ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 17 ಶನಿವಾರ 2022

ಓದುಗ ಸ್ನೇಹಿ ಆಂದೋಲನ

ಓದುಗ, ಜಾಹೀರಾತುದಾರ, ಹಿತೈಷಿ
ಇವರುಗಳೆಂದರೆ ಆಂದೋಲನಕ್ಕೆ
ಎಷ್ಟೊಂದು ಖುಷಿ!
ಅದಕ್ಕೆ ಈಗ ಬದಲಾಗಿದೆ…
ಓದುಗರ ಪತ್ರದ ವಿನ್ಯಾಸ
ಆ ಅಡ್ಡ ಕಾಲಂಗಳಿಗಿಂತ
ಈ ‘ನೇರ’ ಕಾಲಂಗಳು ಬಲು ಚಂದ!
ನೋಟಕ್ಕೂ ಚೆಂದ; ಓದಿಗೂ ಚೆಂದ
ಅದಕ್ಕೆ ಇರಬೇಕು ಓದುಗನಿಗೂ ಆಂದೋಲನಕ್ಕೂ ಬಿಡಿಸಲಾಗದ ಬಂಧ!!

-ಮ.ಗು.ಬಸವಣ್ಣ, ಜೆಎಸ್‌ಎಸ್ ಶಿಕ್ಷಣ ಸಂಸ್ಥೆ, ಸುತ್ತೂರು


ಮೈಸೂರು ವಿವಿ ವಿದ್ಯಾರ್ಥಿನಿಲಯ- ಪ್ರವೇಶಾತಿಗೆ ಪರದಾಟ

ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಪಡೆದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಇನ್ನೇನು ಕೆಲದಿನಗಳಲ್ಲಿ ತರಗತಿಗಳು ಆರಂಭಗೊಳ್ಳಲಿವೆ. ಆದರೆ ಮಾನಸ ಗಂಗೋತ್ರಿ ಆವರಣದಲ್ಲಿರುವ ವಿದ್ಯಾರ್ಥಿನಿಲಯಗಳು ಮುಕ್ತಾಯಗೊಂಡು ತಿಂಗಳು ಕಳೆದಿದೆ. ಮತ್ತೆ ಈ ವಿದ್ಯಾರ್ಥಿನಿಲಯಗಳು ಆರಂಭಗೊಂಡಿಲ್ಲ. ಇದರಿಂದ ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಸಮಸ್ಯೆಯಾಗಿದೆ. ಆಯ್ಕೆಪಟ್ಟಿಯ ಪ್ರಕಾರ ನಡೆಯಬೇಕಾದ ವಿದ್ಯಾರ್ಥಿನಿಲಯ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಸರಿಯಾದ ಕ್ರಮವನ್ನು ಅನುಸರಿಸದ ಪರಿಣಾಮ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ವಿಕಲಚೇತನರಿಗೆ (ದೃಷ್ಟಿದೋಷ) ಮೊದಲ ದಿನವೇ ಪ್ರವೇಶಾತಿ ನೀಡದೆ ಅಲೆದಾಡಿಸಲಾಗಿದೆ. ಪ್ರವೇಶ ಶುಲ್ಕ ಹಾಗೂ ಕೊಠಡಿಗಳ ಹಂಚಿಕೆಯ ವಿಚಾರದಲ್ಲಿಯೂ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ವಿದ್ಯಾರ್ಥಿನಿಲಯಗಳನ್ನು ಪುನರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಆಯ್ಕೆಪಟ್ಟಿಯಲ್ಲಿರುವ ಎಲ್ಲ ವಿದ್ಯಾರ್ಥಿಗಳಿಗೂ ಯಾವುದೇ ರೀತಿಯ ಅನ್ಯಾಯವಾಗದಂತೆ ನಿಲಯಗಳಲ್ಲಿ ಪ್ರವೇಶಾತಿ ನೀಡಬೇಕು.

-ಪ್ರದೀಪ್ ಸೋಗಳ್ಳಿ , ಪತ್ರಿಕೋದ್ಯಮ ವಿಭಾಗ, ಮಾನಸಗಂಗೋತ್ರಿ, ಮೈಸೂರು


ತ್ರಿವೇಣಿಯವರ ಮನೆಯ ಜೀರ್ಣೋದ್ಧಾರ ಸ್ವಾಗತಾರ್ಹ

ಕನ್ನಡ ಸಾರಸತ್ವ ಲೋಕದ ’ಬೆಳ್ಳಿಮೋಡ’ ತ್ರಿವೇಣಿ ಅವರು ಬಾಳಿ ಬದುಕಿದ್ದ ಮನೆಯನ್ನು ಜೀರ್ಣೋದ್ಧಾರ ಮಾಡಲು ನಿರ್ಧರಿಸಿ, ಅದಕ್ಕೆ ‘ಬೆಳ್ಳಿಮೋಡ‘ ಎಂದು ಹೆಸರಿಡಲು ತೀರ್ಮಾನಿಸಿರುವುದು ಹಾಗೂ ಸಾಹಿತ್ಯ ಪ್ರೇಮಿಗಳಿಗಾಗಿಯೇ ಹಲವು ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ, ಅವರ ಪುತ್ರಿ ಮೀರಾಕುಮಾರ್ ಅವರು ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನದ ಮೂಲಕ ವಸ್ತುಸಂಗ್ರಹಾಲಯ ಮಾಡಹೊರಟಿರುವುದು ಶ್ಲಾಘನೀಯವೇ ಸರಿ . ೩೪ ವರ್ಷಗಳ ಕಾಲ ಬದುಕಿದ ಅನುಸೂಯ ಶಂಕರ್ ಅವರು ತ್ರಿವೇಣಿ ಎಂಬ ಕಾವ್ಯನಾಮದಿಂದ ಕನ್ನಡಿಗರ ಮನಸ್ಸಿನಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಅವರು ರಚಿಸಿದ ಬೆಳ್ಳಿಮೋಡ, ಶರಪಂಜರ, ಬೆಕ್ಕಿನಕಣ್ಣು, ಹಣ್ಣೆಲೆಚಿಗುರಿದಾಗ, ದೂರದಬೆಟ್ಟ, ಸೋತುಗೆದ್ದವಳು, ಹೂವುಹಣ್ಣು ಸೇರಿದಂತೆ ಅನೇಕ ಕಾದಂಬರಿಗಳು ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿವೆ. ೧೩ ವರ್ಷಗಳ ಬರವಣಿಗೆಯ ಅವಽಯಲ್ಲಿ ಮೂಡಿಬಂದ ೨೧ ಕಾದಂಬರಿಗಳು, ೪೧ ಸಣ್ಣಕಥೆಗಳು ತ್ರಿವೇಣಿ ಅವರನ್ನು ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತ ಮಿನುಗುತಾರೆಯಾಗಿ ಸಿದ್ದು, ಸಾಹಿತ್ಯ ಲೋಕದಲ್ಲಿ ಧ್ರುವತಾರೆಯಾಗಿ ಪ್ರಜ್ವಲಿಸುವಂತೆ ಮಾಡಿವೆ.

-ಬೆಸಗರಹಳ್ಳಿ ರವಿ ಪ್ರಸಾದ್, ಕೆ.ಸಿ.ನಗರ, ಮೈಸೂರು.


ಚುನಾವಣೆ ನಡೆಸಲು ವಿಳಂಬ ಏಕೆ?

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ಒಂದಲ್ಲ ಒಂದು ಕಾರಣ ನೀಡಿ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಐದು ಲಕ್ಷ ರೂ.ಗಳ ದಂಡ ವಿಽಸುವ ಮೂಲಕ ಚಾಟಿ ಬೀಸಿದೆ. ಅಷ್ಟಕ್ಕೂ ರಾಜ್ಯ ಸರ್ಕಾರ ಚುನಾವಣೆಗೆ ವಿಳಂಬ ಮಾಡುತ್ತಿರುವ ಕಾರಣ ಮಾತ್ರ ತಿಳಿಯುತ್ತಿಲ್ಲ. ಹೇಗೂ ಮುಂದಿನ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯುವುದರಿಂದ, ಜೊತೆಯಲ್ಲೇ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನೂ ನಡೆಸಲು ಕ್ರಮವಹಿಸಿದರೆ ರಾಜ್ಯ ಸರ್ಕಾರಕ್ಕೆ ಚುನಾವಣೆ ಖರ್ಚು ಕಡಿಮೆಯಾದಂತಾಗುತ್ತದೆ.ಚುನಾವಣಾಧಿಕಾರಿಗಳಿಗೂ ಸಮಯ ಉಳಿತಾಯವಾಗುವ ಜೊತೆಗೆ ಮತದಾರರು ಪದೇ ಪದೇ ಮತಗಟ್ಟೆಗೆ ಹೋಗುವುದು ತಪ್ಪುತ್ತದೆ. ಆದ್ದರಿಂದ ಈ ಬಗ್ಗೆ ಚುನಾವಣಾ ಆಯೋಗವು ಪರಿಶೀಲಿಸಿ ಒಟ್ಟಿಗೆ ಚುನಾವಣೆಯನ್ನು ನಡೆಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು.

-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು


ಮುಂದಾದರೂ ಕಾಡುಪ್ರಾಣಿ ಹಾವಳಿಗೆ ಶಾಶ್ವತ ಪರಿಹಾರ ಸಿಗುವುದೆ?

ರಾಜ್ಯದ ಎಲ್ಲ ಭಾಗಗಳಲ್ಲಿಯೂ ರೈತರು ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಒಂದೆಡೆ ಉತ್ತಮವಾಗಿ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲ. ಮತ್ತೊಂದೆಡೆ ಕಳಪೆ ಬಿತ್ತನೆ ಬೀಜ ಮತ್ತು ಕಳಪೆ ಗೊಬ್ಬರದಿಂದ ಉತ್ತಮ -ಸಲು ಬರುವುದಿಲ್ಲ. ಅತಿವೃಷ್ಟಿ- ಅನಾವೃಷ್ಟಿ-ಯಿಂದ ಬೆಳೆ ನಾಶ. ಇವುಗಳ ನಡುವೆ ಎಚ್.ಡಿ.ಕೋಟೆ ಹಾಗೂ ಸರಗೂರು ಭಾಗಗಳಲ್ಲಿ ಬೆಳೆದ ಬೆಳೆಗಳು ಕೈ ಸೇರುವ ಮುನ್ನವೇ ಕಾಡುಪ್ರಾಣಿಗಳ ಪಾಲಾಗುತ್ತಿವೆ. ಆದ್ದರಿಂದ ಮುಂಬರುವ ಸರ್ಕಾರಗಳು ಇಂತಹ ಸಮಸ್ಯೆಗಳನ್ನು ತಡೆಗಟ್ಟಿ ರೈತರ ಪರವಾಗಿ ಸರ್ಕಾರ ಕಾರ್ಯಕ್ರಮವನ್ನು ರೂಪಿಸಬೇಕು. ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂಬರುವ ಸರ್ಕಾರ ಶಾಶ್ವತವಾದ ಪರಿಹಾರವನ್ನು ನೀಡಬೇಕು. ಕಾಡುಹಂದಿ, ಆನೆಗಳಂತಹ ಪ್ರಾಣಿಗಳು ರೈತರ ಜಮೀನಿಗೆ ನುಗ್ಗಿ ದಾಂದಲೆ ಮಾಡುತ್ತಿವೆ. ಬೇಳೆ ನಾಶಕ್ಕೆ ಸರ್ಕಾರ ನೀಡುವ ಪರಿಹಾರ ಮೊತ್ತ ಸಾಕಾಗುತ್ತಿಲ್ಲ. ಆದ್ದರಿಂದ ಮುಂದಿನ ಬಾರಿ ಅಽಕಾರಕ್ಕೆ ಯಾರೇ ಬಂದರೂ ಮೊದಲು ರೈತರ ಪರವಾಗಿ ಯೋಜನೆಗಳನ್ನು ರೂಪಿಸಬೇಕು. ರೈತರ ಸಂಕಷ್ಟಗಳಿಗೆ ಶಾಶ್ವತ ಪರಿಹಾರಿಗಳನ್ನು ಒದಗಿಸಬೇಕು.

-ಎಂ.ವಿ.ಪ್ರಕಾಶ್, ಮಚ್ಚರೆ, ಎಚ್.ಡಿ.ಕೋಟೆ ತಾ.

andolanait

Recent Posts

ಕಳಪೆ ಪ್ರಗತಿ ಸಾಧಿಸಿದ 5 ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ ಸಿಇಒ ನಂದಿನಿ

ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…

3 hours ago

ಅಕ್ರಮ ನಾಟ ಸಾಗಾಟ : ಲಾರಿ ಸಮೇತ ಮೂವರ ಬಂಧನ

ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…

3 hours ago

ಡೆವಿಲ್‌ ಅಬ್ಬರ | ಮೊದಲ ದಿನದ ಗಳಿಗೆ ಎಷ್ಟು?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…

3 hours ago

ಮಳವಳ್ಳಿ | ವಿದ್ಯುತ್‌ ಸ್ಪರ್ಶ ; ಕಾರ್ಮಿಕ ಸಾವು

ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…

3 hours ago

2027ರ ಜನಗಣತಿ | 11,718 ಕೋಟಿ ನೀಡಲು ಕೇಂದ್ರ ಸಂಪುಟ ಅನುಮೋದನೆ

ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…

3 hours ago

ಇಂಡಿಗೋ ಬಿಕ್ಕಟ್ಟು | ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳ ಅಮಾನತ್ತು

ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…

4 hours ago