ಎಡಿಟೋರಿಯಲ್

ಕಾರ್ ಡ್ರೆವರ್, ಮನೆಯಾಳಿಗೆ ಷೇರ್‌ಗಳನ್ನು ದಾನ ನೀಡುವ ಸಿಇಒ!

 

ಐಡಿಎಫ್‌ಸಿ ಫಸ್ಟ್ ಬ್ಯಾಂಕ್’ನ ಪ್ರಪ್ರಥಮ ಎಂಡಿ ಮತ್ತು ಸಿಇಒ ಆಗಿರುವ 55 ವರ್ಷ ಪ್ರಾಯದ ವೆಂಬು ವೈದ್ಯನಾಥನ್ ಮೂಲತಃ ಒಂದು ಸಾಧಾರಣ ಮಧ್ಯಮ ವರ್ಗದ ಕುಟುಂಬದಿಂದ ಬಂದವರುಅವರು ಕಲಿತದ್ದು ಕೇಂದ್ರೀಯ ವಿದ್ಯಾಲಯಗಳಲ್ಲಿಮೂರು ದಶಕಗಳ ಹಿಂದೆ ವೈದ್ಯನಾಥನ್ ವಿದ್ಯಾರ್ಥಿಯಾಗಿದಾಗ ಚೆನ್ನೈಯಿಂದ ಜಾರ್ಖಂಡಿಗೆ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಸಂದರ್ಶನಕ್ಕೆ ಹೋಗಬೇಕಾಗಿ ಬಂದಾಗ ಅವರ ಬಳಿ ಪ್ರಯಾಣಕ್ಕೆ ಹಣ ಇರಲಿಲ್ಲಆಗ ಗಾರ್ಡಿಯಲ್ ಸೈನಿ ಎಂಬ ಅವರ ಗಣಿತ ಶಿಕ್ಷಕರು ಅವರ ಸಹಾಯಕ್ಕೆ ಬಂದುತಮ್ಮ ಕಿಸೆಯಿಂದ ಅವರಿಗೆ 500 ರೂಪಾಯಿ ಕೊಟ್ಟು ಸಹಕರಿಸಿದ್ದರುಮುಂದೆ ವೈದ್ಯನಾಥನ್ ಶಿಕ್ಷಣ ಮುಗಿಸಿಕೈತುಂಬಾ ಸಂಬಳದ ಉದ್ಯೋಗ ಪಡೆದು ಆ ಶಿಕ್ಷಕರ ಋಣವನ್ನು ತೀರಿಸುತ್ತಾರೆಋಣ ತೀರಿಸಿದ ರೀತಿಯಾದರೂ ಹೇಗೆ? 30 ಲಕ್ಷ ರೂಪಾಯಿ ಮೌಲ್ಯದ ತಮ್ಮ ಷೇರುಗಳನ್ನು ಅವರ ಹೆಸರಿಗೆ ವರ್ಗಾಯಿಸುವ ಮೂಲಕಕೊರೊನಾ ಲಾಕ್‌ಡೌನ್ ಕಾಲದಲ್ಲಿ ನಡೆದ ಈ ಘಟನೆ ಆಗ ಬಹಳ ವೈರಲ್ ಆಗಿತ್ತು.

ಅದು 2000ದ ಸಮಯಆಗ ಐಸಿಐಸಿಐ ಬ್ಯಾಂಕಿನ ಬಾಸ್ ಆಗಿದ್ದ ಕೆ.ವಿ.ಕಾಮತ್ ತಮ್ಮ ಕೈಕೆಳಗೆ ಜ್ಯೂನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದ ಪ್ರತಿಭಾವಂತರ ಒಂದು ದೊಡ್ಡ ತಂಡವನ್ನು ಮುಂದಿನ ನಾಯಕತ್ವಕ್ಕಾಗಿ ತಯಾರು ಮಾಡುತ್ತಿದ್ದರುಅವರಲ್ಲಿ ಮುಖ್ಯರಾಗಿದ್ದವರು ಚಂದಾ ಕೊಚ್ಚರ್ಶಿಖಾ ಶರ್ಮಾರೇಣುಕಾ ರಾಮನಾಥ್ಸಂಜಯ್ ಚಟರ್ಜಿ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಲಿತು ಬಂದಿದ್ದ ವೆಂಬು ವೈದನಾಥನ್ ಮೊದಲಾದವರುವಾಸ್ತವದಲ್ಲಿಇವರೆಲ್ಲರೂ ಕಾಮತ್‌ರ ನಂತರ ಐಸಿಐಸಿಐ ಬ್ಯಾಂಕಿನ ಚೇರ್‌ಮನ್ ಹುದ್ದೆಗೆ ಅರ್ಹರಾದವರುಆದರೆಕಾಮತ್‌ರ ನಿವೃತ್ತಿಯ ನಂತರ ಚಂದಾ ಕೊಚ್ಚರ್ ಐಸಿಐಸಿಐ ಬ್ಯಾಂಕಿನ ಚೇರ್‌ಪರ್ಸನ್ ಆಗಿ ಆಯ್ಕೆಗೊಂಡಾಗ ಇವರೆಲ್ಲರೂ ಬೇರೆ ಬೇರೆ ಕಂಪೆನಿಗಳನ್ನು ಸೇರಿಕೊಂಡರುಶಿಖಾ ಶರ್ಮಾ ಆಕ್ಸಿಸ್ ಬ್ಯಾಂಕಿನ ಚೇರ್‌ಪರ್ಸನ್ ಆದರುರೇಣುಕಾ ರಾಮನಾಥ್ ಮಲ್ಟಿಪಲ್ ಆಸೆಟ್ ಮ್ಯಾನೇಜ್‌ಮೆಂಟ್‌ಗೆ ಹೋದರುಸಂಜಯ್ ಚಟರ್ಜಿ ಗೋಲ್ಡ್‌ಮ್ಯಾನ್ ಸ್ಯಾಕ್ ಸೇರಿದರು ಮತ್ತು ವೆಂಬು ವೈದ್ಯನಾಥನ್ ಕಿಶೋರ್ ಬಿಯಾನಿಯವರ ಫ್ಯೂಚರ್ ಕ್ಯಾಪಿಟಲ್ ಕಂಪೆನಿ ಸೇರಿದರುಮುಂದೆವೈದ್ಯನಾಥನ್ ಆ ಫ್ಯೂಚರ್ ಕ್ಯಾಪಿಟಲ್‌ನ್ನು ತಾವೇ ಖರೀದಿ ಮಾಡಿಅದನ್ನು ಕ್ಯಾಪಿಟಲ್ ಫಸ್ಟ್ ಎಂದು ಹೆಸರಿಸಿತಾವೇ ಅದರ ಎಂಡಿ ಮತ್ತು ಸಿಇಒ ಆದರು.

2018ರಲ್ಲಿ ವೆಂಬು ವೈದ್ಯನಾಥನ್ ಕ್ಯಾಪಿಟಲ್ ಫಸ್ಟ್‌ನ್ನು ಐಡಿಎಫ್‌ಸಿ ಬ್ಯಾಂಕ್ ಜೊತೆ ವಿಲೀನಗೊಳಿಸಿ ಐಡಿಎಫ್‌ಸಿ ಫಸ್ಟ್ ಬ್ಯಾಂಕನ್ನು ಹುಟ್ಟು ಹಾಕಿ ಅದರ ಪ್ರಪ್ರಥಮ ಎಂಡಿ ಮತ್ತು ಸಿಇಒ ಆಗುತ್ತಾರೆಆರ್ಥಿಕ ಅಥವಾ ಉದ್ಯಮ ಕ್ಷೇತ್ರದಲ್ಲಿ ಹೀಗೆ ಕಂಪೆನಿಗಳನ್ನು ವಿಲೀನಗೊಳಿಸುವುದುಕಂಪೆನಿಗಳನ್ನು ಖರೀದಿಸುವುದುಮಾರುವುದು ದಿನನಿತ್ಯವೆಂಬಂತೆ ನಡೆಯುವ ಒಂದು ಸಾಮಾನ್ಯ ವಿದ್ಯಮಾನಆದರೆವೈದ್ಯನಾಥನ್ ನಡೆಸಿದ ಆ ವಿಲೀನ ಕಾರ್ಯ ವಿಭಿನ್ನ ರೀತಿಯ ಒಂದು ವಿದ್ಯಮಾನವಾಗಿತ್ತುವೈದ್ಯನಾಥನ್ ವಿಲೀನ ಕಾರ್ಯಕ್ಕೆ ಮೊದಲು ಕ್ಯಾಪಿಟಲ್ ಫಸ್ಟ್‌ನಲ್ಲಿದ್ದ ತಮ್ಮ 40 ಕೋಟಿ ಷೇರುಗಳನ್ನು ಒಂದು ಸೋಷಿಯಲ್ ಟ್ರಸ್ಟಿಗೆ ವರ್ಗಾಯಿಸಿದರುಮತ್ತು ಸುಮಾರು 20 ಕೋಟಿ ರೂಪಾಯಿ ಮೌಲ್ಯದ ಶೇರುಗಳನ್ನು ಕ್ಯಾಪಿಟಲ್ ಫಸ್ಟ್ ಸಂಸ್ಥೆಯ ಉದ್ಯೋಗಿಗಳಿಗೆ ದಾನ ಮಾಡಿದರು.

ವಾಸ್ತವದಲ್ಲಿವೈದ್ಯನಾಥನ್ ಹಾಗೆ ಷೆರುಗಳನ್ನು ದಾನ ಮಾಡಿದ್ದು ಅದೇ ಮೊದಲ ಬಾರಿಯಲ್ಲಅದಕ್ಕೂ ಮೊದಲಿನಿಂದಲೂ ಅವರು ಆಗಾಗ್ಗೆ ತಮ್ಮ ಕಾರ್ ಡ್ರೆ ವರ್ತರಬೇತುದಾರರುಮನೆಯಾಳುಗಳುಸಂಬಂಧಿಕರುಶಾಲೆ ಕಾಲೇಜುಗಳಲ್ಲಿ ತಮಗೆ ಕಲಿಸಿದ ಶಿಕ್ಷಕರು ಮೊದಲಾದವರಿಗೆ ಷೇರುಗಳನ್ನು ದಾನ ಮಾಡುತ್ತ ಬಂದಿದ್ದಾರೆಉದಾಹರಣೆಗೆ, 2021ರ ಮೇ 14 ರಂದು 2.43 ಕೋಟಿ ರೂಪಾಯಿ ಮೌಲ್ಯದ 4,50,000 ಶೇರುಗಳನ್ನು ತಮ್ಮ ಮೂವರು ಕೆಲಸದಾಳುಗಳಿಗೆ ಮನೆ ಖರೀದಿಸುವ ಸಲುವಾಗಿ ದಾನ ನೀಡಿದ್ದರುಅದಕ್ಕೂ ಮೊದಲು೨೦೨೧ರ ಫೆಬ್ರವರಿಯಲ್ಲಿ ೩.೯೫ ಕೋಟಿ ರೂಪಾಯಿ ಮೌಲ್ಯದ ಶೇರುಗಳನ್ನು ತಮ್ಮ ಕಾರ್ ಚಾಲಕಕಚೇರಿ ಸಹಾಯಕರುಮನೆಯಾಳುಗಳಿಗೆ ದಾನ ನೀಡಿದ್ದರುವೈದ್ಯನಾಥನ್ ಹೀಗೆ ದಾನ ಮಾಡಿದ ಷೇರುಗಳ ಮೌಲ್ಯ ರೂ. 70 ಕೋಟಿಗೂ ಮಿಕ್ಕಿದ್ದುವಿಶೇಷವೆಂದರೆವೈದ್ಯನಾಥನ್ ತಾವು ಷೇರುಗಳನ್ನು ದಾನ ಮಾಡಿದುದನ್ನು ಎಂದಿಗೂ ಬಹಿರಂಗಪಡಿಸಿರಲಿಲ್ಲಆದರೆಐಡಿಎಫ್‌ಸಿ ಬ್ಯಾಂಕ್‌ನೊಂದಿಗೆ ತಮ್ಮ ಕಂಪೆನಿಯನ್ನು ವಿಲೀನಗೊಳಿಸುವಾಗ ‘ಸೆಬಿ’ಗೆ ಸಲ್ಲಿಸಬೇಕಾದ ವಿವರಗಳಲ್ಲಿ ಷೇರುಗಳಿಗೆ ಸಂಬಂಧಿಸಿದ ಕೆಲವು ಅಂಶಗಳನ್ನು ಕಡ್ಡಾಯವಾಗಿ ನಮೂದಿಸಬೇಕಾಗಿತ್ತುಹಾಗೆ ನಮೂದಿಸಲ್ಪಟ್ಟ ಕಾರಣ ಈ ವಿಚಾರಗಳು ಬೆಳಕಿಗೆ ಬಂದವು.

ಕಂಪೆನಿಯೊಂದರ ಪ್ರಮೋಟರ್ ಆಗಿರುವ ವೈದ್ಯನಾಥನ್ ಹೀಗೆ ಷೇರುಗಳನ್ನು ದಾನ ಮಾಡುತ್ತ ಹೋದರೆ ಕಂಪೆನಿಯಲ್ಲಿ ಅವರ ಹೂಡಿಕೆ ‘ಡೈಲುಟ್’ ಆಗುವುದಲ್ಲ ಎಂದು ಯಾರಾದರೂ ಅವರನ್ನು ಕೇಳಿದರೆ ಅವರು, ‘ಹಣ ಡಿಮಾಟ್’ ಖಾತೆಯಲ್ಲಿ ಸೋಮಾರಿಯಾಗಿ ಜಮವಾಗಿರಬಾರದುಬದಲಿಗೆಅದು ಜನರ ಉಪಯೋಗಕ್ಕೆ ಬರುತ್ತಿರಬೇಕು’ ಎಂದು ಉತ್ತರಿಸುತ್ತಾರೆಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ಮುಂಬೈಯಲ್ಲಿ ವಾಸಿಸುವ ವೈದ್ಯನಾಥನ್ಸಂಚಾರಕ್ಕೆ ಹೆಚ್ಚಾಗಿ ಸಾರ್ವಜನಿಕ ಟ್ಯಾಕ್ಸಿಗಳನ್ನು ಬಳಸುತ್ತಾರೆಭಾರತದ ಕ್ರಿಕೆಟ್ ಕಾಶಿ ಎನಿಸಿಕೊಂಡಿರುವ ಮುಂಬೈಯ ಶಿವಾಜಿ ಪಾರ್ಕಿನಲ್ಲಿ ಸ್ಥಳೀಯ ಮಕ್ಕಳೊಂದಿಗೆ ಕ್ರಿಕೆಟ್ ಆಡುತ್ತಾರೆಪ್ರತಿವರ್ಷ ನಡೆಯುವ ಮುಂಬೈ ಮ್ಯಾರಥಾನ್‌ನಲ್ಲಿ ತಪ್ಪದೆ ಭಾಗವಹಿಸುತ್ತಾರೆಹಾಡುವ ಹವ್ಯಾಸವೂ ಇರುವ ವೈದ್ಯನಾಥನ್ ಆರ್ಕೆಸ್ಟ್ರಾ ಕಾರ್ಯಕ್ರಮಗಳನ್ನು ಏರ್ಪಡಿಸಿ ಬಡಮಕ್ಕಳ ಹೃದ್ರೋಗ ಚಿಕಿತ್ಸೆಗೆ ಫಂಡ್ ಎತ್ತುವ ‘ಜೆನೆಸಿಸ್ ಫೌಂಡೇಷನ್’ಗೆ ಅನೇಕ ಬಾರಿ ನೆರವಾಗಿದ್ದಾರೆ.

1968ರಲ್ಲಿ ಒಂದು ಸಾಧಾರಣ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ವೈದ್ಯನಾಥನ್‌ರ ತಂದೆ ಮತ್ತು ಸಹೋದರರು ಭಾರತೀಯ ಸೇನೆಯಲ್ಲಿ ಉದ್ಯೋಗ ಮಾಡಿದವರುಅವರ ಕುಟುಂಬದಲ್ಲಿ ವೈದ್ಯನಾಥನ್ ಮಾತ್ರವೇ ಖಾಸಗಿ ಸಂಸ್ಥೆಯನ್ನು ಸೇರಿದವರುತಾನು ನಿವೃತ್ತನಾಗುವ ತನಕ ಹೀಗೇ ಷೇರುಗಳನ್ನು ದಾನ ನೀಡುವುದನ್ನು ಮುಂದುವರಿಸುತ್ತೇನೆ ಎನ್ನುವ ವೈದ್ಯನಾಥನ್‌ರ ದಾನ ಪ್ರಕ್ರಿಯೆಯ ಹಿಂದಿನ ಪ್ರೇರಕ ಶಕ್ತಿ ಯಾವುದೇ ರೀತಿಯ ಆಧ್ಯಾತ್ಮಿಕತೆಯಾಗಲೀಧಾರ್ಮಿಕತೆಯಾಗಲಿ ಅಲ್ಲವಾಸ್ತವದಲ್ಲಿಅವರು ತಮ್ಮ ಷೇರುಗಳನ್ನು ಸೋಷಿಯಲ್ ಟ್ರಸ್ಟಿಗೆ ದಾನ ಮಾಡುವ ಮೊದಲುಅವುಗಳನ್ನು ಯಾವುದೇ ರೀತಿಯ ಧಾರ್ಮಿಕ ಉದ್ದೇಶಗಳಿಗೆ ಬಳಸಬಾರದು ಎಂಬ ಷರತ್ತನ್ನು ನಮೂದಿಸುತ್ತಾರೆತನ್ನ ಔದ್ಯಮಿಕ ಜೀವನದಲ್ಲಿ ೨೦೧೭ರ ‘ಏಷಿಯಾಪೆಸಿಫಿಕ್ ಆಂಟರ್‌ಪ್ರೂನರ್ ಆಫ್ ದಿ ಇಯರ್’ ಪ್ರಶಸ್ತಿಲಂಡನ್‌ನ ಕ್ಯಾಪಿಟಲ್ ಫೈನಾನ್ಸ್ ಇಂಟರ್‌ನೇಷನಲ್ ಸಂಸ್ಥೆಯ ‘ಔಟ್‌ಸ್ಟಾಂಡಿಂಗ್ ಕಾಂಟ್ರಿಬ್ಯುಷನ್ ಟು ಫೈನಾನ್ಷಿಯಲ್ ಇಂಕ್ಲುಸನ್ಇಂಡಿಯಾ’ ಪ್ರಶಸ್ತಿ, 2018ರ ಇಂಗ್ಲೆಂಡಿನ ‘ಟ್ರಾನ್ಸ್ ರ್ಮೇ ಷನಲ್ ಲೀಡರ್ ಸಿಎಫ್‌ಐ’ ಪ್ರಶಸ್ತಿ ಮೊದಲಾದ ಗೌರವಗಳನ್ನು ಪಡೆದವ ರೆಂದು ವೈದ್ಯನಾಥನ್‌ರ ಹೆಸರು ವಿಶ್ವದ ಯಾವುದೇ ಬಿಲಿಯನೇರ್ ಪಟ್ಟಿಗಳಲ್ಲಿ ಇಲ್ಲಆದರೆಅವರಿಂದ ಷೇರುಗಳನ್ನು ದಾನ ಪಡೆದು ಬದುಕು ಕಟ್ಟಿಕೊಂಡ ವರ ಹೃದಯಗಳಲ್ಲಿ ಅವರ ಹೆಸರು ಅಜರಾಮರವಾಗಿರುವುದಂತೂ ನಿಜ.

andolanait

Recent Posts

ಬಂಡೀಪುರ, ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭ : ಸಿಎಂ

ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…

7 hours ago

ಜ.5, 6ರಂದು ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ ; ತವರಲ್ಲಿ ಸಂಭ್ರಮ ಸಾಧ್ಯತೆ?

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…

7 hours ago

ಜ.4ರಂದು ʼಚಾ.ಬೆಟ್ಟಕ್ಕೆ ನಡಿಗೆʼ ಜಾಗೃತಿ ಜಾಥ ; ಬೆಂಬಲಿಸಲು ಮನವಿ

ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…

7 hours ago

ದೇಶದ ಸ್ವಚ್ಛ ನಗರ ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದ 11 ಮಂದಿ ಸಾವು!

ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…

8 hours ago

ಬಳ್ಳಾರಿ ಘರ್ಷಣೆ | ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ ; ಬಿವೈವಿ ಆಗ್ರಹ

ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…

10 hours ago

ಬಳ್ಳಾರಿ ಘರ್ಷಣೆ | ಕೈ ಕಾರ್ಯಕರ್ತ ಸಾವು, ಘಟನೆ ಬಗ್ಗೆ ಸಿಎಂ ಹೇಳಿದ್ದೇನು?

ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ  ಬ್ಯಾನರ್‌ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್‌ ಆಗಿ…

11 hours ago