ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಲಕ್ಷಿ ವೆಂಕಟರಮಣಸ್ವಾಮಿ ದೇವಸ್ಥಾನದಿಂದ ಮೇಟಗಳ್ಳಿ ರಾಯಲ್ ಇನ್ ಜಂಕ್ಷನ್‌ವರೆಗಿನ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ಹೆಸರಿಡಬೇಕು ಎಂಬ ಚರ್ಚೆ ಆರಂಭವಾಗಿದೆ. ಈ ರಸ್ತೆಗೆ ಸಿದ್ದರಾಮಯ್ಯರವರ ಹೆಸರಿಡ ಬೇಕು ಎನ್ನುವ ಸಂಬಂಧ ಮಹಾನಗರ ಪಾಲಿಕೆ ಹೊರಡಿಸಿದ ಸಾರ್ವಜನಿಕ ಪ್ರಕಟಣೆಗೆ ಪರ-ವಿರೋಧ ವ್ಯಕ್ತವಾಗಿದ್ದು, ಸಿದ್ದರಾಮಯ್ಯ ರವರ ಹೆಸರಿಟ್ಟರೆ ತಪ್ಪೇನು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿರುವುದು ಆಶ್ಚರ್ಯ ತಂದಿದೆ.
ಹೌದು ಮೂಲತಃ ಮೈಸೂರಿನವರೇ ಆಗಿರುವ, ಸುದೀರ್ಘ ಕಾಲ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಮೈಸೂರಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿರುವ ಸಿದ್ದರಾಮಯ್ಯನವರ ಹೆಸರಿಡುವುದರಲ್ಲಿ ತಪ್ಪಿಲ್ಲ. ಅವರ ಸಾಧನೆಯನ್ನು ಗುರುತಿಸುವ ವಿಚಾರದಲ್ಲಿ ಪಕ್ಷಬೇಧ ಮಾಡಬಾರದು. ಸಿದ್ದರಾಮಯ್ಯನವರು ಸೈದ್ಧಾಂತಿಕವಾಗಿ ರಾಜಕೀಯದಲ್ಲಿ ವಿರೋಽಗಳನ್ನು ಹೊಂದಿದ್ದರೂ ರಾಜ್ಯಕ್ಕೆ ಅವರ ಕೊಡುಗೆ ಅಪಾರ. ಅಂತಹವರ ಹೆಸರನ್ನು ಮೈಸೂರಿನ ಒಂದು ರಸ್ತೆಗೆ ಇಡುವುದು ಸೂಕ್ತವೆನಿಸುತ್ತದೆ. ಸಾರ್ವಜನಿಕರು ಪಕ್ಷಬೇಧ ಮರೆತು ಕೆಆರ್‌ಎಸ್ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಡಲು ಸಹಕರಿಸಬೇಕು.
-ಎಚ್. ವಿ. ಮನೋಜ್, ಹೊಸಮಾಳ, ಎಚ್. ಡಿ. ಕೋಟೆ ತಾ.
ಖದೀಜಾ ಉಮೈರಾ ರಂಜಾನಿಗೆ ಒಂದು ಹಬ್ಬದ ಗುಣವಿದೆ. ಹಾಗಾಗಿ ನಮಗೆಲ್ಲಾ ಅದು ಹಬ್ಬದಂತೆ ಭಾಸವಾಗುವುದು ಸಹಜ. ಇದು ಇಸ್ಲಾಮಿಕ್ ಕ್ಯಾಲೆಂಡರಿನ…
ಅಕ್ಷತಾ ಸೈಕ್ಲಿಂಗ್‌ನಲ್ಲಿ ‘ಸೂಪರ್ ರಾಂಡೋನಿಯರ್’ ಬಿರುದಾಂಕಿತ ಮೈಸೂರಿನ ಮೊದಲ ಮಹಿಳೆ ಡಾ.ಬೃಂದಾ ಗೋಧಿ. ಡಾ.ಬೃಂದಾ ಮೈಸೂರಿನ ಜೆಎಸ್‌ಎಸ್ ದಂತ ವೈದ್ಯಕೀಯ…
ಚಂದ್ರಶೇಖರ್ ಮೂರ್ತಿ ಕೆ.ಎಸ್. ಮೈಸೂರಿಗರಿಗೆ ಬೇಡವಾದರೇ ಈ ಹಸಿರು ಸುಂದರಿಯರು ಸಾಂಸ್ಕ ತಿಕ ಪರಂಪರೆ ಹೊಂದಿರುವ ಮೈಸೂರಿ ನಲ್ಲಿ ಪರಿಸರ…
ಚಾಮರಾಜನಗರ: ತಾಲ್ಲೂಕಿನ ವೀರನಪುರ ಸಮೀಪವಿರುವ ಕರಿಕಲ್ಲು ಕ್ವಾರಿಯೊಂದರಲ್ಲಿ ಟಿಪ್ಪರ್ ಮಗುಚಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಂಜಾರ ಸಮುದಾಯದ ಜನತೆಗೆ ಒಳ ಮೀಸಲಾತಿಯಲ್ಲಿ ಆಗಿರುವ ಅನ್ಯಾಯದ ಬಗ್ಗೆ…
ಹುಬ್ಬಳ್ಳಿ: ಹನ್ನೊಂದು ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರುವ ಕರ್ನಾಟಕದ ಕನಸು ನನಸಾಗಲಿಲ್ಲ. ಇದೇ ಮೊದಲ ಬಾರಿಗೆ ಫೈನಲ್‌ಗೆ ಬಂದು, ಜಮ್ಮು-ಕಾಶ್ಮೀರ…