ಲೋಕೇಶ್ ಕಾಯರ್ಗ
ರಿಸರ್ವ್ ಬ್ಯಾಂಕ್ ಆ- ಇಂಡಿಯಾ ಬುಧವಾರ ರೆಪೋ ದರವನ್ನು ೩೫ ಮೂಲಾಂಕ ಏರಿಕೆ ಮಾಡಿದೆ. ಇದರ ಬೆನ್ನ ಪ್ರಮುಖ ಬ್ಯಾಂಕ್‌ಗಳು ಗೃಹ ಸಾಲದ ಮೇಲಿನ ಬಡ್ಡಿದರವನ್ನು ಏರಿಸಿವೆ. ಕಳೆದ ಮೇ ತಿಂಗಳಲ್ಲಿ ೬.೭೨ ರಷ್ಟಿದ್ದ ಬ್ಯಾಂಕ್ ಬಡ್ಡಿ ದರ ಕೇವಲ ಏಳು ತಿಂಗಳಲ್ಲಿ ಶೇ. ೯.೧೦ ದಾಟಿದೆ. ಬ್ಯಾಂಕ್ ಆ- ಇಂಡಿಯಾ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದ ಪರಿಷ್ಕೃತ ರೆಪೋ ದರದ ಪ್ರಕಾರ (೬.೨೫%) ಗೃಹಸಾಲದ ಬಡ್ಡಿ ದರ ಶೇ. ೯.೧೦ಕ್ಕೆ ಏರಿಕೆಯಾಗಿದೆ.
ಬಡ್ಡಿದರ ೬.೭೫ ರಿಂದ ೭ ರ ಮಧ್ಯೆ ಇದೀಗ ಗೃಹಸಾಲ ಅತ್ಯಂತ ಆಕರ್ಷಕವಾಗಿತ್ತು. ಇದರಿಂದಾಗಿ ಅನೇಕರು ಮನೆ ಕಟ್ಟುವ ತಮ್ಮ ಕನಸಿಗೆ ಚಾಲನೆ ನೀಡಿದ್ದರು.
ಆದರೆ ಏಳೇ ತಿಂಗಳಲ್ಲಿ ಬಡ್ಡಿ ದರ ಶೇ.೯ ದಾಟಿರುವುದು ಗ್ರಾಹಕರ ಹಣಕಾಸು ಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಬಡ್ಡಿ ದರ ಹೆಚ್ಚಳವಾದಾಗಲೆ ಬ್ಯಾಂಕುಗಳು ಮಾಸಿಕ ಇಎಂಐ ಹೆಚ್ಚಿಸದೆ, ಸಾಲವನ್ನು ತೀರಿಸಬೇಕಾದ ಅವಽಯನ್ನು ವಿಸ್ತರಿಸುತ್ತವೆ. ಬ್ಯಾಂಕಿನಲ್ಲಿ ಖುದ್ದಾಗಿ ವಿಚಾರಿಸದ ಹೊರತು ಸಾಮಾನ್ಯ ಗೃಹ ಸಾಲದಾರರಿಗೆ ಬಡ್ಡಿ ದರ ಏರಿಕೆಯಿಂದಾದ ಆರ್ಥಿಕ ಹೊರೆ ಎಷ್ಟು ಎಂದು ತಿಳಿಯುವುದಿಲ್ಲ. ಸರಳವಾಗಿ ಹೇಳಬೇಕೆಂದರೆ ನೀವು ಏಳು ತಿಂಗಳ ಹಿಂದೆ ೫೦ ಲಕ್ಷ ರೂ. ಗೃಹಸಾಲವನ್ನು ೨೦ ವರ್ಷಗಳ ಅವಽಗೆ ಪಡೆದಿದ್ದರೆ ಆರಂಭದ ತಿಂಗಳಲ್ಲಿ ಕಟ್ಟುತ್ತಿದ್ದ ಮಾಸಿಕ ಇಎಂಐಗಿಂತ ಈಗ ಸುಮಾರು ೭ ಸಾವಿರ ರೂ. ಹೆಚ್ಚುವರಿಯಾಗಿ ಕಟ್ಟಬೇಕಾಗಿದೆ.ಅಂದರೆ ಸುಮಾರು ರೂ. ೧೬ ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಸಾಲಕ್ಕೆ ಜಮೆ ಮಾಡಬೇಕಾಗಿದೆ.
೩೦ ಲಕ್ಷ ರೂ. ಸಾಲವನ್ನು ೨೦ ವರ್ಷಗಳ ಅವಽಗೆ ಶೇ. ೬.೭೫ ಬಡ್ಡಿ ದರಕ್ಕೆ ಪಡೆದ ಗ್ರಾಹಕರು ಏಳು ತಿಂಗಳ ಪಾವತಿಸುತ್ತಿದ್ದ ಇಎಂಐ ೨೨,೭೨೨ ಆಗಿತ್ತು. ಈಗ ಶೇ. ೯.೧೦ ಬಡ್ಡಿ ದರದಲ್ಲಿ ೨೭,೧೮೫ ರೂ. ಇಎಂಐ ಅನ್ನು ಪಾವತಿಸಬೇಕಾಗಿದೆ. ಅಂದರೆ ಏಳು ತಿಂಗಳಲ್ಲಿ ಗ್ರಾಹಕರ ಇಎಂಐ ೪,೪೬೩ ರೂ. ಗಳಷ್ಟು ಏರಿಕೆಯಾಗಿದೆ. ಒಟ್ಟಾರೆಯಾಗಿ ಇದೇ ದರವನ್ನು ಅನ್ವಯಿಸಿದರೆ ಮುಂದಿನ ೨೩೩ ತಿಂಗಳಲ್ಲಿ ಗ್ರಾಹಕರು ರೂ. ೧೦ ಲಕ್ಷಕ್ಕಿಂತ ಹೆಚ್ಚು ಹಣವನ್ನು ಸಾಲಕ್ಕೆ ಜಮೆ ಮಾಡಬೇಕಾಗಿದೆ. ಇದು ಅಂದಾಜು ಮಾತ್ರ. ಮುಂದಿನ ದಿನಗಳಲ್ಲಿ ಬಡ್ಡಿ ದರ ಕಡಿಮೆಯಾದರೆ ಸಾಲದ ಮೊತ್ತವೂ ಕಡಿಮೆ ಆಗಬಹುದು.
ಸಾಲ ಪಡೆದವರು ಏನು ಮಾಡಬಹುದು ?
ಸಾಲದ ಹೊರೆ ಅಧಿಕವಾಗುವುದನ್ನು ನಾವು ತಪ್ಪಿಸಬೇಕಾದರೆ, ಆದಷ್ಟು ಪೂರ್ವ ಪಾವತಿ ಮಾಡುವುದು ಉತ್ತಮ. ಅಂದರೆ ನಿಮ್ಮ ಕೈಯಲ್ಲಿ ಉಳಿತಾಯದ ಹಣವಿದ್ದರೆ ಸಾಲದ ಅಸಲು ಮೊತ್ತವನ್ನು ಆದಷ್ಟು ತಗ್ಗಿಸಲು ಪ್ರಯತ್ನಿಸಿ. ಇದರಿಂದ ಬಡ್ಡಿದರದ ಹೊರೆ ನಿಮಗೆ ಇರದು.
ಉಳಿತಾಯ ಖಾತೆಯ ಹಣವನ್ನು ಸಾಲಕ್ಕೆ ವರ್ಗಾಯಿಸಿ
ಒಂದು ವೇಳೆ ನೀವು ಸುರಕ್ಷತೆ ದೃಷ್ಟಿಯಿಂದ ಉಳಿತಾಯ ಖಾತೆಯಲ್ಲಿ ಹಣ ಹೂಡಿಕೆ ಮಾಡಿದ್ದರೆ, ಶೇ. ಆರಕ್ಕಿಂತ ಕಡಿಮೆ ಬಡ್ಡಿ ಸಿಗುವ ಸೇವಿಂ ಖಾತೆ ಕ್ಲೋಸ್ ಮಾಡಿಸಿ ಈ ಹಣವನ್ನು ಗೃಹಸಾಲದ ಖಾತೆಗೆ ವರ್ಗಾಯಿಸುವುದು ಉತ್ತಮ ಮಾರ್ಗ. ನೀವು ಎಲ್‌ಐಸಿಯಂತಹ ವಿಮೆಗಳಲ್ಲಿ ಹೂಡಿಕೆ ಮಾಡಿದ್ದರೆ ನಿಮ್ಮ ಉಳಿತಾಯದ ಮೇಲೆ ಸಾಲ ಪಡೆಯಲು ಅವಕಾಶವಿದೆ. ಈ ಮೊತ್ತವನ್ನು ಸಾಲಕ್ಕೆ ವರ್ಗಾಯಿಸಬಹುದು.
ಆಪ್ತರಲ್ಲಿ ಕಡಿಮೆ ದರಕ್ಕೆ ಸಾಲ ಪಡೆದು ಗೃಹ ಸಾಲಕ್ಕೆ ವರ್ಗಾಯಿಸಿ
ಒಂದು ವೇಳೆ ನಿಮ್ಮ ಬಂಧು ವರ್ಗ, ಇಲ್ಲವೇ ಸ್ನೇಹಿತರಲ್ಲಿ ಕಡಿಮೆ ಬಡ್ಡಿಗೆ ಸಾಲ ನೀಡುವವರಿದ್ದರೆ ಅದನ್ನು ಪಡೆದು ನಿಮ್ಮ ಗೃಹ ಸಾಲದ ಮೊತ್ತದ ಅಸಲು ಮೊತ್ತವನ್ನು ತಗ್ಗಿಸಬಹುದು. ನೀವು ಕೃಷಿ ಜಮೀನು ಹೊಂದಿದ್ದರೆ, ಕಡಿಮೆ ದರದಲ್ಲಿ ಕೃಷಿ ಅಡಮಾನ ಸಾಲ ಪಡೆದು ಈ ಮೊತ್ತವನ್ನು ಗೃಹಸಾಲದ ಖಾತೆಗೆ ವರ್ಗಾಯಿಸಿ ಬಡ್ಡಿಯ ಹೊರೆ ಕಡಿಮೆ ಮಾಡಿಕೊಳ್ಳಬಹುದು.
ಸಾಲದ ಅವಧಿ ಹೆಚ್ಚಿಸಬೇಕೆ ಅಥವಾ ಕಂತನ್ನು ಹೆಚ್ಚಿಸಬೇಕೆ?
ಸಾಲಗಾರನ ನಿವೃತ್ತಿ ವಯಸ್ಸಿಗೆ ಅನುಗುಣವಾಗಿ ಗೃಹ ಸಾಲದ ಅವಧಿಯನ್ನು ಬ್ಯಾಂಕುಗಳು ನಿರ್ಧರಿಸುತ್ತವೆ. ಸಾಲದ ಅವಧಿಯನ್ನು ವಿಸ್ತರಿಸಲು ಸಾಧ್ಯವಾಗದಿದ್ದರೆ, ಸಾಲಗಾರನಿಗೆ ಎರಡು ಆಯ್ಕೆಗಳಿವೆ. ತಮ್ಮ ಮಾಸಿಕ ಕಂತನ್ನು(ಇಎಂಐ) ಹೆಚ್ಚಿಸಬಹುದು ಅಥವಾ ಒಂದು ದೊಡ್ಡ ಮೊತ್ತವನ್ನು ಪಾವತಿಸಿ ಅಸಲು ಮೊತ್ತವನ್ನು ತಗ್ಗಿಸಬಹುದು.
ಕೋಲ್ಕತ್ತಾ : ಹೆನ್ರಿಚ್ ಕ್ಲಾಸೆನ್ ಅರ್ಧಶತಕದಾಟ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರ ಆಲ್‌ರೌಂಡರ್ ಆಟದ ನೆರವಿನಿಂದ ಅತಿಥೇಯ ಕೋಲ್ಕತ್ತಾ…
315 ಕೋಟಿ ಸೈಬರ್ ವಂಚನೆ ಪ್ರಕರಣದಲ್ಲಿ ಬಂಧನ ಕೋಲ್ಕತ್ತಾ : ಶೆಲ್ ಕಂಪನಿಗಳು ಮತ್ತು ಕ್ರಿಪ್ಟೋಕರೆನ್ಸಿ ಆಧಾರಿತ ಹಣ ವರ್ಗಾವಣೆಯ…
ಲಂಡನ್ : ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆ ಫೆಬ್ರವರಿ 28ರಿಂದ ಮುಚ್ಚಲ್ಪಟ್ಟಿರುವ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಬಗ್ಗೆ ಚರ್ಚಿಸಲು ಬ್ರಿಟನ್…
ಮೈಸೂರು : ಕೆಲವರು ಸಂವಿಧಾನ ಬದಲಿಸುವ ಮಾತನಾಡುತ್ತಾರೆ, ಖಂಡಿತ ಇದು ಅಸಾಧ್ಯ. ಸಂವಿಧಾನಕ್ಕೆ ತಿದ್ದುಪಡಿ ಮಾಡಬಹುದೇ ಹೊರತು ಮೂಲ ತತ್ವಗಳನ್ನು…
ಮೈಸೂರು : ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ಕುಲಪತಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ…
ಬೆಂಗಳೂರು : ಬಹಳ ವರ್ಷಗಳ ಹಿಂದೆಯೇ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಸ್ಥಾಪಿಸುವ ಮೂಲಕ ದೇಶದಲ್ಲೇ ಮೊದಲು ಕರ್ನಾಟಕವನ್ನು ನಾವು…