ಎಡಿಟೋರಿಯಲ್

ಹೊಸ ಸರ್ಕಾರದಿಂದ ಕಾಯಕಲ್ಪದ ನಿರೀಕ್ಷೆಯಲ್ಲಿ ಕನ್ನಡ ಚಿತ್ರೋದ್ಯಮ

ಹೊಸ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಿದೆಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೆ ಮಂಡಿಸಿದ ಮುಂಗಡ ಪತ್ರಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಒಂದಿಲ್ಲೊಂದು ಕೊಡುಗೆ ನೀಡಿದ್ದಾರೆಕನ್ನಡ ಚಿತ್ರಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಅವರ ಅವಧಿಯಲ್ಲಾಯಿತು (ಈಗ ಜಿಎಸ್‌ಟಿ ಜಾರಿಗೆ ಬಂದ ನಂತರ ಅದಿಲ್ಲ). ಪರಭಾಷಾ ಚಿತ್ರಗಳಿಗೆ ಮೊದಲು ಇದ್ದ ಶೇ.110ನ್ನು ಶೇ.70ಕ್ಕೆ ಇಳಿಸಿನಂತರ ಶೇ.40ಕ್ಕೆ ಇಳಿಸಲಾಯಿತುಪ್ರದರ್ಶನ ಕಂಡ ಪರಭಾಷಾ ಚಿತ್ರಗಳ ಮನರಂಜನಾ ತೆರಿಗೆ ಸರಿಯಾಗಿ ಪಾವತಿ ಆಗುತ್ತಿಲ್ಲಪರಭಾಷಾ ಚಿತ್ರಗಳನ್ನು ಪ್ರದರ್ಶಿಸಿಕನ್ನಡ ಚಿತ್ರಗಳನ್ನು ಪ್ರದರ್ಶಿಸಿದ್ದಾಗಿ ಬಹುತೇಕ ಈ ಚಿತ್ರಮಂದಿರಗಳು ವರದಿಕೊಟ್ಟುಸಂಗ್ರಹಿಸಿದ ತೆರಿಗೆಯನ್ನು ತಮ್ಮಲ್ಲೇ ಇರಿಸಿಕೊಳ್ಳುತ್ತವೆ ಎಂಬುದಾಗಿ ವಿಧಾನಮಂಡಲದ ವಿಷಯ ಸಮಿತಿ ವರದಿ ನೀಡಿದ್ದನ್ನು ಗಮನದಲ್ಲಿಟ್ಟುಕೊಂಡು ತೆರಿಗೆಯನ್ನೇ ಇಳಿಸಿದ್ದರು.

ಕನ್ನಡ ಚಿತ್ರರಂಗದ ವಜ್ರಮಹೋತ್ಸವ ವರ್ಷ (1993-34)ದಲ್ಲಿ ಹಿರಿಯ ಪತ್ರಕರ್ತ ವಿ.ಎನ್.ಸುಬ್ಬರಾವ್ ಅಧ್ಯಕ್ಷತೆಯ ತಜ್ಞರ ಸಮಿತಿಕನ್ನಡ ಚಿತ್ರರಂಗದ ಕಾಯಕಲ್ಪಕ್ಕಾಗಿ ಸಮಗ್ರ ಅಧ್ಯಯನ ನಡೆಸಿ ನೀಡಿದ ಶಿಫಾರಸುಗಳಲ್ಲಿ ಚಲನಚಿತ್ರ ಅಕಾಡೆಮಿಯ ಸ್ಥಾಪನೆಯೂ ಸೇರಿತ್ತುಸಿದ್ದರಾಮಯ್ಯ ಅವರು 1995-96ರ ಮುಂಗಡಪತ್ರದಲ್ಲಿ ಅಕಾಡೆಮಿ ಸ್ಥಾಪಿಸುವುದಾಗಿ ಹೇಳಿದ್ದರುಆದರೆ ಅದರ ಅಧ್ಯಕ್ಷರು ಯಾರು ಆಗಬೇಕು ಎಂಬ ಚರ್ಚೆಯ ಕಾರಣದಿಂದ ಅದು ನನೆಗುದಿಗೆ ಬಿತ್ತುನಂತರ ಚಿತ್ರರಂಗದ ವಜ್ರಮಹೋತ್ಸವದ ವೇಳೆಗೆ ಅಕಾಡೆಮಿಯ ಸ್ಥಾಪನೆ ಆಯಿತು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಕಳೆದ ಅವಧಿಯಲ್ಲಿ ಮೈಸೂರಿನ ಇಮ್ಮಾವಿನಲ್ಲಿ 110 ಎಕರೆ ಜಮೀನನ್ನು 2015ರಲ್ಲೇ ಕಾಯ್ದಿರಿಸಲಾಗಿತ್ತುಅವರ ಅವಧಿ ಮುಗಿಯುವುದರ ಒಳಗೆ ಅಲ್ಲಿ ಚಿತ್ರನಗರಿಗೆ ಶಂಕುಸ್ಥಾಪನೆ ಮಾಡಲಾಗುವುದು ಎನ್ನುವ ಮಾತೂ ಇತ್ತುಅದಾಗಲಿಲ್ಲಕರ್ನಾಟಕದ ಚಿತ್ರನಗರಿ ಸ್ಥಾಪನೆಯ ಯೋಜನೆಗೆ ಐವತ್ತಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇದೆ. 1972ರಲ್ಲೇಇದಕ್ಕಾಗಿ ಬೆಂಗಳೂರಿನ ಹೆಸರಘಟ್ಟ ಬಳಿ ಕಾದಿರಿಸಿದ ಜಾಗದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ದೇವರಾಜ ಅರಸು ಅವರು ಚಿತ್ರನಗರಿಗೆ ಅಡಿಗಲ್ಲು ಹಾಕಿದ್ದರುಮೂರು ಹಂತಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವ ನೀಲಿನಕ್ಷೆಯೂ ಸಿದ್ಧ ವಾಗಿತ್ತುಕರ್ನಾಟಕ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮದ ಮೇಲ್ವಿಚಾರಣೆ ಯಲ್ಲಿ ಇದು ಕಾರ್ಯಸಾಧ್ಯವಾಗಬೇಕಿತ್ತು.

ಇಮ್ಮಾವಿನಲ್ಲಿ ಶಂಕುಸ್ಥಾಪನೆಯನ್ನು ಮುಂದೆ ಬಂದ ಸರ್ಕಾರ ಮಾಡುತ್ತದೆ ಎನ್ನುವ ನಂಬಿಕೆಯನ್ನು ಹುಸಿ ಮಾಡಿದ್ದುನಂತರ ಮುಖ್ಯಮಂತ್ರಿಯಾದ ಎಚ್.ಡಿ.ಕುಮಾರಸ್ವಾಮಿ ಅವರ ಯೋಚನೆಗಳುಮೈಸೂರಿನಲ್ಲಿ ಡಿಸ್ನಿ ಲ್ಯಾಂಡ್ ಮಾದರಿಯ ಮನರಂಜನಾ ಪಾರ್ಕ್ ಸಹಸ್ರಾರು ಕೋಟಿ ರೂವೆಚ್ಚದಲ್ಲಿ ತಲೆ ಎತ್ತಲಿದೆ ಎಂದರು ಅವರುಚಿತ್ರನಗರಿಯನ್ನು ಮೈಸೂರಿನ ಬದಲು ರಾಮನಗರದಲ್ಲಿ ಸ್ಥಾಪಿಸುವುದಾಗಿ ಹೇಳಿದರುಅಲ್ಲಿ ಚಲನಚಿತ್ರ ವಿಶ್ವವಿದ್ಯಾನಿಲಯ ಕೂಡ ಆರಂಭಿಸುವ ಮಾತುಗಳನ್ನಾಡಿದರು.

ಮಾಧ್ಯಮಗಳಿಗೆ ಒಳ್ಳೆಯ ವಿಷಯಬೆಂಗಳೂರುಮೈಸೂರುಗಳಿಂದ ಈಗ ರಾಮನಗರದತ್ತ ಹೊರಳಿತ್ತು ಚಿತ್ರನಗರಿಯ ಯೋಜನೆಕುಮಾರ ಸ್ವಾಮಿಯವರ ನಂತರ ಬಂದ ಯಡಿಯೂರಪ್ಪ ಅವರ ಗಮನವೂ ಈ ಯೋಜನೆಯತ್ತ ಹೆಚ್ಚು ಇದ್ದಂತೆ ಇರಲಿಲ್ಲಸಿನಿಮಾ ಮೊದಲ ಆದ್ಯತೆ ಏನೂ ಅಲ್ಲವಲ್ಲಅದೂ ಅಲ್ಲದೆವಿಶ್ವವನ್ನೇ ಕಾಡಿದ ಕೊರೊನಾದ ಕಾರಣ ಆದ್ಯತೆಗಳು ಬದಲಾದವುಕಳೆದ ಅವಧಿಯಲ್ಲಿ (2018-23ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಆದ ಕೆಲಸಗಳು ಕಡಿಮೆ. ‘ಇಲ್ಲ’ ಎಂದರೂ ತಪ್ಪೇನಿಲ್ಲ.

ಕನ್ನಡ ಮತ್ತು ಇಲ್ಲಿನ ಪ್ರಾದೇಶಿಕ ಚಿತ್ರಗಳಿಗೆ ತೆರಿಗೆ ವಿನಾಯಿತಿಸಹಾಯ ಧನ ನೀಡಿಕೆವಾರ್ಷಿಕ ಪ್ರಶಸ್ತಿಗಳು ಇವು ಸರ್ಕಾರದಿಂದ ಉದ್ಯಮಕ್ಕೆ ಸಿಗುವ ಸೌಲಭ್ಯಗಳುಹೊಸ ಸರ್ಕಾರ ಅಧಿಕಾರಕ್ಕೆ ಬರುವ ವೇಳೆಗಾಗಲೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿಜಾರಿಗೆ ಬಂದ ಕಾರಣದಿಂದ ಕನ್ನಡ ಚಿತ್ರಗಳಿಗೆ ಸಿಗುತ್ತಿದ್ದ ತೆರಿಗೆ ವಿನಾಯಿತಿ ಇಲ್ಲದಾಯಿತುಕನ್ನಡ ಚಿತ್ರರಂಗಕ್ಕೆ ನೆರವಾಗಲು ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಬಹುದಿತ್ತುಈ ನಿಟ್ಟಿನಲ್ಲಿ ಉದ್ಯಮದ ಬೇಡಿಕೆ ಇದ್ದರೂ ಅದು ಈಡೇರಲಿಲ್ಲಕೆಲವು ರಾಜ್ಯಗಳಲ್ಲಿ ಮನರಂಜನೋದ್ಯಮ ನೀಡುವ ಈ ತೆರಿಗೆಯನ್ನು ಪುನಾ ಉದ್ಯಮಕ್ಕೆ ಹಿಂದಿರುಗಿಸಲಾಗುತ್ತಿದೆ ಎನ್ನುತ್ತಿವೆ ಮೂಲಗಳು.

2018ರ ಸಾಲಿನ ಪ್ರಶಸ್ತಿಗಳನ್ನು ನಿರ್ಧರಿಸಲಾಗಿದೆಆದರೆ ಅದಕ್ಕೆ ತಡೆಯಾಜ್ಞೆ ಇದೆಸ್ಪರ್ಧೆಯಲ್ಲಿರುವ ಚಿತ್ರಗಳಿಗೆ ಸಂಬಂಧಪಟ್ಟವರು ಪ್ರಶಸ್ತಿ ಸಲಹಾ ಸಮಿತಿಯಲ್ಲಿ ಇರುವಂತಿಲ್ಲ ಎನ್ನುವ ನಿಯಮವಿದೆಆದರೆ ಈ ಸಾಲಿನ ಸಮಿತಿ ಅದಕ್ಕೆ ಅಪವಾದವಾದ್ದರಿಂದ ಅದು ನ್ಯಾಯಾಲಯದ ಮೆಟ್ಟಿಲೇರಿದೆಆ ವರ್ಷದ ಸಹಾಯಧನಕ್ಕೆ ಚಿತ್ರಗಳ ಆಯ್ಕೆಯಾಗಿ ಕೆಲವರಿಗೆ ಅದನ್ನು ನೀಡಲಾಗಿದೆಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಆಗಿದೆ ಎನ್ನಲಾದ ಪ್ರಮಾದವೊಂದು ಇಲ್ಲಿಗೆ ತಡೆಯಾಗಿದೆ.

2019, 2020 ಮತ್ತು 2021ರ ಸಾಲಿನ ಸಹಾಯಧನಕ್ಕೆ ಚಿತ್ರಗಳ ಆಯ್ಕೆ ಆಗಬೇಕಾಗಿದೆಈ ಸಾಲಿನ ಪ್ರಶಸ್ತಿಗಳು ಕೂಡ. 2022ರ ಸಾಲಿಗೆ ಪ್ರಶಸ್ತಿ ಮತ್ತು ಸಹಾಯಧನಕ್ಕಾಗಿ ಅರ್ಜಿಗಳನ್ನು ಇನ್ನಷ್ಟೇ ಕರೆಯಬೇಕಾಗಿದೆಒಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕೆ ಈ ಸರ್ಕಾರದಿಂದ ಕಾಯಕಲ್ಪವಾಗಲಿದೆ ಎನ್ನುವ ನಿರೀಕ್ಷೆ ಉದ್ಯಮದ್ದು.

ಹ್ಞಾಂಮುಖ್ಯಮಂತ್ರಿ ಸಿದ್ದರಾಮಯ್ಯನವರು ಲಂಕೇಶರ ‘ಎಲ್ಲಿಂದಲೋ ಬಂದವರು’ ಚಿತ್ರದಲ್ಲಿ ಕಾಣಿಸಿಕೊಂಡದ್ದನ್ನು ಆ ಚಿತ್ರದ ನಿರ್ಮಾಣದಲ್ಲಿ ಜೊತೆಗಿದ್ದ ಮೋಹನ್ ಕುಮಾರ್ ಕೊಂಡಜ್ಜಿ ನೆನಪಿಸಿಕೊಳ್ಳುತ್ತಾರೆಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಸಿನಿಮಾ ನಂಟಿದೆಅವರು ಪ್ರದರ್ಶಕರುಆಳುವ ಪಕ್ಷದಲ್ಲಿರುವ ಶಾಸಕರಲ್ಲಿ ಮಧು ಬಂಗಾರಪ್ಪವನರು ಚಿತ್ರೋದ್ಯಮಿನಟನಿರ್ಮಾಪಕಸ್ಟುಡಿಯೋ ಹಾಗೂ ಆಡಿಯೋ ಸಂಸ್ಥೆಯ ಮಾಲೀಕರುಅವರಿಗೆ ಚಿತ್ರರಂಗದ ಬೇಕುಬೇಡಗಳ ಬಗ್ಗೆ ಹೆಚ್ಚು ಅರಿವುಅನುಭವ ಇದೆವಿರೋಧ ಪಕ್ಷಗಳಲ್ಲಿ ಚಿತ್ರೋದ್ಯಮಿಯಾಗಿಯೇ ವೃತ್ತಿಜೀವನ ಆರಂಭಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದ್ದಾರೆ.

ಅಂಬರೀಶ್ ಜನ್ಮದಿನೋತ್ಸವದ ಸಂದರ್ಭಕ್ಕೆ ಅವರ ಅಭಿನಯದ ‘ಅಂತ’ ಚಿತ್ರಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ ಪುನಾ ಬಿಡುಗಡೆ ಮಾಡಲಾಗುತ್ತಿದೆಈ ಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆತ್ಮೀಯರಾಗಿ ರುವ ಎಸ್.ವಿ.ರಾಜೇಂದ್ರ ಸಿಂಗ್ (ಬಾಬುನಿರ್ದೇಶಿಸಿದ್ದಾರೆಚಿತ್ರದ ಬಿಡುಗಡೆಯ ಕುರಿತ ವಿವರ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿಅವರ ಮಾತುಗಳು ಹೊರಳಿದ್ದು ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಯ ಕುರಿತಂತೆ.

ಅದಕ್ಕೆ ಕಾರಣವೂ ಇದೆ ಎನ್ನಿಕಳೆದ ಬಾರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ಈ ಜಾಗಸಿದ್ಧತೆಗಳ ಹಿಂದೆ ಬಾಬು ಅವರೂ ಬೆನ್ನು ಹತ್ತಿದ್ದರುಅಷ್ಟೇ ಅಲ್ಲದೆಅವರು ಆಗ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದರುಕೆಲವು ತಿಂಗಳ ಹಿಂದೆಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಚಿತ್ರರಂಗದ ಗಣ್ಯರು ಭೇಟಿಯಾಗಿಚಿತ್ರೋದ್ಯಮಕ್ಕೆ ಅಗತ್ಯವಾಗಿ ಆಗಬೇಕಾದ ಕೆಲಸಗಳನ್ನು ಮಾಡುವಂತೆ ಕೋರಿದ್ದರುಮೈಸೂರಿನಲ್ಲಿ ಚಿತ್ರನಗರಿಯ ಕುರಿತಂತೆ ಪ್ರಸ್ತಾಪಿಸಿದಾಗಇನ್ಯಾರೋ ಬಿಡದಿಯ ಬಳಿ ಚಿತ್ರನಗರಿ ಸ್ಥಾಪಿಸಲು ಯೋಜನೆ ಹಾಕಿರುವ ವರ್ತಮಾನವನ್ನೂ ಹೇಳಿದರುಒಂದು ರಾಜ್ಯದಲ್ಲಿ ಒಂದೇ ಚಿತ್ರನಗರಿ ಇರಬೇಕು ಎಂದೇನೂ ಇಲ್ಲಕೆಲವು ರಾಜ್ಯಗಳಲ್ಲಿ ಎರಡೆರಡು ಚಿತ್ರನಗರಿಗಳಿವೆ.

ಕೊರೊನಾ ನಂತರ ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆಏಕಪರದೆಯ ಚಿತ್ರಮಂದಿರಗಳು ಮುಚ್ಚತೊಡಗಿವೆ. 1990ರ ದಶಕದ ಕೊನೆಯಲ್ಲಿ 1250ಕ್ಕೂ ಹೆಚ್ಚಿದ್ದ ಈ ಚಿತ್ರಮಂದಿರಗಳ ಸಂಖ್ಯೆ ಈಗ 500ರ ಆಜುಬಾಜಿನಲ್ಲಿದೆಮಲ್ಟಿಪ್ಲೆಕ್ಸ್‌ಗಳ ಪ್ರವೇಶದರ ಮಧ್ಯಮಕೆಳಮಧ್ಯಮ ವರ್ಗದ ಪ್ರೇಕ್ಷಕರ ಪಾಲಿಗೆ ಎಟಕುವಂತಿಲ್ಲಒಟಿಟಿ ಮತ್ತಿತರ ತಾಣಗಳು ಸದಭಿರುಚಿಯ ಕನ್ನಡ ಚಿತ್ರಗಳ ಪಾಲಿಗೆ ವರವಾಗಿಲ್ಲ.

ಚಿತ್ರನಗರಿಯ ಯೋಜನೆಯನ್ನು ಮೊದಲು ಕನಸಿದ್ದು ಮೈಸೂರು ರಾಜ್ಯ. 1972ರಲ್ಲಿ. 1973 ಮೈಸೂರು ರಾಜ್ಯದ ಹೆಸರು ಕರ್ನಾಟಕ ಎಂದಾಯಿತಷ್ಟೇಕರ್ನಾಟಕ ರಾಜ್ಯವಾಗಿ ಇದೀಗ ಸುವರ್ಣ ಮಹೋತ್ಸವ ವರ್ಷಐದು ವರ್ಷಗಳಿಗೆ ಎಂದು ಪ್ರಕಟವಾದ ‘ಕರ್ನಾಟಕ ಚಲನಚಿತ್ರ ನೀತಿ -2011, 2016ರ ವೇಳೆಗೆ ಬದಲಾಗಬೇಕಾಗಿತ್ತು.

ಪರಿಷ್ಕೃತ ನೀತಿಯ ಕರಡು ಆಗಲೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬಳಿ ಇದೆ ಎನ್ನಲಾಗಿದ್ದುಒಂದಷ್ಟು ಬದಲಾವಣೆಗಳೊಂದಿಗೆ ಅದು ಜಾರಿಗೆ ಬರಬೇಕಾಗಿದೆಚಿತ್ರನಗರಿಚಿತ್ರಮಂದಿರಗಳ ನಿರ್ಮಾಣದಂತಹ ಯೋಜನೆಗಳನ್ನು ಸರ್ಕಾರವೇ ಕೈಗೆತ್ತಿಕೊಳ್ಳುವುದಾದರೆ ಪ್ರತ್ಯೇಕ ನಿಗಮದ ಸ್ಥಾಪನೆ ಆಗಬೇಕು ಎನ್ನುತ್ತಾರೆ ತಜ್ಞರುಈಗ ಬಹುತೇಕ ರಾಜ್ಯಗಳಲ್ಲಿ ಆಯಾ ರಾಜ್ಯ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮಗಳಿವೆಚಲನಚಿತ್ರ ಅಕಾಡೆಮಿ ಮತ್ತು ಚಲನಚಿತ್ರ ಅಭಿವೃದ್ಧಿ ನಿಗಮ ಎರಡೂ ನೆರೆಯ ಕೇರಳದಲ್ಲಿ ಇವೆಅಲ್ಲಿ ಚಿತ್ರನಗರಿ ನಿರ್ವಹಣೆಚಿತ್ರಮಂದಿರಗಳ ನಿರ್ಮಾಣ ಮುಂತಾದ ಜವಾಬ್ದಾರಿ ನಿಗಮದ್ದಾದರೆಅಕಾಡೆಮಿಕ್ ಕೆಲಸಗಳನ್ನಷ್ಟೇ ಅಕಾಡೆಮಿ ನೋಡಿಕೊಳ್ಳುತ್ತಿದೆ.

 

ಸರ್ಕಾರ ಮೂವತ್ತು ವರ್ಷಗಳ ಹಿಂದೆ ಮಾಡಿದಂತೆ ಚಲನಚಿತ್ರ ರಂಗದ ಪರಿಣತರ ಸಮಿತಿಯೊಂದನ್ನು ರಚಿಸಿಅದರ ಮೂಲಕ ಕನ್ನಡ ಚಿತ್ರೋದ್ಯಮದ ಇಂದಿನ ಬೇಕುಬೇಡಗಳ ಕುರಿತು ಸಮಗ್ರ ಅಧ್ಯಯನ ಮಾಡಿಅದರ ಶಿಫಾರಸಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬಹುದು ಎನ್ನುವುದು ಸಂಬಂಧಪಟ್ಟವರ ಸಲಹೆ.

andolanait

Share
Published by
andolanait

Recent Posts

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

1 min ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

12 mins ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

30 mins ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

53 mins ago

ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಹಳೆ ಪ್ರಕರಣಕ್ಕೆ ಹೊಸ ಎನ್‌ಸಿಆರ್‌

ಬೆಂಗಳೂರು: ನಟ ದರ್ಶನ್‌ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಹಳೆ…

2 hours ago

ಓದುಗರ ಪತ್ರ: ಮಹಿಳಾ ಅಧಿಕಾರಿಗಳಿಗೆ ಅಭಿನಂದನೆಗಳು

ಚಾಮರಾಜನಗರದಲ್ಲಿ ಅಕ್ಟೋಬರ್ ೭ರಿಂದ ಅ. ೯ರವರೆಗೆ ಆಯೋಜಿಸಿದ್ದ ‘ಚೆಲುವ ಚಾಮರಾಜನಗರ ದಸರಾ’ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದರಿಂದ…

3 hours ago