಸಿರುವುದಾಗಿ ತಿಳಿದುಬಂದಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾದ ಬಳಿಕ ಬುಕ್ಕಿಂಗ್ ವೇಗವಾಗಿ ಹೆಚ್ಚಾಗಿದೆ.
ವೀಕ್ಷಣೆಗೆ ಮುಂಗಡವಾಗಿ 2.75 ಲಕ್ಷ ಟಿಕೆಟ್‌ಗಳು ಮಾರಾಟವಾಗಿದೆ. ಈ ಮೂಲಕ ಮುಂಗಡ ಕಾಯ್ದಿರಿಸುವಿಕೆಯಲ್ಲಿ ಒಟ್ಟು ದೇಶಿಯ ಗಳಿಗೆ 13.75 ಕೋಟಿ ಸಂಗ್ರಹವಾಗಿದೆ. ಇದರ ಜೊತೆಗೆ ಸಿನಿಮಾದ ಕೆಲವು ಟಿಕೆಟ್‌ಗಳು ಬ್ಲಾಕ್‌ನಲ್ಲಿ ಮಾರಾಟವಾಗಿದೆ. ಸಿನಿಮಾದ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯ ಒಟ್ಟುಗಳಿಗೆ 19.46 ಕೋಟಿಗೆ ತಲುಪಿದೆ.
ಈ ಹಿಂದೆ ಪವನ್ ಕಲ್ಯಾಣ್ ನಟನೆಯ ಬೇಹುಗಾರಿಕೆ ಸಿನಿಮಾ `OG’ ಮುಂಗಡ ಟೆಕೆಟ್ ಖರೀದಿಯಲ್ಲಿ 25 ಕೋಟಿ ಗಳಿಸಿತ್ತು. ಇದೀಗ ಧುರಂಧರ್ : ದಿ ರಿವೆಂಜ್ ಸಿನಿಮಾ ಈ ದಾಖಲೆಯನ್ನು ಮುರಿಯುವ ಸಾಧ್ಯತೆಯೂ ಇದೆ.
ಹಿಂದಿ ಸೇರಿದಂತೆ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ.
ಹೊಸದಿಲ್ಲಿ : ಮಧ್ಯಪ್ರಾಚ್ಯದ ಸಂಘರ್ಷದಿಂದ ಉಂಟಾಗಿರುವ ಎಲ್‌ಪಿಜಿ ಸಿಲಿಂಡರ್ ಕೊರತೆ ಬಗ್ಗೆ ಸಾರ್ವಜನಿಕರಲ್ಲಿ ಉದಿಸಿದ ಆತಂಕದ ನಡುವೆ, ಕೇಂದ್ರ ಸರ್ಕಾರವು…
ಬೆಂಗಳೂರು : ಬಹುನಿರೀಕ್ಷಿತ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು…
ಮೈಸೂರು : ಸಂಶೋಧನೆ ಮಾಡುವಾಗ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಪರಿಶ್ರಮದಿಂದ ಸಂಶೋಧನೆಗಳನ್ನು ಸಿದ್ಧಪಡಿಸಬೇಕು, AI ತಂತ್ರಜ್ಞಾನದ ಕಡೆ ಮೊರೆಹೋಗುವುದನ್ನು ಕಡಿಮೆ…
ಸಾಲಿಗ್ರಾಮ : ತನ್ನ ಜಮೀನಿಗೆ ಸಂಬಂಧಿಸಿದ ಖಾತೆಯನ್ನು ಮಾಡಿಕೊಡದೆ ಸಾಲಿಗ್ರಾಮ ನಾಡಕಚೇರಿ ಅವರು ಸತಾಯಿಸುತ್ತಿದ್ದಾರೆ ಎಂದು ಮನನೊಂದು ಸಾಲಿಗ್ರಾಮದ ನಾಡ…
ಹೊಸದಿಲ್ಲಿ : ಪಶ್ಚಿಮ ಏಷ್ಯಾದ ಸಂಘರ್ಷ ಪೀಡಿತ ಸಮುದ್ರ ವಲಯದಲ್ಲಿ ವ್ಯಾಪಾರಿ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು…
ಗುಂಡ್ಲುಪೇಟೆ : ಪಟ್ಟಣದ ಹೊರವಲಯದ ವಿಜಯಪುರ ಅಮಾನಿ ಕೆರೆಯ ಬಳಿ ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆಯಾಗಿರುವ ಘಟನೆ ನಡೆದಿದೆ. ತಾಲ್ಲೂಕಿನ ಮೂಖಹಳ್ಳಿ…