ಎಡಿಟೋರಿಯಲ್

ಕರ್ತವ್ಯದ ಕರೆಗೆ ಓಗೊಡುತ್ತಲೇ ಕಾಲನ ಕರೆಗೆ ಓಗೊಟ್ಟರು!

 ಪೊಲೀಸ್ ಹುತಾತ್ಮರ ದಿನ ನಾಡಜನರ ಸುರಕ್ಷಿತ ನಾಳೆಗಳಿಗಾಗಿ ತಮ್ಮ ಈವತ್ತಿನ ಬದುಕು, ಕನಸುಗಳನ್ನೆಲ್ಲ ಬಲಿದಾನ ಮಾಡಿದ ನಿಷ್ಠಾವಂತರು   

ದುಡುಕದೆ ಒಬ್ಬ ವಿವೇಕಯುತ ಅಧಿಕಾರಿಯಂತೆ ಜಗದೀಶ್ ವರ್ತಿಸಿದ್ದಾರೆ. ಓಡುತ್ತಿದ್ದವರ ಜಾಡನ್ನು ಹಿಡಿದು ತಾವೇ ಖುದ್ದು ಬೆನ್ನತ್ತಿದ್ದಾರೆ. ತಮ್ಮ ಮೊಬೈಕ್ ತರುವಂತೆ ಪೇದೆಗೆ ಹೇಳಿ ಧೈರ್ಯದಿಂದ ಇಬ್ಬರನ್ನೂ ಅಟ್ಟಾಡಿಸಿದ್ದಾರೆ. ಒಬ್ಬನನ್ನು ಹಿಡಿದು ಗದುಮುವಲ್ಲಿ ಸಫಲರೂ ಆಗಿದ್ದಾರೆ . ಆದರೆ ದುರದೃಷ್ಟ. ಓಡುವಾಗ ಕಾಲು ಜಾರಿ ಕಮರಿಗೆ ಬಿದ್ದಿದ್ದಾರೆ. ಇದನ್ನೇ ದುರ್ವಿಧಿ ಅನ್ನುವುದು. ತಪ್ಪಿಸಿಕೊಳ್ಳಲಾಗದಂತಹ ದುರಂತ ಸನ್ನಿವೇಶ ಅದು. ಪಿಸ್ತೂಲ್ ತೆಗೆದು ಬೆದರಿಸಿದ್ದಾರೆ. ಅಷ್ಟೇ. ಆಯತಪ್ಪಿ ಬಿದ್ದಿದ್ದ ಜಗದೀಶರನ್ನು ಅವರಿಬ್ಬರೂ ನಿರ್ದಯರಾಗಿ ಇರಿಯುವಾಗ, ಮೊದಲ ತಿವಿತವೇ ಹೃದಯಕ್ಕೆ ಚುಚ್ಚಿದೆ. ಕ್ಷಣಗಳಲ್ಲಿ ಉಳಿದ ಚಕ್ ಚಕ್ ಇರಿತಗಳಾಗಿವೆ.

ಪ್ರತಿವರ್ಷ ಅಕ್ಟೋಬರ್ ಇಪ್ಪತ್ತೊಂದು ಪೊಲೀಸ್ ಹುತಾತ್ಮರ ದಿನಾಚರಣೆ . ಕರ್ತವ್ಯದಲ್ಲಿದ್ದಾಗ ಪ್ರಾಣತೆತ್ತ ಪೊಲೀಸರನ್ನು ಶ್ರದ್ಧೆ ಗೌರವಗಳಿಂದ ಸ್ಮರಿಸುವ ದಿನ. ಹಾಗೆಯೇ ಹುತಾತ್ಮರಾದ ಮೈಸೂರಿನ ಪೊಲೀಸ್ ಅಧಿಕಾರಿಗಳಂತೂ ಅಗಣಿತ.

ಜನರ ಮನ ಕಲಕಿದ ಮೈಸೂರಿನ ಹುತಾತ್ಮರೆಂದರೆ ಏಪ್ರಿಲ್ ೯ – ೧೯೮೯ರಲ್ಲಿ ಕಾಡುಗಳ್ಳ ವೀರಪ್ಪನ್ ಗುಂಡೇಡಿಗೆ ಹತರಾದ ರಾಮಲಿಂಗು, ಜಗನ್ನಾಥ್, ದಿನೇಶ್, ಶಂಕರರಾವ್ ಮತ್ತು ೧೪-೦೮-೧೯೯೨ ರಂದು ತೀರಿಕೊಂಡ ಎಸ್‌ಪಿ ಹರಿಕೃಷ್ಣ , ಎಸ್‌ಐ ಶಕೀಲ್ ಸೇರಿದಂತೆ ಒಟ್ಟು ಇಪ್ಪತ್ತೇಳು ಪೊಲೀಸ್ ವೀರರ ಪ್ರಾಣಾರ್ಪಣೆ.

ಎಲ್ಲರೂ ನಲವತ್ತರ ಒಳಗಿನವರು. ಆಗಿನ್ನೂ ಕೌಟುಂಬಿಕ ಗೂಡು ಕಟ್ಟಿ ಕೊಳ್ಳುತ್ತಿದ್ದವರು. ಇವರೆಲ್ಲರ ಸಾವಿಗೆ ಇಡೀ ಮೈಸೂರು ಕಣ್ಣೀರಿಟ್ಟಿತ್ತು.

ಹಾಗೆ ಮನಕಲಕಿದ ಬಲಿದಾನಗಳೆಂದರೆ ಮಲ್ಲಿಕಾರ್ಜುನ ಬಂಡೆ, ಜಗದೀಶ್ ಮುಂತಾದವರ ಅಂತ್ಯ. ಇನ್ನೊಂದು ಮೂರು ಹತ್ಯೆಗಳು ಕರ್ತವ್ಯದ ಸಲುವಾಗೇ ಪ್ರಾಣಾರ್ಪಣೆ ಮಾಡಿದ ಬಲಿದಾನಗಳು. ಸಬ್‌ಇನ್‌ಸ್ಪೆಕ್ಟರ್‌ಗಳಾಗಿದ್ದ ಬೆಂಗಳೂರಿನ ಸುನೀಲ್ ಕುಮಾರ್, ನರಗುಂದದ ಸಿಕಂದರ್. ಬಿ.ಪಾಟೀಲ್ ಮತ್ತು ಸಿರಾ ಠಾಣೆಯ ಸಾಯಿ ಪ್ರಕಾಶ್. ಬೆಂಗಳೂರು ರೈಲ್ವೆ ಸ್ಟೇಷನ್ ಬಳಿ ಹಂತಕನ ಇರಿತಕ್ಕೆ ಸಬ್‌ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ದಾರುಣವಾಗಿ ಬಲಿಯಾದಾಗ ಸಾವಿರಾರು ಜನ ಗರಬಡಿದು ನೋಡುತ್ತಿದ್ದರು.

ನಲವತ್ತು ವರ್ಷದ ಹಿಂದೆ ನವಲಗುಂದ ರೈತ ಚಳುವಳಿಯಲ್ಲಿ ಸಬ್‌ಇನ್‌ಸ್ಪೆಕ್ಟರ್ ಸಿಕಂದರ್ ಬಿ.ಪಾಟೀಲರ ತೊಡೆಗಳನ್ನು ಸೀಳಿ ಜರಾಸಂಧ ವಧೆ ಮಾಡಿದರು. ಆಗಿನ್ನೂ ಕೆಲಸಕ್ಕೆ ಪಾದಾರ್ಪಣೆ ಮಾಡಿದ್ದ ನತದೃಷ್ಟ ಎಸ್.ಬಿ.ಪಾಟೀಲ್. ಸಿರಾದಲ್ಲಿ ನಡೆದ ರೈತ ಚಳುವಳಿಯಲ್ಲೂ ಮತ್ತೋರ್ವ ಸಬ್‌ಇನ್‌ಸ್ಪೆಕ್ಟರ್ ತಲೆಯ ಮೇಲೆ ಸೈಜುಗಲ್ಲು ಹಾಕಿದರು. ಸ್ಥಳದಲ್ಲೇ ಸಾಯಿ ಪ್ರಕಾಶ್ ಅಸು ನೀಗಿದರು.
ಭೀಕರ ಹತ್ಯೆಗೈದವರಿಗೆ ಈ ಮೂವರು ಸಬ್‌ಇನ್‌ಸ್ಪೆಕ್ಟರ್‌ಗಳೂ ಅಪರಿಚಿತರು. ಉದ್ರಿಕ್ತ ಗುಂಪನ್ನು ಸಂತೈಸಲು ಹೋಗಿ ನಡುವೆ ಸಿಕ್ಕಿಬಿದ್ದು ಹತರಾದವರು.

ಇಂತಹುದೇ ವಿದ್ರಾವಕ ಹತ್ಯೆ ಸರಿಯಾಗಿ ಐದು ವರ್ಷದ ಹಿಂದೆ ನಡೆದಿತ್ತು. ನೆಲಮಂಗಲದ ಸಬ್‌ಇನ್‌ಸ್ಪೆಕ್ಟರ್ ಜಗದೀಶ್ ಇಬ್ಬರು ಪಾತಕಿಗಳ ಇರಿತಕ್ಕೆ ಬಲಿಯಾದರು. ಅದೇಕೋ ಅವರ ಪ್ರಾಣಾರ್ಪಣೆ ಸುದ್ದಿಜೀವಿಗಳ ಕಣ್ಣಿಗೆ ಕ್ಷುಲ್ಲಕವಾಗಿ ಕಂಡಿತು.

ಮಾಧ್ಯಮಗಳ ಶೀರ್ಷಿಕೆ ಹೀಗಿತ್ತು :

  • ಕಳ್ಳರಿಂದಲೇ ಕೊಲೆಯಾದ ಎಸ್‌ಐ !
  • ರಿವಾಲ್ವರ್‌ನಲ್ಲಿ ಬುಲೆಟ್‌ಗಳೇ ಇರ್ಲಿಲ್ಲ !
  • ಜಗದೀಶ್‌ರ ಪಿಸ್ತೂಲಿನಲ್ಲಿ ಗುಂಡುಗಳೇ ಇರಲಿಲ್ಲವಂತೆ!

ಈ ಬಗೆಯ ಕೊಂಕು ನುಡಿಯದಿದ್ದರೆ ಕೆಲವರಿಗೆ ತಿಂದದ್ದು ಅರಗುವುದೇ ಇಲ್ಲ. ಏನು ಮಾಡೋದು?

ಪಿಸ್ತೂಲ್ ಕೊಟ್ಟಿರುವುದು ತನ್ನ ಮತ್ತು ಅನ್ಯರ ಪ್ರಾಣ ರಕ್ಷಣೆಗಾಗಿ ಮಾತ್ರ . ಹೇಗೆಂದರೆ ಹಾಗೆ ಮನಸ್ವೀ ಬಳಸಲು ಅದೇನು ಮಕ್ಕಳಾಟಿಕೆಯಲ್ಲ. ಅತ್ಯಂತ ವಿವೇಕದಿಂದ ಮತ್ತು ವಿಶೇಷ ಮುಂಜಾಗ್ರತೆಯಿಂದಲೇ ಬಳಸಬೇಕು. ಹೀಗಾಗಿ ಪಿಸ್ತೂಲಿನಲ್ಲಿ ಯಾವಾಗಲೂ ಗುಂಡುಗಳನ್ನು ಲೋಡ್ ಮಾಡಿರುವುದಿಲ್ಲ.
ಯಾರೋ ಇಬ್ಬರು ಅಪರಿಚಿತರು ಪೊಲೀಸರನ್ನು ಕಂಡು ಓಡತೊಡಗಿದ್ದಾರೆ. ಅವರು ಯಾರೆಂಬುದು ಖಚಿತವಾಗಿಲ್ಲ. ಆ ಕುರಿತು ಮಾಹಿತಿಯೂ ಇಲ್ಲ. ಅಲ್ಲದೆ ಅವರಿಬ್ಬರೂ ಯಾರನ್ನೋ ಹತ್ಯೆ ಮಾಡಿ ಪರಾರಿಯಾಗುತ್ತಿದ್ದಾರೆ ಎಂದೂ ಹೇಳಲಾಗದು .

ಪೊಲೀಸರನ್ನು ಕಂಡು ಜಸ್ಟ್ ಹೆದರಿ ತಪ್ಪಿಸಿಕೊಂಡು ಓಡುತ್ತಿದ್ದಾರೆ. ಯಾಕಾಗಿ ಓಡುತ್ತಿದ್ದಾರೆ ? ಅದೂ ಖಚಿತವಾಗಿ ಗೊತ್ತಿಲ್ಲ. ಏನೋ ಅಪರಾಧ ಮಾಡಿರಬೇಕು. ಅಷ್ಟೇ. ಸನ್ನಿವೇಶ ಹೀಗಿದ್ದಾಗ ಅವರನ್ನು ತಪ್ಪಿಸಿಕೊಳ್ಳದಂತೆ ಹಿಡಿದುಕೊಳ್ಳಬೇಕು. ಆದಷ್ಟು ಕಡಿಮೆ ಬಲ ಪ್ರಯೋಗಿಸಿ ಹಿಡಿಯಬೇಕು .
ಓಡ್ತಿದ್ದಾರೆ ಅಂತ ವಿಪರೀತವಾಗಿ ಊಹಿಸಿ ಅಷ್ಟಕ್ಕೇ ಯಾರಯಾರ ಮೇಲೋ ಗುಂಡು ಹಾರಿಸಲಾಗುವುದಿಲ್ಲ. ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಯಂತಹ ಅಪರಾಧ ಮಾಡಿದ್ದರೆ ಮಾತ್ರ ಮುಲಾಜಿಲ್ಲದೆ ಢಮಾರ್ ಅನ್ನಿಸಬಹುದು. ಇಲ್ಲವೇ ಅವರನ್ನು ಹಿಡಿಯಲು ಹೋದಾಗ ಪ್ರತಿರೋಧ ಒಡ್ಡಿ , ಹಲ್ಲೆ ಮಾಡಿ ಜಗದೀಶರಿಗೆ ಪ್ರಾಣಾಪಾಯ ಉಂಟು ಮಾಡಿದ್ದರೆ ಮಾತ್ರ ಗುಂಡು ಹಾರಿಸಬಹುದಿತ್ತು.

ಅಂತಹುದು ಯಾವುದೂ ಖಚಿತವಾಗಿ ಗೊತ್ತಿಲ್ಲ, ನಡೆದಿಲ್ಲ.mದುಡುಕದೆ ಒಬ್ಬ ವಿವೇಕಯುತ ಅಧಿಕಾರಿಯಂತೆ ಜಗದೀಶ್ ವರ್ತಿಸಿದ್ದಾರೆ. ಓಡುತ್ತಿದ್ದವರ ಜಾಡನ್ನು ಹಿಡಿದು ತಾವೇ ಖುದ್ದು ಬೆನ್ನತ್ತಿದ್ದಾರೆ. ತಮ್ಮ ಮೊಬೈಕ್ ತರುವಂತೆ ಪೇದೆಗೆ ಹೇಳಿ ಧೈರ್ಯದಿಂದ ಇಬ್ಬರನ್ನೂ ಅಟ್ಟಾಡಿಸಿದ್ದಾರೆ. ಒಬ್ಬನನ್ನು ಹಿಡಿದು ಗದುಮುವಲ್ಲಿ ಸಫಲರೂ ಆಗಿದ್ದಾರೆ . ಆದರೆ ದುರದೃಷ್ಟ. ಓಡುವಾಗ ಕಾಲು ಜಾರಿ ಕಮರಿಗೆ ಬಿದ್ದಿದ್ದಾರೆ. ಇದನ್ನೇ ದುರ್ವಿಧಿ ಅನ್ನುವುದು. ತಪ್ಪಿಸಿಕೊಳ್ಳಲಾಗದಂತಹ ದುರಂತ ಸನ್ನಿವೇಶ ಅದು. ಪಿಸ್ತೂಲ್ ತೆಗೆದು ಬೆದರಿಸಿದ್ದಾರೆ. ಅಷ್ಟೇ. ಆಯತಪ್ಪಿ ಬಿದ್ದಿದ್ದ ಜಗದೀಶರನ್ನು ಅವರಿಬ್ಬರೂ ನಿರ್ದಯರಾಗಿ ಇರಿಯುವಾಗ, ಮೊದಲ ತಿವಿತವೇ ಹೃದಯಕ್ಕೆ ಚುಚ್ಚಿದೆ. ಕ್ಷಣಗಳಲ್ಲಿ ಉಳಿದ ಚಕ್ ಚಕ್ ಇರಿತಗಳಾಗಿವೆ.

ಖಾಲಿ ಪಿಸ್ತೂಲ್ ಯಾಕೆ ತೆಗೆದುಕೊಂಡು ಹೋಗಬೇಕಿತ್ತು? ಅಂತ ಸಾವಿನಲ್ಲೂ ಕುಹಕವಾಡುವವರು ಯೋಚಿಸಬೇಕಾದದ್ದು:
ನೆಲಮಂಗಲಕ್ಕೆ ಬರುತ್ತಾನೆ ಅಂತ ಮಾಹಿತಿ ಪಡೆದು ದೊಡ್ಡಬಳ್ಳಾಪುರದಿಂದ ಸಿಬ್ಬಂದಿಯೊಂದಿಗೆ ಬಂದು ಬೆಳಗಿನಿಂದಲೇ ಕಾದು ಕುಳಿತಿದ್ದರಲ್ಲಾ?
ಆ ಸ್ಪಿರಿಟ್ ನಿಜವಾದ ದೇಶಭಕ್ತನದು ಅಲ್ಲವೇ? ಗ್ಯಾಲಂಟರಿ ಶೌರ್ಯ ಪದಕಕ್ಕೆ ಅರ್ಹವಾದ ವೀರಾಗ್ರಣಿ ಅವರಲ್ಲವೇ?

ಆಕ್ಸಿಡೆಂಟ್ ನಡೆದು ಹೋದ ಮೇಲೆ, ಸ್ವಲ್ಪ ಎಡಕ್ಕೆ ತಿರುಗಿಸಬೇಕಿತ್ತು, ಮೊದಲೇ ಸ್ಲೋ ಮಾಡಬೇಕಿತ್ತು ಅಂತ ತೌಡು ಕುಟ್ಟುವಂತಹ ಕ್ಷುಲ್ಲಕ ಸಂಗತಿ ಖಂಡಿತಾ ಇದಾಗಿರಲಿಲ್ಲ.

ಸಾವನ್ನು ಕಂಡು ಇಡೀ ನಾಡು ಮರುಗಿತು. ನೆಲಮಂಗಲ ಬಂದ್ ಆಯಿತು. ಅಂದಿನ ಗೃಹಮಂತ್ರಿ ಕೆಜೆ ಜಾರ್ಜ್ ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡ್ತಿನಿ ಅಂತ ಆಶ್ವಾಸನೆ ಕೊಟ್ಟಿದ್ದರು. ಏನೇನೂ ಆಗಲಿಲ್ಲ.

ನಾಡಜನರ ಸುರಕ್ಷಿತ ನಾಳೆಗಳಿಗಾಗಿ ತಮ್ಮ ಈವತ್ತನ್ನು ಬಲಿದಾನ ಮಾಡಿದ ನಿಷ್ಠಾವಂತರು ಅನೇಕ. ಸತ್ತ ಹೊಸದರಲ್ಲಿ ಈ ಹುತಾತ್ಮರನ್ನು ನೆನೆದು, ದೊಡ್ಡ ದೊಡ್ಡ ಮಾತಾಡಿ ಮರೆತು ಬಿಡುತ್ತೇವೆ.

ಕಳೆದ ವರ್ಷ ಕರ್ತವ್ಯದಲ್ಲಿದ್ದಾಗ ಹುತಾತ್ಮರಾದವರು ಭಾರತದಲ್ಲಿ ಸಾವಿರಾರು ಪೊಲೀಸರು. ಅವರಲ್ಲಿ ಕರ್ನಾಟಕದ ಪೊಲೀಸರೂ ಪ್ರಾಣಾರ್ಪಣೆ ಮಾಡಿದ್ದಾರೆ. ಆ ಪಟ್ಟಿ ಇಂದು ಪ್ರಕಟವಾಗಲಿದೆ. ಎಲ್ಲಾ ಹುತಾತ್ಮರಿಗೂ ಅಶ್ರುಪೂರ್ಣ ನಮನಗಳು.

andolana

Recent Posts

ಗುಂಡ್ಲುಪೇಟೆ | ಉಪಟಳ ನೀಡುತಿದ್ದ ಹುಲಿ ಸೆರೆ ; ಮತ್ತೊಂದು ದರ್ಶನ

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮಲಾಪುರ ಬಳಿ ಅನೇಕ ದಿನಗಳಿಂದ ರೈತರಿಗೆ ಉಪಟಳ ನೀಡಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು…

5 mins ago

ಬೆಳ್ತಂಗಡಿ | ಮಹೇಶ್‌ ಶೆಟ್ಟಿ ತಿಮರೋಡಿ ಮತ್ತೆ ಗಡಿಪಾರು

ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಎರಡನೇ ಬಾರಿಗೆ ಗಡಿಪಾರು ಮಾಡಿ ಪುತ್ತೂರು ಎ.ಸಿ.ಆದೇಶ…

8 mins ago

ಲೋಕಸಭೆ | ವಿಭಾ ಜಿರಾಮ್‌ ಮಸೂದೆ ಅಂಗೀಕಾಋ : ಪ್ರತಿಪಕ್ಷಗಳಿಂದ ಪ್ರತಿ ಹರಿದು ಆಕ್ರೋಶ

ಹೊಸದಿಲ್ಲಿ : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ‘ಮನ್ರೇಗಾ ಯೋಜನೆ’(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ…

12 mins ago

ಸಿಎಂ ಕುಟುಂಬ ನಿವೇಶನ ಪಡೆದ ಪ್ರಕರಣ : ಡಿ.23ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಸದಸ್ಯರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಈಗ ಎಂಡಿಎ)ದಿಂದ ಕಾನೂನು ಬಾಹಿರವಾಗಿ…

16 mins ago

ಭಾರತ-ಒಮಾನ್‌ ಮುಕ್ತ ವ್ಯಾಪಾರ ಒಪ್ಪಂದ : ಉಭಯ ದೇಶಗಳಿಗೂ ಶಕ್ತಿ ; ಮೋದಿ ಬಣ್ಣನೆ

ಒಮಾನ್ : ಭಾರತ ಮತ್ತು ಒಮಾನ್ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವಿಶ್ವಾಸ…

1 hour ago

ನೇಮಕಾತಿ ವಿಳಂಬ | ಪ್ರತಿಧ್ವನಿಸಿದ ಪ್ರತಿಭಟನೆಗಳು

ಬೆಳಗಾವಿ : ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ವಿಳಂಬ ಮತ್ತು ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗಳು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದವು. ಪ್ರತಿಪಕ್ಷದ ನಾಯಕ ಆರ್.ಅಶೋಕ್…

2 hours ago