ಎಡಿಟೋರಿಯಲ್

ಮನೆಯಲ್ಲಿ ಹಿರಿಯರಿದ್ದರೆ ವಿಕಿಪೀಡಿಯ ಯಾಕೆ?

ಶ್ರಾವಣ ಬಂತು ಎಂದರೆ ಹಬ್ಬಗಳ ಸಾಲು. ಹೊಸ ಹೂಗಳ ಪರಿಮಳ, ಸಾಂಪ್ರದಾಯಿಕ ವಸ್ತ್ರಗಳ ಆಡಂಬರ . ಹೌದು, ಮನೆಯಲ್ಲಿ ಹಿರಿಯರೊಬ್ಬರಿದ್ದರೆ ಸಾಕು ನಮ್ಮ ಎಲ್ಲಾ ಹಬ್ಬ ಹುಣ್ಣಿಮೆಯ ವಿವರಣೆಯನ್ನು ಅವರು ಕೊಡುತ್ತಾರೆ . ಅಷ್ಟೇ ಅಲ್ಲದೆ ಸಾಂಪ್ರದಾಯಿಕವಾಗಿ ಹೇಗೆ ತಯಾರಾಗುವುದು ಎಂದೂ ನಮಗೆ ಹೇಳಿಕೊಡುತ್ತಾರೆ.

ಈಗಿನ ಯುವಜನತೆ ಗೂಗಲ್‌ನ ಮೊರೆ ಹೋಗುವ ಬದಲು ನಿಮ್ಮ ಮನೆಯಲ್ಲಿ ಇರುವ ಹಿರಿಯರ ಬಳಿ ಹೋಗಿ ಕುಳಿತು ಮಾತನಾಡಿ. ಕಾರಣ ನಿಮ್ಮ ಮನೆಯ ಪರಂಪರೆ ಹಾಗೂ ಸಂಪ್ರದಾಯ, ಶಾಸ್ತ್ರ ನಿಮಗೆ ತಿಳಿಯುತ್ತದೆ. ಅಷ್ಟೇ ಅಲ್ಲದೆ ಹಿರಿಯರಿಗೆ ಬರುವ ಎಷ್ಟೋ ಸಾಂಪ್ರದಾಯಿಕ ಹಾಡುಗಳು ನಿಮ್ಮ ಗೂಗಲ್‌ಗೆ ಬರುವುದಿಲ್ಲ. ಹಾಗಾಗಿ ಆ ಸಾಂಪ್ರದಾಯಿಕ ಹಾಡುಗಳು ಹಾಗೂ ಆಚರಣೆಗಳನ್ನು ನೀವು ಅವರ ಬಾಯಿಂದಲೇ ಕೇಳಿ ತಿಳಿಯಬೇಕು.

ಹಬ್ಬಗಳೆಂದರೆ ಪ್ರತಿಯೊಬ್ಬರ ಮನೆಯಲ್ಲೂ ಕೇಳಿ ಅವರದೇ ಆದ ಕೆಲವು ಆಚರಣೆಗಳು ಹಾಗೂ ಸಂಪ್ರದಾಯಗಳು ಇರುತ್ತವೆ. ಅವುಗಳನ್ನು ನೀವು ಅವರಿಂದ ತಿಳಿದು ಒಂದು ಕಡೆ ಬರೆದಿಟ್ಟುಕೊಳ್ಳಿ. ಅಷ್ಟೇ ಅಲ್ಲದೆ ಮದುವೆ ಹಾಗೂ ಕೆಲವು ಹಬ್ಬಗಳಿಗೆ ಅವರದೇ ಆದಂತಹ ಸಂಪ್ರದಾಯದ ರಂಗೋಲಿಗಳು ಸಹಇರುತ್ತದೆ ನೀವು ಅವನ್ನೂ ಅವರ ಬಳಿ ಕೇಳಿ ತಿಳಿದುಕೊಳ್ಳಬೇಕು.

ಮನೆಯಲ್ಲಿ ಹಿರಿಯರೊಬ್ಬರು ಇದ್ದರೆ ಅವರೊಂದು ವಿಕಿಪೀಡಿಯದ ಹಾಗೆ. ಅವರಿಗೆ ಎಲ್ಲ ವಿಷಯಗಳೂ ಸಾಕಷ್ಟು ಅವರ ಅನುಭವದಿಂದ ತಿಳಿದಿರುತ್ತದೆ. ಯಾವ ಅಂಗಡಿಯಲ್ಲಿ ಸಾಂಪ್ರದಾಯಿಕ ವಸ್ತುಗಳು ಸಿಗುತ್ತವೆ. ಎಲ್ಲಿ ನಿಮಗೆ ಉತ್ತಮವಾದ ರೇಷ್ಮೆ ಸಿಗುತ್ತದೆ ಎಂಬ ಮಾಹಿತಿ ತಿಳಿಯಲಿದೆ. ಅಷ್ಟೇ ಅಲ್ಲ ಸಾಂಪ್ರದಾಯಿಕ ಅಡುಗೆಯ ಭಂಡಾರ ನಮ್ಮ ಹಿರಿಯರು. ಅವರು ಹೇಳಿಕೊಡುವ ಕೆಲವು ಅಡುಗೆಯ ರುಚಿಯೇ ಬೇರೆ ಹಾಗಾಗಿ ಹೇಗಿದ್ದರೂ ಹಬ್ಬದ ಸಾಲುಗಳು ಆರಂಭವಾಗುತ್ತಿವೆ. ದಯಮಾಡಿ ಮನೆಯಲ್ಲಿನ ಹಿರಿಯರ ಬಳಿ ಕುಳಿತು ಅವರಲ್ಲಿ ಇರುವಂತಹ ಜ್ಞಾನವನ್ನು ಪಡೆದುಕೊಳ್ಳಿ.

ದೈಹಿಕವಾಗಿ ಅವರು ಬಳಲಿದ್ದರೂ ಮಾನಸಿಕವಾಗಿ ಅವರು ಸದೃಢರು. ಹಾಗಾಗಿ ಅವರ ಕೈಯಲ್ಲಿ ಕೆಲವು ಅಡುಗೆಗಳನ್ನು ಮಾಡಿಸಿ ಹಾಗೂ ಅವರ ಕೈ ರುಚಿಯನ್ನು ನೀವು ಸವಿಯಿರಿ, ಅಜ್ಜಿ ತಾತನ ಕೈ ರುಚಿ ಸವಿಯುವುದು ಎಲ್ಲರಿಗೂ ಸಾಧ್ಯವಿಲ್ಲ. ಕೆಲವರಿಗೆ ಮಾತ್ರ ಆ ಪುಣ್ಯ ಲಭ್ಯ. ನಿಮಗೆ ಆ ಅವಕಾಶವಿದ್ದರೆ ಹೇಗಿದ್ದರೂ ಹಬ್ಬದಲ್ಲಿ ರಜಾ ಇರುತ್ತದೆ, ಹಾಗಾಗಿ ಅವರ ಕೈ ರುಚಿ ಹಾಗೂ ಅವರ ರೀತಿಯಲ್ಲಿ ಪೂಜೆ, ಪುನಸ್ಕಾರಗಳನ್ನು ಮಾಡುವ ಬಗ್ಗೆ ತಿಳಿದು ಒಂದು ಬದಲಾವಣೆಯನ್ನು ನೀವು ಖಂಡಿತಾ ಮಾಡಿಕೊಳ್ಳಬಹುದು.

ಹೂ ಕಟ್ಟುವುದು, ಜಡೆ ಹಾಕುವುದು, ಪೂಜೆಗೆ ಅಣಿ ಮಾಡುವುದು, ಅಷ್ಟೇ ಅಲ್ಲ ಸಂಪ್ರದಾಯವಾಗಿ ಅವರು ಸೀರೆ , ಪಂಚೆಗಳನ್ನು ಉಡುವುದನ್ನು ಅವರಿಂದ ಕಲಿತುಕೊಳ್ಳಬಹುದು . ತಾತನ ಜೊತೆ ಮೊಮ್ಮಕ್ಕಳೂ ಒಂದೇ ರೀತಿ ಕಚ್ಚೆಯನ್ನು ಹಾಕಿ ಫೋಟೋ ತೆಗೆದು ನಿಮ್ಮ ಸ್ಟೇಟಸ್‌ಗೆ ಹಾಕಿಕೊಳ್ಳಿ. ಅಷ್ಟೇ ಅಲ್ಲ ಅಜ್ಜಿಯ ಹಾಗೆ ನೀವೂ ತಯಾರಾದರೆ ಅವರ ಮುಖದಲ್ಲಿ ಮೂಡುವ ನಗುವಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನಾವು ಅವರಿಗಾಗಿ ಏನನ್ನು ಕೊಡಲೂ ಸಾಧ್ಯವಿಲ್ಲ.

ಕಾರಣ ಅವರಿಗೆ ಆಸೆ ಬಹಳ ಕಮ್ಮಿ. ಆದರೆ ಅವರ ಬಳಿ ನೀವು ಸಮಯ ಕಳೆದಾಗ ಅವರ ಮುಖದಲ್ಲಿ ಮೂಡುವ ಮಂದಹಾಸಕ್ಕೆ ಎಣೆಯಿಲ್ಲ. ಮುಂದೆ ಬರುವ ಹಬ್ಬಗಳಲ್ಲಿ ಹಾಗೆ ನಡೆದು ಹಿರಿಯರ ಮುಖದಲ್ಲಿ ನಗು ತರುವ ಕೆಲಸವನ್ನು ನಾವು ನೀವೆಲ್ಲರೂ ಮಾಡೋಣ.

-ಸೌಮ್ಯ ಕೋಠಿ, ಮೈಸೂರು

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಶ್ರೀರಂಗಪಟ್ಟಣ ದಸರಾ ಜಂಬೂಸವಾರಿಗೆ ನಟ ರವಿಚಂದ್ರನ್‌ ಚಾಲನೆ

ಮಂಡ್ಯ: ಜಿಲ್ಲೆಯ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವಕ್ಕೆ ವೈಭವದ ಚಾಲನೆ ದೊರೆತಿದೆ. ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತಿಪೂರ್ವಕ ಪುಷ್ಪಾರ್ಚನೆ…

12 hours ago

ಅಭಿಮನ್ಯು ಆನೆ ಮಾವುತನ ಪತ್ನಿ ಸಾವು

ಮೈಸೂರು: ದಸರಾ ಗಜಪಡೆಯ ಆನೆ ಅಭಿಮನ್ಯುವಿನ ಮಾವುತ ವಸಂತ ಅವರ ಪತ್ನಿ ಅಂಬಿಕಾ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 35 ವರ್ಷ…

13 hours ago

ಮತದಾರರ ಹೆಸರು ಡಿಲೀಟ್‌ ವಿವಾದ: ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌

ನವದೆಹಲಿ: ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ವಿವಾದ ಇದೀಗ ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ಹಂತ ತಲುಪಿದೆ. ರಾಹುಲ್‌ ಗಾಂಧಿ ಹಾಗೂ ‘ಇಂಡಿಯಾ’…

13 hours ago

ಹೆಣ ಇದ್ದ ಸ್ಕಾರ್ಪಿಯೋ ಓಡಿಸಲು ಯಾರೂ ಸಿದ್ಧರಿಲ್ಲ

ಶೆಡ್‌ನಿಂದ ಹೆಣ ಹಾಕಿಕೊಂಡು ಬಂದ ದೀಪಕ್, ಗೇಟ್ ತನಕ ಬಂದು ಮುಂದಕ್ಕೆ ಹೋಗಲು ಆಗಲ್ಲ ಎಂದು ನಿರಾಕರಣೆ ಹೆಣ ಬಿಸಾಡುವ…

15 hours ago

ರೇಣುಕಾಸ್ವಾಮಿಯ ಹೆಣ ಬಿಸಾಡಲು ಜಾಗ ಹುಡುಕಾಟ

ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ Sattva Apartment ಹಿಂದಿನ ಜನ…

15 hours ago

ನೋಟಿನ ಕಂತೆಗಳನ್ನು ತಂದಿಟ್ಟ ದರ್ಶನ್

ಸರೆಂಡರ್ ಆದವರಿಗೆ ಕೊಡಲು; ಖರ್ಚುವೆಚ್ಚಕ್ಕೆ ಪ್ರದೋಷ್, ವಿನಯ್, ನಾಗರಾಜು ಕೈಗೆ ಕೇಳಿದಷ್ಟು ಹಣ ಕೊಟ್ಟರು ಸಹಾಯ ಮಾಡಿ, ಇಲ್ಲದಿದ್ದರೆ ನೇಣು…

15 hours ago