ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ದಾಂದಲೆ ಹಾಗೂ ಡಿವೈಎಸ್‌ಪಿ ಕಾರಿನ ಮೇಲೆ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರೊಬ್ಬರು ಇದು ಪೊಲೀಸ್ ಇಲಾಖೆಯ ನಿರ್ಲಕ್ಷ ದಿಂದಲೇ ಆಗಿರುವ ಘಟನೆ. ‘ಪೊಲೀಸರಿಗೆ ಸಾಮಾನ್ಯ ಜ್ಞಾನ ಇಲ್ಲ’ ಎಂದು ಹೇಳಿಕೆ ನೀಡಿರುವುದು ಖಂಡನೀಯ.ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ದಾಂದಲೆ ಹಾಗೂ ಡಿವೈಎಸ್‌ಪಿ ಕಾರಿನ ಮೇಲೆ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರೊಬ್ಬರು ಇದು ಪೊಲೀಸ್ ಇಲಾಖೆಯ ನಿರ್ಲಕ್ಷ ದಿಂದಲೇ ಆಗಿರುವ ಘಟನೆ. ‘ಪೊಲೀಸರಿಗೆ ಸಾಮಾನ್ಯ ಜ್ಞಾನ ಇಲ್ಲ’ ಎಂದು ಹೇಳಿಕೆ ನೀಡಿರುವುದು ಖಂಡನೀಯ.
ಗಲಭೆಗಳು ಸೃಷ್ಟಿಯಾಗಲು ದೊಡ್ಡ ದೊಡ್ಡ ಕಾರಣಗಳೇ ಬೇಕು ಎಂದೇನಿಲ್ಲ. ಕೆಲವೊಮ್ಮೆ ಸಣ್ಣಪುಟ್ಟ ಗಲಾಟೆಗಳೂ ದೊಡ್ಡ ಪ್ರಮಾಣದಲ್ಲಿ ಕಿಡಿಹೊತ್ತಿಸ ಬಹುದು. ಅಂತಹದರಲ್ಲಿ ಉದಯಗಿರಿಯಲ್ಲಿ ಸಂಭವಿಸಿದ ಗಲಭೆ ವೇಳೆ ಉದ್ರಿಕ್ತರನ್ನು ಪೊಲೀಸರು ನಿಯಂತ್ರಿಸಿ ಗಲಭೆಯನ್ನು ಕೆಲವೇ ಗಂಟೆಯಲ್ಲಿ ತಣ್ಣಗಾಗಿಸಿದ್ದಾರೆ.
ಉದಯಗಿರಿ ಸೂಕ್ಷ ಪ್ರದೇಶವಾಗಿದ್ದು, ಇಲ್ಲಿ ಗಲಭೆಗಳಿಗೆ ದೊಡ್ಡ ಕಾರಣಗಳೇ ಬೇಕಿಲ್ಲ ಎಂಬುದು ವಾಸ್ತವ. ಇಂತಹ ಸ್ಥಳದಲ್ಲಿ ಸಿಬ್ಬಂದಿ ಕಾನೂನಾತ್ಮಕವಾಗಿ ಹಾಗೂ ಭಾವನಾತ್ಮಕವಾಗಿ ಎಲ್ಲರಿಗೂ ಸ್ಪಂದಿಸುತ್ತಾ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಸಂಭವಿಸಬೇಕಾದ ಅದೆಷ್ಟೋ ಗಲಾಟೆಗಳನ್ನು ನಿಯಂತ್ರಿಸಿದ್ದಾರೆ. ಹಲವು ಪ್ರಕರಣಗಳನ್ನು ಸೂಕ್ಷ ವಾಗಿ ಅವಲೋಕಿಸಿ ಸಂಧಾನ ಮಾಡಿಸಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತಾ ಬಂದಿದ್ದಾರೆ. ಅಚಾನಕ್ಕಾಗಿ ಒಮ್ಮೆ ಗಲಭೆಯಾದ ಮಾತ್ರಕ್ಕೆ ‘ಪೊಲೀಸರಿಗೆ ಕಾಮನ್ ಸೆನ್ಸ್ ಇಲ್ಲ’ ಎಂದು ಹೇಳುವುದು ಎಷ್ಟು ಸರಿ? ಕೆಲ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಎಲ್ಲರನ್ನೂ ದೂರುವುದು ಸರಿಯಲ್ಲ. ಉದಯಗಿರಿಯಲ್ಲಿ ಎಲ್ಲ ಸಮುದಾಯದವರೊಂದಿಗೆ ಸೌಜನ್ಯದಿಂದಿರುವ ಹಲವು ಕುಟುಂಬಗಳೂ ಇವೆ. ಇಂತಹ ಸೂಕ್ಷ ತೆಯನ್ನು ಅರಿತು ಕೆಲಸ ಮಾಡುವ ಪೊಲೀಸರಿಗೆ ಸಚಿವರೊಬ್ಬರು ಕಾಮನ್ ಸೆನ್ಸ್ (ಸಾಮಾನ್ಯ ಜ್ಞಾನ) ಇಲ್ಲ ಎಂದಿರುವುದು ಎಷ್ಟು ಸರಿ? -ಪಿ. ಸಿ. ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು.
ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…
ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…
ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…
ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…
ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…