ಎಡಿಟೋರಿಯಲ್

ಸ್ಪರ್ಧೆಯಲ್ಲಿ ಭರಪೂರ ಕನ್ನಡ ಚಿತ್ರಗಳು

 

  ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆಮುಂದಿನ ಗುರುವಾರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಈ ಉತ್ಸವದ ಉದ್ಘಾಟನೆ ಆಗಲಿದೆಮಾರನೇ ದಿನದಿಂದ ರಾಜಕುಮಾರ್ ರಸ್ತೆಯಲ್ಲಿರುವ ಒರಾಯನ್ ಮಾಲ್ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘ ಮತ್ತು ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಚಿತ್ರ ಸಮಾಜ ಇಲ್ಲಿ ಚಿತ್ರೋತ್ಸವದ ಚಿತ್ರಗಳ ಪ್ರದರ್ಶನ ನಡೆಯಲಿದೆ.

ಸಮಕಾಲೀನ ವಿಶ್ವ ಸಿನಿಮಾ ವಿಭಾಗದಲ್ಲಿ ಅಮೆರಿಕಬ್ರಿಟನ್ಜರ್ಮನಿಫ್ರಾನ್ಸ್ಕೊರಿಯಾಉಕ್ರೇನ್ಹಾಂಕಾಂಗ್ಬೆಲ್ಜಿಯಂನೆದರ್‌ಲೆಂಡ್ಫಿನ್‌ಲೆಂಡ್ಕ್ರೋಷಿಯಾಇರಾನ್ಚೀನಾಸ್ವಿಟ್ಜರ್‌ಲೆಂಡ್ಪ್ಯಾಲೆಸ್ಟೆನ್ಅರ್ಜಂಟೈನಾಸಿಂಗಾಪೂರ್ಡೆನ್‌ಮಾರ್ಕ್ಗ್ರೀಸ್ರಷ್ಯಾಫಿಲಿಫೈನ್ಸ್ಲೆಬನಾನ್ಪೋಲೆಂಡ್ರೊಮಾನಿಯಾಕಾಂಬೊಡಿಯಾಕೆನಡಾಜಪಾನ್ಸೆನೆಗಲ್ಸ್ಪೈನ್ಸೈಪ್ರಸ್ಇಂಡೋನೇಶಿಯಾಇಟಲಿ ಸೇರಿದಂತೆ ೫೦ಕ್ಕೂ ದೇಶಗಳ ಅತ್ಯುತ್ತಮ ಚಿತ್ರಗಳು ಪ್ರದರ್ಶನವಾಗಲಿವೆಈ ಬಾರಿಯ ಆಸ್ಕರ್ ಪ್ರವೇಶ ಪಡೆದಿದ್ದ ಚಿತ್ರಗಳೂ ಈ ಸಾಲಿನಲ್ಲಿವೆ.

ಅಂತಾರಾಷ್ಟ್ರೀಯ ವಿಮರ್ಶಕರ ಸಂಘಟನೆ ಬೇರೆ ಬೇರೆ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ನೀಡಿದ ಏಳು ಚಿತ್ರಗಳು ವಿಮರ್ಶಕರ ವಾರ ವಿಭಾಗದಲ್ಲಿ ಪ್ರದರ್ಶನ ಕಾಣಲಿವೆಪುನರಾವಲೋಕನ ವಿಭಾಗದಲ್ಲಿ ಆಫ್ರಿಕನ್ ಸಿನಿಮಾದ ಪಿತಾಮಹ ಎಂದೇ ಕರೆಯಲಾಗುವಔಸ್ಮಾನ್ ಸೆಂಬೆನೆ ಅವರ ಚಲನಚಿತ್ರಗಳಿರುತ್ತವೆಭಾರತದಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರ ಸಿನಿಮಾವಲೋಕನ ಇರಲಿದೆಇಬ್ಬರದೂ ಇದು ಶತಮಾನೋತ್ಸವ ವರ್ಷ.

ದೇಶಕೇಂದ್ರಿತ ವಿಭಾಗದಲ್ಲಿ ಈ ಬಾರಿ ದಕ್ಷಿಣ ಕೊರಿಯಾದ ಚಿತ್ರಗಳತ್ತ ಗಮನ ನೀಡಲಾಗಿದೆನಿರ್ದೇಶಕರೊಬ್ಬರ ಅಧ್ಯಯನಕ್ಕೆ ಹಾಂಗ್‌ಕಾಂಗ್‌ನ ವಾಂಗ್‌ಕರ್ ವೈ ಅವರ ಚಿತ್ರಗಳಿವೆ.

ಚಲನಚಿತ್ರ ಉದ್ಯಮ ಮತ್ತು ಮಾಧ್ಯಮಗಳ ಆಸಕ್ತಿಗೆ ಚಿತ್ರೋತ್ಸವದ ದಿನಗಳಲ್ಲಿ ಪ್ರತಿದಿನ ತಜ್ಞರಿಂದ ಸಂವಾದಉಪನ್ಯಾಸಮಾಸ್ಟರ್‌ಕ್ಲಾಸ್ ಮೊದಲಾದ ಕಾರ್ಯಕ್ರಮಗಳಿರುತ್ತವೆಅವುಗಳಲ್ಲಿ ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರ ಕುರಿತಂತೆ ಖ್ಯಾತ ನಿರ್ದೇಶಕಛಾಯಾಗ್ರಾಹಕನಿರ್ಮಾಪಕ ಗೋವಿಂದ ನಿಹಲಾನಿ ಮಾತನಾಡಲಿದ್ದಾರೆಚಿತ್ರಕಥೆಯ ಕುರಿತಂತೆ ಬಾಹುಬಲಿ ಮತ್ತು ಆರ್‌ಆರ್‌ಆರ್ ಚಿತ್ರಗಳ ವಿಜಯೇಂದ್ರ ಪ್ರಸಾದ್ಸಿನಿಮಾದಲ್ಲಿ ದೃಶ್ಯ ಸಾದೃಶ್ಯದ ಕುರಿತಂತೆ ಶ್ರೀಲಂಕಾದ ಚಲನಚಿತ್ರ ನಿರ್ದೇಶಕವಿಮರ್ಶಕ ವಿಮುಕ್ತಿ ಜಯಸುಂದರ ಅವರಿಂದ ಮಾಸ್ಟರ್ ಕ್ಲಾಸ್‌ಗಳಿರುತ್ತವೆಚಲನಚಿತ್ರಗಳ ಕೃತಿ ಸ್ವಾಮ್ಯ ಕುರಿತಂತೆ ಎಂ.ಎಸ್.ಭರತ್ಜಿ.ಕೆ.ತಿರುನಾವುಕ್ಕರಸು ಉಪನ್ಯಾಸ/ಚರ್ಚೆಇರಾನಿನ ಖ್ಯಾತ ನಿರ್ದೇಶಕ ಜಾಫರ್ ಪನಾಹಿ ಪುತ್ರ ಲೇಖಕ ಮತ್ತು ನಿರ್ದೇಶಕ ಪನಾ ಪನಾಹಿ ಅವರಿಂದ ಮಾಸ್ಟರ್ ಕ್ಲಾಸ್ಮೆಟಾವರ್ಸ್ಛಾಯಾಗ್ರಹಣಶಬ್ದವಿನ್ಯಾಸಗಳ ಕುರಿತಂತೆ ತಜ್ಞರಿಂದ ಉಪನ್ಯಾಸನಿರ್ದೇಶಕನಟ ರಿಷಭ್ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್‌ಕಿರಂಗದೂರ್‌ಅವರೊಂದಿಗೆ ಸಂವಾದ ಇವುಗಳಲ್ಲಿ ಸೇರಿವೆ.

ವಿ.ಕೆಮೂರ್ತಿ ಅವರದು ಮಾತ್ರವಲ್ಲದೆಕನ್ನಡ ಚಿತ್ರೋದ್ಯಮ ಪ್ರಮುಖರ ಜನ್ಮಶತಮಾನೋತ್ಸವವೂ ಇದೇ ವರ್ಷಅವರಲ್ಲಿ ಅಂತಾರಾಷ್ಟ್ರೀಯ ಖ್ಯಾತಿವೆತ್ತ ಚಲನಚಿತ್ರಜ್ಞ ಎಂ.ವಿ.ಕೃಷ್ಣಸ್ವಾಮಿ (ಎಂವಿಕೆ), ಕನ್ನಡ ಚಿತ್ರರಂಗದಲ್ಲಿ ಹಾಸ್ಯಪಾತ್ರಧಾರಿಯಾಗಿ ಮೆರೆದ ನರಸಿಂಹರಾಜುಹಾಗೂ ನಿರ್ದೇಶಕ ಎಸ್.ಕೆ.ಚಾರಿ ಇವರು ಈ ಮೂವರುಈ ಮೂವರ ಕುರಿತಂತೆ ಶತಮಾನೋತ್ಸವ ಸ್ಮರಣೆಯ ಚರ್ಚೆ ಇದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.

ಅಂತಾರಾಷ್ಟ್ರೀಯ ಖ್ಯಾತಿವೆತ್ತ ಎಂವಿಕೆಯವರು 1949ರಲ್ಲಿ ತೆರೆಕಂಡ ‘ಭಾರತಿ’ ಚಿತ್ರದ ಮುಖ್ಯ ಪಾತ್ರಧಾರಿಮೊದಲು ನಟರಾಗಿನಂತರ ಪ್ಯಾರಿಸ್ಲಂಡನ್ ಮತ್ತು ರೋಮ್‌ಗಳಲ್ಲಿ ಚಲನಚಿತ್ರ ಕಲೆತಂತ್ರಜ್ಞಾನಗಳ ಕುರಿತಂತೆ ತರಬೇತಿ ಪಡೆದರಷ್ಟೇ ಅಲ್ಲದೆವಿಶ್ವಖ್ಯಾತಿ ಪಡೆದ ರಾಬರ್ಟ್ ರೋಸೆಲಿನಿಬರ್ಗ್ಮನ್ ಮುಂತಾದವರ ಜೊತೆ ಕೆಲಸ ಮಾಡಿದವರುಕನ್ನಡದಲ್ಲಿ ‘ಪಾಪ ಪುಣ್ಯ’ ಮತ್ತು ‘ಸುಬ್ಬಾಶಾಸ್ತ್ರೀ’ ಚಿತ್ರಗಳನ್ನು ನಿರ್ದೇಶಿಸಿದ ಎಂವಿಕೆ ಸಾಕ್ಷ ಚಿತ್ರಗಳ ನಿರ್ದೇಶನದಲ್ಲಿ ಹೆಸರಾದವರುವಿಶ್ವೇಶ್ವರಯ್ಯನವರದೂ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆಕೇಂದ್ರ ಸರ್ಕಾರದ ಫಿಲಂ ಡಿವಿಜನ್ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮಸೆನ್ಸಾರ್ ಮಂಡಳಿಚಲನಚಿತ್ರೋತ್ಸವ ನಿರ್ದೇಶನಾಲಯಭಾರತದ ಚಲನಚಿತ್ರ ಮತ್ತು ದೂರದರ್ಶನ ತರಬೇತಿ ಕೇಂದ್ರಗಳ ಮುಖ್ಯಸ್ಥರಾಗಿ ಕೆಲಸ ಮಾಡಿದ ಎಂವಿಕೆ ಅವರಿಗೆ ಸಾಕ್ಷ ಚಿತ್ರ ಲೋಕದ ಅತಿ ಉನ್ನತ ಪ್ರಶಸ್ತಿಯಾದ ಎಜ್ರಾ ಮೀರ್ ಪ್ರಶಸ್ತಿ ಪುರಸ್ಕೃತರುನರಸಿಂಹರಾಜುಎಂವಿಕೆ ಮತ್ತುಚಾರಿ ಅವರ ಕುರಿತಂತೆ ಮಾತುಕತೆ ಮಾತ್ರ ಇದೆ.

ಈ ಬಾರಿ ಚಲನಚಿತ್ರೋತ್ಸವ ಸಂಘಟನಾ ಸಮಿತಿಯ ಅಧ್ಯಕ್ಷರಾಗಿ ಕಂದಾಯ ಸಚಿವ ಆರ್.ಅಶೋಕ್ ಅವರಿದ್ದಾರೆಸಂಘಟನಾ ಸಮಿತಿಯ ಮೊದಲ ಪತ್ರಿಕಾಗೋಷ್ಠಿಯ ವೇಳೆ ಅವರುಈ ಚಿತ್ರೋತ್ಸವದಲ್ಲಿ ‘ಬಂಗಾರದ ಮನುಷ್ಯ’, ‘ಬೂತಯ್ಯನ ಮಗ ಅಯ್ಯು’ ಮುಂತಾದ ಕನ್ನಡದ ಹಳೆಯ ಚಿತ್ರಗಳನ್ನು ಈ ಚಿತ್ರೋತ್ಸವದಲ್ಲಿ ಪ್ರದರ್ಶಿಸುವುದಾಗಿ ಪ್ರಕಟಿಸಿದ್ದರುಅವರ ಆದೇಶದ ಕಾರಣ ಇರಬೇಕುಕನ್ನಡದ ಹಲವು ಹಳೆಯ ಚಿತ್ರಗಳನ್ನು ಭಾರತದ ಮಹಾನ್ ಚಿತ್ರಗಳ ಮರುನೋಟ ವಿಭಾಗದಲ್ಲಿ ಸೇರಿಸಲಾಗಿದೆಶ್ರೀ ಕೃಷ್ಣದೇವರಾಯಕಸ್ತೂರಿ ನಿವಾಸಬಂಗಾರದ ಮನುಷ್ಯ ,ಜನುಮದ ಜೋಡಿಬೂತಯ್ಯನ ಮಗ ಅಯ್ಯುಅಮೆರಿಕ ಅಮೆರಿಕ ಚಿತ್ರಗಳ ಸತ್ಯಜಿತ್‌ರೇ ಅವರ ಪ್ರತಿಧ್ವನಿಅರವಿಂದನ್‌ರ ತಂಪ್೧೯೩೬ರ ಮರಾಠಿ ಚಿತ್ರ ಸಂತ್ ತುಕಾರಾಮ್ ಮುಂತಾದ ಚಿತ್ರಗಳಿವೆಭಾರತೀಯ ಮಹಾನ್ ಚಿತ್ರಗಳನ್ನು ಆಯ್ಕೆ ಮಾಡುವಾಗ ಕನ್ನಡದ ಆರು ಚಿತ್ರಗಳ ಆಯ್ಕೆಯನ್ನು ಪ್ರಶ್ನಿಸಲಾಗುತ್ತಿದೆ.

ಸಮಕಾಲೀನ ಭಾರತೀಯ ಚಿತ್ರಗಳ ಪನೋರಮಾ ವಿಭಾಗದಲ್ಲಿರುವ ಹತ್ತು ಚಿತ್ರಗಳಲ್ಲಿ ಕಿಟ್ಟೆಲ್ ಕುರಿತ ಸಾಕ್ಷ ಚಿತ್ರ’ದ ವರ್ಡ್ ಎಂಡ್ ದ ಟೀಚರ್’, ‘ಅತ್ತಿಹಣ್ಣು ಮತ್ತುಕಣಜ’ ಮತ್ತು ‘ಹರಿವ ನದಿಗೆ ಮೈಯೆಲ್ಲಾ ಕಾಲು’ ಚಿತ್ರಗಳಿವೆಜನಪ್ರಿಯ ಚಿತ್ರಗಳ ಸ್ಪರ್ಧೆ ಈ ಬಾರಿ ಇಲ್ಲಅದರ ಬದಲುವಾಣಿಜ್ಯ ಮಂಡಳಿ ಆಯ್ಕೆ ಮಾಡಿರುವ ಕಳೆದ ವರ್ಷದ ಹತ್ತು ಜನಪ್ರಿಯ ಚಿತ್ರಗಳು ಪ್ರದರ್ಶನಕ್ಕಿವೆಅವು ಗಂಧದಗುಡಿ, 777 ಚಾರ್ಲಿಕೆಜಿಎಫ್ ಚಾಪ್ಟರ್ 2ವಿಕ್ರಾಂತ್ ರೋಣಕಾಂತಾರವೇದಗಾಳಿಪಟ 2ಹೆಡ್‌ಬುಷ್ಬೈ ಟು ಲವ್ ಮತ್ತು ತುಳು ಚಿತ್ರರಾಜ್ ಸೌಂಡ್ಸ್ – ಲೈಟ್ಸ್.

ಚಿತ್ರೋತ್ಸವದ ಸಿದ್ಧತೆ ತಡವಾಗಿ ಆರಂಭವಾಗಿರುವುದರಿಂದ ಚಿತ್ರಗಳ ಆಯ್ಕೆಗೂ ಸಾಕಷ್ಟು ಕಾಲಾವಕಾಶ ಇರಲಿಲ್ಲಏಷ್ಯಾ ವಿಭಾಗದ ಸ್ಪರ್ಧೆಗೆ ಸಾಕಷ್ಟು ಚಿತ್ರಗಳು ಬರಬೇಕಾದರೆಅದಕ್ಕೆ ಅರ್ಜಿ ಸಲ್ಲಿಸಲು ಪ್ರಕಟಣೆ ನೀಡಿ ಸಾಕಷ್ಟು ಕಾಲಾವಕಾಶ ಬೇಕಿತ್ತುಬಂದಿರುವ ಚಿತ್ರಗಳ ಸಂಖ್ಯೆ ಸಹಜವಾಗಿಯೇ ಕಡಿಮೆ ಇರಬೇಕುಕನ್ನಡದ ಮೂರು ಚಿತ್ರಗಳು ಏಷ್ಯಾ ವಿಭಾಗದಲ್ಲಿ ಸ್ಪರ್ಧೆಯಲ್ಲಿವೆಇನ್ಸಿಗ್ನಲ್ ಮ್ಯಾನ್ 1971 ಮತ್ತು ವಿರಾಟಪುರ ವಿರಾಗಿ ಈ ಚಿತ್ರಗಳುಭಾರತದ ಚಿತ್ರಗಳ ಸ್ಪರ್ಧೆಯಲ್ಲೂ ಅಷ್ಟೇಅಲ್ಲಿನ ಹದಿನಾಲ್ಕು ಚಿತ್ರಗಳಲ್ಲಿ ಆರು ಕರ್ನಾಟಕದವುಆರಾರಿರಾರೊಕೋಳಿ ಎಸ್ರುಅಣ್ಣಮಾವು ಬೇವುತನುಜಾ ಮತ್ತುಕೌಡಿ ಕಳಿ (ಕೊಡವಈ ಚಿತ್ರಗಳು.

ಕನ್ನಡ ಸಿನಿಮಾ ಸ್ಪರ್ಧೆಯಲ್ಲಿ 19 20 21ಗಂಧದಗುಡಿಗುರುಶಿಷ್ಯರುಹದಿನೇಳೆಂಟುಕನಕಮಾರ್ಗಕೊರಮ್ಮಕುಬುಸಮೇಡ್ ಇನ್ ಬೆಂಗಳೂರುನಲ್ಕೆನಾನು ಕುಸುಮಆರ್ಕೆಸ್ಟ್ರಾ ಮೈಸೂರುಫೋಟೋ ಚಿತ್ರಗಳಿವೆಈ ಬಾರಿ ಪ್ರಶಸ್ತಿ ಮೊತ್ತವನ್ನು ಏರಿಸಲಾಗಿದೆಯಲ್ಲದೆಸಾಧಕರೊಬ್ಬನ್ನು ಗುರುತಿಸಿ ಅವರಿಗೆ ವಿಶೇಷ ಪ್ರಶಸ್ತಿ ನೀಡುವುದಾಗಿ ಅಕಾಡೆಮಿಯ ಅಧ್ಯಕ್ಷ ಹಾಗೂ ಚಿತ್ರೋತ್ಸವ ನಿರ್ದೇಶಕರಾಗಿರುವ ಅಶೋಕ ಕಶ್ಯಪ್ ಹೇಳಿದ್ದಾರೆ.

 

ವಿವಿಧ ವಿಭಾಗಗಳಲ್ಲಿ ಕನ್ನಡದ ಚಿತ್ರಗಳ ಸಂಖ್ಯೆ ನಲವತ್ತಕ್ಕೂ ಹೆಚ್ಚಿವೆಸಾಮಾನ್ಯವಾಗಿ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸ್ಥಳೀಯ ಚಿತ್ರಗಳ ಪಾಲ್ಗೊಳ್ಳುವಿಕೆ ಇರುತ್ತದೆಆದರೆ ಇಷ್ಟೊಂದು ಚಿತ್ರಗಳು ಇರುವುದಿಲ್ಲ ಎನ್ನುತ್ತಾರೆಮಾನ್ಯತೆ ಪಡೆದ ಚಿತ್ರೋತ್ಸವಗಳ ಹಿನ್ನೆಲೆಮುನ್ನೆಲೆ ಬಲ್ಲವರು.

andolanait

Recent Posts

ಅಕ್ರಮ ಗಾಂಜಾ ಮಾರಾಟ : ಮಹಿಳೆ ಪೊಲೀಸ್ ವಶಕ್ಕೆ

ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…

52 mins ago

ಮತಗಳ್ಳತನದ ಹೋರಾಟದಲ್ಲಿ ರಾಜಕೀಯ ಉದ್ದೇಶವಿಲ್ಲ : ಡಿ.ಕೆ.ಶಿವಕುಮಾರ್

ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ…

2 hours ago

10 ವರ್ಷದ ಪ್ರೀತಿಗೆ ಮೋಸ,ಹಣವೂ ದೋಖಾ : ಬೇರೆ ಮದುವೆಗೆ ಮುಂದಾದ ಯುವಕನ ಮನೆಮುಂದೆ ಪ್ರಿಯತಮೆ ಗಲಾಟೆ

ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…

3 hours ago

ವರ್ಷಾಂತ್ಯಕ್ಕೂ ಸಫಾರಿ ಪುನಾರಂಭ ಸಾಧ್ಯತೆ ಕ್ಷೀಣ

ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…

4 hours ago

ಪ್ರತಿಭಟನೆ ಮಾಹಿತಿ ತಿಳಿದು ಕೆರೆಗೆ ನೀರು ತುಂಬಿಸಿದ ಅಧಿಕಾರಿಗಳು!

ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…

7 hours ago

ಓದುಗರ ಪತ್ರ | ರಸ್ತೆ ದುರಸ್ತಿ ಮಾಡಿ

ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…

7 hours ago