ಓದುಗರ ಪತ್ರ
ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ (ಎಐ) ನಾವು ಅಗಾಧ ಸಾಧನೆ ಮಾಡಿದ್ದೇವೆ. ಹಾಗಾಗಿ ಇವತ್ತು ಜಗತ್ತು ಭಾರತದತ್ತ ತಿರುಗಿ ನೋಡುತ್ತಿದೆ.
ಡಿಜಿಟಲ್ ಇಂಡಿಯಾ ಪ್ರಭಾವದಿಂದ ಇಂದು ದೇಶದ ಯಾವುದೇ ಮೂಲೆಯಲ್ಲಿ ನಿಂತು ಪಡಿತರ ಪಡೆಯಬಹುದು. ಆಧಾರ್, ಯುಪಿಐ ವ್ಯವಸ್ಥೆಗಳು ಹಣಕಾಸು ಮತ್ತು ನಾಗರಿಕ ಸೇವೆಯನ್ನು ಅಂಗೈಯ ಲಭ್ಯವಾಗಿಸಿವೆ. ಆದರೆ, ಪ್ರಜಪ್ರಭುತ್ವದ ಮಹತ್ವದ ಹಕ್ಕಾದ ‘ಮತದಾನ’ ಪದ್ಧತಿಯಲ್ಲಿ ಮಾತ್ರ ನಿರೀಕ್ಷಿಸಿದಷ್ಟು ತಂತ್ರಜ್ಞಾನ ನೆರವು ಪಡೆಯುತ್ತಿಲ್ಲ. ಇನ್ನೂ ಹಿಂದೆಯೇ ಉಳಿದಿದೆ.
ಉದ್ಯೋಗ, ಶಿಕ್ಷಣಕ್ಕಾಗಿ ಸ್ವಂತ ಊರು ಬಿಟ್ಟು ಬೇರೆಡೆ ವಾಸಿಸುತ್ತಿರುವ ಕೋಟ್ಯಂತರ ನಾಗರಿಕರು, ಕೇವಲ ಮತದಾನಕ್ಕಾಗಿಯೇ ಸಾಕಷ್ಟು ಖರ್ಚು ಮಾಡಿ ತಮ್ಮ ಊರಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಪಡಿತರ ಎದರೂ ಸಿಗುತ್ತದೆ. ಆದರೆ ವೋಟು ಮಾತ್ರ ಸ್ವಂತ ಊರಿನ ಮತಗಟ್ಟೆಗೆ ಬಂದು ಹಾಕಬೇಕು ಎಂಬ ನಿಯಮ ವಿಪರ್ಯಾಸವಲ್ಲವೇ? ಇಂದು ತಂತ್ರeನ ಬೆಳೆದಿರುವಾಗ, ‘ರಿಮೋಟ್ ವೋಟಿಂಗ್’ ಅಥವಾ ಆಧಾರ್ ಆಧಾರಿತ ಡಿಜಿಟಲ್ ಮತದಾನ ವ್ಯವಸ್ಥೆಯನ್ನು ಜರಿಗೆ ತರುವುದು ಚುನಾವಣಾ ಆಯೋಗಕ್ಕೆ ಅಸಾಧ್ಯವೇನಲ್ಲ. ಪ್ರತಿಯೊಬ್ಬ ನಾಗರಿಕನು ತಾನು ವಾಸಿಸುವ ಕಡೆಯಿಂದಲೇ ಮತ ಚಲಾಯಿಸುವ ವ್ಯವಸ್ಥೆ ಇಂದಿನ ತುರ್ತು ಅಗತ್ಯ. ಯಾರು ಎಲ್ಲಿದ್ದಾರೋ ಅ ನಿಂತು ಮತದಾನ ಮಾಡುವ ಅವಕಾಶ ಸಿಕ್ಕಿದ ದಿನ ಪ್ರಜಪ್ರಭುತ್ವದ ಮತದಾನದ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ. ಯುವಕರು ಮತ್ತು ವಲಸಿಗರು ಚುನಾವಣೆಯಿಂದ ದೂರ ಉಳಿಯುವುದು ತಪ್ಪುತ್ತದೆ.
ಸರ್ಕಾರ ಮತ್ತು ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಲಿ. ಕೇವಲ ಯೋಜನೆಗಳಲ್ಲಿ ಮಾತ್ರವಲ್ಲ, ಪ್ರಜಪ್ರಭುತ್ವದ ಬೇರುಗಳ ಗಟ್ಟಿತನದಲ್ಲೂ ತಂತ್ರಜ್ಞಾನ ಬಳಕೆಯಾಗಲಿ. ‘ಎಲ್ಲಿದ್ದರೂ ನನ್ನ ಮತ, ನನ್ನ ದೇಶಕ್ಕೆ’ ಎಂಬ ಆಶಯ ನೈಜರೂಪ ತಾಳಲಿ.
-ಬಿ.ಗಣೇಶ, ಮೈಸೂರು
ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…
ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…
ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…
ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…
ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…