ಎಡಿಟೋರಿಯಲ್

ಅತಿಮಾನವರನ್ನು ಸೃಷ್ಟಿಸಲು ಸಜ್ಜಾದ ಟ್ವಿಟ್ಟರ್‌ಮುಖ್ಯಸ್ಥ ಮಸ್ಕ್

ಎಲಾನ್ ಮಸ್ಕ್ ಅವರ ನ್ಯೂರಲಿಂಕ್ ಸಂಸ್ಥೆ ಮತ್ತೆ ಸುದ್ದಿಯಲ್ಲಿದೆ. ಅದು ಅಭಿವೃದ್ದಿ ಪಡಿಸುತ್ತಿರುವ ಬ್ರೈನ್ ಚಿಪ್ ಬಗ್ಗೆ ಒಂದು ಲೇಖನ.

ಪ್ರತಿಯೊಂದು ಪ್ರೋಬ್, ಮೆದುಳಿನ ವಿದ್ಯುತ್ ಸಂಕೇತಗಳನ್ನು ಪತ್ತೆಹಚ್ಚುವ ಸಾಮರ್ಥ್ಯವಿರುವ ವಿದ್ಯುದ್ವಾರಗಳ ತಂತಿಗಳನ್ನು ಒಳಗೊಂಡಿರಲಿದ್ದು, ಮೆದುಳಿನ ಸಂಕೇತವನ್ನು ವರ್ಧಿಸಲು ಮತ್ತು ಹೀರಿಕೊಳ್ಳಲು ಅನುವು ಮಾಡಿಕೊಡುವ ಸಂವೇದನಾ ಪ್ರದೇಶವನ್ನು ಹೊಂದಿರುತ್ತದೆ. ಪ್ರತಿ ಪ್ರೋಬ್ ೪೮ ಅಥವಾ ೯೬ ತಂತಿಗಳನ್ನು ಹೊಂದಿರಲಿದ್ದು, ಪ್ರತಿ ತಂತಿಯಲ್ಲಿ ೩೨ ಸ್ವತಂತ್ರ ವಿದ್ಯುದ್ವಾರಗಳು ವಿರಾಜಮಾನವಾಗಿರುತ್ತವೆ.

-ಕಾರ್ತಿಕ್ ಕೃಷ್ಣ
ಜಗತ್ತಿನ ಅತೀ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಸದಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಲ್ಲಿರುತ್ತಾರೆ. ಟ್ವಿಟ್ಟರ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡ ನಂತರವಂತೂ ‘ಸರ್ವಂ ಮಸ್ಕ್ ಮಯಂ!’ ಅವರು ಯೋಚನೆ ಮಾಡುವ ರೀತಿಯನ್ನು ನೋಡಿದರೆ, ಈ ಆಸಾಮಿಗೆ ಇಡೀ ಜಗತ್ತಿಗೇ ಅಧಿಪತಿಯಾಗುವ ಹೆಬ್ಬಯಕೆ ಇದೆೆಯೇನೋ ಎಂಬ ಗುಮಾನಿ ಶುರುವಾಗುತ್ತದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡುತ್ತಿರುವ ಸ್ಪೇಸ್‌ ಎಕ್ಸ್‌, ಎಲೆಕ್ಟ್ರಿಕ್ ಗಾಡಿಗಳಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ, ಸಮರ್ಪಕ ಸಾಮಾಜಿಕ ಜಾಲತಾಣವಾಗಿರುವ ಟ್ವಿಟ್ಟರ್, ಉಪಗ್ರಹಗಳನ್ನು ಬಳಸಿಕೊಂಡು ವೇಗವಾದ ಇಂಟರ್ನೆಟ್ ಸೌಲಭ್ಯ ನೀಡುವ ಸ್ಟಾರ್‌ ಲಿಂಕ್‌ ಹೀಗೆ ಇವರ ಬತ್ತಳಿಕೆಯಲ್ಲಿರುವ ಅಸ್ತ್ರಗಳು ಒಂದಾ ಎರಡಾ!

ಭೂಮಿಗೆ ಅಧಿಪತಿಯಾಗಲು ಇನ್ನೇನು ಬೇಕೋ ನನಗೆ ತಿಳಿಯದು. ಕೇವಲ ಇಪ್ಪತ್ತು ಡಾಲರ್ ಗಳಿಂದ ಸ್ವತಂತ್ರ ಬದುಕನ್ನು ಆರಂಭಿಸಿದ ಎಲೋನ್ ರೀವ್ ಮಸ್ಕ್ , ಇಂದು ಬಿಲಿಯನೇರ್! ಸಾಮಾನ್ಯ ಇಂಜಿನಿಯರೊಬ್ಬ ತನ್ನ ವ್ಯಾವಹಾರಿಕ ಶೈಲಿ, ಕೌಶಲ್ಯ, ಚಾಕಚಕ್ಯತೆ ಹಾಗೂ ಪ್ರಯೋಗಗಳಿಂದ ಇಡೀ ಜಗತ್ತು ತನ್ನತ್ತ ನಿಬ್ಬೆರಗಾಗಿ ನೋಡುವಂತೆ ಮಾಡಿ, ಕನಸುಗಳ ಬೆನ್ನು ಹತ್ತಿ ಸಾಗುವವರಿಗೆ ಮಾದರಿಯಾಗಿದ್ದಾರೆ. ನನಗಂತೂ ಡಿಟಿ ಒಚಿಟಿ ಸಿನಿಮಾ ನೋಡಿದಾಗಲೆಲ್ಲ ಇವರೇ ನೆನಪಾಗುತ್ತಾರೆ! ಇಂತಿಪ್ಪ ಮಸ್ಕ್, ಮಾನವನ ಮೆದುಳಿಗೆ ಕೃತಕ ಬುದ್ಧಿಮತ್ತೆ ಇರುವ ಚಿಪ್ ಜೋಡಿಸಿ, ಆತನನ್ನು ‘ಸೂಪರ್ ಹ್ಯೂಮನ್’ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಅದರ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ ಬನ್ನಿ.

ಈ ಸಾಹಸ ಶುರುವಾಗಿದ್ದು ಎಲಾನ್ ಮಸ್ಕ್ ೨೦೧೬ರಲ್ಲಿ ಶುರು ಮಾಡಿದ್ದ ‘ನ್ಯೂರಾಲಿಂಕ್’ ಎಂಬ ಸಂಸ್ಥೆಯ ಮೂಲಕ. ಮೂಲತಃ ನರತಂತ್ರಜ್ಞಾನದ ಮೇಲೆ ಕೆಲಸ ಮಾಡುವ ಈ ಸಂಸ್ಥೆಯ ಮುಖ್ಯ ಉದ್ದೇಶ ಬಿಸಿಐಸಿಗಳನ್ನು ತಯಾರಿಸುವುದು. ಬಿಸಿಐ ಎಂದರೆ, ಮೆದುಳು ಹಾಗೂ ಕಂಪ್ಯೂಟರ್‌ನ ಮಧ್ಯೆ ಸಂವಹನ ನಡೆಸಬಹುದಾದ ಅಂತರ್ ಸಂಪರ್ಕ ಸಾಧನ. ಸ್ಥಾಪನೆಯಾದಾಗಿನಿಂದ, ಕಂಪನಿಯು ವಿವಿಧ ವಿಶ್ವವಿದ್ಯಾನಿಲಯಗಳಿಂದ ಹಲವಾರು ಉನ್ನತ ಮಟ್ಟದ ನರವಿಜ್ಞಾನಿಗಳನ್ನು ನೇಮಿಸಿಕೊಂಡಿದೆ. ಜುಲೈ ೨೦೧೯ರ ಹೊತ್ತಿಗೆ, ನ್ಯೂರಾಲಿಂಕ್ ಸಂಸ್ಥೆಯಲ್ಲಿ ಒಟ್ಟು ೧೫೮ ಮಿಲಿಯನ್ ಹೂಡಿಕೆಯಾಗಿತ್ತು. ಅದರಲ್ಲಿ ೧೦೦ ಮಿಲಿಯನ್ ಹೂಡಿಕೆ ಮಾಡಿದ್ದು ಮಸ್ಕ್ ಒಬ್ಬರೇ! ಆ ಸಮಯದಲ್ಲಿ ನ್ಯೂರಾಲಿಂಕ್ ಸಂಸ್ಥೆಯು, ಮೆದುಳಿಗೆ ಅತ್ಯಂತ ತೆಳುವಾದ (೪ ರಿಂದ ೬ ಮೈಕ್ರೋ ಮೀಟರ್ ಅಗಲ) ಎಳೆಗಳನ್ನು ಅಳವಡಿಸುವ ಸಾಮರ್ಥ್ಯವಿರುವ ‘ಹೊಲಿಗೆ ಯಂತ್ರದಂತಹ‘ ಸಾಧನವನ್ನು ನಿರ್ಮಿಸುತ್ತಿದ್ದೇವೆ ಎಂದು ಘೋಷಿಸಿತ್ತು. ಸುಮಾರು ೧,೫೦೦ ವಿದ್ಯುದ್ವಾರಗಳನ್ನು(ಟಛಿಣಡಿಜ) ಬಳಸಿಕೊಂಡು, ಇಲಿಯ ಮೆದುಳಿನಿಂದ ಮಾಹಿತಿಯನ್ನು ಓದುವ ಡೆಮೊ ಒಂದನ್ನೂ ಪ್ರದರ್ಶಿದ್ದರು. ೨೦೨೦ರ ವೇಳೆಗೆ ಮಾನವನ ಮೆದುಳನ್ನೂ ಓದುವ ಕನಸನ್ನು ಹೊಂದಿದ್ದ ನ್ಯೂರಾಲಿಂಕ್, ಅನಿವಾರ್ಯ ಕಾರಣಗಳಿಂದ ಅದನ್ನು ೨೦೨೨ಕ್ಕೆ ಮುಂದೂಡಿದ್ದರು! ಅವರು ತಿಳಿಸಿದ್ದ ಹೊಲಿಗೆ ಯಂತ್ರದಂತಹ ಸಾಧನವೇ ‘ಸರ್ಜಿಕಲ್ ರೋಬೋಟ್‌‘.

ಕಳೆದ ವಾರ ಸಂಸ್ಥೆಯ ಒಂದು ಕಾರ್ಯಕ್ರಮದಲ್ಲಿ ಮಾತಾಡಿದ ಎಲಾನ್ ಮಸ್ಕ್, ಕಂಪನಿಯ ಎರಡು ಅಪ್ಲಿಕೇಶನ್‌ಗಳು ದೃಷ್ಟಿಯನ್ನು ಪುನಃಸ್ಥಾಪಿಸುವ ಗುರಿಯನ್ನು ಹೊಂದಿದ್ದು, ಹುಟ್ಟಿನಿಂದ ಕುರುಡರಾಗಿರುವ ಜನರೂ ಕೂಡ ನೋಡಲು ಶಕ್ತರಾಗುತ್ತಾರೆ ಎಂದು ಘೋಷಿಸಿದ್ದಾರೆ. ಇನ್ನೊಂದು ಅಪ್ಲಿಕೇಶನ್ ಮೆದುಳಿನ ‘ಮೋಟಾರ್ ಕಾರ್ಟೆಕ್ಸ್’ನ ಮೇಲೆ ಕೇಂದ್ರೀಕೃತವಾಗಿದ್ದು, ಬೆನ್ನುಹುರಿಯಲ್ಲಿ ಸಮಸ್ಯೆ ಇದ್ದವರೂ ಕೂಡ ಸಂಪೂರ್ಣವಾಗಿ ದೇಹದ ನಿಯಂತ್ರಣ ಮಾಡಬಹುದಂತೆ! ಈ ಯೋಜನೆಯನ್ನು ಮುಂದಿನ ಆರು ತಿಂಗಳಿನಲ್ಲಿ ಕಾರ್ಯರೂಪಕ್ಕೆ ತರುವ ಕನಸು ಮಸ್ಕ್ ಅವರದ್ದು. ಪ್ರತಿಯೊಂದು ಪ್ರೋಬ್‌, ಮೆದುಳಿನ ವಿದ್ಯುತ್ ಸಂಕೇತಗಳನ್ನು ಪತ್ತೆಹಚ್ಚುವ ಸಾಮರ್ಥ್ಯವಿರುವ ವಿದ್ಯುದ್ವಾರಗಳ ತಂತಿಗಳನ್ನು ಒಳಗೊಂಡಿರಲಿದ್ದು, ಮೆದುಳಿನ ಸಂಕೇತವನ್ನು ವರ್ಧಿಸಲು ಮತ್ತು ಹೀರಿಕೊಳ್ಳಲು ಅನುವು ಮಾಡಿಕೊಡುವ ಸಂವೇದನಾ ಪ್ರದೇಶವನ್ನು ಹೊಂದಿರುತ್ತದೆ. ಪ್ರತಿ ಪ್ರೋಬ್ ೪೮ ಅಥವಾ ೯೬ ತಂತಿಗಳನ್ನು ಹೊಂದಿರಲಿದ್ದು, ಪ್ರತಿ ತಂತಿಯಲ್ಲಿ ೩೨ ಸ್ವತಂತ್ರ ವಿದ್ಯುದ್ವಾರಗಳು ವಿರಾಜಮಾನವಾಗಿರುತ್ತವೆ.

ಸುಲಭವಾಗಿ ಬಾಗುವ ಇಂತಹ ಪ್ರೋಬ್‌ಗಳನ್ನು ‘ಸರ್ಜಿಕಲ್ ರೋಬೋಟ್’ ಮೂಲಕ, ಯಾವುದೇ ಅಂಗಾಂಶಗಳಿಗೆ ಘಾಸಿಯಾಗದಂತೆ ಮೆದುಳಿನೊಳಕ್ಕೆ ಸೇರಿಸಲಾಗುತ್ತದೆ. ಇದರಿಂದ ಮೆದುಳಿನಲ್ಲಿರುವ ಸಾವಿರಾರು ನ್ಯೂರಾನ್‌ಗಳ ಜೊತೆ ಸಂಪರ್ಕ ಏರ್ಪಟ್ಟು, ಅವುಗಳ ಚಟುವಟಿಕೆಯನ್ನು ರೆಕಾರ್ಡ್ ಮಾಡಲು, ನೈಜ ಸಮಯದಲ್ಲಿ ಈ ಸಂಕೇತಗಳನ್ನು ಪ್ರಕ್ರಿಯೆಗೊಳಿಸಲು ಮತ್ತು ಚಲನೆಯನ್ನು ಬಾಹ್ಯ ಸಾಧನದ ನಿಯಂತ್ರಣಕ್ಕೆ ನೇರವಾಗಿ ಭಾಷಾಂತರಿಸಲು ಸಾಧ್ಯವಾಗುತ್ತದೆ. ನ್ಯೂರಾಲಿಂಕ್ ಸಂಸ್ಥೆಯ ಪ್ರಕಾರ, ಚಿಪ್‌ನ ಮೊದಲ ಆವೃತ್ತಿಯ ಕ್ವಾಡ್ರಿಪ್ಲೆಜಿಯಾ (ಪ್ಯಾರಾಲಿಸಿಸ್) ಹೊಂದಿರುವ ವ್ಯಕ್ತಿಗಳು ತಮ್ಮ ಮನಸ್ಸಿನ ಮುಖೇನ ಮೊಬೈಲ್ ಹಾಗು ಕಂಪ್ಯೂಟರ್‌ಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆಯಂತೆ. ಎಲಾನ್ ಮಸ್ಕ್ ತಮ್ಮ ಪ್ರೆಸೆಂಟೇಷನ್ನಲ್ಲಿ ಚಿಪ್ ಅಳವಡಿಸಿದ ಮಂಗದ ದೃಶ್ಯಾವಳಿಯನ್ನು ತೋರಿಸಿದ್ದರು. ವಿಶೇಷ ಏನೆಂದರೆ, ಆ ಮಂಗ ತನ್ನ ಮನಸಿನ ಮೂಲಕ ಕಂಪ್ಯೂಟರ್ ನಲ್ಲಿ ಟೈಪಿಸುತ್ತಿತ್ತು!

ಮನುಷ್ಯರಿಗೆ ಈ ಚಿಪ್‌ಗಳನ್ನು ಅಳವಡಿಸುವ ಮುಂಚೆ ಅದರ ಪರೀಕ್ಷೆಗಳು ನಡೆಯಬೇಕಲ್ಲವೇ? ನ್ಯೂರಾಲಿಂಕ್ ಇಂತಹ ಪರೀಕ್ಷೆಗಳನ್ನು ನಡೆಸುತ್ತಿದ್ದದ್ದು ಮಂಗ ಹಾಗು ಹಂದಿಗಳ ಮೇಲೆ! ವಿಡಿಯೋಗಳಲ್ಲಿ ಚಿಪ್‌ಗಳನ್ನು ಅಳವಡಿಸಿದ ಪ್ರಾಣಿಗಳು ಯಾವುದೇ ಸಂಕಟ ಪಡದೇ ಆರಾವಾಗಿ ಇರುವಂತೆ ಕಂಡರೂ, ಅದರ ಅಸಲಿಯತ್ತು ಯಾರಿಗೂ ತಿಳಿದಿಲ್ಲ. ಅವುಗಳ ವಾತು ನಮಗೆ ಅರ್ಥವಾಗುದಿಲ್ಲ ನೋಡಿ! ಹೀಗೆ ಪರೀಕ್ಷೆಗಳನ್ನು ನಡೆಸಿದ್ದರ ಫಲವಾಗಿ ೧೫೦೦ಕ್ಕೂ ಅಧಿಕ ಪ್ರಾಣಿಗಳು ಮೃತಪಟ್ಟಿವೆ ಎಂಬುದು ಈಗ ಎದ್ದಿರುವ ವಿವಾದ. ವಿಚಾರಣೆಗಳೂ ನಡೆಯುತ್ತಿವೆ. ಮಸ್ಕ್ ಸಾಹೇಬರಂತೂ ತಮ್ಮ ಬುರುಡೆಯೊಳಗೂ ಒಂದು ಚಿಪ್ ಹಾಕಿಕೊಳ್ಳುವುದಾಗಿ ಶಪಥ ಮಾಡದಿದ್ದಾರೆ. ಒಟ್ಟಿನಲ್ಲಿ ಈ ಯೋಜನೆ ಯಶಸ್ವಿಯಾದರೆ ಹುಟ್ಟಿನಿಂದ ಅಂಧರಾಗಿರುವವರು, ಪಾರ್ಶ್ವವಾಯು ಪೀಡಿತರು, ಮರೆವಿನ ರೋಗ, ಪಾರ್ಕಿನ್ಸನ್ ತೊಂದರೆಯಿಂದ ಬಳಲುತ್ತಿರುವವರು ಸಮಸ್ಯೆಗಳಿಂದ ಮುಕ್ತರಾಗುತ್ತಾರೆ. ಕಾದು ನೋಡುವ!

 

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago