ಎಡಿಟೋರಿಯಲ್

ವಿ4 : ವಿತ್ತ ವಿಜ್ಞಾನ ವಿಶೇಷ ವಿಹಾರ

ಸೆನ್ಸೆಕ್ಸ್ ಮೇಲೆ ಕೊರೊನಾ ಕರಿಛಾಯೆ

ಜಾಗತಿಕ ಮಟ್ಟದಲ್ಲಿ ಮತ್ತೆ ಸದ್ದು ಮಾಡುತ್ತಿರುವ ಕೊರೊನಾ ಸುದ್ದಿ ಸೆನ್ಸೆಕ್ಸ್ ಮೇಲೆ ಪರಿಣಾಮ ಉಂಟುಮಾಡಿದೆ. ಕೋವಿಡ್‌ನ ಹೊಸ ರೂಪಾಂತರಿಯ ಭೀತಿಯಿಂದಾಗಿ ಸೆನ್ಸೆಕ್ಸ್ ೧,೦೦೦ ಅಂಕಗಳಷ್ಟು ಕುಸಿತ ಕಂಡಿದೆ. ಕೋವಿಡ್-೧೯ ಪರಿಣಾಮದಿಂದ ಹೂಡಿಕೆದಾರರಲ್ಲಿ ಭೀತಿ ಮೂಡಿದ್ದು, ಸತತ ೪ನೇ ನೇರ ಸೆಷನ್‌ನಲ್ಲಿ ಹಾಗೂ ಮೂರು ತಿಂಗಳ ಅವಧಿಯಲ್ಲಿ ದಿನವೊಂದರಲ್ಲೇ ಅಧಿಕ ಕುಸಿತ ದಾಖಲಾಗಿದೆ. ೫೯,೮೪.೨೯ ಅಂಕಗಳೊಂದಿಗೆ ಸೆನ್ಸೆಕ್ಸ್ ಸೆಷನ್ ಮುಕ್ತಾಯಗೊಂಡಿದ್ದು ೯೮೦.೯೩ ಅಂಕಗಳಷ್ಟು ಅಥವಾ ಶೇ.೧.೬೧ ರಷ್ಟು ಇಳಿಕೆ ದಾಖಲಾಗಿದೆ ನಿಫ್ಟಿ ೧೭,೮೦೬.೮೦ ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿಯ ೫೦ ಸ್ಟಾಕ್‌ಗಳ ಪೈಕಿ ಅದಾನಿ ಪೋರ್ಟ್, ಅದಾನಿ ಎಂಟರ್ ಪ್ರ್ತ್ಯೈಸಸ್, ಹಿಂಡಾಲ್ಕೊ, ಟಾಟಾ ಸ್ಟೀಲ್, ಟಾಟಾ ಮೋಟಾರ‍್ಸ್ ಸೆನ್ಸೆಕ್ಸ್‌ನಲ್ಲಿ ಇಳಿಕೆ ಕಂಡ ೫ ಪ್ರಮುಖ ನಷ್ಟದಾರ ಸಂಸ್ಥೆಗಳಾಗಿದ್ದರೆ, ಸಿಪ್ಲಾ, ಡಿವೀಸ್ ಲ್ಯಾಬ್ಸ್, ಟೈಟಾನ್‌ಗಳು ಗಳಿಕೆ ಕಂಡಿವೆ.


ಯುವ ವಿಜ್ಞಾನಿಗಳಿಗೆ ರಾಷ್ಟ್ರಮಟ್ಟದ ಪ್ರಶಂಸೆ

ನೂತನವಾಗಿ ಆವಿಷ್ಕರಿಸಲ್ಪಟ್ಟ ಔಷಧಿಗಳನ್ನು ಪರೀಕ್ಷೆ ಮಾಡಲು ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗುತ್ತಿತ್ತು. ಈ ವೇಳೆ ಅವುಗಳಿಗೆ ಉಂಟಾಗುತ್ತಿದ್ದ ಹಾನಿಯಾಗುವ ಅಪಾಯಗಳನ್ನು ತಪ್ಪಿಸುವ ಸಲುವಾಗಿ ಕೇರಳದ ಕಣ್ಣೂರು ಮೂಲದ ಶರಣ್ಯ, ಕೋಲಾರದ ಅರ್ಪಿತಾ ರೆಡ್ಡಿ, ಹೈದರಬಾದಿನ ಸಂಜನಾ ಎಂಬ ಮೂವರು ಯುವ ವಿಜ್ಞಾನಿಗಳು ಟೈಪ್ ೨ ಡಯಾಬಿಟಿಸ್ ಔಷಧಿ ಪ್ರಯೋಗಗಳಿಗಾಗಿ ೩ಡಿ ಬಯೋಪ್ರಿಂಟಿಂಗ್ ವಿಧಾನವನ್ನು ಬಳಸಿಕೊಂಡು ಮಾನವನ ಅಂಗಾಂಶವನ್ನು ಸಿದ್ಧಪಡಿಸಿದ್ದಾರೆ.
೩ಡಿ ಬಯೋಪ್ರಿಂಟಿಂಗ್ ಮೂಲಕ ಮಾನವ ಸ್ನಾಯು ಅಂಗಾಂಶವನ್ನು ಮರುಸೃಷ್ಟಿಸಿ ಜೀವಕೋಶಗಳನ್ನು ಮೂರು ವಿಧದ ಪರದಗಳೊಂದಿಗೆ ಸಂಪರ್ಕ ಹೊಂದಿಸಿದ್ದಾರೆ. ಈ ಕೃತಕ ಅಂಗಾಂಶದ ಮೇಲೆ ವಿವಿಧ ಔಷಧಿಗಳನ್ನು ಹಾಕಿ ಪರೀಕ್ಷಿಸಿದಾಗ ಅದು ಮಾನವ ಸ್ನಾಯುಗಳಂತೆ ಕಾರ್ಯನಿರ್ವಹಿಸುತ್ತವೆ ಎಂಬುದು ಕಂಡುಬಂದಿದ್ದು, ಈ ಆವಿಷ್ಕಾರಕ್ಕೆ ‘ಸೊಸೈಟಿ ಫಾರ್ ಆಲ್ಟರ್ನೇಟಿವ್ಸ್ ಟು ಅನಿಮಲ್ ಎಕ್ಸ್‌ಪೆರಿಮೆಂಟ್ಸ್ ’ ವಾರ್ಷಿಕ ಪ್ರಥಮ ಬಹುಮಾನ ನೀಡಿದೆ.


ಜೀವ ಉಳಿಸಿದ ಆಪಲ್ ಐಫೋನ್ ೧೪ಸರಣಿ

ಹೊಸದಾಗಿ ಬಿಡುಗಡೆಯಾಗಿರುವ ಆಪಲ್ ಐಫೋನ್ ೧೪ರ ಸರಣಿಯ ಮೊಬೈಲ್‌ನಲ್ಲಿ ಹೊಸದಾಗಿ ಫೀಚರ್‌ವೊಂದು ಸೇರಿದ್ದು, ಇದು ಅಪಘಾತವಾದಂತಹ ಸಂದರ್ಭಲ್ಲಿ ಅಥವಾ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಮ್ಮ ಆಪ್ತರಿಗೆ ಮತ್ತು ತುರ್ತು ಸೇವೆಗಳಿಗೆ ನೆಟ್‌ವರ್ಕ್ ಇಲ್ಲದಿದ್ದರೂ ಉಪಗ್ರಹಗಳ ಸಹಾಯದೊಂದಿಗೆ ಮಾಹಿತಿ ನೀಡುವ ಫೀಚರ್ ಆಗಿದ್ದು ಅದನ್ನು ಕ್ರ್ಯಾಶ್ ಡಿಟೆಕ್ಷನ್ ಫೀಚರ್ ಎಂದು ಪರಿಚಯಿಸಲಾಗಿದೆ. ಈ ಫೀಚರ್‌ನ ಸಹಾಯದಿಂದ ಇತ್ತೀಚೆಗೆ ಅಮೆರಿಕದಲ್ಲಿ ಜೋಡಿಯೊಂದು ಕಾರು ಅಪಘಾತಕ್ಕೀಡಾಗಿ ೩೦೦ ಅಡಿ ಆಳದ ಕಣಿವೆಗೆ ಸಿಲುಕಿಕೊಂಡಿದ್ದರು. ಈ ವೇಳೆ ಈ ಐಫೋನ್ ೧೪ರ ಕ್ರ್ಯಾಶ್ ಡಿಟೆಕ್ಷನ್ ಫೀಚರ್ ಮೂಲಕ ಪತ್ತೆಹಚ್ಚಿ ಅವರನ್ನು ಮೇಲೆತ್ತಿ ಬದುಕುಳಿಸಲಾಯಿತು.


ಅಪರೂಪದ ಶಿವಲಿಂಗ

ನಂಜನಗೂಡು ಪಟ್ಟಣಕ್ಕೆ ಹೊಂದಿಕೊಂಡಂತೆಯೇ ಇರುವ ಮಲ್ಲನಮೂಲೆ ಮಠದ ಬಳಿ ಪಂಚಲಿಂಗಗಳ ೫ ಐತಿಹಾಸಿಕ ದೇವಾಲಯಗಳಿದ್ದು, ಸರಿಯಾದ ನಿರ್ವಹಣೆಯಿಲ್ಲದೆ ಸೊರಗಿವೆ. ನಂಜನಗೂಡು ಭಾಗದಲ್ಲಿ ಚೋಳರು ಹಾಗೂ ಗಂಗರ ಕಾಲದ ಸಾಕಷ್ಟು ದೇವಾಲಯಗಳು ಕಂಡುಬಂದಿರುವ ಕಾರಣ, ಇದು ಕೂಡ ಚೋಳರ ಕಾಲದ್ದೇ ಇರಬಹುದು ಎಂದು ಶಂಕಿಸಲಾಗಿದೆ. ಈ ೫ ದೇವಾಲಯಗಳೂ ಅಕ್ಕಪಕ್ಕದಲ್ಲೇ ಇದ್ದು, ಇವುಗಳ ಪೈಕಿ ಒಂದು ದೇವಾಲಯದಲ್ಲಿ ಶಿವನ ತಲೆಯ ಮೇಲೆ ನಂದಿಯ ವಿಗ್ರಹವಿರುವ ಅಪರೂಪದ ಶಿವಲಿಂಗವೊಂದಿದೆ.

ಇಲ್ಲಿ ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಮಾತ್ರ ಪೂಜೆ ಸಲ್ಲಿಸಲಾಗುತ್ತಿದ್ದು, ದೇವಸ್ಥಾನ ಅಭಿವೃದ್ಧಿಯಾದಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿಸಬಹುದಾಗಿದೆ. ಅಲ್ಲದೆ ಇದು ಹೆದ್ದಾರಿಯ ಪಕ್ಕದಲ್ಲೇ ಇರುವುದರಿಂದ ಈ ದೇವಾಯವು ಜೀರ್ಣೋದ್ಧಾರಗೊಂಡು ಪ್ರಚಾರ ಸಿಕ್ಕರೆ ಹೆಚ್ಚಿನ ಜನರನ್ನು ಆಕರ್ಷಿಸುವ ಪ್ರವಾಸಿ ತಾಣವಾಗುತ್ತದೆ.

andolanait

Recent Posts

ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಲು ಯತ್ನಿಸಿದ್ದರು: ಸಿಎಂ ಡಿಕೆಶಿ ಬಾಂಬ್

ಬೆಂಗಳೂರು: ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…

4 hours ago

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್!

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ…

5 hours ago

ಎಸ್‌ಐಆರ್‌ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು: ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‍ಐಆರ್) ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‍ಕುಮಾರ್ ವಜಾ ಮತ್ತು…

6 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಮತ್ತೆ ಶಾಕ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಕಾನೂನು ಸಂಕಷ್ಟಗಳು ಮತ್ತಷ್ಟು ಬಿಗಿಯಾಗುತ್ತಿವೆ.…

6 hours ago

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: 75ನೇ ವಯಸ್ಸಿನಲ್ಲಿ ನಿಧನ

ಮುಂಬೈ: ಬಾಲಿವುಡ್ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿ. ಹಿರಿಯ ನಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ…

9 hours ago

ಓದುಗರ ಪತ್ರ: ಪಿಎಚ್‌ಸಿಗಳಲ್ಲಿ ಬಿಪಿ, ಶುಗರ್ ಮಾತ್ರೆಗಳು ಸಿಗುವಂತೆ ಕ್ರಮ ಕೈಗೊಳ್ಳಿ

ಮೈಸೂರು ಜಿ ಎಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಗರ್ ಮತ್ತು ಬಿಪಿಗೆ ಹಾಗೂ ಇತರೆ ಕಾಯಿಲೆಗಳಿಗೆ ಸಂಬಂಧಪಟ್ಟ…

10 hours ago