ಓದುಗರ ಪತ್ರ
ಮೈಸೂರಿನಲ್ಲಿ ಬಹುತೇಕ ಉದ್ಯಾನವನಗಳು ಮತ್ತು ರಸ್ತೆ ಬದಿಯ ವಿದ್ಯುತ್ ದೀಪಗಳನ್ನು ಬೆಳಿಗ್ಗೆ ೬ ಗಂಟೆಗೂ ಮೊದಲೇ ಆರಿಸಲಾಗುತ್ತಿದ್ದು, ಮುಂಜಾನೆಯ ವೇಳೆ ವಾಕಿಂಗ್ ಮಾಡುವವರಿಗೆ ತೊಂದರೆಯಾಗುತ್ತಿದೆ.
ಉದ್ಯಾನವನಗಳಲ್ಲಿ ಹಾಗೂ ರಸ್ತೆ ಬದಿಯಲ್ಲಿ ನಿತ್ಯ ೫ ಗಂಟೆಗೆ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ವಾಕಿಂಗ್ ಮಾಡುತ್ತಾರೆ. ಈ ನಸುಕಿನ ಜಾವದಲ್ಲಿ ಕತ್ತಲಿರುವುದರಿಂದ ವಾಕಿಂಗ್ ಮಾಡುವವರಿಗೆ ಬೆಳಕಿನ ಅವಶ್ಯಕತೆ ಇರುತ್ತದೆ. ಆದರೆ ಪಾರ್ಕ್ ಮತ್ತು ರಸ್ತೆ ಬದಿಯ ವಿದ್ಯುತ್ ದೀಪಗಳನ್ನು ಬೆಳಗಿನ ೬ ಗಂಟೆಗೂ ಮೊದಲೇ ಆರಿಸಲಾಗುತ್ತಿದ್ದು, ನಸುಕಿನ ಮಂದ ಬೆಳಕಿನಲ್ಲಿಯೇ ವಾಕಿಂಗ್ ಮಾಡಬೇಕಾದ ಪರಿಸ್ಥಿತಿ ಇದೆ. ಈಗ ಬೆಳಿಗ್ಗೆ ೬. ೪೫ಕ್ಕೆ ಸೂರ್ಯೋದಯವಾಗುತ್ತಿದ್ದು, ಅಲ್ಲಿಯವರೆಗೂ ಕತ್ತಲು ಆವರಿಸಿರುತ್ತದೆ. ಇತ್ತೀಚೆಗೆ ಮೈಸೂರಿನ ಶ್ರೀರಾಂಪುರದ ಶಿವನ ದೇವಸ್ಥಾನದ ಎದುರಿನ ಪಾರ್ಕ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ಹಿರಿಯ ನಾಗರಿಕರೊಬ್ಬರು ಬೆಳಿಗ್ಗೆ ೬ ಗಂಟೆಗೆ ಕತ್ತಲೆಯಲ್ಲಿ ಮುಗ್ಗರಿಸಿ ಬಿದ್ದು ಅಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಇಂತಹ ಘಟನೆಗಳು ಬಹುತೇಕ ಪಾರ್ಕ್‌ಗಳಲ್ಲಿ ನಡೆಯುತ್ತಿದ್ದು, ಸಂಬಂಧಪಟ್ಟವರು ಮುಂದಿನ ಎರಡು ತಿಂಗಳ ಕಾಲ ಬೆಳಿಗ್ಗೆ ೬. ೩೦ರವರೆಗೂ ವಿದ್ಯುತ್ ದೀಪಗಳು ಬೆಳಗುವಂತೆ ಮಾಡಲಿ. -ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.
ಹನೂರು : ಮೂರು ಪ್ರತ್ಯೇಕ ಮನೆಗಳಲ್ಲಿ ಕಳ್ಳತನ ನಡೆಸಿ ನಗದು ಹಾಗೂ ಚಿನ್ನ ದೋಚಿಕೊಂಡು ಪರಾರಿಯಾಗಿದ್ದ ಐವರು ಆರೋಪಿಗಳನ್ನು ರಾಮಾಪುರ…
ಮೈಸೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡಜನರ ಕಲ್ಯಾಣಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತವೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಬದ್ಧತೆಯಿಂದ ಅವುಗಳನ್ನು…
ಮೈಸೂರು : ನಾನು ಅಹಿಂದ ಚಾಂಪಿಯನ್ ಎನ್ನುವ ಸಿದ್ದರಾಮಯ್ಯ, ಕಾಂಗ್ರೆಸ್ ಬಿಟ್ಟು ಹೊರ ಬಂದು 5-10 ಕ್ಷೇತ್ರಗಳಲ್ಲಿ ಅವರ ಅಭ್ಯರ್ಥಿಗಳನ್ನು…
ಟೆಹ್ರಾನ್ : ಮಧ್ಯಪ್ರಾಚ್ಯದಲ್ಲಿ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ ಇರಾನ್-ಅಮೇರಿಕಾ ಸಂಘರ್ಷವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಇಂದು ನಡೆಯಬೇಕಿದ್ದ…
ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ (ಬಾಳೇಬರೆ) ಪ್ರದೇಶದಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವಾಗ ಗುಡ್ಡ…
ಹನೂರು : ಕೂಲಿ ಕೆಲಸಕ್ಕೆ ತೆರಳಿ ವಾಪಸ್ ಗ್ರಾಮಕ್ಕೆ ನೀರಿನಲ್ಲಿ ಈಜಿಕೊಂಡು ಬರುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ವ್ಯಕ್ತಿಯೋರ್ವ…