ಎಡಿಟೋರಿಯಲ್

ಮದುವೆಗೆ ಬಂದು ಗಿಫ್ಟನ್ನು ಕೊಟ್ಟೋರು ಊಟಾನೇ ಮಾಡದಿದ್ದರೆ?

  ಡಿಸಿ ಕಚೇರಿಗೆ ಬಂದೋಬಸ್ತ್‌ಗಾಗಿ ಹೋಗಿದ್ದವನು ಊಟಕ್ಕೆ ನೇರವಾಗಿ ಮನೆಗೆ ಹೋದೆಮಧ್ಯಾಹ್ನ ಮೂರು ಮೀರಿತ್ತುಬೆಳಿಗ್ಗೆಯಿಂದ ಬಿಸಿಲಲ್ಲಿ ಬೆಂದು ವಿಪರೀತ ಸುಸ್ತಾಗಿತ್ತುಊಟ ಮಾಡಿ ಉರುಳೋಣವೆಂದು ತಟ್ಟೆ ಮುಂದೆ ಕುಳಿತೆಅರ್ಧ ಸಾಗಿತ್ತುಠಾಣೆಯಿಂದ ಕರೆಫೋನೆತ್ತಿಕೊಂಡೆಲಷ್ಕರ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆರ್ರಾಜೇಂದ್ರ ಮಾತಾಡುತ್ತಿದ್ದರು. “ಅಟ್ರಾಸಿಟಿ ಕೇಸು ಬಂದಿದೆ ಸಾರ್ಕೆಇಬಿ ಯೂನಿಯನ್ ಸೆಕ್ರೆಟರಿ ತನ್ನ ಮಗಳ ಮದುವೆಗೆ ಸಹೋದ್ಯೋಗಿಗಳನ್ನೆಲ್ಲ ಆಹ್ವಾನಿಸಿದ್ದನಂತೆಗೋವರ್ಧನ್ ಹೋಟೆಲ್ಲಿನಲ್ಲಿ ಮಧ್ಯಾಹ್ನದ ರಿಸೆಪ್ಷನ್ ಇಟ್ಟುಕೊಂಡಿದ್ದಪಕ್ಕದಲ್ಲೇ ಕೆಇಬಿ ಆಫೀಸ್ ಎಲ್ಲರೂ ಆರತಕ್ಷತೆಗೆ ಬಂದು ಉಡುಗೊರೆಗಳನ್ನೂ ಕೊಟ್ಟು ಫೋಟೋ ತೆಗೆಸಿಕೊಂಡರುಆದರೆ 80ಜನ ಯಾರೂ ಊಟಾ ಮಾಡದೆ ಏನೇನೋ ಸಬೂಬು ಹೇಳಿಕೊಂಡು ಹೋದರಂತೆಅವನು ಗೋವರ್ಧನ್ ಹೋಟಲಲ್ಲಿ ರಿಸೆಪ್ಷನ್ ಇಟ್ಟುಕೊಂಡದ್ದೇ ತನ್ನ ಸಹೋದ್ಯೋಗಿಗಳಿಗಾಗಿಅವರು ಬೇಕೆಂದೇ ಊಟವನ್ನು ಮಾಡದೆ ಬಾಯ್ಕಾಟ್ ಮಾಡಿ ಹೋಗಿರುವುದರಿಂದ ಜಾತಿ ತಾರತಮ್ಯ ಮಾಡಿದ್ದಾರೆ ದಲಿತರ ಮೇಲಿನ ದೌರ್ಜನ್ಯದ ಕೇಸು ಹಾಕಬೇಕು ಅಂತ ಲಿಖಿತ ಕಂಪ್ಲೇಂಟ್ ತಂದಿದ್ದಾನೆ” .

“ ಮದುವೆ ಮಾಡೋದು ಬಿಟ್ಟು ಕಂಪ್ಲೇಂಟ್ ಹಿಡ್ಕಂಡು ಅಲ್ಲಿಗೆ ಬಂದಿದ್ದಾನಾ?” ಕೇಳಿದೆ.

“ ಇಲ್ಲಾ ಸಾರ್ಮದುವೆಯಾಗಿ ಆಗ್ಲೇ ಆರೇಳು ದಿನಗಳಾಗಿವೆ ಈವತ್ತು ಕಂಪ್ಲೇಂಟ್ ಬರಕೊಂಡು ಬಂದಿದ್ದಾನೆ.”

“ ಯಾರ್ರೀ ಅದುಊಟಕ್ಕೆ ಕರೆಯೋದು ನಮ್ಮ ಧರ್ಮಬರೋದು ಬಿಡೋದು ಅತಿಥಿಗಳಿಗೆ ಸೇರಿದ್ದುರಿಸೆಪ್ಷನ್ನಿಗೆ ಬಂದು ಗಿಫ್ಟ್ ಕೊಟ್ಟು ಫೋಟೋನೂ ತೆಗಿಸ್ಕೊಂಡು ಹೋಗಿದ್ದಾರೆ ಅಂದ್ರೆ ಅವನ ಆಹ್ವಾನಕ್ಕೆ ಮರ್ಯಾದೆ ಕೊಟ್ಟಿದ್ದಾರೆ ಅಂತ ತಾನೇ ಅರ್ಥಅದರಲ್ಯಾವ ಹುಳುಕು ಕಂಡನಂತೆ ಅವನುಯಾರು ಆ ಮಹಾನುಭಾವ? ” ಕೇಳಿದೆ.

“ ಅವನೇ ಸಾರ್ ಆ ಹುಟ್ಟು ತರಲೆತುಂಬುದೋಳಿನ ಸಫಾರಿ ಹಾಕ್ಕಂಡು ತಿರುಗುತ್ತಾನಲ್ಲಾಆ ನಿಂಗಯ್ಯಅವನೇ ಈ ಬಾರಿ ಯೂನಿಯನ್ ಸೆಕ್ರೆಟರಿ ಆಗಿದ್ದಾನೆ.”

“ ಯಾರುಆ ಪೊರಕೆ ಮೀಸೆ ನಿಂಗಯ್ಯನಾಕಿರಾತಕ ಸೂ*ಮಗಅವನದ್ದೇನ್ರೀ ಕಂಪ್ಲೇಂಟುಎಲ್ಲಿದ್ದಾನೆ ಅವನು?”

“ ನನ್ನ ಆಫೀಸ್ ರೂಮಲ್ಲಿ ಕೂರಿಸಿದ್ದೇನೆ ಸರ್ನಿಮ್ಮ ಚೇಂಬರ್ ಫೋನಿಂದ ಮಾತಾಡ್ತಿದ್ದೇನೆಕೇಸು ತಗೊಳ್ಳೋದೋ ಹೇಗೆ?”

“ ಈ ಹೂಸಿದ್ದು ಕೆಮ್ಮಿದ್ದಕ್ಕೆಲ್ಲಾ ಕೇಸು ರಿಜಿಸ್ಟರ್ ಮಾಡ್ತಾ ಕೂತ್ರೆ ಆಗುತ್ತೇನ್ರೀಈಗಲೇ ಊಟ ಮುಗಿಸಿಕೊಂಡು ಬರ್ತೀನಿಅವನಿಗೂ ಊಟಾ ಗೀಟಾ ತಿಂದು ಬರೋಕೆ ಹೇಳಿಹೊಟ್ಟೆ ತಂಪಾದ್ರೆ ನಾವು ಹೇಳೋದಾದ್ರೂ ತಲೆಗೆ ಹೋಗಬೌದು !”

ದಲಿತರ ಮೇಲಿನ ದೌರ್ಜನ್ಯದ ಅಪರಾಧ ಅಂದರೆ ಘೋರ ಅಪರಾಧದ ಕೇಸುದೂರು ಬಂದ ತಕ್ಷಣ ದೂಸರಾ ಮಾತಾಡದೆ ಕೇಸು ದಾಖಲು ಮಾಡಿಐಆರ್ ಅನ್ನು ವಿಳಂಬಕ್ಕೆಡೆ ಕೊಡದಂತೆ ಬೇಗ ಕೋರ್ಟಿಗೆ ಕಳಿಸಿ ತನಿಖೆ ಕೈಗೆತ್ತಿಕೊಳ್ಳಬೇಕುಬೇರೆಲ್ಲ ಕೇಸುಗಳಿಗಿಂತ ಅದಕ್ಕೆ TOP PRIORITYಮೇಲಧಿಕಾರಿಗಳೆಲ್ಲರಿಗೂ express fir ಕಳಿಸಿ ತ್ವರಿತವಾಗಿ ಕ್ರಮ ಜರುಗಿಸಬೇಕುಅಪರಾಧಿಗಳನ್ನು ತಕ್ಷಣ ಬಂಧಿಸಬೇಕುನೊಂದ ದಲಿತರಿಗೆ ರಕ್ಷಣೆ ಕೊಡುವಲ್ಲಿ ಒಂದಿನಿತೂ ಲೋಪವಾಗಕೂಡದುವಿಳಂಬವಾಗಕೂಡದುಅದು ತೊಂಬತ್ತರ ದಶಕ. 1989ರ ಅಟ್ರಾಸಿಟಿ ಕಾನೂನು ಬಂದು ಆಗಿನ್ನೂ ಆರು ವರ್ಷವಾಗಿತ್ತುರೂಲ್ಸುಗಳು ಬಂದದ್ದೂ ಕೇವಲ ವರ್ಷದ ಹಿಂದೆಹೊಸ ಕಾನೂನಿನ ವ್ಯಾಪ್ತಿವ್ಯಾಖ್ಯೆಯ ಬಗ್ಗೆ ನಮಗೇ ಅನೇಕ ಅನುಮಾನ ಗೊಂದಲಗಳಿದ್ದವು.

ಕೊಟ್ಟಿರುವ ಕಂಪ್ಲೇಂಟು ನಿಜವೋ ಸುಳ್ಳೋ ಉತ್ಪ್ರೇಕ್ಷೆಯೋ ಮುಖ್ಯವಲ್ಲಪೊಲೀಸ್ ಅಧಿಕಾರಿ ಅದನ್ನೆಲ್ಲಾ ತರ್ಕಿಸುತ್ತಾ ವಿಳಂಬ ಮಾಡುವಂತಿಲ್ಲಕೋಣ ಈದಿದೆ ಎಂದರೆ ಏಕೂ ಪೂಕು ವಿಚಾರಿಸದೆ ಮರು ಮಾತಾಡದೆ ಕೊಟ್ಟಿಗೆಗೆ ಕಟ್ಟಲೇ ಬೇಕುಯಾಕೆಂದರೆ ಅಟ್ರಾಸಿಟಿ ಕೇಸೇ ಹಾಗೆತರ್ಕಕ್ಕೆ ವಿಶ್ಲೇಷಣೆಗೆ ಅವಕಾಶವಿಲ್ಲ.

ಠಾಣೆಗೆ ಜೀಪಿನಲ್ಲಿ ಹೊರಟವನಿಗೆ ಈ ಕೇಸಿನ ಗೊಂದಲ ಕಾಡತೊಡಗಿತುಅವನು ಕಂಪ್ಲೇಂಟ್ ಕೊಟ್ಟಿರುವುದು ದಿನ ಬೆಳಗಾದರೆ ಮುಖ ನೋಡಬೇಕಾದ ಸಹೋದ್ಯೋಗಿಗಳೆಲ್ಲರ ವಿರುದ್ಧಕೇಸ್ ಸ್ವೀಕರಿಸುವಾಗ ಕೊಂಚ ಕಿರಿಕ್ ಆದರೂ ರಾಣಾರಂಪ ಮಾಡುತ್ತಾನೆಪತ್ರಿಕಾಗೋಷ್ಠಿ ಕರೆದು ಪೊಲೀಸರ ವಿರುದ್ಧವೇ ಇನ್ನಿಲ್ಲದ ಆರೋಪಗಳ ಸುರಿಮಳೆ ಸುರಿಯುತ್ತಾನೆಅವನು ಹಿಡಿದದ್ದೇ ಹಠದೊಡ್ಡ ತಂಟಲಮಾರಿಜೊತೆಗೆ ಅಪ್ಪಳಿಸುವ ಅನಾಗರಿಕ ರಾಗ!

ವಿಷಯ ತಿಳಿದೊಡನೆ ನಮ್ಮ ಎಸಿಪಿಯವರಿಗೆ ಮನೆಯಿಂದಲೇ ಫೋನ್ ಮಾಡಿ ತಿಳಿಸಿದ್ದೆ. “ಅವನಾಗಿ ಕಂಪ್ಲೇಂಟು ಕೊಟ್ಟಿರುವುದರಿಂದ ನಿರಾಕರಿಸುವುದಕ್ಕೆ ಬರೋದಿಲ್ಲಮೊದಲು ರಿಜಿಸ್ಟರ್ ಮಾಡಿಬಿಡಿವಿಳಂಬ ಅಂತಾಗಬಾರದುಪೊಲೀಸ್ನೋರ ಮೇಲೆ ಗೂಬೆ ಕೂರಿಸೋದಿಕ್ಕೆ ಅವನು ಏನೇನೋ ಹೇಳಿಕೆ ಕೊಡೋದುಧರಣಿ ಕೂರೋದೆಲ್ಲ ಬೇಡdont give room for such nonsens ಎಂದಿದ್ದರು.

ಕೆಇಬಿ ಯೂನಿಯನ್ ಎಂಬುದು ನಾನಾ ಒಳ ಜಗಳಗಳಿಂದ ಗುಂಪುಗಾರಿಕೆಯಿಂದ ತುಂಬಿ ಹೋಗಿತ್ತುಯಾವ್ಯಾವುದೋ ಹಡತರಲೆ ವಿಚಾರಕ್ಕೆಲ್ಲ ಕೇಸು ಕೌಂಟರ್ ಕೇಸುಗಳು ಬರುತ್ತಲೇ ಇದ್ದವುಮಾತೆತ್ತಿದರೆ ಜಗಳಧರಣಿ ಹೊಡೆದಾಟ ಇದ್ದದ್ದೇಇವನ ಈ ಕಂಪ್ಲೇಂಟು ಬರಿ ಒಬ್ಬನದಲ್ಲಅದರಲ್ಲೂ ಸೆನ್ಸೇಷನಲ್ ಕೇಸುನ್ಯಾಯಾ ನ್ಯಾಯ ಯಾವನಿಗೆ ಬೇಕುಈ ನೆಪದಲ್ಲಿ ನಾನಾ ಕಿತಾಪತಿಗಳು ಹುಟ್ಟಿ ಎಲ್ಲೆಲ್ಲಿಗೋ ವ್ಯಾಪಿಸುವುದು ನಿಶ್ಚಿತ.

ಠಾಣೆಗೆ ಬಂದಾಗ ನನ್ನ ಬರವಿಗಾಗೇ ಕಾದಿದ್ದ ನಿಂಗಯ್ಯ ಅರ್ಜಿ ಕೊಟ್ಟ ವ್ಯಗ್ರತೆಯ ಮುಖದಲ್ಲಿ ಪೊರಕೆ ಮೀಸೆಗಳು ನಿಗುರಿದ್ದವುದೂರು ಅರ್ಜಿಯನ್ನು ಓದಿದೆದೌರ್ಜನ್ಯದ ವ್ಯಾಖ್ಯೆಗೆ ಒಗ್ಗುವಂತೆ ಕಂಪ್ಲೇಂಟನ್ನು ನೀಟಾಗಿ ಬರೆದಿದ್ದ.

“ ನಿಂಗಯ್ಯನೋರೇನಿಮ್ಮ ಕೇಸನ್ನು ತಗೊಳ್ಳಲೇ ಬೇಕು ತಗೋಳ್ತೀನಿಅದ್ರಲ್ಲಿ ಎರಡನೇ ಮಾತಿಲ್ಲಆದರೆ ನೀವು ಇನ್ನೊಮ್ಮೆ ಯೋಚನೆ ಮಾಡಿ ಕಂಪ್ಲೇಂಟ್ ಕೊಡಿಐಆರ್ ಆದ ಮೇಲೆ ಮನಸ್ಸು ಬದಲಾಯಿಸಿ ಕಂಪ್ಲೇಂಟ್ ವಾಪಸ್ ತಗೋತೀನಿ ಅಂತ ನೀವು ಯಾವ ಕಾರಣಕ್ಕೂ ಹೇಳುವಂತಿಲ್ಲಯಾಕೆಂದರೆ ಅವರೆಲ್ಲಾ ನಿಮ್ಮ ಜೊತೆಲೇ ಇರೋ ಕೊಲೀಗ್ಸ್ಅವರ ಸಪೋರ್ಟಿನಿಂದಾನೆ ನೀವು ಸೆಕ್ರೆಟ್ರಿ ಆಗಿದ್ದೀರಾಒಂದು ಸಾರಿ ಕೇಸು ರಿಜಿಸ್ಟರ್ ಆದಮೇಲೆ ಮುಗೀತುಅದೇ ಫೈನಲ್.”

“ ಏನಿಲ್ಲಾ ಸಾರ್ಎಲ್ಲಾನೂ ಚೆನ್ನಾಗಿ ಯೋಚ್ನೆ ಮಾಡೇ ಕಂಪ್ಲೇಂಟ್ ಕೊಡ್ತಾ ಇದ್ದೀನಿಕಳೆದ ನಾಲ್ಕಾರು ದಿನಗಳಿಂದ ನೆಮ್ಮದೀನೆ ಹೋಗಿದೆಮದುವೆ ಮಾಡಿದ ಸಂತೋಷಾನೂ ಉಳಿದಿಲ್ಲನಾನು ಎಷ್ಟು ಪ್ರೀತಿಯಿಂದ ನಮ್ಮ ಕೊಲೀಗ್ಸ್ ಗೆಲ್ಲಾ ಒಂದೊಳ್ಳೇ ಊಟ ಕೊಡಿಸೋಣ ಅಂತ ನಮ್ಮ ಆಫೀಸ್ ಪಕ್ಕದ ಗೋವರ್ಧನ್ ಹೋಟಲಿನಲ್ಲೇ ಆರತಕ್ಷತೆ ಏರ್ಪಾಡು ಮಾಡಿದ್ದೆಬ್ರಾಮುಂಡ್ರುಗಳ ರೀತಿನೇ ಅಡುಗೆ ಮಾಡಿಸಿದ್ದೆಮದುವೆಗೇನೋ ಎಲ್ಲಾ ಬಂದ್ರುಆದ್ರೆ ಮುಕ್ಕಾಲು ಭಾಗ ಊಟಾನೇ ಮಾಡ್ಲಿಲ್ಲಮೊದ್ಲೇ ಊಟಾ ಮಾಡ್ಕಂಡು ಬಂದಿದ್ದೋ ಹೊಟ್ಟೆನೋವು ಭೇದಿ ಅಂತ ಹೇಳ್ಕಂಡು ಹೋಗೇಬಿಟ್ರುಇನ್ನು ಕೆಲವರು ಊಟ ಮಾಡ್ತೀವಿ ಅಂತ ಠಲಾಯಿಸಿ ಹಂಗೇ ನುಣುಚಿಕೊಂಡ್ರು . . . . . “

ಅವನ ಮಾತನ್ನು ಕಟ್ ಮಾಡಿ ಹೇಳಿದೆ, “ ಅಲ್ರೀ ಊಟ ತನ್ನಿಚ್ಛೆ ಅಂತಾರೆಅವರು ಊಟ ಮಾಡದಿದ್ರೆ ಕತ್ತೆಬಾಲನೀವಂತೂ ಬಾಯ್ತುಂಬಾ ಆತ್ಮೀಯವಾಗಿ ಕರೆದಿದ್ದೀರಿಅವರೆಲ್ಲಾ ಬಂದಿದ್ದಾರೆನಗುನಗುತ್ತಾ ಫೋಟೋ ತೆಗೆಸಿಕೊಂಡು ಗಿಫ್ಟನ್ನೂ ಕೊಟ್ಟು ಹೋಗಿದ್ದಾರೆಅದು ನಿಮಗೆ ಕೊಟ್ಟಿರೋ ಗೌರವವೇ ಅಲ್ಲವೇಯಾಕೆ ತಕರಾರು ಬೆಳೆಸ್ತೀರಿಬೇಕಾದ್ರೆ ಅವರನ್ನೆಲ್ಲಾ ಕರೆಸುತ್ತೇನೆನೀವೂ ಒಂದು ಸಾರಿ ಮಾತಾಡಿಆಗಲೂ ನಿಮಗೆ ಸಮಾಧಾನ ಆಗ್ಲಿಲ್ಲ ಅಂದ್ರೆ ಕಂಪ್ಲೇಂಟು ಕೊಡಿದುಡುಕಬೇಡಿಅವರೆಲ್ಲಾ ನಿಮ್ಮ ಜೊತೆ ಕೆಲಸಾ ಮಾಡೋರುದಿನ ಬೆಳಗಾದರೆ ನಿಮ್ಮ ಮುಖ ಅವರು ನೋಡ್ಬೇಕುನೀವೂ ಅಷ್ಟೇ. . . . . . “

“ ಏನು ಮಾತಾಡ್ತಿದ್ದೀರಿ ಸಾರ್ ನೀವೂನುಒಬ್ಬ ದಲಿತನಿಗಾದ ನೋವು ಎಂಥದ್ದು ಅಂತ ನಿಮಗೆ ಗೊತ್ತಾಗೋದಿಲ್ಲ ಅಲ್ವಾ ಅವರ ಪರವಾಗೇ ಮಾತಾಡ್ತಿದ್ದೀರಾನಾನಾಗ್ಲಿಂದ ಹೇಳ್ತಾನೆ ಇದ್ದೇನೆ ನೀವು ಕಿವೀಗೆ ಹಾಕ್ಕಂತಿಲ್ಲಈ ಕೊಲೀಗ್ಸ್ ಗಳಿಗೋಸ್ಕರವೇ ನಾನು ಅ ಹೋಟ್ಲಲ್ಲಿ ಆರತಕ್ಷತೆ ಇಟ್ಟುಕೊಂಡಿದ್ದುಇವರಿಗೆ ಬೇಕಾದ ಅಡುಗೆ ಮಾಡಿಸಿದ್ದುಆ ಪ್ರೀತೀನೇ ಇವರು ಅರ್ಥ ಮಾಡಿಕೊಳ್ಳಲಿಲ್ಲ ನೋಡಿಇವರಿಗೆಲ್ಲಾ ಏನಾದ್ರೂ ತೊಂದ್ರೆಯಾದ್ರೆ ನಾನು ಮುಂದೆ ನಿಂತು ಹೋರಾಟ ಮಾಡಿ ನ್ಯಾಯ ಕೊಡ್ಸಿ ದ್ದೀನಿಇವರುಗಳಿಗೋಸ್ಕರ ನಮ್ಮ ಮೇಲಧಿಕಾರಿಗಳ ಜೊತೆ ವಿರೋಧ ಕಟ್ಟಿ ಕೊಂಡಿದ್ದೇನೆನಿಜಾ ಹೇಳಬೇಕೂ ಅಂದ್ರೆ ನನಗೆ ಮದುವೆ ಮಾಡೋ ಶಕ್ತೀನೇ ಇಲ್ಲಆದರೂ ಸಾಲ ಸೋಲ ಮಾಡಿ ಆರತಕ್ಷತೆ ಮಾಡಿದ್ರೆ ಜಾತಿ ನೆಪ ಮಾಡಿಕೊಂಡು ಊಟಾನೇ ಮಾಡದೆ ಹೋಗಿದ್ದಾರಲ್ಲಾಇದು ನಿಮಗೆ ದೌರ್ಜನ್ಯ ಅನ್ನಿಸೋದಿಲ್ವಾ? ” ಎಂದು ಅಟಕಾಯಿಸಿಕೊಂಡಮೊದಲೇ ಚಳವಳಿಕೋರಜಗಳಗಂಟ ಗಂಟಲುನನಗೆ ನಾನೇ ತಪ್ಪಿತಸ್ಥನೆನೆಸಿ ದನಿ ಉಡುಗಿತು.

ಬಾಗಿಲ ಬಳಿ ನಿಂತಿದ್ದ ದಫೇದಾರರು ಬರುವಂತೆ ನನಗೆ ಕಣ್ಸನ್ನೆ ಮಾಡಿದರುಏನೋ ಫೈಲ್ ತೆಗೆದುಕೊಳ್ಳುವ ನೆಪದಲ್ಲಿ ಎದ್ದು ಛೇಂಬರಿನ ಹೊರಬಂದೆ.

“ ಸಾರ್ ಈ ನನ್ಮಗ ಸರಿಯಾದ ಕಿರಾತಕರಿಸೆಪ್ಷನ್ನಿಗೆ ಸೀಮೆಲಿಲ್ಲದ ಖರ್ಚು ಮಾಡಿದ್ದೀನಿ ಅಂತ ಗಫಾ ಹೊಡೆದು ಡಬಲ್ ವಸೂಲ್ ಮಾಡೋ ಹುನ್ನಾರ ಮಾಡಿದ್ದಾನೆಭಾರಿ ಅವಮಾನ ಆಗಿದೆ ಲಾಸಾಗಿದೆ ಅಂತ ಬಣ್ಣ ಕಟ್ತಿದ್ದಾನೆನಂಗೊತ್ತು ಇವನು ವಸೂಲಿ ಬಡ್ಡಿಮಗಮದುವೆಯಾಗಿ ಒಂದು ವಾರದ ಮೇಲೆ ಇವನಿಗೆ ದಲಿತ ನ್ಯಾಯದ ಜ್ಞಾನೋದಯ ಆಗೈತೆ ಅಂತಾನಲ್ಲ ಸಾರ್” ಎಂದು ದಫೇದಾರರು ಬುದ್ಧಿಚುರುಕು ಕೊಟ್ಟರುಅವರೂ ದಲಿತರೇ.

ಹಿಂದಿನ ನಾಲ್ಕೈದು ಕಾರ್ಮಿಕ ಗಲಾಟೆಗಳಲ್ಲಿ ನಿಂಗಯ್ಯನನ್ನು ಗಮನಿಸಿದ್ದೆಎಷ್ಟು ದೊಡ್ಡ ಅಧಿಕಾರಿಯೇ ಇರಲಿಮುಖ ಮುಸಡಿ ನೋಡದೆ ಉಛಾಯಿಸಿ ಮಾತಾಡಿ ಬಿಡುತ್ತಿದ್ದವಿಶ್ವಾಮಿತ್ರನ ರೀತಿ ಕೈಯೆತ್ತಿ ದಬಾಯಿಸುತ್ತಿದ್ದಕ್ಯಾಂಟಾಂಕ್ರಸ್ (cantankerousಹೆಸರಿಗೆ ಲಗತ್ತಾಗಿದ್ದ ಗುಟುರು ಗೂಳಿಕಿರಿಕ್ ಪಾರ್ಟಿ.

“ ಸಾರ್ತಾವು ಹೇಳಿದ್ರೆ ಇವರ ಆಫೀಸಿನವರನ್ನು ಕರೆಸುತ್ತೀನಿ ಅವರವರೇ ಮಾತಾಡಿಕೊಳ್ಳಲಿಆಮೇಲೆ ಇದ್ದೇ ಇದೆರಿಜಿಸ್ಟರ್ ಮಾಡೋದುಜೈಲಿಗೆ ಕಳಿಸೋದು.”

ದಫೇದಾರರ ಮಾತು ನನಗೂ ಸರಿ ಎನಿಸಿತುಕೇಸು ಫೈಲನ್ನೆಲ್ಲಾ ತಾನೇ ಬರೆಯಬೇಕಲ್ಲಾ ಎಂಬ ಮೈಗಳ್ಳತನಕ್ಕೆ ಆತ ಹಾಗೆ ಹೇಳಿರಬಾರದೇಕೆಕ್ಷಣ ಅನ್ನಿಸಿತುಅದರೂ ಈ ಬಗೆಯ ಕೇಸುಗಳು ಬಂದಾಗ ರಾಜಿಯಾಗೋದೇ ಹೆಚ್ಚು.

ಮುಂದುವರಿಯಲಿದೆ

 

andolanait

Recent Posts

ಮಾರ್ಚ್.‌6ರಂದು ರಾಜ್ಯ ಬಜೆಟ್‌ ಮಂಡನೆಗೆ ಚಿಂತನೆ

ಬೆಂಗಳೂರು: ಮುಂಬರುವ ಮಾರ್ಚ್‌ ತಿಂಗಳಲ್ಲಿ ಬಜೆಟ್‌ ಮಂಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮಾರ್ಚ್.‌6ರಂದು ಬಜೆಟ್‌ ಮಂಡಿಸುವ ಬಗ್ಗೆ ಸಿಎಂ…

3 seconds ago

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಪ್ರಯಾಣಿಕರಿಗೆ ಗಾಯ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡು ಗ್ರಾಮದ ಸಮೀಪ ಎರಡು ಕಾರುಗಳ ನಡುವೆ ಮುಖಾಮುಕಿ ಡಿಕ್ಕಿ ಸಂಭವಿಸಿ ಪ್ರಯಾಣಿಕರಿಗೆ ಗಂಭೀರವಾದ…

12 mins ago

ಮೈಸೂರು| ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧ ಪೊರಕೆ ಚಳುವಳಿ

ಮೈಸೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳದಲ್ಲಿ ಕನ್ನಡ ಶಾಲೆಗಳನ್ನು ಬಂದ್ ಮಾಡಿಸಲು ಹೊರಟಿದ್ದಾರೆ ಎಂದು ಆರೋಪಿಸಿ ಕನ್ನಡಪರ…

25 mins ago

ಮಲೆಮಹದೇಶ್ವರ ಬೆಟ್ಟ: ನೂತನ ಸೋಲಾರ್‌ ಘಟಕ ಉದ್ಘಾಟಿಸಿದ ಶಾಸಕ ಎಂ.ಆರ್.ಮಂಜುನಾಥ್‌

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ ಉದ್ಘಾಟನೆ ಮಾಡಿರುವ ಸೋಲಾರ್ ಘಟಕದಿಂದ ಪ್ರಾಧಿಕಾರಕ್ಕೆ ಪ್ರತಿ ತಿಂಗಳು 15…

39 mins ago

ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಜಲಜಾ ಶೇಖರ್‌ ಆಯ್ಕೆ

ಸೋಮವಾರಪೇಟೆ: ತಾಲ್ಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆಬ್ರವರಿ.9, 2026ರಂದು ಐಗೂರು ಗ್ರಾಮದಲ್ಲಿ ನಡೆಯಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ…

47 mins ago

ರಾಜ್ಯ ಸರ್ಕಾರ ಜಿಲ್ಲೆಗೊಂದು ಮಿನಿ ಚಿತ್ರಮಂದಿರ ನಿರ್ಮಿಸಬೇಕು: ಸಾಹಿತಿ ಬರಗೂರು ರಾಮಚಂದ್ರಪ್ಪ

ಮೈಸೂರು: ಕನ್ನಡ ಚಲನಚಿತ್ರೋದ್ಯಮದ ಉತ್ತಜನ ಹಾಗೂ ಪ್ರೋತ್ಸಾಹಕ್ಕಾಗಿ ರಾಜ್ಯ ಸರ್ಕಾರ ಜಿಲ್ಲೆಗೊಂದು ಮಿನಿ ಚಿತ್ರಮಂದಿರ ನಿರ್ಮಿಸಬೇಕು ಎಂದು ಹಿರಿಯ ಸಾಹಿತಿ…

1 hour ago