ಎಡಿಟೋರಿಯಲ್

ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳ ಬಿಡುಗಡೆ ಮತ್ತು ಒಟಿಟಿ ಪ್ರಸಾರದ ನಡುವೆ

 

  ಳೆದ ಶುಕ್ರವಾರ ‘ಕನ್ನಡ ಚಿತ್ರರಂಗ 90’ರ ಎರಡು ಕಾರ್ಯಕ್ರಮಗಳಿದ್ದವುಒಂದನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯು ಉದ್ಯಮದ ಸಂಘಟನೆಗಳು ಮತ್ತು ಚಲನಚಿತ್ರ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡರೆಇನ್ನೊಂದನ್ನು ಕಿರುತೆರೆಯ ಉತ್ಸಾಹಿಗಳು ನಡೆಸಿದರುಎರಡೂ ಕಾರ್ಯಕ್ರಮಗಳು ಕೊನೆಯ ಕ್ಷಣದಲ್ಲಿ ಹಮ್ಮಿಕೊಂಡವು.

ಕನ್ನಡ ಚಿತ್ರೋದ್ಯಮದ ಆದ್ಯಪ್ರವರ್ತಕರಿಗೆ ಸಲ್ಲಬೇಕಾದ ಗೌರವ ಸಲ್ಲುತ್ತಿಲ್ಲ ಎನ್ನುವ ಆಕ್ಷೇಪ ಕನ್ನಡದ ಮೊದಲ ಸಿನಿಮಾ ಕುಟುಂಬದ್ದುರಂಗಭೂಮಿಯಿಂದ ಬಂದು ಚಿತ್ರರಂಗದಲ್ಲಿ ಕೆಲಸ ಮಾಡಿ ಇದೀಗ ಕಿರುತೆರೆಯಲ್ಲೂ ತಮ್ಮ ಛಾಪನ್ನು ಮೂಡಿಸಿರುವಕನ್ನಡದ ಮೊದಲ ನಾಯಕ ನಟ ಸುಬ್ಬಯ್ಯ ನಾಯ್ಡು ಕುಟುಂಬದ ನೇತೃತ್ವದಲ್ಲಿ ಕಿರುತೆರೆಯಲ್ಲಿ ಕೆಲಸ ಮಾಡುತ್ತಿರುವ ಗೆಳೆಯರ ಬಳಗ ಹಮ್ಮಿಕೊಂಡ ‘ಸಿನಿಮಾ 90’ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತುಸುಬ್ಬಯ್ಯ ನಾಯ್ಡು ಅಭಿನಯದ ‘ವಸಂತಸೇನೆ’ ಚಿತ್ರದ ಹಾಡಿಗೆ ಅವರ ಸೊಸೆ ಗಿರಿಜಾ ಲೋಕೇಶ್ಲೋಕೇಶ್ ಅಭಿನಯದ ಚಿತ್ರಗಳ ಹಾಡಿಗೆ ಅವರ ಮಗಳು ಪೂಜಾ ಲೋಕೇಶ್ಸೃಜನ್ ಲೋಕೇಶ್ ನಟಿಸಿದ ಚಿತ್ರದ ಹಾಡಿಗೆ ಅವರ ಮಕ್ಕಳಾದ ಸುಕೃತ್ ಮತ್ತು ಶ್ರೇಷ್ಠ ನರ್ತಿಸಿ ರಂಜಿಸಿದ್ದು ಕಾರ್ಯಕ್ರಮದ ವಿಶೇಷಕಿರುತೆರೆಯ ಮಂದಿಯೆಲ್ಲ ಜೊತೆಯಾಗಬೇಕುಈ ಕಾರ್ಯಕ್ರಮ ಅದಕ್ಕೆ ನಾಂದಿಯಾಗಲಿ ಎಂದವರು ಸೃಜನ್ ಲೋಕೇಶ್.

ಕಲಾವಿದರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ಮೊದಲ ಚಿತ್ರ ‘ಸತಿ ಸುಲೋಚನಾ’ ಕುರಿತಂತೆಅದರ ಹಿನ್ನೆಲೆಕನ್ನಡ ಚಿತ್ರರಂಗ ನಡೆದು ಬಂದ ಹಾದಿವಿವಿಧ ಕ್ಷೇತ್ರಗಳ ಮಂದಿಯ ಕೊಡುಗೆಗಳ ಬಗ್ಗೆ ಸುಂದರರಾಜ್ಎಸ್.ವಿ.ರಾಜೇಂದ್ರ ಸಿಂಗ್ ಬಾಬುಉಮಾಶ್ರೀರೇಖಾರಾಣಿಗಂಗಾಧರ ಮೊದಲಿಯಾರ್ಕೆ.ವಿ.ಚಂದ್ರಶೇಖರ್ ಮುಂತಾದವರು ಮಾತನಾಡಿದ ಈ ಕಾರ್ಯಕ್ರಮವನ್ನು ಪಿ.ಶೇಷಾದ್ರಿ ಅವರು ನಡೆಸಿಕೊಟ್ಟರೆದೊಡ್ಡಣ್ಣ ವಂದಿಸಿದರು.

ಅಂದು ಮಾತನಾಡಿದ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರುಕನ್ನಡ ಚಿತ್ರರಂಗ ಎದುರಿಸುತ್ತಿರುವ ಬಹುದೊಡ್ಡ ಅಪಾಯದ ಬಗ್ಗೆ ಗಮನ ಸೆಳೆದರುಒಂಟಿ ಪರದೆಯ ಚಿತ್ರಮಂದಿರಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದ್ದುಮಲ್ಟಿಪ್ಲೆಕ್ಸ್‌ಗಳ ಸಂಖ್ಯೆ ಏರುತ್ತಿರುವುದರಿಂದ ಕನ್ನಡ ಚಿತ್ರಗಳು ಎದುರಿಸುತ್ತಿರುವ ಅಪಾಯದ ಕುರಿತಂತೆ ಅವರ ಮಾತಿತ್ತು.

ಕಿರುತೆರೆಯ ಆಗಮನಸರಣಿಗಳುಕನ್ನಡ ಚಿತ್ರಗಳ ಪ್ರಸಾರದ ನಂತರ ಒಂದು ವರ್ಗದ ಪ್ರೇಕ್ಷಕರುವಿಶೇಷವಾಗಿ ಮಹಿಳೆಯರು ಚಿತ್ರಮಂದಿರದ ಕಡೆ ಬರುವುದನ್ನು ಕಡಿಮೆ ಮಾಡಿದ್ದರುಡಿಜಿಟಲ್ ತಂತ್ರಜ್ಞಾನದ ನಂತರ ಬೆರಳ ತುದಿಯಲ್ಲಿ ಮನರಂಜನೆ ದೊರಕುವ ಜಾಲತಾಣಗಳುಮೊಬೈಲ್‌ಗಳುಕೊರೊನಾ ದಿನಗಳಲ್ಲಿ ಜನಪ್ರಿಯವಾದ ಒಟಿಟಿ ತಾಣಗಳು ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ವೀಕ್ಷಿಸಲು ಬರುವ ಸಿನಿಮಾಪ್ರಿಯರ ಸಂಖ್ಯೆಯನ್ನು ಇಳಿಸಿದೆಮಲ್ಟಿಪ್ಲೆಕ್ಸ್‌ಗಳಲ್ಲಿ ದುಬಾರಿ ಪ್ರವೇಶದರತಿಂಡಿತಿನಿಸುಗಳ ದರಗಳು ಜನಸಾಮಾನ್ಯ ಪ್ರೇಕ್ಷಕರನ್ನು ಅತ್ತ ಸುಳಿಯದಂತೆ ಮಾಡಿವೆ.

ಒಳ್ಳೆಯ ಚಿತ್ರಗಳನ್ನು ಒಟಿಟಿಯಲ್ಲಿ ನೋಡಬಹುದು ಎನ್ನುವುದು ಸಾಮಾನ್ಯವಾಗಿ ಹೇಳುವ ಮಾತುಆದರೆ ಅಲ್ಲಿಗೆ ಬರುವ ಕನ್ನಡ ಚಿತ್ರಗಳ ಸಂಖ್ಯೆ ಕಡಿಮೆಇತ್ತೀಚಿನ ಪ್ರಸಂಗವೊಂದು ಅದಕ್ಕೆ ಒಳ್ಳೆಯ ಉದಾಹರಣೆಕಳೆದ ವಾರ ‘ಹರಿವು’, ‘ನಾತಿಚರಾಮಿ’, ‘ಆಕ್ಟ್ 1978’ ಮುಂತಾದ ಚಿತ್ರಗಳನ್ನು ನೀಡಿದರಾಷ್ಟ್ರಪ್ರಶಸ್ತಿ ಪುರಸ್ಕೃತ ಮಂಸೋರೆ ನಿರ್ದೇಶನದ ಹೊಸ ಚಿತ್ರ ‘19 20 21’ ತೆರೆಕಂಡಿತು.

ನಡೆದ ಘಟನೆಯನ್ನು ಆಧರಿಸಿದ ಸಿನಿಮಾ ಅದುದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಘಟನೆನಕ್ಸಲ್ ನಿಗ್ರಹ ಪಡೆಯಿಂದ ಬಂಧಿತರಾದ ವಿಠಲ್ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯ ನಡೆಸಿದ ಕಾನೂನು ಹೋರಾಟದ ಕಥೆನಕ್ಸಲರೊಂದಿಗೆ ಸಂಪರ್ಕದಲ್ಲಿದ್ದಾರೆಂದು ತಂದೆಮಗನನ್ನು ಬಂದಿಸಲಾಗಿತ್ತುವಿಠಲ್ ಅವರು ತಮ್ಮ ಮೇಲಿನ ಆರೋಪದ ವಿರುದ್ಧ ಸತತ ಕಾನೂನು ಹೋರಾಟ ನಡೆಸಿದರು. 2021ರಲ್ಲಿ ಅವರನ್ನು ನಿರ್ದೋಷಿ ಎಂದು ನ್ಯಾಯಾಲಯ ಹೇಳಿತುಈ ಹೋರಾಟದಲ್ಲಿ ಮಲೆಕುಡಿಯ ಸಮುದಾಯದ ಮಂದಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ.

ಈ ಚಿತ್ರವನ್ನು ನೋಡಿದವರೆಲ್ಲ ಮೆಚ್ಚಿಕೊಂಡಿದ್ದಾರೆಉತ್ತಮ ವಿಮರ್ಶೆಗಳೂ ಬಂದಿವೆಆದರೆ ಚಿತ್ರಮಂದಿರ ಮಾತ್ರ ಬರಿದುಕೆಲವು ಪ್ರದರ್ಶನಗಳು ರದ್ದಾದ ಸುದ್ದಿಯೂ ಬಂತುಎರಡನೇ ವಾರಕ್ಕೆ ಹೇಗಾದರೂ ಮಾಡಿ ಕೆಲವು ಪ್ರದರ್ಶನಗಳನ್ನಾದರೂ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಚಿತ್ರತಂಡ ಇದೆಇದೊಂದೇ ಚಿತ್ರವಲ್ಲಇದು ಒಂದು ಮಾದರಿ ಮಾತ್ರಇಂತಹ ಹಲವು ಚಿತ್ರಗಳ ಪ್ರದರ್ಶನ ಎರಡನೇ ದಿನಕ್ಕೇ ರದ್ದಾದ ಪ್ರಸಂಗಗಳಿವೆ ಎನ್ನಿ.

ಮಲಯಾಳದಲ್ಲಿ ಬರುವ ಸದಭಿರುಚಿಯ ಚಿತ್ರಗಳನ್ನು ನೋಡಿದ ಕನ್ನಡ ಪ್ರೇಕ್ಷಕ ಇಂತಹ ಚಿತ್ರಗಳು ಕನ್ನಡದಲ್ಲಿ ಬರುತ್ತಿಲ್ಲ ಎಂದು ಆಕ್ಷೇಪಿಸುತ್ತಾನೆಆದರೆ ಇಂತಹ ಚಿತ್ರಗಳು ಬಿಡುಗಡೆ ಆದಾಗ ಅದನ್ನು ಚಿತ್ರಮಂದಿರಗಳಲ್ಲಿ ಹೋಗಿ ನೋಡುವುದು ಅಪರೂಪಹೇಗಿದ್ದರೂ ಒಟಿಟಿಯಲ್ಲಿ ಬಂದಾಗ ನೋಡಿದರಾಯಿತು ಎನ್ನುವ ನಿಲುವು.

ಇಲ್ಲೇ ಸಮಸ್ಯೆಯ ಮೂಲಮಂಸೋರೆ ಹೇಳುತ್ತಾರೆಪ್ರೇಕ್ಷಕರು ಒಟಿಟಿಯಲ್ಲಿ ಬಂದಾಗ ನೋಡಿದರಾಯಿತು ಎಂದುಕೊಳ್ಳುತ್ತಾರೆಆದರೆ ಒಟಿಟಿಯಲ್ಲಿ ಎಲ್ಲ ಚಿತ್ರಗಳನ್ನೂ ಕೊಂಡುಕೊಳ್ಳುವುದಿಲ್ಲಹೊಸಬರ ಚಿತ್ರಗಳನ್ನು ಒಟಿಟಿಗಾಗಿ ಕೊಂಡುಕೊಳ್ಳಬೇಕಾದರೆಅದು ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿರಬೇಕುಇಲ್ಲವೇ ಅದು ಜನಪ್ರಿಯ ನಟರ ಚಿತ್ರವಾಗಿರಬೇಕುಚಿತ್ರಮಂದಿರದ ಕಡೆ ಇಂತಹ ಚಿತ್ರಗಳನ್ನು ನೋಡಲು ಮಂದಿ ಬರುವುದಿಲ್ಲ.

ಅವರಿಗೆ ತಮ್ಮ ದೌರ್ಬಲ್ಯಬಲಹೀನತೆಗಳ ವಿರುದ್ಧ ಹೋರಾಡುವ ಪಾತ್ರಗಳು ತೆರೆಯ ಮೇಲೆ ಬೇಕುನಮ್ಮ ಚಿತ್ರಗಳಲ್ಲಿ ಅದೆಲ್ಲಿರುತ್ತದೆನನ್ನ ಹಿಂದಿನ ಚಿತ್ರ ‘ಆಕ್ಟ್ 1978’ ಚಿತ್ರಮಂದಿರದಲ್ಲಿ ಯಶಸ್ವಿಯಾಗಿತ್ತುಬಹುಶಃ ಅದಕ್ಕೆ ಮುಖ್ಯ ಕಾರಣ ಬಾಂಬ್ ಕಟ್ಟಿಕೊಂಡು ಸರ್ಕಾರಿ ಕಚೇರಿಯಲ್ಲಿ ಎಲ್ಲರನ್ನೂ ಹೆದರಿಸಿದ ನಾಯಕಿ ಪಾತ್ರಸರ್ಕಾರಿ ಕಚೇರಿಗಳಲ್ಲಿ ನಡೆಯುವ ಲಂಚ ರುಷುವತ್ತುಗಳ ಬಗ್ಗೆ ಮಾತನಾಡುವ ಜನ ನೇರವಾಗಿ ಅದನ್ನು ಕೇಳಲಾರರುಚಿತ್ರದಲ್ಲಿ ಅಂತಹದೊಂದು ಪಾತ್ರ ಬಂದಾಗ ಪ್ರೇಕ್ಷಕನಿಗೆ ಸಮಾಧಾನಇಲ್ಲಿ ಅಂತಹ ಪ್ರಸಂಗಪಾತ್ರಗಳು ಇರಲಿಲ್ಲಹಾಗಾಗಿ ಜನ ಚಿತ್ರಮಂದಿರಗಳತ್ತ ಬಂದಿಲ್ಲ.

ಮಂಸೊರೆಯವರ ಯೋಚನೆ ಅದಲ್ಲಸಾಮಾಜಿಕ ತಾಣಗಳಲ್ಲಿಅವರಿಗೆ ಸಾಕಷ್ಟು ಮಂದಿ ಹಿಂಬಾಲಕರಿದ್ದಾರೆಯಾವುದಾದರೂ ವಿಷಯ ಪ್ರಸ್ತಾಪವಾದಾಗಚರ್ಚೆ ಎತ್ತಿಕೊಂಡಾಗಸಾವಿರಾರು ಜನರು ಅದನ್ನು ಇಷ್ಟಪಟ್ಟು ಗುರುತು ಹಾಕುತ್ತಾರೆಅವರಲ್ಲಿ ಕಾಲುಭಾಗದಷ್ಟು ಮಂದಿ ಕೂಡಾ ಚಿತ್ರಮಂದಿರದ ಕಡೆಗೆ ಬರಲಿಲ್ಲ ಎನ್ನುವುದು ಯಾಕೆಂದು ಅವರಿಗೆ ಅರ್ಥವಾಗಿಲ್ಲವಾಸ್ತವದ ಕಥೆ ಹೇಳಿದರೆಅದಕ್ಕೆ ಸಾಕಷ್ಟು ಉತ್ತೇಜನ ಇಲ್ಲ ಎನ್ನುವುದು ಅವರು ಕಂಡ ಸತ್ಯಕನ್ನಡದ ರಿಯಲಿಸ್ಟಿಕ್ ಸಿನಿಮಾಗಳುಜನಪ್ರಿಯ ನಟರಿಲ್ಲದ ಚಿತ್ರಗಳು ಒಟಿಟಿಯಲ್ಲಿ ಪ್ರಸಾರವಾಗಬೇಕಾದರೆಅದನ್ನು ಅವರು ಕೊಂಡುಕೊಳ್ಳಬೇಕುಕೊಂಡುಕೊಳ್ಳಬೇಕಾದರೆಮೊದಲೇ ಹೇಳಿದಂತೆ ಚಿತ್ರಮಂದಿರದಲ್ಲಿ ಯಶಸ್ವಿಯಾಗಬೇಕುಹೇಗೆಇದೀಗ ಕನ್ನಡದ ಬಹುತೇಕ ಚಿತ್ರ ನಿರ್ಮಾಪಕ/ನಿರ್ದೇಶಕರ ಮುಂದಿರುವ ಪ್ರಶ್ನೆಚಿತ್ರಮಂದಿರಗಳಲ್ಲಿ ಚಿತ್ರಗಳನ್ನು ನೋಡಲು ಸಾಧ್ಯವಾಗದೆ ಇರುವುದಕ್ಕೆಬಾಬು ಅವರು ಹೇಳಿದಂತೆಒಂಟಿ ಚಿತ್ರಮಂದಿರಗಳ ಸಂಖ್ಯೆ ಇಳಿಮುಖವಾಗಿರುವುದೂ ಕಾರಣಅಲ್ಲಿನ ಪ್ರವೇಶ ದರಒಂದು ಚಿತ್ರವನ್ನು ಮನೆಮಂದಿ ಎಲ್ಲ ನೋಡಲು ಸಾಧ್ಯವಾಗದಷ್ಟು ದುಬಾರಿ ಏನಲ್ಲಮಲ್ಟಿಪ್ಲೆಕ್ಸ್‌ಗಳಲ್ಲಿಕೆಳಮಧ್ಯಮ ವರ್ಗದ ಒಂದು ಕುಟುಂಬ ಚಿತ್ರ ನೋಡಬೇಕಾದರೆಅವರ ತಿಂಗಳ ದುಡಿಮೆಯ ಬಹುತೇಕ ಭಾಗ ವ್ಯಯಿಸಬೇಕಾಗುತ್ತದೆ.

 

ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಈ ಚಿತ್ರಮಂದಿರಗಳಲ್ಲಿ ಗರಿಷ್ಟ ಪ್ರವೇಶದರಕ್ಕೆ ಮಿತಿಯನ್ನು ಸರ್ಕಾರವೇ ನಿಗದಿಪಡಿಸಿದೆಇಲ್ಲಿ ಹಾಗೇನಿಲ್ಲಮನಸೋ ಇಚ್ಛೆ ಪ್ರವೇಶದರಇದಕ್ಕೆ ನಿಯಂತ್ರಣ ಇಲ್ಲದೆ ಹೋದರೆಚಿತ್ರಮಂದಿರಗಳಲ್ಲಿ ಹೊಸಬರ ಕನ್ನಡ ಚಿತ್ರಗಳ ಬಿಡುಗಡೆ ಮುಂದಿನ ದಿನಗಳಲ್ಲಿ ಸಾಧ್ಯವಾಗದೆ ಇರುವ ವಾತಾವರಣ ನಿರ್ಮಾಣವಾದರೆ ಆಶ್ಚರ್ಯವಿಲ್ಲ.

andolanait

Recent Posts

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ; ಪ್ರತಿಷ್ಠಿತ ಕಾನ್‌ ಚಿತ್ರೋತ್ಸವದಲ್ಲಿ ಭಾರತ ಚಿತ್ರೋದ್ಯಮ

ಉತ್ಸವಗಳ ಉತ್ಸವ ಎಂದೇ ಪ್ರತೀತಿ ಪಡೆದಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವ ಫ್ರಾನ್ಸ್‌ನ ಕಾನ್‌ನದು. ಇದೀಗ ಮೊನ್ನೆ ಅದರ ೭೯ನೇ ಆವೃತ್ತಿಗೆ ಚಾಲನೆ…

46 mins ago

ಗಗನಮುಖಿಯಾಗಿದ್ದ ತೆಂಗಿನ ಕಾಯಿ ದರ ಕುಸಿತ

ಎಚ್‌.ಎಸ್.ದಿನೇಶ್‌ ಕುಮಾರ್‌ ಮೈಸೂರು : ಕಳೆದ ವರ್ಷ ಗಗನಕ್ಕೇರಿದ್ದ ತೆಂಗಿನಕಾಯಿ ಬೆಲೆ ಇದೀಗ ಶೇ. ೫೦ರಷ್ಟು ದರ ಇಳಿದಿದೆ. ಇದರಿಂದಾಗಿ…

1 hour ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಮೇ.15  ಶುಕ್ರವಾರ

1 hour ago

ತಮಿಳುನಾಡಿನಲ್ಲಿ ಮದ್ಯ ಖರೀದಿ ಮತ್ತು ಸೇವನೆಗೆ 21 ವರ್ಷ ವಯಸ್ಸು ಕಡ್ಡಾಯ

ಚೆನ್ನೈ: ರಾಜ್ಯದಲ್ಲಿ ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚುತ್ತಿರುವ ಮದ್ಯ ಸೇವನೆಯನ್ನು ತಡೆಯಲು, ತಮಿಳುನಾಡು ಸರ್ಕಾರವು ಎಲ್ಲಾ ರೀತಿಯ ಮದ್ಯ ಖರೀದಿ ಮತ್ತು…

14 hours ago

ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಿಗೆ ಪೂರ್ವ ಮುಂಗಾರು ಆರ್ಭಟ ಮುಂದುವರಿದಿದೆ. ನಾಳೆ ಮತ್ತಷ್ಟು ತೀವ್ರತೆ…

15 hours ago

ಉತ್ತರ ಪ್ರದೇಶದಲ್ಲಿ ಮಳೆ ಅವಾಂತರ: ಸಾವಿನ ಸಂಖ್ಯೆ 104ಕ್ಕೆ ಏರಿಕೆ

ಲಕ್ನೋ: ಉತ್ತರ ಪ್ರದೇಶದಾದ್ಯಂತ ಭಾರೀ ಮಳೆ ಮತ್ತು ಬಿರುಗಾಳಿಗೆ ಈವರೆಗೆ 104 ಜನರು ಸಾವನ್ನಪ್ಪಿದ್ದಾರೆ. ಮಳೆ ಹೊಡೆತಕ್ಕೆ 53 ಜನರಿಗೆ…

15 hours ago