Andolana originals

ಜನವರಿಗೆ ಚಾ.ಬೆಟ್ಟದ ಅಭಿವೃದ್ಧಿ ಕಾಮಗಾರಿ ಶುರು

ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ ವಾರದಲ್ಲಿ ಆರಂಭವಾಗಲಿದೆ. ವಿಶ್ವ ಪ್ರಸಿದ್ಧ ಚಾಮುಂಡಿ ಬೆಟ್ಟವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಪ್ರಸಾದ ಯೋಜನೆಯಡಿ ಆಯ್ಕೆ ಮಾಡಿದೆ.

ದೇಶದ ೪೮ ಪಾರಂಪರಿಕ ದೇವಸ್ಥಾನಗಳ ಅಭಿವೃದ್ಧಿ ಪಟ್ಟಿಯಲ್ಲಿ ಚಾಮುಂಡಿ ಬೆಟ್ಟ ಕೂಡ ಸೇರಿದೆ. ಈ ಯೋಜನೆಯಡಿ ಚಾಮುಂಡಿ ಬೆಟ್ಟ ಅಭಿವೃದ್ಧಿಗೆ ಕೇಂದ್ರ ಸರ್ಕಾರ ೪೫ ಕೋಟಿ ರೂಪಾಯಿ ನೀಡುತ್ತಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಕಾರ್ಕಳ, ಉಡುಪಿ ಹಾಗೂ ಮಂಗಳೂರು ಸೇರಿದಂತೆ ಹಲವು ಪ್ರಖ್ಯಾತ ಪಾರಂಪರಿಕ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಿದ ಅನುಭವ ಹೊಂದಿರುವ ಎಸ್‌ಕೆಎಸ್ ಕಾರ್ಕಳ ಪ್ರೈ. ಲಿ.,ಗೆ ಚಾಮುಂಡಿಬೆಟ್ಟದ ಅಭಿವೃದ್ಧಿ ಗುತ್ತಿಗೆ ನೀಡಲಾಗಿದೆ.

ಈ ಯೋಜನೆಯ ಸಂಪೂರ್ಣ ಕಾಮಗಾರಿಯನ್ನು ೨೦೨೬ರ ಮಾರ್ಚ್ ೨೬ಕ್ಕೆ ಪೂರ್ಣಗೊಳಿಸುವಂತೆ ಟೆಂಡರ್ನಲ್ಲಿ ಷರತ್ತು ವಿಧಿಸಲಾಗಿದೆ. ಗುತ್ತಿಗೆ ಪಡೆದ ಎಸ್‌ಕೆಎಸ್ ಕಾರ್ಕಳ ಕಂಪೆನಿ ಈಗಾಗಲೇ ಚಾಮುಂಡಿಬೆಟ್ಟ, ನಂದಿ ಪ್ರತಿಮೆ ಹಾಗೂ ಬೆಟ್ಟದ ಪಾದದಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಿದೆ. ನೀಲನಕ್ಷೆ, ‘ತ್ರಿ’ ಡೈಮೆನ್ಷನ್ ಸೇರಿದಂತೆ ಎಲ್ಲಾ ಸಿದ್ಧತೆ ಪೂರ್ಣಗೊಳಿಸಿದೆ.

ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯು ಪ್ರಸಾದ ಯೋಜನೆಯಡಿ ಚಾಮುಂಡಿಬೆಟ್ಟದ ಅಭಿವೃದ್ಧಿಗೆ ಅಧಿಕೃತವಾಗಿ ಜಾಗ ಹಸ್ತಾಂತರ ಮಾಡಬೇಕು. ಜೊತೆಗೆ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಲ್ಲಿಸಿರುವಂತೆ ಅಭಿವೃದ್ಧಿ ಮಾಡಲು ನಿರಕ್ಷೇಪಣಾ ಪತ್ರ (ಎನ್‌ಒಸಿ) ನೀಡಬೇಕಿದ್ದು, ಸಂಬಂಧಪಟ್ಟ ಇಲಾಖೆ ಎನ್‌ಒಸಿ ನೀಡಿದ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ.

ಯೋಜನೆಯಲ್ಲಿ ಮಾರ್ಪಾಡು: ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರ ನಿರ್ದೇಶನದ ಮೇರೆಗೆ ಚಾಮುಂಡಿಬೆಟ್ಟ ಅಭಿವೃದ್ಧಿ ಯೋಜನೆಯಲ್ಲಿ ಕೆಲವೊಂದು ಮಾರ್ಪಾಡು ಮಾಡಲಾಗಿದೆ. ರಥೋತ್ಸವದ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಯ ರಥ ದೇವಸ್ಥಾನದ ಪ್ರವೇಶ ದ್ವಾರದಿಂದ ಶ್ರೀ ಮಹಾಬಲೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಸತ್ಯನಾರಾಯಣಸ್ವಾಮಿ ದೇವಸ್ಥಾನದ ಮೂಲಕ ಮತ್ತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರವೇಶದ್ವಾರ ತಲುಪಲಿದೆ. ರಥೋತ್ಸವ ದೇವಸ್ಥಾನದ ಒಂದು ಸುತ್ತು ಹಾಕುವ ಸಂದರ್ಭದಲ್ಲಿ ಭಕ್ತರು ರಥವನ್ನು ಹಿಂಬಾಲಿಸುತ್ತಾ ದೇವಸ್ಥಾನ ಸುತ್ತು ಹಾಕುತ್ತಾರೆ. ಸಾವಿರಾರು ಜನರು ಒಂದೆಡೆ ಸೇರುವ ಹಿನ್ನೆಲೆಯಲ್ಲಿ ನೂಕು ನುಗ್ಗಲು ಉಂಟಾಗುತ್ತದೆ. ಆ ವೇಳೆ ಅವಘಡಗಳು ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಇದನ್ನು ತಪ್ಪಿಸುವಂತೆ ತಾಂತ್ರಿಕ ಮಾರ್ಪಾಡು ಮಾಡಲು ಜಿಲ್ಲಾಧಿಕಾರಿಗಳು ಸಲಹೆ ನೀಡಿದ್ದರು.

ಕಲೆ, ವಿವಿಧೋದ್ದೇಶ ಕೇಂದ್ರ, ವೀಕ್ಷಣಾ ಗೋಪುರ ನಿರ್ಮಾಣ:

ಕೇಂದ್ರದ ಪ್ರಸಾದ ಯೋಜನೆಯಡಿ ಚಾಮುಂಡಿ ಬೆಟ್ಟದ ಮೇಲೆ, ನಂದಿ ಪ್ರತಿಮೆ, ಪಾದದ ಮೆಟ್ಟಿಲು ಸೇರಿದಂತೆ ಇತರೆಡೆ ೧೦ಕ್ಕೂ ಹೆಚ್ಚು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ದೇವಸ್ಥಾನದ ಬಳಿ ಸರದಿ ಸಾಲು ಮಂಟಪ, ಮಹಿಷಾಸುರ ಪ್ರತಿಮೆ ಬಳಿ ಮಲ್ಟಿ ಪರ್ಪಸ್ ಸೆಂಟರ್, ಅಲ್ಲಿಯೇ ಪೂಜೆ, ವಿಶೇಷ ದರ್ಶನ ಸೇರಿದಂತೆ ಇತರೆ ಸೇವಾ ಕಾರ್ಯಗಳಿಗೆ ಟಿಕೆಟ್ ಕೌಂಟರ್ ತೆರೆಯಲಾಗುತ್ತದೆ. ಮಹಿಷಾಸುರ ಪ್ರತಿಮೆಯ ನೇರ ರಸ್ತೆಯಲ್ಲಿ ಈಗಿರುವ ಕಬ್ಬಿಣದ ಗೇಟ್ ಬಳಿ ಪಾರಂಪರಿಕ ಶೈಲಿಯ ಆರ್ಚ್ (ಪವೇಶ ದ್ವಾರ), ಶೌಚಾಲಯ, ಚಪ್ಪಲಿ ಸ್ಟ್ಯಾಂಡ್, ವ್ಯೂವ್ಹಿಂಗ್ ಟವರ್, ನಂದಿ ಪ್ರತಿಮೆ ಬಳಿಯ ಮೆಟ್ಟಿಲುಗಳ ನವೀಕರಣ, ಸ್ಟೀಲ್ ರೈಲಿಂಗ್ಸ್, ಮತ್ತೊಂದು ವೀಕ್ಷಣಾ ಗೋಪುರ, ಚಾಮುಂಡಿ ಬೆಟ್ಟದ ಪಾದದಲ್ಲಿ ಮೆಟ್ಟಿಲುಗಳ ನವೀಕರಣ ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಪರಂಪರೆಗೆ ಧಕ್ಕೆ ಬಾರದಂತೆ ಕೆಲಸ:  ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಗೋಪುರ ಸೇರಿದಂತೆ ಸುತ್ತಮುತ್ತಲಿನ ಎಲ್ಲ ದೇವಾಲಯಗಳನ್ನು ಮಹಾರಾಜರ ಕಾಲದಲ್ಲೇ ಪಾರಂಪರಿಕ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸಾದ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳು ಚಾಮುಂಡಿ ಬೆಟ್ಟದ ಪಾರಂಪರಿಕತೆಗೆ ಧಕ್ಕೆ ತರದಂತೆ ಎಚ್ಚರ ವಹಿಸಲಾಗುತ್ತಿದೆ. ಕಾಮಗಾರಿ ವೇಳೆ ಪಾರಂಪರಿಕ ಕಟ್ಟಡಗಳ ತಂಟೆಗೆ ಹೋಗುತ್ತಿಲ್ಲ. ಈ ಮೂಲಕ ಬೆಟ್ಟದ ನೈಸರ್ಗಿಕ ಸೌಂದರ್ಯಕ್ಕೂ ಧಕ್ಕೆಯಾಗದಂತೆ ಎಚ್ಚರ ವಹಿಸಲಾಗುವುದು.

ಕಲೆ, ವಿವಿಧೋದ್ದೇಶ ಕೇಂದ್ರ, ವೀಕ್ಷಣಾ ಗೋಪುರ ನಿರ್ಮಾಣ: ಕೇಂದ್ರದ ಪ್ರಸಾದ ಯೋಜನೆಯಡಿ ಚಾಮುಂಡಿ ಬೆಟ್ಟದ ಮೇಲೆ, ನಂದಿ ಪ್ರತಿಮೆ, ಪಾದದ ಮೆಟ್ಟಿಲು ಸೇರಿದಂತೆ ಇತರೆಡೆ ೧೦ಕ್ಕೂ ಹೆಚ್ಚು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ದೇವಸ್ಥಾನದ ಬಳಿ ಸರದಿ ಸಾಲು ಮಂಟಪ, ಮಹಿಷಾಸುರ ಪ್ರತಿಮೆ ಬಳಿ ಮಲ್ಟಿ ಪರ್ಪಸ್ ಸೆಂಟರ್, ಅಲ್ಲಿಯೇ ಪೂಜೆ, ವಿಶೇಷ ದರ್ಶನ ಸೇರಿದಂತೆ ಇತರೆ ಸೇವಾ ಕಾರ್ಯಗಳಿಗೆ ಟಿಕೆಟ್ ಕೌಂಟರ್ ತೆರೆಯಲಾಗುತ್ತದೆ. ಮಹಿಷಾಸುರ ಪ್ರತಿಮೆಯ ನೇರ ರಸ್ತೆಯಲ್ಲಿ ಈಗಿರುವ ಕಬ್ಬಿಣದ ಗೇಟ್ ಬಳಿ ಪಾರಂಪರಿಕ ಶೈಲಿಯ ಆರ್ಚ್ (ಪವೇಶ ದ್ವಾರ), ಶೌಚಾಲಯ, ಚಪ್ಪಲಿ ಸ್ಟ್ಯಾಂಡ್, ವ್ಯೂವ್ಹಿಂಗ್ ಟವರ್, ನಂದಿ ಪ್ರತಿಮೆ ಬಳಿಯ ಮೆಟ್ಟಿಲುಗಳ ನವೀಕರಣ, ಸ್ಟೀಲ್ ರೈಲಿಂಗ್ಸ್, ಮತ್ತೊಂದು ವೀಕ್ಷಣಾ ಗೋಪುರ, ಚಾಮುಂಡಿ ಬೆಟ್ಟದ ಪಾದದಲ್ಲಿ ಮೆಟ್ಟಿಲುಗಳ ನವೀಕರಣ ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

” ಪ್ರಸಾದ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮಂಟಪ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಹಾಗೂ ಶ್ರೀ ಮಹಾಬಲೇಶ್ವರ ದೇವಸ್ಥಾನದ ಮಧ್ಯೆ ಭಕ್ತರು ಸುಗಮವಾಗಿ ಸಾಗಲು ಅವಕಾಶ ಮಾಡಿಕೊಡುವಂತೆ ಮಾರ್ಪಾಡು ಮಾಡಲು ಜಿಲ್ಲಾಧಿಕಾರಿ ಸಲಹೆ ನೀಡಿದ್ದರು. ಅದರಂತೆ, ಪ್ರವಾಸೋದ್ಯಮ ಇಲಾಖೆಯ ಇಂಜಿನಿಯರಿಂಗ್ ವಿಭಾಗದವರು ಕೆಲವು ಮಾರ್ಪಾಡು ಮಾಡಿದ್ದಾರೆ.”

ಪ್ರಭುಸ್ವಾಮಿ, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

ಆಂದೋಲನ ಡೆಸ್ಕ್

Recent Posts

ಎಸ್‌ಸಿ, ಎಸ್‌ಟಿಗಳ ಹಕ್ಕು ರಕ್ಷಣೆಗೆ ಕ್ರಮ : ಡಾ.ಮೂರ್ತಿ

ಮೈಸೂರು : ಆದಿವಾಸಿ ಸಮುದಾಯಗಳ ಮೇಲಿನ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ ಹಾಗೂ ಮೈಸೂರು ಭಾಗದಲ್ಲಿ ದಾಖಲಾಗಿರುವ 134 ಪೋಕ್ಸೊ ಪ್ರಕರಣಗಳು…

6 hours ago

ಬೆಂಕಿ ಅವಘಡ | ಅಬಕಾರಿ ಡಿಸಿ ಅಮಾನತಿಗೆ ಶಿಫಾರಸ್ಸು ಮಾಡಲು ಸೂಚನೆ ಕೊಟ್ಟ ಯತೀಂದ್ರ ಸಿದ್ದರಾಮಯ್ಯ!

ಮೈಸೂರು : ಸೋಮವಾರ ಪಬ್‌ನಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಕಾರಣಕ್ಕಾಗಿ ಅಬಕಾರಿ…

7 hours ago

ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ತಮಿಳುನಾಡು ಸಿಎಂ ವಿಜಯ್‌

ಚೆನ್ನೈ: ತಮಿಳುನಾಡಿನ ರೈತರಿಗೆ ಸಿಎಂ ವಿಜಯ್‌ ಬಂಪರ್‌ ಕೊಡುಗೆ ನೀಡಿದ್ದಾರೆ. ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ 75,000 ರೂ…

11 hours ago

ಮುಂಗಾರು ಕೊರತೆ: ಹಾರಂಗಿ ಜಲಾಶಯದ ಒಳಹರಿವು ತೀವ್ರ ಕುಸಿತ

ಮಡಿಕೇರಿ: ಮುಂಗಾರು ಮಳೆ ಕೊರತೆಯಿಂದ ಹಾರಂಗಿ ಜಲಾಶಯಕ್ಕೆ ಒಳಹರಿವು ತೀವ್ರವಾಗಿ ಕುಸಿದಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಮಳೆಗಾಲವಾದರೂ ಜಿಲ್ಲೆಯಲ್ಲಿ ಮಳೆ…

12 hours ago

ಮೆಡಿಕಲ್‌ನಲ್ಲಿ ಇನ್ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್‌ ಖರೀದಿ ಮಾಡುವಂತಿಲ್ಲ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಮೆಡಿಕಲ್‌ ಶಾಪ್‌ಗಳಲ್ಲಿ ಇನ್ಮು ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್‌ ಖರೀದಿ ಮಾಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಆದೇಶ…

13 hours ago

ನಟ ವಿಜಯ್‌ ರಾಘವೇಂದ್ರ, ಶ್ರೀಮುರಳಿಗೆ ಮಾತೃ ವಿಯೋಗ

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡ ಅವರ ಪತ್ನಿ ಹಾಗೂ ನಟರಾದ ವಿಜಯ್‌ ರಾಘವೇಂದ್ರ, ಶ್ರೀಮುರಳಿ ಅವರ ತಾಯಿ…

14 hours ago