ಓದುಗರ ಪತ್ರ

ಓದುಗರ ಪತ್ರ | ನೀರು ಪೋಲು ಮಾಡದಂತೆ ಜಾಗೃತಿ ಮೂಡಿಸಿ

ಬೇಸಿಗೆಯ ತಾಪ ಹೆಚ್ಚಾದಂತೆ ರಾಜ್ಯದ ಹಲವೆಡೆ ಜನರು ಒಂದು ಬಿಂದಿಗೆ ನೀರಿಗಾಗಿ ವಾರಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಹೀಗಿರುವಾಗ, ಮೈಸೂರು ನಗರದ ಹಲವೆಡೆ ಮನೆ ಮುಂದೆ ನಲ್ಲಿಗೆ ಪೈಪ್ ಜೋಡಿಸಿ, ವಾಹನ, ಪಾತ್ರೆ ತೊಳೆಯುತ್ತಾ ನೀರು ವ್ಯರ್ಥಮಾಡುತ್ತಾರೆ. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ನೀರಿನ ಶುಲ್ಕ ಕಟ್ಟುವವರು ನಾವು, ನಿಮಗೇನು ತೊಂದರೆ ಎಂದು ಜಗಳಕ್ಕೆ ಬರುತ್ತಾರೆ. ನಗರದ ಬಹುತೇಕ ಕಡೆ ಸಾರ್ವಜನಿಕ ನಲ್ಲಿಗಳು ಹಾಳಾಗಿದ್ದು, ನಿರಂತರವಾಗಿ ನೀರು ಸೋರುತ್ತಿದ್ದರೂ ಸಂಬಂಧಪಟ್ಟವರು ದುರಸ್ತಿಗೆ ಕ್ರಮ ಕೈಗೊಳ್ಳುವುದಿಲ್ಲ.

ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಪ್ರತಿ ವಾರ್ಡ್‌ ನೀಡಿ ನೀರು ಪೋಲಾಗುವುದನ್ನು ತಡೆಗಟ್ಟಬೇಕು ಹಾಗೂ ಮಿತವಾಗಿ ನೀರು ಬಳಸುವುದರ ಬಗ್ಗೆ ಅರಿವು ಮೂಡಿಸಬೇಕು. ನೀರು ಪೋಲು ಮಾಡುವವರಿಗೆ ದಂಡ ವಿಧಿಸುವುದರ ಜೊತೆಗೆ, ಸ್ಥಳೀಯ ನಿವಾಸಿಗಳನ್ನೊಳಗೊಂಡ ‘ಜಲರಕ್ಷಕ’ ಎಂಬ ಸ್ವಯಂಸೇವಕರ ತಂಡವನ್ನು ರಚಿಸಿ ಸೋರಿಕೆಗಳ ಮೇಲೆ ನಿಗಾವಹಿಸಬೇಕು.
– ಬಿ.ಗಣೇಶ, ಕೆ.ಜಿ.ಕೊಪ್ಪಲು, ಮೈಸೂರು

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ದೇವಿ ಕೃಪೆ ಜನರ ಮೇಲಿರಲಿ, ಜನರ ಕೃಪೆ ನಮ್ಮ ಸರ್ಕಾರದ ಮೇಲಿರಲಿ: ಸಿಎಂ ಡಿಕೆಶಿ

ಮೈಸೂರು:  ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ದೇವಿಯ ಕೃಪೆ…

24 mins ago

ದಸರಾ ಉದ್ಘಾಟಿಸುವಷ್ಟು ದೊಡ್ಡವನು ನಾನಲ್ಲ: ಗವಿಸಿದ್ದೇಶ್ವರ ಶ್ರೀ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ವಿನಮ್ರ ಮಾತುಗಳನ್ನಾಡಿದ್ದಾರೆ. “ದಸರಾ…

46 mins ago

ಮನಸೆಳೆವ ಫಲ ಪುಷ್ಪ ಪ್ರದರ್ಶನ

ಪ್ರಕೃತಿಯೊಂದಿಗೆ ನಂಟನ್ನು ನೆನಪಿಸುವ ಒಂದು ಸುಂದರ ಪಯಣ. 15 ಎಕರೆ ವಿಸ್ತೀರ್ಣ, 70 ಸಸ್ಯಶಾಸ್ತ್ರೀಯ ಜಾತಿಯ 327ಕ್ಕೂ ಹೆಚ್ಚಿನ ವೈವಿಧ್ಯಮಯ…

1 hour ago

ಮೈಸೂರು ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ 416ನೇ ನಾಡಹಬ್ಬ ದಸರಾ…

3 hours ago

ಓದುಗರ ಪತ್ರ: ಬಳಸಿದ ಅಡುಗೆ ಎಣ್ಣೆ: ಯೋಜನೆ ಪ್ರಶಂಸನೀಯ

ಬಳಸಿದ ಅಡುಗೆ ಎಣ್ಣೆಯನ್ನು ಸರಕಾರವೇ ಸಂಗ್ರಹಿಸಿ ಜೈವಿಕ ಇಂಧನವಾಗಿ (ಬಯೋಡೀಸೆಲ) ಪರಿವರ್ತಿಸುವ ಯೋಜನೆ ಪ್ರಶಂಸನೀಯ. ಪುನರಾವರ್ತಿತ ಎಣ್ಣೆ ಬಳಕೆಯಿಂದ ಹೊರಹೊಮ್ಮುವ…

4 hours ago

ಓದುಗರ ಪತ್ರ: ಇದೇನು ಪಾದಚಾರಿ ರಸ್ತೆಯೋ ಅಥವಾ…?

ಅನ್ನ ಬೆಂದಿದೆಯೋ ಇಲ್ಲವೋ ಎಂಬುದನ್ನುಪರೀಕ್ಷಿಸಲು ಪಾತ್ರೆಯ ಅನ್ನವನ್ನು ಮುಟ್ಟಿ ನೋಡಬೇಕಿಲ್ಲ. ಒಂದು ಅಗುಳನ್ನು ಪರೀಕ್ಷಿಸಿದರೆ ಸಾಕು. ಅಂತೆಯೇ ಮೈಸೂರಿನಲ್ಲಿ ಸಂಚಾರ…

4 hours ago