Andolana originals

ಹೀಲಿಯಂ ಗ್ಯಾಸ್ ಬಲೂನ್ ಮಾರಾಟಕ್ಕಿಲ್ಲ ಕಡಿವಾಣ

ಹಳ್ಳಿಗಳ ಹಬ್ಬ, ಜಾತ್ರೆಗಳಲ್ಲಿ ಬಲೂನ್‌ಗಳ ಮಾರಾಟ
ಅವಘಡ ಸಂಭವಿಸಿದರೆ ಯಾರು ಹೊಣೆ?
2025ರ ವರ್ಷಾಂತ್ಯದಲ್ಲಿ ಮೈಸೂರಿನಲ್ಲಿ ನಡೆದಿದ್ದ ಸ್ಫೋಟ
ಬಲೂನ್‌ಗಳಿಗೆ ಗ್ಯಾಸ್ ತುಂಬಲು ಸ್ಥಳ ನಿಗದಿಗೆ ಒತ್ತಾಯ

ಚಿರಂಜೀವಿ ಸಿ ಹುಲ್ಲಹಳ್ಳಿ

ಮೈಸೂರು: ಜಿಲ್ಲೆಯಲ್ಲಿ ಈಗ ಜಾತ್ರೆಗಳ ಸಂಭ್ರಮ… ಪ್ರತಿ ಗ್ರಾಮದಲ್ಲಿಯೂ ಗ್ರಾಮ ದೇವತೆ, ಮಾರಮ್ಮ ಹಬ್ಬಗಳ ಸಡಗರ… ಇಂತಹ ಸಂಭ್ರಮಕ್ಕೆ ಮಕ್ಕಳ ಕೈಯಲ್ಲಿ ‘ತಲೆ ಕುಣಿಸುತ್ತಾ’ ಅತ್ತಿಂದಿತ್ತ ವಾಲಾಡುವ ಬಣ್ಣ ಬಣ್ಣದ ಬಲೂನ್‌ಗಳು ಕೂಡ ಮೆರುಗು ತುಂಬುತ್ತವೆ. ಆದರೆ, ಈ ಬಾರಿ ಅಂತಹ ಬಲೂನ್‌ಗಳ ರಂಗು ಪೋಷಕರನ್ನು ಭೀತಿಗೊಳಿಸಿವೆ. ಅದಕ್ಕೆ ಕಾರಣ ಬಲೂನ್ ಗಳಲ್ಲಿ ತುಂಬಿರುವ ‘ಹೀಲಿಯಂ ಗ್ಯಾಸ್!’

ನಂಜನಗೂಡು, ಎಚ್‌.ಡಿ.ಕೋಟೆ, ತಿನರಸೀಪುರ, ಹುಣಸೂರು, ಪಿರಿಯಾಪಟ್ಟಣ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪ್ರತಿ ಹಳ್ಳಿಗಳಲ್ಲಿಯೂ ಗ್ರಾಮ ದೇವತೆ ಹಬ್ಬಗಳನ್ನು ಆಚರಿಸಲಾಗುತ್ತಿದೆ. ನಿತ್ಯ ಒಂದಲ್ಲ ಒಂದು ಊರಿನಲ್ಲಿ ಮಾರಮ್ಮನ ಹಬ್ಬ ನಡೆಯುತ್ತಲೇ ಇದೆ.

ಪುರಿ, ಖಾರ ತಿಂಡಿಗಳು, ಸಿಹಿ ತಿನಿಸುಗಳು, ಪೂಜಾ ಸಾಮಗ್ರಿಗಳು, ಮಕ್ಕಳ ಆಟಿಕೆಗಳು, ಹೀಲಿಯಂ ಬಲೂನ್‌ಗಳ ವ್ಯಾಪಾರವೂ ಜೋರಾಗಿದೆ. ಇಲ್ಲಿ ಬಿಸಿ ಗಾಳಿ ತುಂಬಿ ಬಲೂನ್‌ಗಳನ್ನು ನೋಡಿದಾಗ, ಕಳೆದ ತಿಂಗಳು ಅಂಬಾ ವಿಲಾಸ ಅರಮನೆ ಮುಂಭಾಗ ಜಯಮಾತಾಂಡ ದ್ವಾರದ ಬಳಿ ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟಗೊಂಡು ಮೂವರು ಸಾವಿಗೀಡಾದ ಘಟನೆ ಬಹುತೇಕ ಹಿರಿಯರ ಕಣ್ಣ ಮುಂದೆ ತೇಲಿ ಹೋಗುವುದು ನಿಶ್ಚಿತ.

ಸಾಮಾನ್ಯವಾಗಿ ಪ್ರತಿ ಹಳ್ಳಗಳಲ್ಲಿ ಮಾರಮ್ಮ ಜಾತ್ರೆಗಳು ನಡೆಯುವ ಸ್ಥಳಗಳಲ್ಲಿ ಹೀಲಿಯಂ ಬಲೂನ್ ಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಹಬ್ಬಕ್ಕೆ ಸುತ್ತಮುಲ ಊರುಗಳಿಂದ ನೆಂಟರಿಷ್ಟರನ್ನು ಆಹ್ವಾನಿಸಿರುತ್ತಾರೆ. ಹೀಗಾಗಿ ಒಂದೆ ಕಡೆ ಸಾವಿರಾರು ಜನರು ಸೇರುತ್ತಾರೆ. ಇದರ ನಡುವೆಯೇ ಹೀಲಿಯಂ ಗ್ಯಾಸ್‌ಗಳನ್ನು ಬಳಕೆ ಮಾಡಿ ಬಲೂನ್ ಮಾರಾಟ ಮಾಡುವುದು ನಡೆಯುತ್ತಿದೆ. ಒಂದು ವೇಳೆ ಅವಘಡ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

ವ್ಯಾಪಾರಕ್ಕಿಲ್ಲ ಮಾನದಂಡಗಳು
ಹೊರ ರಾಜ್ಯಗಳಿಂದ ಜಾತ್ರೆಗಳಲ್ಲಿ ವ್ಯಾಪಾರ ನಡೆಸುವ ವ್ಯಾಪಾರಿಗಳು ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ಜಾತ್ರೆ ನಡೆಯುವ ಸ್ಥಳ, ಹೆಚ್ಚು ಜನ ಸೇರುವ ದೇವಾಲಯದ ಆವರಣದಲ್ಲಿಯೇ ಬಲೂನ್ ಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದು ನಿಯಂತ್ರಿಸುವ ಸಂಬಂಧ ರಾಜ್ಯ ರ್ಸಾರ ಅಥವಾ ಸ್ಥಳೀಯ ಸಂಸ್ಥೆಗಳಿಂದ ಯಾವುದೇ ಆದೇಶ ಹೊರಬಿದ್ದಿಲ್ಲ ಎಂಬುದು ಸಾರ್ವಜನಿಕರ ಆತಂಕವಾಗಿದೆ.

ಜನನಿಬಿಡ ಪ್ರದೇಶಗಳಲ್ಲಿ ನಿಷೇಧ?
ತಮ್ಮ ಬದುಕಿನ ಬಂಡಿ ಎಳೆಯುವ ಸಲುವಾಗಿ ಹೊರ ರಾಜ್ಯಗಳಿಂದ ಅನೇಕ ಮಂದಿ ಜಿಲ್ಲೆಗೆ ಹೊರ ರಾಜ್ಯಗಳಿಂದ ಅನೇಕ ಮಂದಿ ಜಿಲ್ಲೆಗೆ ಆಗಮಿಸಿ ಬಲೂನ್‌ಗಳ ವ್ಯಾಪಾರ ನಡೆಸುತ್ತಾರೆ. ಅದೇ ಅವರ ಬದುಕಿಗೆ ಆಧಾರ. ಹಾಗಂತ ಜನರ ಸುರಕ್ಷತೆಯನ್ನು ಕಡೆಗಣಿಸುವುದೂ ಸಲ್ಲದು. ಹಾಗಾಗಿ ನೂರಾರು ಜನರು ಸೇರುವ ಮತ್ತು ಜಾತ್ರೆಗಳು ನಡೆಯುವ ಸ್ಥಳದಿಂದ ಸುರಕಿತ ಅನಿಸಬಹುದಾದಷ್ಟು ದೂರದಲ್ಲಿ ಬಲೂನ್ ಗಳಿಗೆಹೀಲಿಯಂಗ್ಯಾಸ್‌ ತುಂಬಿಕೊಳ್ಳುವುದನ್ನು ಕಡ್ಡಾಯಗೊಳಿಸುವುದು ಸೂಕ್ತ ಎನ್ನುತ್ತಾರೆ ಮಾರಿಹಬ್ಬದ ಸಂಭ್ರಮದಲ್ಲಿದ್ದ ಶಂಕರಪುರದ ಶಿವು.

ಹೀಲಿಯಂ ಗ್ಯಾಸ್ ಬಲೂನ್ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ. ಶೀಘ್ರದಲ್ಲಿ ಹೀಲಿಯಂ ಗ್ಯಾಸ್ ಬಲೂನ್ ಮಾರಾಟಗಾರರು ಅನುಸರಿಸಬೇಕಾದ ನಿಯಮ ಕುರಿತು ಹೊಸ ಆದೇಶ ಹೊರಡಿಸುವ ಬಗ್ಗೆ ಚಿಂತಿಸಲಾಗುವುದು.
ಮಲ್ಲಿಕಾರ್ಜುನ್ ಬಾಲದಂಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಮೈಸೂರಿನಲ್ಲಿ ಕೆಲ ತಿಂಗಳ ಹಿಂದೆ ನಡೆದ ಹೀಲಿಯಂ ಗ್ಯಾಸ್‌ ಸಿಲಿಂಡರ್ ಸ್ಫೋಟದಿಂದ ಮೂವರು ಅಸುನೀಗಿದ ಘಟನೆಯ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಬರುವ ವ್ಯಾಪಾರಸ್ಥರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸಬೇಕು. ಬಲೂನ್ ಗಳ ಮಾರಾಟಕ್ಕಾಗಿ ಹೊರ ರಾಜ್ಯಗಳಿಂದ ಬರುವವರ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಲು ಕ್ರಮವಹಿಸಬೇಕು.

• ಮಲ್ಲೇಶ್, ಉಪಾಧ್ಯಕ್ಷ, ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ

 

ಆಂದೋಲನ ಡೆಸ್ಕ್

Recent Posts

ಬಯಲುಸೀಮೆಗೆ ಭದ್ರಾ ಜೀವಜಲ : ನವೆಂಬರ್ ಅಂತ್ಯಕ್ಕೆ ಎಲ್ಲ ಕೆರೆಗಳಿಗೂ ನೀರು ; ಸಚಿವ ಚಲುವರಾಯಸ್ವಾಮಿ ಭರವಸೆ*

ಚಿತ್ರದುರ್ಗ : ದಶಕಗಳಿಂದ ಬರಗಾಲದ ಬೇಗೆಯಲ್ಲಿ ಬೆಂದ ಬಯಲುಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆ ಹೊಸ ಭರವಸೆ ಮೂಡಿಸಿದೆ. ಅರಣ್ಯ ಇಲಾಖೆ…

4 hours ago

ಓದುಗರ ಪತ್ರ: ಕರುನಾಡ ಹೆಮ್ಮೆ…

ಭಾರತೀಯ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ಸಹಜ ನಟನೆಯ ಪ್ರಸದ್ಧಿ ಪಡೆದು... ಮೇರುನಟರಾಗಿ ಕಲಾಸೇವೆಗಾಗಿ ತಮನ್ನು ತಾವು ಮುಡಿಪಿಟ್ಟು ಭಾರತೀಯ ಚಿತ್ರರಂಗದ…

12 hours ago

ಓದುಗರ ಪತ್ರ: ಪಾಲಿಕೆ ಯೋಜನೆ ಸ್ವಾಗತಾರ್ಹ

ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಜನರು ಮೈಸೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಪದೇ ಪದೇ…

12 hours ago

ಓದುಗರ ಪತ್ರ: ಯುಪಿಐ ಶುಲ್ಕ: ಚರ್ಚೆಯ ನಂತರ ಕ್ರಮ ಕೈಗೊಳ್ಳಿ

ದೇಶದಾದ್ಯಂತ ಸಣ್ಣ ಪುಟ್ಟ ವ್ಯಾಪಾರಗಳಿಂದ ಹಿಡಿದು ದೇಶದ ಬಹುದೊಡ್ಡ ವ್ಯಾಪಾರ ವಹಿವಾಟಿನವರೆಗೆ ಯುಪಿಐ ಮೂಲಕವೇ ಹಣ ಪಾವತಿಸಲು ಕೇಂದ್ರ ಸರ್ಕಾರ…

12 hours ago

ಬದಲಾದ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಬ್ರಿಕ್ಸ್ ಪಾತ್ರ

ಡಾ. ಬಸವರಾಜ್ ಇಟ್ನಾಳ ಇತ್ತೀಚೆಗೆ ಬ್ರಿಕ್ಸ್ ಶೃಂಗ ಸಭೆ ದೆಹಲಿಯಲ್ಲಿ ನಡೆಯಿತು. ಬ್ರಿಕ್ಸ್ ದೇಶಗಳ ಪರಸ್ಪರ ಸಹಕಾರ ಮತ್ತು ಸ್ಥಳೀಯ…

12 hours ago

ಬಿಹಾರದಲ್ಲಿ ಯುಸಿಸಿಗೆ ನಿತೀಶ್, ಚಿರಾಗ್ ಪಕ್ಷಗಳ ಭಿನ್ನರಾಗ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ…

12 hours ago