ಅಂಕಣ

ಪಶ್ಚಿಮ ಬಂಗಾಳ : ಒಬಿಸಿ ಪಟ್ಟಿ ಮರುಸಂರಚನೆ

ಆರ್‌ಎಸ್‌ಎಸ್‌ ಕಾರ್ಯಸೂಚಿಗಳು ಜಾರಿ

ಬಿ.ಶ್ರೀಪಾದ ಭಟ್‌

2026ರ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಧರ್ಮ ಆಧಾರಿತ ಕಲ್ಯಾಣ ಯೋಜನೆಗಳನ್ನು ಅಧಿಕೃತವಾಗಿ ರದ್ದುಗೊಳಿಸಿ, ರಾಜ್ಯದ ಒಬಿಸಿ ಮೀಸಲಾತಿ ಪಟ್ಟಿಯನ್ನು ಸಂಪೂರ್ಣ ಮರುಸಂರಚನೆ ಮಾಡಿದೆ. 2026ರ ಜೂನ್ 1ರಿಂದ ಜಾರಿಗೆ ಬಂದ ಪ್ರಮುಖ ಬದಲಾವಣೆಗಳಲ್ಲಿ ಧಾರ್ಮಿಕ ಮುಖಂಡರಿಗೆ (ಇಮಾಮರು/ಪೂಜಾರಿಗಳು) ನೀಡಲಾಗುತ್ತಿದ್ದ ಭತ್ಯೆಗಳನ್ನು ರದ್ದುಗೊಳಿಸುವುದು ಹಾಗೂ 75ಕ್ಕೂ ಹೆಚ್ಚು ಮುಸ್ಲಿಂ ಉಪಜಾತಿಗಳನ್ನು ಒಬಿಸಿ ಪಟ್ಟಿಯಿಂದ ತೆಗೆದುಹಾಕುವುದು ಸೇರಿವೆ.

ಪಶ್ಚಿಮ ಬಂಗಾಳ ಬಿಜೆಪಿ ಸರ್ಕಾರದ ಪ್ರಮುಖ ನೀತಿ ಬದಲಾವಣೆಗಳು (ಮೇ ೨೦೨೬)

ಧರ್ಮ ಆಧಾರಿತ ಸೌಲಭ್ಯಗಳ ರದ್ದತಿ
ರಾಜ್ಯ ಸಚಿವ ಸಂಪುಟವು ಧಾರ್ಮಿಕ ವರ್ಗೀಕರಣದ ಆಧಾರದ ಮೇಲೆ ಕೆಲವು ಗುಂಪುಗಳಿಗೆ ನೀಡಲಾಗು ತ್ತಿದ್ದ ನೆರವನ್ನು ನಿಲ್ಲಿಸಲು ತೀರ್ಮಾನಿಸಿತು. ಇದರಡಿ ಇಮಾಮರು, ಮುವಜ್ಜಿನ್‌ಗಳು ಹಾಗೂ ಹಿಂದೂ ಪೂಜಾರಿಗಳಿಗೆ ನೀಡಲಾಗುತ್ತಿದ್ದ ಭತ್ಯೆಗಳನ್ನೂ ರದ್ದುಗೊಳಿಸಲಾಯಿತು.

ಒಬಿಸಿ ಪಟ್ಟಿಯ ಮರುಸಂರಚನೆ
ಹಿಂದಿನ ಟಿಎಂಸಿ ಸರ್ಕಾರವು ಒಬಿಸಿ ಪಟ್ಟಿಯ ಮೇಲಿನ ಹೈಕೋರ್ಟ್ ತಡೆಯಾಜ್ಞೆಯನ್ನು ಪ್ರಶ್ನಿಸಿ ಸುಪ್ರೀಂ ಕೋಟ್‌ರ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹೊಸ ಸರ್ಕಾರ ಹಿಂತೆಗೆದುಕೊಂಡಿತು. ಇದರಿಂದ ರದ್ದುಗೊಳಿಸುವ ಕ್ರಮಗಳು ಮುಂದುವರಿಯಲು ಅವಕಾಶ ದೊರಕಿತು. ಮತಧರ್ಮವನ್ನು ಮುಖ್ಯ ಆಧಾರವಾಗಿಟ್ಟುಕೊಂಡ ವರ್ಗೀಕರಣಗಳು ಮಾನ್ಯ ವಲ್ಲವೆಂದು ಹೇಳಿದ ಕೊಲ್ಕತ್ತಾ ಹೈಕೋರ್ಟ್ ತೀರ್ಪಿನ ಅನುಸರಣೆಯಾಗಿ, ಸರ್ಕಾರವು ಹಳೆಯ ರಾಜ್ಯ ಒಬಿಸಿ ಪಟ್ಟಿಯನ್ನು ರದ್ದುಪಡಿಸಿತು. ಇದರ ಪರಿಣಾಮವಾಗಿ ೭೫ – ೮೦ ಮುಸ್ಲಿಂ ಉಪಗುಂಪುಗಳು ಪಟ್ಟಿಯಿಂದ ಹೊರಗುಳಿಯುವಂತಾಗಿದೆ.

ಕಾನೂನು ಕ್ರಮ : “ಸಮಾನ ಆಡಳಿತ”ದ ಮೇಲೆ ಒತ್ತು
ಈ ಕ್ರಮಗಳ ಉದ್ದೇಶ “ತುಷ್ಟೀಕರಣ ರಾಜ ಕಾರಣ”ಕ್ಕೆ ಅಂತ್ಯಹೇಳಿ, ನಿರ್ದಿಷ್ಟ ಸಮುದಾಯ ಗಳಿಗೆ ಮಾತ್ರ ಸೌಲಭ್ಯ ನೀಡುವ ಬದಲು ಎಲ್ಲರಿಗೂ ಸಮಾನವಾಗಿ ಕಲ್ಯಾಣ ಸೌಲಭ್ಯಗಳನ್ನು ಹಂಚಿಕೆ ಮಾಡುವುದಾಗಿದೆ ಎಂದು ಸರ್ಕಾರ ಹೇಳಿದೆ. ಮತ್ತೊಂದೆಡೆ ಗೋವಂಶೀಯ ಪ್ರಾಣಿಗಳನ್ನು ಹತ್ಯೆ ಮಾಡಲು ‘ಹತ್ಯೆಗೆ ಯೋಗ್ಯ’ ಎಂಬ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿದೆ. ರಾಜ್ಯ ಸರ್ಕಾರ ಹೊರಡಿಸಿದ ಅಽಸೂಚನೆಯ ಪ್ರಕಾರ, ಎಮ್ಮೆ, ಎತ್ತು, ಹಸು, ಕರುಗಳನ್ನು ಸಾರ್ವ ಜನಿಕವಾಗಿ ಹತ್ಯೆ ಮಾಡುವುದನ್ನು, ಅವುಗಳಿಗೆ ಪ್ರಮಾಣಪತ್ರ ಇದ್ದರೂ ನಿಷೇಽಸಲಾಗಿದೆ. ಈ ಅಧಿಸೂಚನೆ ಮೇ ೨೬ರಂದು ನಡೆಯಲಿರುವ ಈದ್-ಅಲ್-ಅಧಾ ಅಥವಾ ಬಕ್ರೀದ್‌ಗೆ ಕೆಲವೇ ದಿನಗಳ ಮುನ್ನ ಹೊರ ಬಂದಿದೆ. ಈದ್ ಆಚರಣೆಯ ಭಾಗವಾಗಿ ಮೇಕೆ, ಕುರಿ ಅಥವಾ ಕುರಿ ಹೋತವನ್ನು ಬಲಿ ಕೊಡುವುದು ಒಂದು ಪರಂಪರೆ ಯಾಗಿದೆ. ಇದರ ಜೊತೆಗೆ ಶಾಲಾ ಕಾಲೇಜುಗಳಲ್ಲಿ ತರಗತಿ ಪ್ರಾರಂಭಕ್ಕೂ ಮುಂಚೆ ‘ವಂದೇ ಮಾತರಂ’ನ ಎಲ್ಲಾ ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಪ್ರತಿಬಾರಿಯಂತೆ ಈ ಬಾರಿಯೂ ಮತಧರ್ಮ ಧೃವೀಕರಣದ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ (ಜೊತೆಗೆ ಎಸ್‌ಐಆರ್ ಹಾಗೂ ಮಮತಾ ನೇತೃತ್ವದ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ) ಅಧಿಕಾರ ವಹಿಸಿಕೊಂಡ ಕೂಡಲೇ ಆರ್‌ಎಸ್‌ಎಸ್‌ನ ಕಾರ್ಯಸೂಚಿಗಳನ್ನು ಜಾರಿಗೊಳಿಸುತ್ತಿದೆ. ೧೯೪೭ರಿಂದಲೂ ಪಶ್ಚಿಮಬಂಗಾಳವು ಕೋಮುವಾದದ ಬೆಂಕಿಯಲ್ಲಿ ಬೇಯುತ್ತಲೇ ಬಂದಿದೆ. ೧೯೭೭ ರಿಂದ ೨೦೧೧ರವರೆಗಿನ ಎಡಪಕ್ಷಗಳ ಸರ್ಕಾ ರವು ಈ ಮತಧರ್ಮಾಂಧತೆಯನ್ನು ಹದ್ದುಬಸ್ತಿನಲ್ಲಿಡಲು ತಕ್ಕಮಟ್ಟಿಗೆ ಯಶಸ್ವಿಯಾಗಿತ್ತು. ಆದರೆ ನಂತರ ಮೂರು ಬಾರಿ ಆಧಿಕಾರಕ್ಕೆ ಬಂದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಯಾವುದೇ ಬಗೆಯ ಸೈದ್ಧಾಂತಿಕ ನೀತಿಯಿಲ್ಲದೆ ಬಿಜೆಪಿಗೆ ತನ್ನ ಹಿಂದುತ್ವ ರಾಜಕಾರಣದ ಪ್ರಯೋಗಕ್ಕೆ ಮುಕ್ತ ಅವಕಾಶ ಕಲ್ಪಿಸಿತು. ೨೦೧೬ರಿಂದಲೂ ಬಂಗಾಳವನ್ನು ತನ್ನ ಹಿಂದುತ್ವ ರಾಜಕಾರಣದ ಪ್ರಯೋಗಶಾಲೆಯಾಗಿ ಮಾಡಿ ಕೊಂಡ ಬಿಜೆಪಿ ಪಕ್ಷವು ಹತ್ತು ವರ್ಷಗಳ ನಂತರ ಅಧಿಕಾರಕ್ಕೆ ಬಂದಿದೆ. ಈಗ ತರಾತುರಿಯಲ್ಲಿ ತನ್ನ ಅಜೆಂಡಾಗಳನ್ನು ಜಾರಿಗೊಳಿಸುತ್ತಿದೆ. ಅದರ ಫಲವೇ ಈ ಗೋಹತ್ಯಾ ನಿಷೇಧ ಕಾನೂನು, ವಂದೇ ಭಾರತ ಹಾಡು ಹಾಗೂ ಧಾರ್ಮಿಕ ಆಧಾರದಲ್ಲಿ ವರ್ಗೀಕರಣ ರದ್ದತಿ. ಬೇರೆ ಯಾವುದೇ ಪಕ್ಷವು ಈ ಕ್ರಮಗಳನ್ನು ಜಾರಿಗೊಳಿಸಿದ್ದರೆ ಯಾವುದೇ ಬಗೆಯ ಧಾರ್ಮಿಕತೆಯ ಕಾರ್ಯಸೂಚಿಗಳೆಂದು ಅಭಿಪ್ರಾಯಪಡಬೇಕಿರಲಿಲ್ಲ. ಆದರೆ ಆರ್‌ಎಸ್‌ಎಸ್ – ಬಿಜೆಪಿ ಅಧಿಕಾರದಲ್ಲಿರುವುದರಿಂದ ಈ ಹೊಸ ನೀತಿಗಳು ಸಹಜವಾಗಿಯೇ ಕೋಮುವಾದದ ಬಣ್ಣ ಪಡೆದುಕೊಂಡಿದೆ.

ಪಶ್ಚಿಮ ಬಂಗಾಳದಲ್ಲಿ ಇನ್ನು ಮುಂದೆ ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ, ಸಾರ್ವಜನಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯ, ಸಾಮಾಜಿಕ ನ್ಯಾಯ ಮುಂತಾದ ನೀತಿಗಳು ಹಿನ್ನೆಲೆಗೆ ಸರಿದು ಕೋಮುವಾದಿ ಅಜೆಂಡಾ ವಿಜೃಂಭಿಸುತ್ತದೆ ಎನ್ನುವುದಕ್ಕೆ ಸುವೇಂದು ಅವರ ಆರಂಭದ ಒಂದು ವಾರದ ಆದೇಶಗಳೇ ಸಾಕ್ಷಿ. ಟಿಎಂಸಿ ಪಕ್ಷವನ್ನು ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಕೇವಲ ಸರ್ಕಾರ ಬದಲಾವಣೆ ಮಾತ್ರವಲ್ಲ. ಮುಂದಿನ ದಿನಗಳಲ್ಲಿ ಸಮಾಜೋ-ಸಾಂಸ್ಕೃತಿಕ ಬದಲಾವಣೆ, ಬಹುಸಂಖ್ಯಾತ ಮತಧರ್ಮಾಂಧತೆ, ಹಿಂದುತ್ವ-ಮೋದಾನಿ-ನವಉದಾರೀಕರಣ ರಾಜಕಾರಣದ ಮುನ್ನೆಲೆ ಮತ್ತು ಎಡಪಕ್ಷಗಳು ಹಾಗೂ ಟಿಎಂಸಿ ಕಾಲದಲ್ಲಿ ಪ್ರಚ್ಛನ್ನವಾಗಿದ್ದ ಪಕ್ಷ- ಸಮಾಜ ವ್ಯವಸ್ಥೆಯು ಈಗ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಒಳಗೊಂಡ ಹೊಸರೂಪ ಸಾಕಷ್ಟು ಚರ್ಚೆಗೆ ಒಳಗಾಗಲಿದೆ.

ಎಡಪಕ್ಷಗಳ ಅವಧಿಯಲ್ಲಿ ವರ್ಗ ಹೆಚ್ಚು ಚಾಲ್ತಿಯಲ್ಲಿದ್ದರೆ ಬಿಜೆಪಿ ಅವಧಿಯಲ್ಲಿ ಮತಧರ್ಮ ಹೆಚ್ಚು ಚರ್ಚೆಯಲ್ಲಿರುತ್ತದೆ. ಕಮ್ಯುನಿಸ್ಟರನ್ನು ಸೋಲಿಸಿ ಅಧಿಕಾರಕ್ಕೆ ಬಂದ ಟಿಎಂಸಿ ಪಕ್ಷಕ್ಕೆ ಸೈದ್ಧಾಂತಿಕ ಬದ್ಧತೆಯ ಕಾರ್ಯಕರ್ತರ ಕೊರತೆಯಿತ್ತು. ಈಗ ಇದು ಬದಲಾಗಲಿದೆ. ಒಬ್ಬರೇ ಒಬ್ಬ ಮುಸ್ಲಿಂ ಶಾಸಕರಿಲ್ಲದ ಈ ಹೊಸ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಮತ್ತಷ್ಟು ಕಡೆಗಣಿಸಲ್ಪಡುತ್ತದೆ. ಸುವೇಂದು ಅವರ ಆರಂಭದ ನಿರ್ಣಯಗಳು ಎಲ್ಲದಕ್ಕೂ ಮುನ್ನುಡಿ ಬರೆದಿವೆ.

ಆಂದೋಲನ ಡೆಸ್ಕ್

Recent Posts

ಮಾಡೆಲ್‌ ಟ್ವಿಶಾ ಶರ್ಮಾ ಸಾವಿನ ಕೇಸ್‌ ತನಿಖೆ ಸಿಬಿಐ ಹೆಗಲಿಗೆ

ನವದೆಹಲಿ : ಮಾಡೆಲ್ ತ್ವಿಶಾ ಶರ್ಮಾ ಸಾವು ಪ್ರಕರಣ ಇದೀಗ ಸುಪ್ರೀಂಕೋರ್ಟ್​ ತಲುಪಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ತನಿಖಾ…

7 hours ago

ಮೈಸೂರು | ಪೊಲೀಸರ ಬಲೆಗೆ ಬಿದ್ದ ಸುಪಾರಿ ಗ್ಯಾಂಗ್‌

ಮೈಸೂರು : ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಖ್ಯಾತ ರೌಡಿ ಹಬೀದ್ ಪಾಷಾ ಇದೀಗ ಸುಫಾರಿ ಹಂತಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬ…

8 hours ago

ಗ್ರಾಹಕರಿಕೆ ಶಾಕ್‌ : ಪೆಟ್ರೋಲ್‌, ಡಿಸೇಲ್‌ ಬೆಲೆ ಮತ್ತೆ ಏರಿಕೆ

ನವದೆಹಲಿ : ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯ ಹೊರೆ ಜನರ ಮೇಲೆ ಬಿದ್ದಿದೆ. ಸೋಮವಾರ ಪೆಟ್ರೋಲ್ ದರವನ್ನು ಲೀಟರ್‍ಗೆ…

10 hours ago

ಬಿಜೆಪಿ ಸರ್ಕಾರ ಮಾಡಿದ ಡೀಮ್ಡ್ ಅರಣ್ಯ ತಪ್ಪು ಸರಿಪಡಿಸಲು ಯತ್ನ:ಈಶ್ವರ ಖಂಡ್ರೆ

ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲು ಸಮಿತಿ ರಚನೆ: ಈಶ್ವರ ಖಂಡ್ರೆ ಕಾರ್ಕಳ : ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶದಲ್ಲಿ ಸರ್ಕಾರಿ…

11 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ | ಆಳುವ ಸರ್ಕಾರ ಎಚ್ಚರ ತಪ್ಪಿದರೆ ಪ್ರತಿರೋಧ ಖಚಿತ

ಆರ್ಥಿಕ ಸಂಕಷ್ಟದ ಸಮಯದಲ್ಲಿ ಜಾಗ್ರತೆಯಿಂದ ಕಾರ್ಯನಿರ್ವಹಣೆ ಅಗತ್ಯ ಇದು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆ. ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್.…

12 hours ago

ಆಂದೋಲನ ಸಂಪಾದಕೀಯ | ಇಂಧನ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಲಿ

ಕೇವಲ ಹತ್ತು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಮೂರು ಬಾರಿ ಹೆಚ್ಚಳವಾಗಿದೆ. ಇದು ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ…

13 hours ago