ಎಡಿಟೋರಿಯಲ್

ಮುಸ್ಲಿಂ ಧಾರ್ಮಿಕ ನೇತಾರರಿಗೆ ಕಗ್ಗಂಟಾಗಿರುವ ಖುಲಾ ಪದ್ಧತಿ

ನಾ. ದಿವಾಕರ

ಮುಸ್ಲಿಂ ಮಹಿಳೆಯರಿಗೆ ವಿವಾಹ ವಿಚ್ಛೇದನ ಪಡೆಯಲು ಪರಭಾರೆ ಮಾಡಲಾಗದಂತಹ ಹಕ್ಕು ನೀಡುವ ಖುಲಾ ಪದ್ಧತಿಯ ಬಗ್ಗೆ ಸಮತೂಕವಿಲ್ಲದ ತೀರ್ಪುಗಳನ್ನು ನೀಡುವ ಮೂಲಕ ಮುಸ್ಲಿಂ ಉಲೇಮಾಗಳು ಸಮುದಾಯವನ್ನು ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.

ಪುರುಷ ಪ್ರಾಧಾನ್ಯತೆಯನ್ನು ಸಮರ್ಥಿಸು-ವಂತಹ ತಮ್ಮ ತೀರ್ಪುಗಳ ಮೂಲಕ ಉಲೇಮಾಗಳು, ಮುಸ್ಲಿಂ ಮಹಿಳೆಯು ಒಮ್ಮೆ ನಿಕಾಹ್ ಮೂಲಕ ವಿವಾಹ ಬಂಧನಕ್ಕೊಳಗಾದರೆ ಆಕೆಗೆ ವಿವಾಹದ ಒಪ್ಪಂದದಿಂದ ಹೊರಬರ ಬೇಕಾದಲ್ಲಿ, ಪತಿಯಿಂದ ವಿಚ್ಛೇದನ ಪಡೆಯಬೇಕು ಅಥವಾ ಆಕೆಯ ಖುಲಾ ಪ್ರಸ್ತಾವನೆಯನ್ನು ಪತಿ ಒಪ್ಪುವುದು ಕಡ್ಡಾಯವಾಗಿರುತ್ತದೆ ಎಂದು ಪ್ರತಿಪಾದಿಸುತ್ತಾರೆ.

ಮೂರನೆಯ ಮಾರ್ಗ ಎಂದರೆ ನ್ಯಾಯಿಕ ವಿಚ್ಛೇದನ ಪಡೆಯುವುದಾಗಿದೆ. ಪುರುಷನು ಪತ್ನಿಯ ಮೇಲೆ ದೌರ್ಜನ್ಯ ನಡೆಸಿದರೂ, ವರದಕ್ಷಿಣೆಗಾಗಿ ಕಿರುಕುಳ ನೀಡಿದರೂ, ಆಕೆಯ ಪೋಷಕರನ್ನು ಸಂಪರ್ಕಿಸಲು ಅನುಮತಿ ನೀಡದಿದ್ದರೂ ಅಥವಾ ಆಕೆಯ ವೃತ್ತಿಪರ ಕನಸುಗಳನ್ನು ಪೂರೈಸುವ ಅವಕಾಶ ನೀಡದಿದ್ದರೂ, ಆಕೆ ತನ್ನ ಪತಿ ಖುಲಾ ಪ್ರಸ್ತಾವನೆಗೆ ಸಮ್ಮತಿಸದೆ ಇದ್ದರೆ ವಿವಾಹ ಬಂಧವನ್ನು ಅಂತ್ಯಗೊಳಿಸುವುದು ಸಾಧ್ಯವಿಲ್ಲ.

ಇಸ್ಲಾಂ ಮೇಲೆ ಪುರುಷರ ಏಕಸ್ವಾಮ್ಯ ಮಹಿಳೆಯ ಹಕ್ಕುಗಳ ಬಗ್ಗೆ ಉಲೇಮಾಗಳ ವ್ಯಾಖ್ಯಾನವೇ ಪ್ರಶ್ನಾರ್ಹವಾಗಿದೆ. ಪ್ರಚೋದನಕಾರಿಯೂ ಆಗಿದೆ. ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶಿಸಿ ಕಲೀಫ್ ಉಮರ್ ಅವರ ನಿರ್ಧಾರಗಳಿಗಿಂತಲೂ ಕುರಾನ್‌ನ ವ್ಯಾಖ್ಯಾನಗಳೇ ಪ್ರಧಾನವಾದುದು ಎಂದು ತೀರ್ಪು ನೀಡುವ ಮುನ್ನ, ತ್ರಿವಳಿ ತಲಾಕ್ ಬಗ್ಗೆಯೂ ಉಲೇಮಾಗಳ ಅಭಿಪ್ರಾಯ ಇದೇ ರೀತಿಯದ್ದಾಗಿರುತ್ತಿತ್ತು.

ತಲಾಕ್ ಪ್ರಕರಣಗಳಲ್ಲೂ ಸಹ, ಪುರುಷರು ಒಮ್ಮೆಲೆ ಮೂರು ಬಾರಿ ತಲಾಕ್ ಎಂದು ಉಚ್ಚರಿಸುವ ಮೂಲಕ ವಿವಾಹ ಬಂಧವನ್ನು ಅಂತ್ಯಗೊಳಿಸುವ ಹಕ್ಕು ಇರುವುದನ್ನು ಮೌಲಾನಾಗಳು ಬಲವಾಗಿ ಸಮರ್ಥಿಸಿದ್ದರು. ಹತ್ತಾರು ಇಸ್ಲಾಮಿಕ್ ರಾಷ್ಟ್ರಗಳು ವಿಚ್ಛೇದನದ ಈ ಮಾದರಿಯನ್ನು ಅಂಗೀಕರಿಸುವುದಿಲ್ಲ ಎಂಬ ವಾಸ್ತವವೂ ಸಹ ಭಾರತದ ಉಲೇಮಾಗಳಿಗೆ ಅನಪೇಕ್ಷಿತವಾಗಿತ್ತು.

ವಿವಾಹ ವಿಚ್ಛೇದನದ ಆಯ್ಕೆಗಳನ್ನು ಕುರಿತಂತೆ ಕುರಾನ್‌ನಲ್ಲಿ ಕೆಲವು ಶ್ಲೋಕಗಳು ಉಲ್ಲೇಖವಾಗಿದ್ದು, ಸುರಾಹ್-ಅಲ್-ಬಕಾರಾಹ್ ಎಂದೂ, ಸುರಾಹ್-ಅಟ್-ತಲಾಕ್ ಎಂಬ ಈ ಶ್ಲೋಕಗಳಲ್ಲೂ ಒಮ್ಮೆಲೆ ಮೂರು ಬಾರಿ ತಲಾಕ್ ಹೇಳುವ ಪದ್ಧತಿಗೆ ಮಾನ್ಯತೆ ನೀಡಲಾಗಿಲ್ಲ. ಆದರೆ ಈ ವಿಚಾರದಲ್ಲೂ ಭಾರತದ ಉಲೇಮಾಗಳು, ಅದನ್ನು ಕೇವಲ ವ್ಯಾಖ್ಯಾನಗಳಿಗೆ ಸೀಮಿತವಾಗಿಸಿದ್ದರು. ಅಂತಿಮವಾಗಿ ನ್ಯಾಯಾಲಯವೇ ೨೦೧೭ರಲ್ಲಿ ತ್ರಿವಳಿ ತಲಾಕ್ ಪದ್ಧತಿಗೆ ಅಂತ್ಯ ಹಾಡಬೇಕಾಯಿತು.

ಈ ತೀರ್ಪು ಉಲೇಮಾಗಳಲ್ಲಿ ಸಾಕಷ್ಟು ಕ್ಲೇಶ ಉಂಟುಮಾಡಿದರೂ ಕೊನೆಗೆ ಸಮ್ಮತಿಸಬೇಕಾಯಿತು. ಮುಸ್ಲಿಂ ವಿದ್ವಾಂಸರು ಧಾರ್ಮಿಕವಾಗಿ ತಮ್ಮ ಹಿಡಿತವನ್ನು ಸಾಽಸಲು ಖುಲಾ ಪದ್ಧತಿಯ ಬಗ್ಗೆ ತಮ್ಮದೇ ಆದ ನಿಲುವುಗಳನ್ನು ವ್ಯಕ್ತಪಡಿಸುವುದರಿಂದ, ನ್ಯಾಯಾಂಗವೇ ಮತ್ತೊಮ್ಮೆ ಕುರಾನ್ ಮತ್ತು ಹಡಿತ್‌ಗಳ ಕಡೆಗೆ ಉಲೇಮಾಗಳ ಗಮನವನ್ನು ಸೆಳೆಯಬೇಕಿದೆ. ಇಸ್ಲಾಂ ಧರ್ಮದ ಮೇಲೆ ಪುರುಷರ ಏಕಸ್ವಾಮ್ಯತೆಯನ್ನು ಹೇರುವ ದೃಷ್ಟಿಯಿಂದ ಮುಸ್ಲಿಂ ಮಹಿಳೆಯ ಎಲ್ಲ ಹಕ್ಕುಗಳನ್ನು, ಸವಲತ್ತುಗಳನ್ನು ಉಲೇಮಾಗಳೇ ಪರಾಮರ್ಶಿಸುತ್ತಾರೆ.

ಇತ್ತೀಚೆಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಲಿಯು (ಎಐಎಮ್‌ಪಿಎಲ್‌ಬಿ) ಖುಲಾ ಬಗ್ಗೆ ಕೇರಳದ ಹೈಕೋರ್ಟ್ ತೀರ್ಪನ್ನು ವಿರೋಽಸಿದೆ. ಮರುಪರಿಷ್ಕರಣೆಯ ಅರ್ಜಿಗೆ ಪ್ರತಿಕ್ರಿಯಿಸಿರುವ ಕೇರಳ ಹೈಕೋರ್ಟ್ “ಯಾವುದೇ ಕಾರ್ಯ ವಿಧಾನಗಳು ಇಲ್ಲದಿದ್ದ ಪಕ್ಷದಲ್ಲಿ, ಪತ್ನಿಯ ವಿವಾಹ ವಿಚ್ಛೇದನದ ಇಚ್ಛೆಯನ್ನು ಪತಿಯು ಸಮ್ಮತಿಸದೆ ಹೋದರೆ, ಖುಲಾ ಪದ್ಧತಿಯನ್ನು ಪತಿಯ ಸಂಯೋಗ ಇಲ್ಲದೆಯೇ ಅನ್ವಯಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಡುತ್ತದೆ.

ಮುಸ್ಲಿಂ ಮಹಿಳೆಯರು ತಮ್ಮ ಪುರುಷ ಸಂಗಾತಿಗಳ ಇಚ್ಛೆಗಳಿಗೆ ಅಡಿಯಾಳಾಗಿರಬೇಕು ಎಂದು ಪ್ರತಿಪಾದಿಸುವ ವಿಶಿಷ್ಟ ಪರಿಷ್ಕರಣೆಯ ಅರ್ಜಿ ಇದಾಗಿದೆ, ಮುಸ್ಲಿಂ ಮಹಿಳೆಯರು ಏಕಪಕ್ಷೀಯವಾಗಿ ಖುಲಾ ಪದ್ಧತಿಯನ್ನು ಬಳಸುವ ಹಕ್ಕು ಹೊಂದಿರುತ್ತಾರೆ ಎನ್ನುವ ನಿಯಮವನ್ನು ಮುಸ್ಲಿಂ ಧರ್ಮಾಽಕಾರಿಗಳು ಮತ್ತು ಮುಸ್ಲಿಂ ಸಮುದಾಯದ ಪುರುಷಾದೀಪತ್ಯದ ಪ್ರತಿಪಾದಕರು ಅರಗಿಸಿಕೊಳ್ಳಲಾಗುತ್ತಿಲ್ಲ” ಎಂದು ಹೇಳಿದೆ.

 

andolanait

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

9 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

10 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

11 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

14 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

15 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

15 hours ago