೧೯೮೩ರ ಆ ದಿನ ವಿಚಿತ್ರ ಕಂಪ್ಲೇಂಟೊಂದು ನಜ಼ರ್ ಬಾದ್ ಠಾಣೆಗೆ ಬಂದಿತ್ತು. ಗುರುತರ ಆರೋಪಣೆಯ ಇಟಜ್ಞಜ್ಢಿZಚ್ಝಿಛಿ ಕೇಸು. ತಡಮಾಡದೆ ಕೇಸು ರಿಜಿಸ್ಟರ್ ಮಾಡಲೇ ಬೇಕಿತ್ತು.
ಕಂಪ್ಲೇಂಟ್ ಇದ್ದದ್ದು ಹೀಗೆ:
ತನ್ನ ಮಾಲೀಕತ್ವದಲ್ಲಿರುವ ಥಿಯೇಟರಿನೊಳಕ್ಕೆ . . . . . ಎಂಬಾತ ಗೂಂಡಾಗಳೊಂದಿಗೆ ಅತಿಕ್ರಮಿಸಿ ನುಗ್ಗಿ ದಾಂದಲೆ ಮಾಡಿ ಬೀಗ ಜಡಿದಿದ್ದಾರೆ. ಈ ದೂರಿನೊಂದಿಗೆ ಶಾಮಸುಂದರ್ ಟಾಕೀಸಿನ ಈಗಿನ ಮಾಲೀಕರು ವಕೀಲರ ಜೊತೆಗೆ ಬಂದಿದ್ದರು. ತಾನು ಆ ಟಾಕೀಸಿನ ಹಿಂದಿನ ಮಾಲೀಕರಿಗೆ ಒಟ್ಟು ೧೩ ಲಕ್ಷ ರೂ.ಗಳನ್ನು ೧೯೭೪ ರಿಂದ ನಾನಾ ಸಂದರ್ಭಗಳಲ್ಲಿ ಸಾಲ ನೀಡಿದ್ದೆ. ಅವರು ೬ ಲಕ್ಷ ರೂ. ಮಾತ್ರ ತೀರಿಸಿದ್ದಾರೆ. ಉಳಿದ ೭ ಲಕ್ಷ ರೂ. ತೀರಿಸಲು ಸಾಧ್ಯವಾಗದ್ದರಿಂದ ನನ್ನ ಹಣದ ಬದಲಿಗೆ ಥಿಯೇಟರನ್ನು ನನಗೆ ಬರೆದು ಕೊಟ್ಟಿದ್ದಾರೆ. ಥಿಯೇಟರ್ ನನ್ನ ವಶದಲ್ಲಿಯೇ ಇದ್ದು, ನಾಲ್ಕು ವರ್ಷದಿಂದ ನಾನೇ ನಡೆಸುತ್ತಿದ್ದೇನೆ. ಇದ್ದಕ್ಕಿದ್ದಂತೆ ಆ ವ್ಯಕ್ತಿ ಮೊನ್ನೆಯ ದಿನ ಅನೇಕ ಗೂಂಡಾಗಳನ್ನು ಕರೆದುಕೊಂಡು ಮಾರಕಾಸ್ತ್ರಗಳೊಂದಿಗೆ ಬಂದು ಅತಿಕ್ರಮಣ ಪ್ರವೇಶ ಮಾಡಿದ್ದಾರೆ. ಅಲ್ಲದೆ ದಬ್ಬಾಳಿಕೆಯಿಂದ ನಮ್ಮ ಕೆಲಸಗಾರರನ್ನು ಓಡಿಸಿ, ಥಿಯೇಟರಿನ ಎಲ್ಲ ಬಾಗಿಲುಗಳಿಗೂ ಬೀಗ ಜಡಿದಿದ್ದಾರೆ. ನಾನು ಅಲ್ಲಿಗೆ ಕಾಲಿಟ್ಟರೆ ಕತ್ತರಿಸಿ ಹಾಕುತ್ತೇನೆಂದು ಜೀವ ಬೆದರಿಕೆ ಹಾಕಿದ್ದಾರೆ. ಈಗಲೂ ತನ್ನ ಕಡೆಯ ಗೂಂಡಾಗಳನ್ನು ಅಲ್ಲೇ ಇರಿಸಿ ಭಯಾನಕ ಪರಿಸ್ಥಿತಿ ನಿರ್ಮಿಸಿದ್ದಾರೆ.
ಯಾರಪ್ಪಾ ಈ ರಣ ಭೀಕರ ರೌಡಿ ಎಂದು ನೋಡಿದರೆ, ಶಾಮಸುಂದರ್ ಥಿಯೇಟರಿನ ಹಿಂದಿನ ಮಾಲೀಕ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್! ಪ್ರಾಣಭೀತಿಯಿಂದ ಫಿರ್ಯಾದಿ ತತ್ತರಿಸುವುದಿರಲಿ, ತನಿಖಾಽಕಾರಿಯೂ ಬೆಚ್ಚಿ ಬೀಳುವ ಹೆಸರು.
ಇಟಜ್ಞಜ್ಢಿZಚ್ಝಿಛಿ ಕಂಪ್ಲೇಂಟು ಬಂದರೆ ಕೇಸು ದಾಖಲಿಸಿ ಊಐ ಅನ್ನು ತಕ್ಷಣ ಕೋರ್ಟಿಗೆ ಕಳುಹಿಸಬೇಕು. ಏನು ಎತ್ತ ಎಂದು ವಿಚಾರಿಸುವ ಅಽಕಾರ ಪೊಲೀಸರಿಗಿಲ್ಲ. ಎತ್ತು ಈಯಿತೆಂದರೆ ಕೊಟ್ಟಿಗೆಗೆ ಕಟ್ಟಬೇಕು.
ಈ ದೂರೋ ವಕೀಲರು ಅಚ್ಚುಕಟ್ಟಾಗಿ ಡ್ರಾಫ್ಟ್ ಮಾಡಿದ್ದ, ಲೋಪವಿಲ್ಲದ ಕಂಪ್ಲೇಂಟು. ಕೇಸು ರಿಜಿಸ್ಟರ್ ಆದಮೇಲೆ ಮಾಡುವ ತನಿಖೆಯಲ್ಲಿ ಅದು ಸತ್ಯವೋ ಸುಳ್ಳೋ ತಿಳಿಯುತ್ತದೆ. ಯಾವುದಕ್ಕೂ ಮೊದಲು ಕೇಸು ದಾಖಲಾಗಬೇಕು.
ವಕೀಲರೊಂದಿಗೆ ದೂರು ಅರ್ಜಿ ತಂದಿದ್ದ ಫಿರ್ಯಾದಿಯು (ಇಟಞmZಜ್ಞಿZಠಿ ), “ಕೇಸು ರಿಜಿಸ್ಟರ್ ಮಾಡಿ ಊಐ ಕೊಡಿ” ಎಂದು ಕುಳಿತರು.
“ನೋಡಿ, ನಮ್ಮ ಇನ್ಸ್‌ಪೆಕ್ಟರ್ ಮತ್ತು ಡಿವೈಎಸ್‌ಪಿಯವರಿಗೆ ಈ ವಿಷಯ ತಿಳಿಸಿದ್ದೇನೆ. ಅವರಿಬ್ಬರೂ ತಾವೇ ಠಾಣೆಗೆ ಬರ್ತೀವಿ ಅಂತ ಹೇಳಿದ್ದಾರೆ. ನೀವು ಸಂಜೆ ಬನ್ನಿ” ಹೇಳಿದೆ.
“ನಿಮ್ಮ ಆಫೀಸ್ ಪ್ರೊಸೀಜರ್ ಏನಿದೆಯೋ ತಾವು ಅದನ್ನು ಮಾಡಿಕೊಳ್ಳಿ ಸಾರ್. ನಮ್ಮ ಕಂಪ್ಲೇಂಟಿನಲ್ಲಿ ಇಟಜ್ಞಜ್ಢಿZಚ್ಝಿಛಿ ಇದೆ ತಾನೇ? ಕಾನೂನಿನಂತೆ ಊಐ ಕೊಡಿ. ನಿಮ್ಮ ತನಿಖೆ ನೀವು ಮಾಡಿಕೊಳ್ಳಿ” ವಕೀಲರ ಒತ್ತಾಯ.
“ನೋಡಿ, ಇದರಲ್ಲಿ ಕ್ರಿಮಿನಲ್ ಭಾಗ ಎಷ್ಟು, ಸಿವಿಲ್ ಎಷ್ಟು ಅಂತ ತಿಳಿದುಕೊಂಡು ಕೇಸು ರಿಜಿಸ್ಟರ್ ಮಾಡಬೇಕು. ಇಲ್ಲಿ ಉದ್ಭವಿಸುವ ಅನೇಕ ಅನುಮಾನಗಳಿಗೆ ಫಿರ್ಯಾದಿಯಾದ ನಿಮ್ಮಿಂದ ಅನೇಕ ಸ್ಪಷ್ಟನೆ ತಿಳಿದುಕೊಂಡು, ಮರುಹೇಳಿಕೆ ಪಡೆಯಬೇಕು. ಬೇಕಾಬಿಟ್ಟಿ ರಿಜಿಸ್ಟರ್ ಮಾಡಿದರೆ ನಿಮ್ಮ ಕೇಸೇ ಮುಗ್ಗರಿಸುತ್ತದೆ. ನಮ್ಮನ್ನೂ ಕೋರ್ಟು ಝಾಡಿಸುತ್ತದೆ !” ಎಂದೆ.
“ಯಾಕೆ ಸಾರ್ ಹೈ ಪ್ರೊಫೈಲ್ ಅಪರಾಽ ಅಂತ ಹಿಂದೆ ಮುಂದೆ ನೋಡ್ತಿದ್ದೀರಾ? ನೋಡಿ ಅವರೇ ಸ್ವ ಹಸ್ತಾಕ್ಷರದಲ್ಲಿ ಪತ್ರ ಬರೆದು ಕೊಟ್ಟಿದ್ದಾರೆ. ನೀವು ಊಐ ಹಾಕುವಾಗ ಒರಿಜಿನಲ್ ಪತ್ರವನ್ನು ನಿಮಗೇ ಒಪ್ಪಿಸುತ್ತೇವೆ. ಅವರು ಗೂಂಡಾಗಿರಿ ಮಾಡಿದ್ದನ್ನು ಕಣ್ಣಾರೆ ಕಂಡಿರುವ ಸಾಕ್ಷಿಗಳಿದ್ದಾರೆ. ಆ ಟೈಮಿನಲ್ಲಿ ನಮಗೆ ಫೋಟೋ ತೆಗೆಯಲಾಗಿಲ್ಲ. ಹೀಗೆ ಗೂಂಡಾಗಿರಿ ಮಾಡ್ತಾರೆ ಅಂತ ಗೊತ್ತಿದ್ದಿದ್ದರೆ ಫೋಟೋಗ್ರಾಫರನ್ನು ಮೊದಲೇ ಕರೆಸಬಹುದಾಗಿತ್ತು” ಎಂದರು ವಕೀಲರು. ಆ ಪತ್ರದ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿದ್ದರು.
ಇದೇನು Pಐಘೆಇಉ ಆಗಿದ್ದುಕೊಂಡು ಇವರೇ ಏಕೆ ಗೂಂಡಾಗಳೊಂದಿಗೆ ಅಲ್ಲಿಗೆ ಹೋದರೋ ಎಂದು ಯೋಚಿಸುತ್ತಾ, “ಸರಿ ನಾನು ಒರಿಜಿನಲ್ ಪತ್ರ ನೋಡಬೇಕು. ಇಲ್ಲಿ ಕೊಡಿ” ಎಂದೆ.
ಪ್ಲ್ಯಾಸ್ಟಿಕ್ ಫೋಲ್ಡರಿನೊಳಗೆ ಹಾಕಿದ್ದ ಪತ್ರವನ್ನು ತೆಗೆದು ಕೊಟ್ಟರು. ಅದನ್ನು ಬಿಚ್ಚಲಾಗದಂತೆ ಜೋಪಾನವಾಗಿ ಸೀಲ್ ಮಾಡಲಾಗಿತ್ತು. ಅರಮನೆಯ ರಾಜ ಲಾಂಛನವನ್ನು ಚಿನ್ನದ ಬಣ್ಣದಲ್ಲಿ ಎಂಬಾಸಿಂಗ್ (ಛಿಞಚಿಟooಜ್ಞಿಜ) ಮಾಡಿದ್ದ ದೊಡ್ಡ ಲೆಟರ್ ಹೆಡ್, ಛಾಪಾ ಕಾಗದದ ಪೇಪರಿನಂತೆ ದಪ್ಪವಿತ್ತು. ತನ್ನ ತಂದೆ ಶ್ರೀ ಜಯ ಚಾಮರಾಜ ಒಡೆಯರ್ ಅವರು ೧೯೭೪ರಲ್ಲಿ ತೀರಿಕೊಂಡಮೇಲೆ, ನಾನಾ ಕೌಟುಂಬಿಕ ಕಾರಣಗಳಿಗಾಗಿ ರಾಜಮಂತ್ರ ಪ್ರವೀಣರಾದ ಫಿರ್ಯಾದಿಯಿಂದ ಅನೇಕ ಸಂದರ್ಭಗಳಲ್ಲಿ ಒಟ್ಟು ೧೩ ಲಕ್ಷ ರೂ. ಸಾಲ ಪಡೆದಿದ್ದು, ಅದರಲ್ಲಿ ೮ ಲಕ್ಷ ರೂ. ತೀರಿಸಿರುತ್ತೇನೆ. ಉಳಿದ ೭ ಲಕ್ಷ ರೂ. ಸಾಲ ತೀರಿಸಲು ಸಾಧ್ಯವಾಗದ್ದರಿಂದ, ಶಾಮಸುಂದರ್ ಥಿಯೇಟರ್ ಮಾಲೀಕತ್ವವನ್ನು ಅವರಿಗೆ ಒಪ್ಪಿಸಿದ್ದೇನೆಂದು ಬರೆದುಕೊಟ್ಟಿದ್ದ ಪತ್ರ ಅದು. ರಾಜ ಲಾಂಛನದ ಪೇಪರಿನಲ್ಲಿ ಟೈಪಾಗಿದೆ. ಖುದ್ದು ಶ್ರೀಕಂಠದತ್ತರೇ ಸಹಿ ಹಾಕಿದ್ದಾರೆ. ನೋಡಿದರೆ ಯಾವುದೇ ಅಳುಕಿನಿಂದ (eಛಿoಜಿಠಿZಠಿಜಿಟ್ಞZ ಡ್ಟಿಜಿಠಿಜ್ಞಿಜ ) ಅಕ್ಷರಗಳನ್ನು ಬರೆದಂತಿಲ್ಲ. ಚಿತ್ತಾಗಲೀ, ತಿದ್ದುವಿಕೆಯಾಗಲೀ ಲವಲೇಶವೂ ಇದ್ದಂತಿಲ್ಲ. ಸ್ವಾಭಾವಿಕವಾಗಿ ಒಂದೇ oಠ್ಟಿಟhಛಿ ನಲ್ಲಿ ಸಹಿ ಹಾಕಿರುವಂತೆ ಕಾಣುತ್ತಿದೆ. ನಕಲಿ ಎಂದು ಮೇಲ್ನೋಟಕ್ಕೆ ಕಾಣುತ್ತಿಲ್ಲ. ಇದೆಲ್ಲವನ್ನೂ ಬರೆದುಕೊಟ್ಟು ಗೂಂಡಾಗಿರಿ ಬೇರೆ ಮಾಡಿದ್ದಾರಲ್ಲಾ ಈ ಪ್ರಿನ್ಸ್? ಇವರಿಗೆ ಯಾರೂ ಸರಿಯಾದ ಅಡ್ವೈಸರ್ಸ್ ಇಲ್ಲವೇ? ಎಂದು ಯೋಚಿಸುತ್ತಾ, ಆ ಸಹಿಯನ್ನೇ ಆಳವಾಗಿ ದೃಷ್ಟಿಸಿ ನೋಡುತ್ತಿದ್ದೆ.
“ನಿಮಗೆ ಈ ಪತ್ರ ಮತ್ತು ಸಹಿ ನಕಲಿ ಎಂಬ ಅನುಮಾನವಿದ್ದರೆ ಹ್ಯಾಂಡ್ ರೈಟಿಂಗ್ ಎಕ್ಸ್‌ಪರ್ಟ್ ಹತ್ತಿರ ಪರೀಕ್ಷೆ ಮಾಡಿಸಬಹುದು. ಸುಳ್ಳಾಗಿದ್ದರೆ ನಮ್ಮ ಫಿರ್ಯಾದಿ ಅದನ್ನು ಎದುರಿಸಲು ಸಿದ್ಧರಿದ್ದಾರೆ. ಮೊದಲು ಊಐ ಕೊಡಿ. ನಿಮ್ಮ ತನಿಖೆ ನೀವು ಮಾಡಿ”. ವಕೀಲರ ದನಿಯಲ್ಲಿ ಇಣುಕುತ್ತಿದ್ದ ಅಸಹನೆ.
“ಊಐ ಕೊಡೋದಾಗುತ್ತೆ. ಮೇಲಿನವರು ತಾವೇ ಬರ್ತೀವಿ ಅಂದಿದ್ದಾರೆ. ಅಲ್ಲೀ ತನಕ ಕಾಯೋದಾದ್ರೆ ಹೊರಗಡೆ ಕೂತಿರಿ. ಇಲ್ಲದಿದ್ರೆ ಸಂಜೆ ಐದೂವರೆಗೆ ಬನ್ನಿ” ಎಂದೆ ಕಟುವಾಗಿ.
ನಮ್ಮ ಇನ್ಸ್‌ಪೆಕ್ಟರಿಂದ ಫೋನ್ ಬಂತು. “ಆ ಕಂಪ್ಲೇಂಟು ಮತ್ತು ಡಾಕ್ಯುಮೆಂಟ್ಸನ್ನು ತಗೊಂಡು ಡಿವೈಎಸ್ಪಿ ಆಫೀಸಿಗೆ ಬನ್ನಿ”.
ಡಿವೈಎಸ್ಪಿಯವರು ಕಂಪ್ಲೇಂಟನ್ನು ಕೂಲಂಕಷವಾಗಿ ಓದಿದರು. “ಏನ್ರೀ ಇದೂ? ಅಫೆನ್ಸ್ ಆಗಿರೋದನ್ನು ನೀಟಾಗಿ ಎಲ್ಲಾ ಲೀಗಲ್ ಪಾಯಿಂಟ್ಸನ್ನೂ ಸೇರಿಸಿ ಬರೆದಿದ್ದಾನಲ್ರೀ? ೧೯೭೪ ರಿಂದಲೂ ಸಾಲ ಕೊಟ್ಟಿರೋದು; ಐದು ವರ್ಷಗಳಲ್ಲಿ ಥಿಯೇಟರಿನಿಂದ ಅದಾಯ ಬಂದಿರೋದು ಇವೆಲ್ಲವನ್ನೂ ಇನ್ ಕಂ ರಿಟರ್ನ್ಸ್‌ನಲ್ಲಿ ಡಿಕ್ಲೇರ್ ಮಾಡಿಕೊಂಡಿರೋದು ಎಲ್ಲಾ ಇದೆ. ಈಗಲೂ ಥಿಯೇಟರನ್ನು ನಡೆಸುತ್ತಿರುವವನು ಫಿರ್ಯಾದಿಯೇ. ಅಂದರೆ ಅದು ಅವನ ವಶದಲ್ಲೇ ಇದೆ. ಆದಾಯವನ್ನು ಅವನೇ ಪಡೆದು ಇನ್ ಕಂ ಟ್ಯಾಕ್ಸ್ ಕೂಡ ಕಟ್ಟಿದ್ದಾನೆ ಖದೀಮ. ಪ್ರಿನ್ಸ್ ತಮ್ಮ ಅರಮನೆಯ ರಾಯಲ್ ಪೇಪರಿನಲ್ಲಿ ತಾವೇ ಸ್ಪಷ್ಟವಾಗಿ ಬರೆದುಕೊಟ್ಟಿದ್ದಾರೆ. ಕೇಸು ತಗೊಳ್ಳದೆ ವಿಽ ಇಲ್ಲ. ತಗೊಂಡು ರಿಜಿಸ್ಟರ್ ಮಾಡಿ” ಎಂದರು.
. . . . . ಮುಂದಿನ ವಾರಕ್ಕೆ
(ಮೈಸೂರು ರಾಜವಂಶಸ್ಥ ಶ್ರೀಕಂಠದತ್ತರು ತೀರಿಕೊಂಡ ವಾರ ಇದು : ೧೦-೧೨-೨೦೧೩)
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…