ರಾಂಚಿ: ಸಾಮಾನ್ಯವಾಗಿ ಮದುವೆಯ ದಿಬ್ಬಣ ನೋಡಿದ್ದೇವೆ. ಅಲಂಕಾರ ಮಾಡಿದ ಕಾರಿನಲ್ಲಿ ಅಥವಾ ಕುದುರೆಯೇರಿ ಮದುವೆ ಮೆರವಣಿಗೆಯಲ್ಲಿ ವರ ಮಂಟಪಕ್ಕೆ ಬರುತ್ತಾನೆ. ಆದರೆ ಇಲ್ಲೊಬ ವರ ವಿಭಿನ್ನವಾಗಿ ಮಂಟಪಕ್ಕೆ ಬಂದಿರುವುದು ಸುದ್ದಿಯಾಗಿದೆ.
ಜಾರ್ಖಂಡ್ ನ ರಾಂಚಿ ಮೂಲದ ರಾಜಾ ಕೃಷ್ಣ ಮಹತೋ ವಿವಾಹ ಇತ್ತೀಚೆಗೆ ನೆರವೇರಿದೆ. ವರ ರಾಜಾ ಕೃಷ್ಣ ಮಹತೋ ಮಂಟಪಕ್ಕೆ ಬಂದಿದ್ದಾರೆ. ಕಾರು ಅಥವಾ ಕುದುರೆಯಲ್ಲಿ ಬಂದಿಲ್ಲ. ಬದಲಾಗಿ ಜೆಸಿಬಿಯಲ್ಲಿ ಬಂದಿದ್ದಾರೆ.!
ವೃತ್ತಿಯಲ್ಲಿ ವಾಹನಗಳಿಗೆ ಹೂವು ಡೆಕೋರೇಟರ್ ಮಾಡುವ ಕಾಯಕವನ್ನು ಮಾಡುವ ರಾಜಾ ಕೃಷ್ಣ ಮಹತೋ ಅವರು ತನ್ನ ಮದುವೆಯ ಮೆರವಣಿಗೆ ಸಾಗಲು ಜೆಸಿಬಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಾರಿನ ಹೊರ ಭಾಗದಲ್ಲಿ ಹೇಗೆ ಹೂವುಗಳನ್ನು ಅಲಂಕಾರ ಮಾಡುತ್ತಾರೋ ಹಾಗೆಯೇ ಜೆಸಿಬಿಗೆ ಹೂವಿನ ಅಲಂಕಾರವನ್ನು ಮಾಡಿ ವರನ ಉಡುಗೆ ತೊಟ್ಟು ಮಂಟಪಕ್ಕೆ ಬಂದಿದ್ದಾರೆ.
ಮದುವೆಯ ಬಳಿಕ ಪತ್ನಿಯನ್ನು ಅಲಂಕೃತ ಜೆಸಿಬಿಯಲ್ಲಿ ಕೂರಿಸಿಕೊಂಡು ಬಂದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…