ಓದುಗರ ಪತ್ರ

ಓದುಗರ ಪತ್ರ | ಆರೋಗ್ಯ ಕೇಂದ್ರದ ಎದುರಿನ ಕಸ ತೆರವುಗೊಳಿಸಿ

ಕೊಳ್ಳೇಗಾಲ ತಾಲ್ಲೂಕಿನ ಸಿಂಗಾನಲ್ಲೂರು ಗ್ರಾಮದಲ್ಲಿ ಹೋಟೆಲ್ ತ್ಯಾಜ್ಯ ಇತ್ಯಾದಿಗಳನ್ನು ಗ್ರಾಮದ ಆರೋಗ್ಯ ಕೇಂದ್ರದ ಎದುರು ಸುರಿಯಲಾಗುತ್ತಿದೆ. ಗ್ರಾಮ ಪಂಚಾಯಿತಿ ಕಚೇರಿಗೆ ಸರ್ಕಾರದಿಂದ ಕಸ ಸಾಗಣೆ ವಾಹನ, ಪೌರ ಕಾರ್ಮಿಕರನ್ನು ಒದಗಿಸಲಾಗಿದೆ. ಆದರೆ ಅವರು ಸಮರ್ಪಕವಾಗಿ ಕಸವನ್ನು ತೆರವುಗೊಳಿಸದೇ ಇರುವುದರಿಂದ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯುಂಟಾಗಿದೆ.

ಜನರು ಆರೋಗ್ಯ ತಪಾಸಣೆಗಾಗಿ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಆದರೆ ಆರೋಗ್ಯ ಕೇಂದ್ರದ ಎದುರೇ ಕಸ ತೆರವುಗೊಳಿಸದೇ ಇರುವುದು ವಿಪರ್ಯಾಸ.

ಗ್ರಾಮ ಪಂಚಾಯಿತಿಯವರು ಕೂಡಲೇ ಆರೋಗ್ಯ ಕೇಂದ್ರದ ಎದುರು ಸುರಿದಿರುವ ಕಸವನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಮುಂದಾಗಬೇಕಾಗಿದೆ.

– ಎನ್. ಪ್ರಸಾದ್, ಕೊಳ್ಳೇಗಾಲ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸೆಸ್ಕ್ ಯುಜಿ ಕೇಬಲ್ ಮುಂಜಾಗ್ರತೆ ವಹಿಸಿ

ಮೈಸೂರಿನ ಬಹುತೇಕ ಎಲ್ಲ ಬಡಾವಣೆಗಳಲ್ಲೂ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್)ದಿಂದ ಅಂಡರ್ ಗ್ರೌಂಡ್ ಕೇಬಲ್ ಅನ್ನು ಅಳಡಿಸುತ್ತಿದ್ದು, ಕಾಮಗಾರಿಯ…

2 mins ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಕೆನೆಪದರ ಪರಿಶಿಷ್ಟರಿಗೆ ಬೇಡವೆನ್ನುವ ಕೇಂದ್ರಕ್ಕೆ ಮತ್ತೆ ಸುಪ್ರೀಂ ತಾಕೀತು

ಮೀಸಲಾತಿ ವ್ಯವಸ್ಥೆ ಜಾರಿ ಸಂಬಂಧ ಪರ ಮತ್ತು ವಿರೋಧದ ಚರ್ಚೆ ಹಾದಿ ಬೀದಿ, ಹಳ್ಳಿಯ ಪಂಚಾಯಿತಿ ಕಟ್ಟೆಗಳಲ್ಲಿ ಮತ್ತು ಖಾಸಗಿಯಾಗಿ…

6 mins ago

ಸಂದು ಹೋದ ಜನಪದ ಹಾಡುಗಾರ ಕೈಲಾಸಮೂರ್ತಿಯ ಕುರಿತು…

ಸಿ.ಎಂ.ನರಸಿಂಹಮೂರ್ತಿ ಕೈಲಾಸಮೂರ್ತಿ ಗುಂಡು ಗುಂಡಾಗಿ, ಚೆಂದುಳ್ಳ ಚೆಲುವನಂತೆ ಕೆಂಪು ಕೆಂಪಾಗಿದ್ದವ. ಕೇವಲ ೩೮ ವರ್ಷ ವಯಸ್ಸು.ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕುಸಿದ್ದಯ್ಯನಪುರ…

11 mins ago

ಕರೆಂಟು ಕಾರಿನ ಛಾರ್ಜಿಂಗ್ ಫಜೀತಿಗಳು

ಪೂರ್ಣಿಮಾ ಭಟ್ಟ ಸಣ್ಣಕೇರಿ, ಲಂಡನ್ ಶೋರೂಮಿನಿಂದ ಹೊರ ಬೀಳಬೇಕಾದರೆ ಕಾರಿನ ಬ್ಯಾಟರಿ ನೂರು ಪ್ರತಿಶತ ಛಾರ್ಜ್ ಆಗಿರುವುದಾಗಿ ತೋರಿಸುತ್ತಿತ್ತು. ಎರಡು…

16 mins ago

ಸಿಕ್ಕು ಒಂದು ಅಪೂರ್ವ ಕಥೆ

ಶ್ರೀಕೃಷ್ಣ ಆಲನಹಳ್ಳಿ ಕನ್ನಡ ಕಥಾಲೋಕದಲ್ಲಿ ಸಣ್ಣಪ್ರಾಯದಲ್ಲೇ ಒಂದು ನಕ್ಷತ್ರದಂತೆ ಬೆಳಗುತ್ತಿದ್ದ ಶ್ರೀಕೃಷ್ಣ ಆಲನಹಳ್ಳಿ, ಅಷ್ಟೇ ಸಣ್ಣ ಪ್ರಾಯದಲ್ಲಿ ಈ ಲೋಕ…

22 mins ago

ಕೊಡಗಿನಲ್ಲಿ ತಲೆ ಎತ್ತುತ್ತಿರುವ ಅಕ್ರಮ ವಿಲ್ಲಾಗಳು: ಆರೋಪ

ಕಾಂಗೀರ ಬೋಪಣ್ಣ ಸೂಕ್ತ ತನಿಖೆಗೆ ಪರಿಸರವಾದಿಗಳ ಒತ್ತಾಯ; ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ ವಿರಾಜಪೇಟೆ: ಅಚ್ಚ ಹಸಿರಿನ ಸುಂದರ…

29 mins ago