ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಕಳೆದ ಭಾನುವಾರ ರಷ್ಯಾಕ್ಕೆ ಪಲಾಯನ ಮಾಡಿದ ನಂತರ ಜನರು ನಿಟ್ಟುಸಿರು ಬಿಡುತ್ತಿದ್ದಾರೆ. ಇದರೊಂದಿಗೆ ಅಸ್ಸಾದ್ ಮನೆತನದ ಐದು ದಶಕಗಳ ಸರ್ವಾಧಕಾರ ಮತ್ತು ೧೩ ವರ್ಷಗಳ ಅಸ್ಸಾದ್ ಕ್ರೂರ ಆಡಳಿತ ಅಂತ್ಯವಾಗಿದೆ. ಅಸ್ಸಾದ್ ಅಧಿಕಾರಾ ವಧಿಯಲ್ಲಿ ಕನಿಷ್ಠ ೬೦ ಸಾವಿರ ಜನರನ್ನು ಹಿಂಸಿಸಿ ಕೊಲ್ಲಲಾಗಿದೆ ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ತಿಳಿಸಿದೆ. ಸುಮಾರು ಎಪ್ಪತ್ತು ಲಕ್ಷ ಜನರು ನೆರೆಯ ದೇಶಗಳಿಗೆ ವಲಸೆ ಹೋಗಿದ್ದಾರೆ. ಅಸ್ಸಾದ್ ನಿರ್ಗಮನ ಅವರಿಂದ ಕಿರುಕುಳಕ್ಕೆ ಒಳಗಾದ ಜನರಿಗೆ ಸಂತೋಷ ತಂದಿದೆ. ದೇಶದ ಎಲ್ಲ ಕಡೆ ಸಂತೋಷದ ಪ್ರದರ್ಶನಗಳು ನಡೆಯುತ್ತಿವೆ.
ಅಸ್ಸಾದ್ ಕಾಲದಲ್ಲಿ ಬಂಽತರಾದವರು ಮತ್ತು ಕಾಣೆಯಾದವರಿಗಾಗಿ ಬಂಧುಗಳು ವಿವಿಧ ಜೈಲುಗಳಿಗೆ ಭೇಟಿ ನೀಡುತ್ತಿದ್ದಾರೆ. ಬೇರೆ ದೇಶಗಳಿಗೆ ವಲಸೆ ಹೋಗಿದ್ದ ಜನರು ದೇಶಕ್ಕೆ ವಾಪಸ್ ಬರುತ್ತಿದ್ದಾರೆ. ದೇಶದಲ್ಲಿ ಸದ್ಯಕ್ಕೆ ಒಂದು ಆಡಳಿತ ವ್ಯವಸ್ಥೆಯೇ ಇಲ್ಲದ್ದರಿಂದ ಎಲ್ಲ ಕಡೆ ಗೊಂದಲ, ಅವ್ಯವಸ್ಥೆ, ಅಗತ್ಯ ವಸ್ತುಗಳ ಅಭಾವ ಕಾಣುತ್ತಿದೆ.
ಅಸ್ಸಾದ್‌ಗೆ ಮೊದಲಿಂದಲೂ ಬೆಂಬಲವಾಗಿದ್ದ ರಷ್ಯಾ ಅವರಿಗೆ ಆಶ್ರಯ ನೀಡಿದ್ದಲ್ಲದೆ ಸಿರಿಯಾದಲ್ಲಿದ್ದ ತನ್ನ ಸೇನಾ ನೆಲೆಗಳನ್ನು ತೆರವು ಮಾಡಿದೆ. ಇರಾನ್ ಕೂಡ ತನ್ನ ಸೇನಾ ನೆಲೆಯನ್ನು ತೆರವು ಮಾಡಿದೆ. ನೆರೆಯ ಲೆಬನಾನ್ ಉಗ್ರ ಸಂಘಟನೆ ಹಿಜಬುಲ್ಲಾ ಕೂಡ ತೆಪ್ಪಗಾಗಿದೆ. ಈ ಬೆಳವಣಿಗೆ ರಷ್ಯಾ, ಇರಾನ್ ಮತ್ತು ಹಿಜಬುಲ್ಲಾ ಸಂಘಟನೆಗೆ ತೀವ್ರ ಮುಜುಗರವನ್ನು ಉಂಟುಮಾಡಿದೆ.
ಅಸ್ಸಾದ್ ಪತನಕ್ಕೆ ಕಾರಣವಾದ ಹಯಾತ್ ತಹರೀರ್ ಶ್ಯಾಮ್ (ಎಚ್ ಟಿಎಸ್) ಸಶಸ್ತ್ರ ಪಡೆಗಳು ರಾಜಧಾನಿ ಡೆಮಾಕ್ಸಸ್ ನಗರವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿವೆ. ಎಚ್‌ಟಿಎಸ್ ನಾಯಕ ಅಬು ಮಹಮದ್ ಅಲ್ ಜುಲಾನಿ (ನಿಜವಾದ ಹೆಸರು-ಅಹಮದ್ ಅಲ್ ಶೇರಾ) ಸದ್ಯಕ್ಕೆ ದೇಶದ ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದು, ದೇಶದಲ್ಲಿ ಸುವ್ಯವಸ್ಥೆ ಸ್ಥಾಪಿಸುವ ದಿಕ್ಕಿನಲ್ಲಿ ನಿರತರಾಗಿದ್ದಾರೆ. ಎಚ್‌ಟಿಎಸ್ ನಿಯಂತ್ರಣದಲ್ಲಿದ್ದ ದೇಶದ ವಾಯವ್ಯ ಭಾಗದಲ್ಲಿ ಆಡಳಿತಾಧಿಕಾರಿಯಾಗಿದ್ದ ಅಲ್ ಬಷೀರ್ ಅವರನ್ನು ಹೊಸ ಪ್ರಧಾನಿಯಾಗಿ ನೇಮಿಸಲಾಗಿದೆ. ದೇಶದಲ್ಲಿ ಸುವ್ಯವಸ್ಥೆ ಸ್ಥಾಪಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಅವರು ಘೋಷಿಸಿದ್ದಾರೆ. ದೇಶದ ಸಂಸತ್ತು ಮತ್ತು ವಿವಿಧ ಪ್ರದೇಶಗಳ ಶಾಸನಸಭೆಗಳನ್ನು ವಿಸರ್ಜಿಸಲಾಗಿದೆ. ಜೊತೆಗೆ ಅಸ್ಸಾದ್ ಕಾಲದ ಸಂವಿಧಾನವನ್ನೂ ರದ್ದು ಮಾಡಲಾಗಿದೆ.
ಅಸ್ಸಾದ್ ಆಡಳಿತದ ಪತನದ ಹಿನ್ನೆಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಹಿಂಸಾಚಾರವೇನೂ ಕಾಣುತ್ತಿಲ್ಲ. ಕೆಲವು ಕಡೆ ಹಿಂಸಾಚಾರ, ಸಾವು ನೋವು ಸಂಭವಿಸಿದೆ. ಆದರೆ ಆ ಹಿಂಸಾಚಾರ ಬಂಡಾಯ ಪಡೆಗಳು ಮತ್ತು ವಿರೋಽ ಸಶಸ್ತ್ರ ಪಡೆಗಳಿಂದ ಅಲ್ಲ ಎನ್ನುವುದು ಸಮಾಧಾನದ ಸಂಗತಿ. ಅಸ್ಸಾದ್ ಕಾಲದಲ್ಲಿ ವಿರೋಽಗಳನ್ನು ಮಟ್ಟಹಾಕಲು ಡೆಮಾಕ್ಸಸ್‌ನಲ್ಲಿ ಸೃಷ್ಟಿಸಿದ್ದ ಹಿಂಸಾ ಕೇಂದ್ರಗಳನ್ನು ಮುಚ್ಚುವ ಪ್ರಕ್ರಿಯೆ ನಡೆಯುತ್ತಿದೆ. ಕುಖ್ಯಾತ ಜೈಲುಗಳ ಬಾಗಿ ಲುಗಳನ್ನು ತೆರೆದು ರಾಜಕೀಯ ಬಂಽಗಳನ್ನು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಎಲ್ಲ ಕಡೆ ಸ್ವಾತಂತ್ರ್ಯದ ಗಾಳಿ ಬೀಸುತ್ತಿದೆ.
ಅಸ್ಸಾದ್ ಪಲಾಯನವಾಗುತ್ತಿದ್ದಂತೆ ಪೊಲೀಸರು, ಸೇನಾ ಪಡೆಗಳು ತಟಸ್ಥ ನಿಲುವು ತಳೆದಿದ್ದಾರೆ. ಈ ಪರಿಸ್ಥಿತಿಯನ್ನು ಬಳಸಿಕೊಂಡು ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್ ಬಳಿಯ ತಟಸ್ಥವಲಯವನ್ನು ಆಕ್ರಮಿಸಿಕೊಂಡಿದೆ. ಅಷ್ಟೇ ಅಲ್ಲ ಸಿರಿಯಾದ ಮಿಲಿಟರಿ ನೆಲೆಗಳು, ಶಸ್ತ್ರಾಗಾರಗಳ ಮೇಲೆ ವಾಯುದಾಳಿ ನಡೆಸಿ ಅವುಗಳನ್ನೆಲ್ಲಾ ನಾಶಮಾಡಿದೆ. ಬಂಡಾಯಗಾರರಿಗೆ ಮಿಲಿಟರಿ ಅಸ್ತ್ರಗಳು ಸಿಗದಿರುವಂತೆ ಮಾಡಲು ಹೀಗೆ ಮಾಡಲಾಗಿದೆ ಎಂದು ಇಸ್ರೇಲ್ ಸಮರ್ಥನೆ ನೀಡಿದೆ. ಈ ಒಂದು ವಾರದಲ್ಲಿ ಒಟ್ಟು ೩೫೦ ವೈಮಾನಿಕ ದಾಳಿ ನಡೆಸಿದ್ದಾಗಿ ಇಸ್ರೇಲ್ ರಕ್ಷಣಾ ಸಚಿವರು ಹೇಳಿದ್ದಾರೆ. ಈ ದಾಳಿಯನ್ನು ಟರ್ಕಿ, ಸೌದಿ ಅರೇಬಿಯಾ, ಜೋರ್ಡಾನ್ ಖಂಡಿಸಿವೆ. ತನ್ನ ನೆರೆಯ ದೇಶದಿಂದ ಯಾವುದೇ ರೀತಿಯ ಬೆದರಿಕೆ ಬರದಂತೆ ನೋಡಿಕೊಳ್ಳಲು ಅಂದರೆ ಸ್ವರಕ್ಷಣೆಗಾಗಿ ಹೀಗೆ ಮಾಡಿರುವುದಾಗಿ ಇಸ್ರೇಲ್ ಹೇಳಿದೆ. ಇಸ್ರೇಲ್ ಅಷ್ಟೇ ಅಲ್ಲ ಅಮೆರಿಕ ಕೂಡ ಇರಾಕ್ ಗಡಿಯಲ್ಲಿ ನೆಲೆ ಮಾಡಿಕೊಂಡಿರುವ ಐಸಿಸ್ ಕೇಂದ್ರಗಳ ಮೇಲೂ ದಾಳಿ ಮಾಡಿದೆ. ಐಸಿಸ್ ಬಲಗೊಳ್ಳುವ ಸಾಧ್ಯತೆಯನ್ನು ತಡೆಯಲು ಇಂಥ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಅಸ್ಸಾದ್ ತಮ್ಮ ವಿರೋಧಿಗಳ ವಿರುದ್ಧ ರಾಸಾಯನಿಕ ಅಸ್ತ್ರ ಬಳಸಿದ ನಿದರ್ಶನವಿದೆ. ಈ ದಾಳಿಗಳಲ್ಲಿ ಸಹಸ್ರಾರು ಜನರು ಸತ್ತಿದ್ದಾರೆ. ರಾಸಾಯನಿಕ ಅಸ್ತ್ರಗಳನ್ನು ಅಂತಾರಾಷ್ಟ್ರೀಯವಾಗಿ ನಿಷೇಧಿಸಲಾಗಿದೆ. ಆದರೂ ಅಸ್ಸಾದ್ ಅವುಗಳನ್ನು ಬಳಸಿದ್ದರು. ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಅವುಗಳನ್ನು ನಾಶ ಮಾಡಲಾಗಿದೆ ಎಂದು ಸಿರಿಯಾ ಹೇಳುತ್ತ ಬಂದಿದೆ. ಆದರೆ ಅದು ಸುಳ್ಳು ಎಂದು ರಾಸಾಯನಿಕ ಅಸ್ತ್ರ ನಿಷೇಧ ಸಂಘಟನೆ ಹೇಳಿದೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ನಾಶ ಮಾಡಲು ತಾನು ನೆರವಾಗುವುದಾಗಿ ಅಮೆರಿಕ ಘೋಷಿಸಿದೆ. ರಾಸಾಯನಿಕ ಅಸ್ತ್ರ ನಿಷೇಧ ಸಂಘಟನೆ ಈಗ ಆ ಬಗ್ಗೆ ಗಮನ ನೀಡುವುದಾಗಿ ಹೇಳಿದೆ.
ಸಿರಿಯಾ ಈಗ ಬದಲಾವಣೆಯ ಹಂತದಲ್ಲಿದ್ದು ಇನ್ನೂ ಆಡಳಿತ ವ್ಯವಸ್ಥೆ, ಮಿಲಿಟರಿ ರೂಪುಗೊಳ್ಳಬೇಕಿದೆ. ಹೀಗಾಗಿ ಬಂಡಾಯಗಾರರಿಂದ ಯಾವುದೇ ಪ್ರತಿರೋಧ ಕಾಣಿಸುತ್ತಿಲ್ಲ. ವಾಸ್ತವವಾಗಿ ಒಂದು ವ್ಯವಸ್ಥೆ ರೂಪಿಸುವ ವಿಚಾರದಲ್ಲಿ ಬಂಡಾಯಗಾರರ ಮಧ್ಯೆ ಇನ್ನೂ ಚರ್ಚೆಯೇ ನಡೆದಿಲ್ಲ ಎಂದು ಹೇಳಲಾಗಿದೆ. ಬಂಡಾಯ ಸಂಘಟನೆಗಳ ಪೈಕಿ ಹಯಾತ್ ತಹರೀರ್ ಶ್ಯಾಮ್ ಸಂಘಟನೆ ಅತ್ಯಂತ ದೊಡ್ಡದು. ಅಸ್ಸಾದ್ ಆಡಳಿತದ ವಿರುದ್ಧ ಕೆಲಸಮಾಡುತ್ತಿದ್ದ ಹಲವು ಸಂಘಟನೆಗಳು ಸೇರಿ ಈ ಸಂಘಟನೆಯನ್ನು ಕಟ್ಟಲಾಗಿದೆ. ಇದರ ನಾಯಕ ಅಬು ಮಹಮದ್ ಅಲ್ ಜೊಲಾನಿ. ಅವರ ತಂದೆ ಸೌದಿ ಅರೆಬಿಯಾದಲ್ಲಿ ತೈಲ ಸ್ಥಾವರವೊಂದರಲ್ಲಿ ಎಂಜಿನಿಯರ್. ಜೊಲಾನಿ ಮೊದಲು ಆಕರ್ಷಿತವಾದದ್ದು ಅಲ್ ಖೈದಾ ಸಂಘಟನೆ ಕಡೆಗೆ ನಂತರ ಇರಾಕ್‌ನಲ್ಲಿ ಅಮೆರಿಕದ ವಿರುದ್ಧ ಹೋರಾಡಲು ಆ ಸಂಘಟನೆ ಬಿಟ್ಟು ಐಸಿಸ್ ಸೇರುತ್ತಾರೆ. ನಂತರ ಸಿರಿಯಾ ಗಡಿಗೆ ಸ್ಥಳಾಂತರಗೊಂಡು ಅಲ್ ನುಸರಾ ಫ್ರಂಟ್ ಸೇರುತ್ತಾರೆ. ನಂತರ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಹಯಾತ್ ತಹ್ರೀರ್ ಅಲ್ ಶ್ಯಾಮ್ ಸಂಘಟನೆ ಕಟ್ಟುತ್ತಾರೆ. ಅಲ್ ಖೈದಾ ಮತ್ತು ಐಎಸ್ ಅನುಸರಿಸುತ್ತಿದ್ದ ಹಿಂಸಾ ಮಾರ್ಗ ಹಿಡಿಸದೆ ಆ ಸಂಘಟನೆಗಳಿಂದ ಅವರು ಹೊರಬಂದರೆಂದು ಹೇಳಲಾಗಿದೆ. ಪಕ್ಕಾ ಅಲ್ ಖೈದಾ ಉಗ್ರಗಾಮಿಯಾಗಿದ್ದ ಜೊಲಾನಿ ಈಗ ಬದಲಾದಂತೆ ಕಾಣುತ್ತದೆ. ಆದರೆ ಆ ಬದಲಾವಣೆ ನಿಜವಾದದ್ದೇ ಅಲ್ಲವೇ ಎಂಬುದು ಇನ್ನೂ ಸಾಬೀತಾಗಬೇಕಿದೆ. ಜೊಲಾನಿಯ ಚಲನವಲನ ತಿಳಿಸಿದರೆ ೧೦ ಮಿಲಿಯನ್ ಬಹುಮಾನ ಕೊಡುವುದಾಗಿ ಅಮೆರಿಕ ಹಿಂದೆ ಘೋಷಿಸಿತ್ತು. ಈಗ ಜೊಲಾನಿ ಇತ್ತೀಚೆಗೆ ಸಿಎನ್‌ಎನ್ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿ ಆಶ್ಚರ್ಯ ಹುಟ್ಟಿಸಿದ್ದಾರೆ. ಸಿರಿಯಾ ದೇಶವನ್ನು ನಾಗರಿಕ ದೇಶವನ್ನಾಗಿ ಪುನರ್ ರೂಪಿಸುವುದು ತಮ್ಮ ಗುರಿ ಎಂದು ಅವರು ಹೇಳಿಕೊಂಡಿದ್ದಾರೆ. ಸಿರಿಯಾ ಯಾವ ದೇಶವನ್ನೂ ದ್ವೇಷಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಇದುವರೆಗೆ ಅವರ ನಡವಳಿಕೆ ನಾಗರಿಕವಾಗಿದೆಯಾದರೂ ಮುಂದೆ ಅವರು ಏನು ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಅಸ್ಸಾದ್ ವಿರುದ್ಧದ ಹೋರಾಟದಲ್ಲಿ ಹಲವು ಸಂಘಟನೆಗಳು ಭಾಗಿ ಯಾಗಿವೆ. ಕೆಲವು ಸಂಘಟನೆಗಳು ಸಿರಿಯಾದ ಕೆಲವು ಪ್ರದೇಶಗಳ ಆಡಳಿತವನ್ನೂ ನಡೆಸುತ್ತಿವೆ. ಜೊಲಾನಿ ನೇತೃತ್ವದ ಸಂಘಟನೆ ದೊಡ್ಡದು ಎನ್ನುವುದು ನಿಜವಾದರೂ ಇತರ ಸಂಘಟನೆಗಳನ್ನು ನಿರ್ಲಕ್ಷ ಮಾಡುವಂತಿಲ್ಲ. ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯಗಳೂ ಇವೆ. ಪ್ರತ್ಯೇಕ ದೇಶಕ್ಕಾಗಿ ಹೋರಾಟ ಮಾಡುತ್ತಿರುವ ಖರ್ದ್ ಜನಾಂಗದ ಸಂಘಟನೆಯೂ ಮುಖ್ಯ ವಾದುದು. ಇದಕ್ಕೆ ಮೊದಲಿನಿಂದಲೂ ಅಮೆರಿಕ ಬೆಂಬಲಿಸುತ್ತ ಬಂದಿದೆ. ಆದರೆ ಬಂಡಾಯಗಾರರಿಗೆ ಅತಿ ಹೆಚ್ಚು ನೆರವು ನೀಡಿದ ದೇಶ ಟರ್ಕಿ ಈ ಖರ್ದ್ ಸಂಘಟನೆಯನ್ನು ಉಗ್ರವಾದಿ ಸಂಘಟನೆಯೆಂದು ಘೋಷಿಸಿದೆ. ಅದು ಟರ್ಕಿಯಲ್ಲಿ ಪ್ರತ್ಯೇಕ ದೇಶ ರಚನೆಗೆ ಹೋರಾಟ ಮಾಡುತ್ತಿರುವುದರಿಂದ ಅಲ್ಲಿ ಅದು ಉಗ್ರವಾದಿ ಸಂಘಟನೆಯೆನಿಸಿದೆ.
ಸಿರಿಯಾ ವಿಮೋಚನಾ ಸಂಘಟನೆಯೆಂಬ ಸಂಘಟನೆಗೆ ಟರ್ಕಿ ಬೆಂಬಲ ನೀಡುತ್ತ ಬಂದಿದೆ. ಖರ್ದ್ ಸಂಘಟನೆಯನ್ನು ಜೊಲಾನಿ ಅವರು ಸಿರಿಯಾದ ಹೊಸ ಆಡಳಿತ ಭಾಗ ಮಾಡಿಕೊಳ್ಳುವುದಕ್ಕೆ ಟರ್ಕಿ ವಿರೋಧವಿದೆ. ಇದೇ ರೀತಿ ಐಸಿಸ್ ಇರಾಕ್ ಗಡಿಯಲ್ಲಿ ಸಾಕಷ್ಟು ಪ್ರದೇಶದ ಮೇಲೆ ಹಿಡಿತ ಸಾಽಸಿದೆ. ಈ ಸಂಘಟನೆಗಳು ತಮ್ಮ ಹಿಡಿತ ಬಿಟ್ಟುಕೊಡಲು ನಿರಾಕರಿಸಿದರೆ ದೇಶ ಒಡೆದುಹೋಗುವಂಥ ಸನ್ನಿವೇಶ ಬರಬಹುದು. ಹೀಗೆ ಇನ್ನೂ ಹತ್ತು ಸಮಸ್ಯೆಗಳಿಗೆ. ಎಲ್ಲ ಸಂಘಟನೆಗಳನು ವಿಶ್ವಾಸಕ್ಕೆ ತೆಗೆದುಕೊಂಡು ಜೊಲಾನಿ ಹೊಸ ಆಡಳಿತ ವ್ಯವಸ್ಥೆ ರೂಪಿಸಲು ಸಾಧ್ಯವಾಗುವುದೇ ಎಂಬುದನ್ನು ಕಾದುನೋಡಬೇಕು.
ಸಿರಿಯಾವನ್ನು ಪುನರ್ ರೂಪಿಸಲು ಎಲ್ಲ ನೆರವು ನೀಡುವುದಾಗಿ ಜಿ-೭ ಶ್ರೀಮಂತ ದೇಶಗಳು ಹೇಳಿವೆ. ಆದರೆ ಸಮಾನತೆ ಆಧಾರದ ನೀತಿಗಳುಳ್ಳ ಸರ್ಕಾರ ರಚನೆ ಈ ದೇಶಗಳ ಅಪೇಕ್ಷೆ. ಅರಬ್ ಪ್ರದೇಶದಲ್ಲಿ ಇಂಥ ವ್ಯವಸ್ಥೆ ರೂಪಿಸಲು ಸಾಧ್ಯವೇ?
ಮೈಸೂರು: ಮೈಸೂರು ಜಿಲ್ಲೆ ಸರಗೂರಿನ ತಾಲ್ಲೂಕು ಕಚೇರಿ ಹಾಗೂ ಹಾಸನದ ಆಲೂರು ತಾಲ್ಲೂಕು ಕಚೇರಿಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ…
ಮೈಸೂರು: ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ವಿರೋಧಿಸುತ್ತಾರೆ. ಪ್ರಚೋದನಾಕಾರಿ ಭಾಷಣ ಮಾಡದೆ ಹೋದರೆ ಸುಮ್ಮನೆ ಪ್ರಕರಣ ದಾಖಲಿಸುವುದಿಲ್ಲ ಎಂದರು. ಬಿಜೆಪಿಯವರು…
ಮೈಸೂರು: ಸಿಎಂ ಸಿದ್ದರಾಮಯ್ಯ ಅವರಿಂದು ತಮ್ಮ ನಿವಾಸದ ಬಳಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಕೆಲ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ…
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಜೊತೆಗೆ ವಿವಿಧ ಜಿಲ್ಲೆಗಳಲ್ಲಿಯೂ ಗಾಳಿಯ ಗುಣಮಟ್ಟ ಕಳಪೆ…
ಬೆಂಗಳೂರು: ಬಿಜೆಪಿ ದೃಷ್ಟಿಯಲ್ಲಿಟ್ಟುಕೊಂಡು ದ್ವೇಷ ಭಾಷಣ ಕಾಯ್ದೆಯನ್ನು ತಂದಿಲ್ಲ. ಇದರಲ್ಲಿ ಬಿಜೆಪಿಯವರು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಗೃಹ ಸಚಿವ…
ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಸ್ಟಾರ್ ವಾರ್ ಶುರುವಾಗಿದೆ. ಕಿಚ್ಚ ಸುದೀಪ್ ನೀಡಿದ ಆ ಒಂದು ಹೇಳಿಕೆಯಿಂದ ಡಿ ಬಾಸ್ ಅಭಿಮಾನಿಗಳು…