ಎಡಿಟೋರಿಯಲ್

ಇಬ್ಬರು ವಿಜ್ಞಾನಿಗಳ ಸಾವಿಗೆ ಕಾರಣವಾದ ‘ಡೆಮನ್ ಕೋರ್’

ಕಾರ್ತಿಕ್ ಕೃಷ್ಣ

ಕಳೆದ ಶತಮಾನದ ದಾರುಣ ಘಟನೆಗಳಲ್ಲಿ ತಟ್ಟನೆ ನೆನಪಾಗುವುದು ೧೯೪೫ರಲ್ಲಿ ನಡೆದ ೨ನೇ ಜಾಗತಿಕ ಸಮರದಲ್ಲಿ ಅಮೆರಿಕ ದೇಶವು, ಜಪಾನಿನ ಮೇಲೆ ನಡೆಸಿದ ಅಣುಬಾಂಬ್ ದಾಳಿ. ಆ.೬ರ ಸೋಮವಾರ ಹಿರೋಷಿಮಾ ಮೇಲೆ ಎರಗಿದ ‘ಲಿಟ್ಲ್ ಬಾಯ್’, ಆ.೯ರಂದು ನಾಗಸಾಕಿಯ ಮೇಲೆ ಅಪ್ಪಳಿಸಿದ ‘ಫ್ಯಾಟ್ ಮ್ಯಾನ್’ ಎಂಬ ಅಣುಬಾಂಬ್‌ಗಳು ಮನುಕುಲದ ಬರ್ಬರ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಬಾಂಬ್ ದಾಳಿಯ ನಂತರದ ೨ರಿಂದ ೪ ತಿಂಗಳುಗಳ ಅವಽಯಲ್ಲಿ, ಹಿರೋಷಿಮಾದಲ್ಲಿ ೯೦,೦೦೦ ರಿಂದ ೧,೬೬,೦೦೦ ಜನರು ಅಸುನೀಗಿದರೆ, ನಾಗಸಾಕಿಯಲ್ಲಿ ೬೦ ಸಾವಿರದಿಂದ ೮೦ ಸಾವಿರ ಜನರು ಕೊನೆಯುಸಿರೆಳೆದರು. ಹಿರೋಷಿಮಾದ ಪ್ರಿಫೆಕ್ಟಿನ ಆಡಳಿತ ಪ್ರಾಂತ್ಯದ ಆರೋಗ್ಯ ಇಲಾಖೆಯ ಅಂದಾಜಿನ ಪ್ರಕಾರ, ಸ್ಛೋಟದ ದಿನ ಸತ್ತವರ ಪೈಕಿ ಶೇ.೬೦ರಷ್ಟು ಜನರ ಸಾವು, ಉರಿ ಅಥವಾ ಜ್ವಾಲೆಯ ಸುಟ್ಟಗಾಯಗಳಿಂದ ಸಂಭವಿಸಿತ್ತಂತೆ!, ಮತ್ತೆ ಕೆಲ ತಿಂಗಳುಗಳ ಅವಽಯಲ್ಲಿ ವಿಕಿರಣದ ಪ್ರಭಾವದಿಂದ ಬೃಹತ್ ಸಂಖ್ಯೆಯ ಜನರು ಕಣ್ಮುಚ್ಚಿದರು. ಜಪಾನ್ ಶರಣಾಗದಿದ್ದರೆ ಇನ್ನೊಂದು ಭೀಕರ ಅಣುಬಾಂಬ್ ದಾಳಿ ನಡೆಸಲು ಅಮೆರಿಕ ಸಿದ್ಧತೆ ನಡೆಸಿತ್ತು. ಅದಕ್ಕಾಗಿ ‘ರೂಫಸ್’ ಎಂಬ ಹೆಸರಿನ ಪ್ಲುಟೋನಿಯಂ ಕೋರ್’ ತಯಾರಾಗಿತ್ತು. ಜಪಾನ್ ಸೋಲೊಪ್ಪಿಕೊಂಡಿದ್ದರಿಂದ ರೂಫಸ್‌ನ ಬಳಕೆಯಾಗಲಿಲ್ಲ. ಆದರೆ, ಮುಂದೆ ಅದರಿಂದ ನಡೆದ ಅವಘಡಗಳಿಂದ ಅದು ‘ಡೆಮನ್ ಕೋರ್’ ಎಂದೇ ಇತಿಹಾಸದ ಪುಟ ಸೇರಿತು.

‘ಡೆಮನ್ ಕೋರ್’ ಎಂಬುದು ಗೋಳಾಕಾರದ ೬.೨ ಕೆಜಿ ತೂಕದ ಪ್ಲುಟೋನಿಯಮ್‌ನ ಸಬ್‌ಕ್ರಿಟಿಕಲ್ ದ್ರವ್ಯರಾಶಿ. ಅಮೆರಿಕ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಯ ‘ಮ್ಯಾನ್‌ಹ್ಯಾಟನ್ ಪ್ರಾಜೆಕ್ಟ್’ನಿಂದ ೨ನೇ ವಿಶ್ವಯುದ್ಧದ ಸಮಯದಲ್ಲಿ ತಯಾರಿಸಲ್ಪಟ್ಟ ಅಣುಬಾಂಬಿನ ತಿರುಳು. ಯಾವಾಗ ಜಪಾನ್ ಶರಣಾಯಿತೋ, ಈ ಕೋರ್ ಅನ್ನು ವಿಜ್ಞಾನಿಗಳ ಪರೀಕ್ಷೆ ಮತ್ತು ನಂತರದ ಬಳಕೆಗಾಗಿ ಲಾಸ್ ಅಲಾಮೋಸ್‌ನಲ್ಲಿ ಉಳಿಸಿಕೊಳ್ಳಲಾಯಿತು. ಅದನ್ನು ತಯಾರಿಸಿದ್ದು ಜನರ ಮಾರಣಹೋಮಕ್ಕಾಗಿ, ಉದ್ದೇಶ ಈಡೇರಲೇಬೇಕಲ್ಲ! ಆಗಸ್ಟ್ ೨೧, ೧೯೪೫ ಮತ್ತು ಮೇ ೨೧, ೧೯೪೬ ರಂದು ಲಾಸ್ ಅಲಾಮೋಸ್ ಪ್ರಯೋಗಾಲಯದಲ್ಲಿ ನಡೆದ ೨ ಗಂಭೀರ ಅಪಘಾತಗಳಲ್ಲಿ ಅದರ ಸೃಷ್ಟಿಯ ಉದ್ದೇಶ ಈಡೇರಿತು. ಆದರೆ ಇಲ್ಲಿ ಸಾವಿಗೀಡಾಗಿದ್ದು ಏನೂ ಅರಿಯದ ಮುಗ್ಧರಲ್ಲ, ಬದಲಾಗಿ ಅದರ ಮೇಲೆ ಪ್ರಯೋಗ ನಡೆಸುತ್ತಿದ್ದ ನುರಿತ ವಿಜ್ಞಾನಿಗಳು!

ವಿಜ್ಞಾನದ ಮೇಲಿನ ಆಸಕ್ತಿಯೇ ಈ ಸಾವುಗಳಿಗೆ ಕಾರಣ. ವಿಜ್ಞಾನಿಗಳಿಗೆ ಪರಮಾಣು ವಸ್ತುಗಳ ಮಿತಿಗಳನ್ನು ಪರೀಕ್ಷಿಸುವ ಹೆಬ್ಬಯಕೆ ಬಹಳವಾಗಿತ್ತು. ಪರಮಾಣು ಸ್ಛೋಟದ ಸಮಯದಲ್ಲಿ ಪರಮಾಣು ಬಾಂಬ್‌ನ ಕೋರ್ ನಿರ್ಣಾಯಕವಾಗಿರುವುದಾಗಿ ಅವರು ತಿಳಿದು ಸಬ್‌ಕ್ರಿಟಿಕಲ್ ವಸ್ತು ಮತ್ತು ವಿಕಿರಣಶೀಲ ನಿರ್ಣಾಯಕ ಸ್ಥಿತಿಯ ನಡುವಿನ ಮಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಬಯಸಿದ್ದರು. ಇಂತಹ ಸಮಯದಲ್ಲಿ ಅವರಿಗೆ ಸೋಟಿಸದೇ ಉಳಿದ ‘ರೂಫಸ್’, ಈ ಪರೀಕ್ಷೆಗಳನ್ನು ನಡೆಸಲು ಯೋಗ್ಯವೆನಿಸಿತೇನೋ! ಅಂತಹ ವಿಮರ್ಶಾತ್ಮಕ ಪ್ರಯೋಗಗಳು ಅಪಾಯಕಾರಿ ಎಂದು ಖ್ಯಾತ ಸೈದ್ಧಾಂತಿಕ ಭೌತಶಾಸ್ತ್ರಜ್ಞ ರಿಚರ್ಡ್ ಪೆಯ್ನ್ ರನ್ ಎಚ್ಚರಿಸಿದ್ದರೂ ಕೂಡ ‘ರೂಫಸ್’ನ ಒಳ ಹೊರಗನ್ನು ಪರೀಕ್ಷಿಸಲು ಧುಮುಕಿಯೇ ಬಿಟ್ಟರು. ಆದರೂ ‘ವಿಜ್ಞಾನ ಕೌತುಕ’ ಆ ವಿಜ್ಞಾನಿಗಳನ್ನು ವೈಜ್ಞಾನಿಕ ಪ್ರಯೋಗಗಳಿಗೆ ಪ್ರೇರೇಪಿಸಿತ್ತು. -ಯ್ನ್‌ರನ್ ಹೇಳಿದಂತೆಯೇ, ನಿದ್ದೆಯಿಂದೆದ್ದ ರೂಫಸ್, ಲಾಸ್ ಅಲಾಮೋಸ್ ರಾಷ್ಟ್ರೀಯ ಪ್ರಯೋಗಾಲಯದಲ್ಲಿ ಹ್ಯಾರಿ ಡಾಗ್ಲಿಯನ್ ಹಾಗೂ ಲೂಯಿಸ್ ಸ್ಲೋಟಿನ್ ಎಂಬ ಇಬ್ಬರು ವಿಜ್ಞಾನಿಗಳನ್ನು ಕಬಳಿಸಿಬಿಟ್ಟಿತ್ತು!

ಆ.೨೧, ೧೯೪೫ ರಂದು, ಜಪಾನ್ ಶರಣಾಗುವುದಾಗಿ ಹೇಳಿದ ನಂತರ, ಲಾಸ್ ಅಲಾಮೋಸ್ ಭೌತಶಾಸ್ತ್ರಜ್ಞ ಹ್ಯಾರಿ ಡಾಗ್ಲಿಯನ್ ‘bಛಿಞಟ್ಞ ಟ್ಟಛಿ’ ನ ಮೇಲೆ ವಿಮರ್ಶಾತ್ಮಕ ಪ್ರಯೋಗ ನಡೆಸಲು ಶುರು ಮಾಡಿದರು. ‘ಸೈನ್ಸ್ ಅಲರ್ಟ್’ ಪ್ರಕಾರ, ಸುರಕ್ಷತಾ ಪ್ರೋಟೋಕಾಲ್‌ಗಳನ್ನು ನಿರ್ಲಕ್ಷಿಸಿದ ಪರಿಣಾಮ ಅವರು ಜೀವ ಕಳೆದುಕೊಳ್ಳಬೇಕಾಯಿತು. ಡಾಗ್ಲಿಯನ್ ಅವರ ಪ್ರಯೋಗದಲ್ಲಿ ಟಂಗ್‌ಸ್ಟನ್ ಕಾರ್ಬೈಡ್‌ನಿಂದ ಮಾಡಿದ ಇಟ್ಟಿಗೆಗಳಿಂದ ‘bಛಿಞಟ್ಞ ಟ್ಟಛಿ ’ ಅನ್ನು ಮುಚ್ಚುವ ಹಂತವಿತ್ತು. ಆಗ ಕೋರ್‌ನಿಂದ ಚೆಲ್ಲುವ ನ್ಯೂಟ್ರಾನ್‌ಗಳಿಗೆ ಈ ಇಟ್ಟಿಗೆಗಳು ಒಂದು ರೀತಿಯ ಬೂಮರಾಂಗ್ ಪರಿಣಾಮವನ್ನು ಸೃಷ್ಟಿಸಿ, ಅದು ಸೂಪರ್ ಕ್ರಿಟಿಕಲಿಟಿಯ ಅಂಚಿಗೆ ಬಂದು ನಿಂತಿತ್ತು. ಈ ಸಂದರ್ಭದಲ್ಲಿ ಡಾಗ್ಲಿಯನ್ ಅವರು ಒಂದು ಇಟ್ಟಿಗೆಯನ್ನು ತೆಗೆದುಹಾಕಲು ಪ್ರಯತ್ನಿಸಿದಾಗ, ಅದು ಆಕಸ್ಮಿಕವಾಗಿ ಪ್ಲುಟೋನಿಯಂ ಗೋಳದ ಮೇಲೆ ಉರುಳಿತ್ತು! ಇದರಿಂದ ‘bಛಿಞಟ್ಞ ಟ್ಟಛಿ’ ನ್ಯೂಟ್ರಾನ್ ವಿಕಿರಣದಿಂದ ಸ್ಛೋಟಿಸಿ, ಡಾಗ್ಲಿಯನ್ ವಿಕಿರಣದ ಹೊಡೆತಕ್ಕೆ ಸಿಲುಕಿದರು. ೨೫ ದಿನಗಳ ನಂತರ ಅವರು ನಿಧನರಾದರು. ಆಗ ಅವರ ವಯಸ್ಸು ಕೇವಲ ೨೪.

ಇದಾದ ೯ ತಿಂಗಳ ನಂತರ, ಮೇ ೨೧, ೧೯೪೬ರಂದು ಡೆಮನ್ ಕೋರ್ ಮತ್ತೆ ತನ್ನ ಕಬಂಧ ಬಾಹುಗಳನ್ನು ತೆರೆಯಿತು. ಆಗ ಅದರ ಹೊಡೆತಕ್ಕೆ ಸಿಲುಕಿದ್ದು ಲೂಯಿಸ್ ಸ್ಲೋಟಿನ್ ಎಂಬ ಕೆನಡಾದ ಭೌತಶಾಸ್ತ್ರಜ್ಞ. ಡಾಗ್ಲಿಯನ್‌ನಂತೆಯೇ ಪ್ಲುಟೋನಿಯಂ ಕೋರ್ ಅನ್ನು ಬೆರಿಲಿಯಮ್ ಗುಮ್ಮಟದಿಂದ ಮುಚ್ಚಿದ ಸ್ಲೋಟಿನ್, ಅದು ಸಂಪೂರ್ಣವಾಗಿ ಅವರಿಸದಂತೆ ಸ್ಕ್ರೂ ಡ್ರೈವರ್‌ನಿಂದ ಸಣ್ಣ ಕಿಂಡಿಯನ್ನು ಮಾಡಿ ಕೋರ್ ಅನ್ನು ಸೂಪರ್ ಕ್ರಿಟಿಕಲಿಟಿ ಹಂತಕ್ಕೆ ನೂಕಲು ಯತ್ನಿಸಿದ್ದರು. ಅದೇನಾಯಿತೋ, ಸ್ಲೋಟಿನ್ ಹಿಡಿತದಿಂದ ಸ್ಕ್ರೂ ಡ್ರೈವರ್ ಜಾರಿ, ಕೋರ್ ಮೇಲೆ ಅಪ್ಪಳಿಸಿತು. ಕೂಡಲೇ ಸೂಪರ್ ಕ್ರಿಟಿಕಲ್ ಹಂತ ತಲುಪಿದ ಕೋರ್, ನೀಲಿ ಬಣ್ಣದ ವಿಕಿರಣಗಳನ್ನು ಬೀರಿ, ವಿಜ್ಞಾನಿ ಸ್ಲೋಟಿನ್ ಮೇಲೆ ಅಪ್ಪಳಿಸಿತ್ತು! ೯ ದಿನಗಳ ನರಳಾಟದ ನಂತರ ಸ್ಲೋಟಿನ್ ಅಸುನೀಗಿದರು. ವಿಪರ್ಯಾಸ ನೋಡಿ, ಇಬ್ಬರೂ ವಿಜ್ಞಾನಿಗಳು ವಿಕಿರಣದ ದಾಳಿಗೆ ಸಿಲುಕ್ಕಿದ್ದು ೨೧ರ ಮಂಗಳವಾರ ಹಾಗೂ ಅವರಿಬ್ಬರೂ ಕೊನೆಯುಸಿರೆಳೆದದ್ದು ಆಸ್ಪತ್ರೆಯ ಒಂದೇ ಕೋಣೆಯಲ್ಲಿ! ವಿಕಿರಣ ವಸ್ತುಗಳ ಗುಣಲಕ್ಷಣಗಳೇ ಹಾಗೆ ಅಲ್ಲವೇ? ಸರಿಯಾದ ರೀತಿಯಲ್ಲಿ ಬಳಸದಿದ್ದರೆ ಅಪಾಯವನ್ನು ಮೈ ಮೇಲೆ ಆಹ್ವಾನಿಸಿದಂತೆಯೇ ಸರಿ.

andolanait

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

13 mins ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

22 mins ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

57 mins ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

1 hour ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

1 hour ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

2 hours ago