ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 05 ಭಾನುವಾರ 2023

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಟೋಲ್‌ನಲ್ಲಿ ಉಲ್ಟಾ ಅಂಕಿ

ಮೈಸೂರು-ಬೆಂಗಳೂರು ದಶಪಥ ರಸ್ತೆ ಇದೀಗ ಚಾಲ್ತಿಯಲ್ಲಿರುವ ವಿಷಯ. ಈ ರಸ್ತೆಯಲ್ಲಿ ಎರಡು ಟೋಲ್ ಸಂಗ್ರಹಗಳು ಬರುತ್ತವೆ. ಆದರೆ, ರಾಜ್ಯದ ಇತರೆ ಹೆದ್ದಾರಿಗಳ ಟೋಲ್‌ಗಳಲ್ಲಿ ಬೂತ್ ಸಂಖ್ಯೆಯನ್ನು ̧1̧23 ಎಂದು ಬಲದಿಂದ ಎಡಕ್ಕೆ ಬರೆದಿದ್ದರೆ, ದಶಪಥ ರಸ್ತೆಯಲ್ಲಿ ಮಾತ್ರ ಉಲ್ಟಾ ಆಗಿಹೋಗಿದೆ. ಅಂದರೆ ಎಡದಿಂದ ಬಲಕ್ಕೆ ̧1̧23 ಎಂದಾಗಿದೆ. ಇದು ಪ್ರಯಾಣಿಕರಿಗೆ ಕೆಲವೊಮ್ಮೆ ಗೊಂದಲವನ್ನುಂಟು ಮಾಡಬಹುದಾಗಿದೆ. ಹಾಗೆಯೇ ಮೈಸೂರು ಹೊರವಲಯದ ಕಳಸ್ತವಾಡಿಯ ಬಳಿಯೂ ಮೈಸೂರು ಪ್ರವೇಶ ಕಮಾನಿಗೆ ‘ಕಳಸ್ತವಾಡಿ’ ಬದಲಾಗಿ ‘ಕಾಲಸ್ತವಡಿ’ ಎಂದು ಬರೆಯಲಾಗಿದೆ. ಕಾಮಗಾರಿಯ ವೇಳೆ ಇವುಗಳ ಬಗ್ಗೆ ಗಮನ ನೀಡಬೇಕಿದೆ. ಹೊರಭಾಗದಿಂದ ಬಂದವರಿಗೆ ತಪ್ಪಾಗಿ ಅರ್ಥವಾಗುವುದು ಅಥವಾ ಸ್ಥಳದ ಹೆಸರೇ ಬದಲಾಗಿ ತಿಳಿಯುವ ಸಾಧ್ಯತೆ ಇದ್ದು, ಕೂಡಲೇ ಅವುಗಳನ್ನು ಸರಿಪಡಿಸಬೇಕಿದೆ.

ವಿಜಯ್ ಹೆಮ್ಮಿಗೆ, ವಿಜಯನಗರ ರೈಲ್ವೆ ಬಡಾವಣೆ, ಮೈಸೂರು.


ಬಾಯ್ಕಾಟ್ ಅಭಿಯಾನ ತೂಕ ಕಳೆದುಕೊಂಡಿತೆ?

ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರವನ್ನು ವಿರೋಧಿಸಿ ಕೆಲವು ಸಂಘಟನೆಗಳು ನಡೆಸಿದ ಬಾಯ್ಕಾಟ್ ಅಭಿಯಾನ ತೂಕ ಕಳೆದುಕೊಂಡಂತಿದ್ದು, ಬಾಲಿವುಡ್ ಚಿತ್ರರಂಗ ನಿಟ್ಟುಸಿರು ಬಿಡುವಂತಾಗಿದೆ. ಸತತ ಸೋಲು ಮತ್ತು ಬಾಯ್ಕಾಟ್‌ಗಳಿಂದ ಕಂಗೆಟ್ಟ ಬಾಲಿವುಡ್‌ಗೆ ಮರುಭೂಮಿಯಲ್ಲಿ ಓಯಾಸಿಸ್ ದೊರಕಿದಂತಾಗಿದೆ. ಈ ಬಾಯ್ಕಾಟ್‌ಗೆ ಚಿತ್ರ ಪ್ರೇಮಿಗಳಿಂದ ನಿರೀಕ್ಷಿತ ಸ್ಪಂದನೆ ದೊರಕದಿರುವುದಕ್ಕೋ ಅಥವಾ ಇಂಥ ಬಾಯ್ಕಾಟ್ ಸಂಸ್ಕೃತಿ ವಿರುದ್ಧ ಪ್ರಧಾನಿ ಮೋದಿಯವರು ಪರೋಕ್ಷವಾಗಿ ಎಚ್ಚರಿಸಿದ್ದಕ್ಕೋ ಏನೋ, ಈ ಅಭಿಯಾನ ಮೇಲ್ಮೆಗೆ ಬರಲಿಲ್ಲ. ವಿಪರ್ಯಾಸವೆಂದರೆ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆಯವರು ಅಶ್ಲೀಲ ನೃತ್ಯ ಮಾಡಿದ್ದಾರೆಂದು ಹೇಳಲಾಗುತ್ತಿದ್ದು, ಇಂಥವುಗಳನ್ನು ವಿರೋಧಿಸುವ ಮಹಿಳಾ ಸಂಘಟನೆಗಳೇ ಇದರ ವಿರುದ್ಧ ಹೋರಾಡಲಿಲ್ಲ. ಈ ಬೆಳವಣಿಗೆ ‘ಎಲ್ಲರನ್ನೂ ಎಲ್ಲ ಕಾಲಕ್ಕೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ’ ಎನ್ನುವ ಸತ್ಯವನ್ನು ಅನಾವರಣಗೊಳಿಸಿದೆ.

ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು


ಮಾಧ್ಯಮ ಸ್ವಾತಂತ್ರ್ಯ ಉಳಿಯುವುದು ಯಾವಾಗ?

ಸರ್ಕಾರ ಮತ್ತು ಮಾಧ್ಯಮ ಸ್ವತಂತ್ರ್ಯ ಇವೆರಡರಲ್ಲಿ ಯಾವುದು ಉಳಿಯಬೇಕು ಎಂದು ಕೇಳಿದರೆ ಮಾಧ್ಯಮ ಸ್ವಾತಂತ್ರ್ಯ ಎಂದು ನಾನು ಹೇಳಬಯಸುತ್ತೇನೆ. ಥಾಮಸ್ ಜಾಫಏರ್ಸನ್‌ರ ಮಾತು ನೆನಪಿಗೆ ಬರುತ್ತೆ. ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ, ವಿರೋಧ ಪಕ್ಷ ಇತ್ಯಾದಿ ಹೆಸರುಗಳಿಂದ ಹೊಗಳುತ್ತೇವೆ. ಪ್ರಸ್ತುತ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆತು ಪ್ರಭುತ್ವದ ಜೊತೆ ಕೈ ಜೋಡಿಸುತ್ತಿರುವುದು ಬೇಸರದ ಸಂಗತಿ. ಇವುಗಳ ಜೊತೆಯಲ್ಲೇ ಜನರಿಗಾಗಿ, ಜನರು ನೋವಿಗಾಗಿ ಮಿಡಿಯುವ ಮಾಧ್ಯಮಗಳು ಅಲ್ಲಲ್ಲಿ ಉಸಿರುಗಟ್ಟಿಸಿಕೊಂಡು ಜೀವಿಸುತ್ತಿವೆ. ಅವುಗಳನ್ನು ನಾಶ ಮಾಡುವುದೇ ಪ್ರಭುತ್ವದ ಹುನ್ನಾರವಾಗಿದೆ. ಪ್ರಭುತ್ವವನ್ನು ಪ್ರಶ್ನೆ ಮಾಡುವ ಪತ್ರಕರ್ತರ ಧ್ವನಿ ಅಡಗಿಸಲು ಭಯೋತ್ಪಾದನೆ, ದೇಶದ್ರೋಹ ಕೃತ್ಯದಂತಹ ಆರೋಪದಡಿಯಲ್ಲಿ ಪದೇ ಪದೇ ಸರ್ಕಾರ ಪತ್ರಕರ್ತರನ್ನು ಜೈಲಿಗೆ ತಳ್ಳುತ್ತಿದೆ. ಆರ್ಟ್ ಮೀಡಿಯಾದ ಜುಬೇರ್ ಮತ್ತು ಸಿದ್ಧಿಕ್ ಕಪ್ಪನ್ ನಮ್ಮ ನಡುವಿನ ಉದಾಹರಣೆಯಾಗಿದ್ದಾರೆ. ಕೆಲವು ಪತ್ರಕರ್ತರನ್ನು ಹತ್ಯೆ ಮಾಡಿರುವುದನ್ನೂ ಕಾಣಬಹುದು. ಪ್ರಭುತ್ವದ ಇಂಥ ದುಷ್ಟ ನೀತಿಗಳನ್ನು ನೋಡಿದಾಗ ಮುಂದಿನ ಪೀಳಿಗೆಯ ಮಾಧ್ಯಮದ ಸವಾಲುಗಳನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ.

-ಮಾಳಿಂಗರಾಯ ಕೆಂಭಾವಿ, ಯಾದಗಿರಿ


ಚುನಾವಣೆಯಿಂದಾಗಿ ರಸ್ತೆಗಳಿಗೆ ಡಾಂಬರೀಕರಣ?

ಕಳೆದ ವರ್ಷ ಯೋಗ ದಿನಾಚರಣೆಯಂದು ಪ್ರಧಾನಿ ಮೋದಿಯವರು ಮೈಸೂರಿಗೆ ಆಗಮಿಸಿದ ಕಾರಣದಿಂದಾಗಿ ಕೆಲವು ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿತ್ತು. ಅದರಲ್ಲೂ ಪ್ರಧಾನಿ ಮೋದಿಯವರು ಹಾದು ಹೋಗುವ ರಸ್ತೆಗಳನ್ನು ಮಾತ್ರ ಆಯ್ದು ಕಾಮಗಾರಿ ಮಾಡಲಾಗಿತ್ತು. ಆದರೆ ಉಳಿದ ರಸ್ತೆಗಳಿಗೆ ಅಭಿವೃದ್ಧಿ ಭಾಗ್ಯ ಸಿಗಲಿಲ್ಲ. ಅದೇ ರೀತಿ ದಸರಾ ಹಬ್ಬದ ಸಂದರ್ಭದಲ್ಲಿಯೂ ಕೆಲ ರಸ್ತೆಗಳನ್ನು ಹೊರತುಪಡಿಸಿ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಚುನಾಯಿತ ಪ್ರತಿನಿಧಿಗಳು ಮುಂದಾಗುವುದಿಲ್ಲ. ಇತ್ತೀಚೆಗೆ ಮೈಸೂರಿನ ಅನೇಕ ರಸ್ತೆಗಳಿಗೆ ಡಾಂಬರೀಕರಣ ನಡೆಯುತ್ತಿದೆ. ಬಹುಶಃ ಈ ಅಭಿವೃದ್ಧಿ ಕೆಲಸದ ಹಿಂದೆ ಚುನಾವಣೆಯ ವೇಳೆ ಮತ ಸೆಳೆಯುವ ಉದ್ದೇಶವಿದ್ದಿರಬಹುದಾ ಎಂಬ ಅನುಮಾನ ವ್ಯಕ್ತವಾಗುವಂತಾಗಿದೆ. ಯಾವುದೇ ಒಳ್ಳೆಯ ಕೆಲಸ ಮಾಡಲು ಕಾರಣಗಳು ಬೇಕಿಲ್ಲ ಎನ್ನುತ್ತಾರೆ. ಆದರೆ, ಇಲ್ಲಿ ಚುನಾವಣೆಯನ್ನು ಗುರಿಯಾಗಿಸಿಕೊಂಡು ರಸ್ತೆಗಳಿಗೆ ಡಾಂಬರೀಕರಣ ಮಾಡುತ್ತಿರುವುದು ಜನರ ಮತಗಳಿಕೆಗಾಗಿ ಎಂದೆನಿಸುತ್ತದೆ.

-ಎಲ್.ಸಿಂಚನ, ಮಹಾಜನ ಕಾಲೇಜು, ಮೈಸೂರು

andolanait

Recent Posts

ಶತಕ ಬಾರಿಸಿದ ಸಿಎಂ ಎದುರು ಸವಾಲುಗಳೂ ಇವೆ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ೧೦೦ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳ…

2 mins ago

ಎಐ; ಮನುಕುಲದ ವಿನಾಶಕ್ಕೆ ಕಾರಣವಾಗಲಿದೆಯೇ?

ಶುಭಾ ಖಟಾವಕರ ಮ್ಹೆತ್ರಸ್ “ಕೇವಲ ಒಂದು ದಶಕದಲ್ಲಿ ಕೃತ್ರಿಮ ಬುದ್ಧಿಮತ್ತೆಯು (ಎಐ) ಮನುಕುಲವನ್ನು ನಾಶಪಡಿಸಲಿದೆ" ಎಂದು ಎಐನ ದೈತ್ಯ ಸಂಸ್ಥೆಯಾದ…

4 mins ago

ರಾಜ್ಯದಲ್ಲಿ ೧೯೮೩ರ ಇತಿಹಾಸ ಮರುಕಳಿಸುತ್ತದೆಯೇ?

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ರಾಜಕೀಯದಲ್ಲಿ ೧೯೮೩ರ ರಾಜಕೀಯ ಸನ್ನಿವೇಶ ರೂಪುಗೊಳ್ಳುತ್ತಿದೆಯೇ ಎಂಬ ಅನುಮಾನಗಳು ಶುರುವಾಗಿವೆ. ಅಂದ ಹಾಗೆ…

13 mins ago

ಕೆಎಚ್‌ಬಿ ಕಾಲೋನಿ ನಿವಾಸಿಗಳ ಜೀವನ ಹೈರಾಣ

ಎಂ.ಕೇಶವ ಎರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯಿಂದ ಕಂಗಾಲು; ಹಿರಿಯರು, ಮಹಿಳೆಯರು, ಸವಾರರಿಗೆ ಓಡಾಟವೇ ಸವಾಲು ಮೈಸೂರು: ಒಂದರ ಮೇಲೊಂದರಂತೆ ಎರಡು…

20 mins ago

ಗಣೇಶೋತ್ಸವಕ್ಕೆ ಡಿಜೆ ನಿಷೇಧ: ಮಿಶ್ರ ಪ್ರತಿಕ್ರಿಯೆ

ಪ್ರಶಾಂತ್ ಎನ್.ಮಲ್ಲಿಕ್ ಸಾರ್ವಜನಿಕರಿಗೆ ತೊಂದರೆ ತಪ್ಪುತ್ತದೆ: ಸಮರ್ಥನೆ ಡಿಜೆಗೆ ಕಡಿವಾಣ ಸರಿಯಲ್ಲ: ಅಸಮಾಧಾನ ಮೈಸೂರು: ರಾಜ್ಯದಲ್ಲಿ ಗೌರಿ ಗಣೇಶ ಹಬ್ಬದ…

29 mins ago

50 ವರ್ಷಗಳ ನಂತರ ಮೊದಲ ಬಾರಿ ಬರಿದಾದ ಕಾರಿಗನಹಳ್ಳಿ ಅಣೆಕಟ್ಟೆ

ಆರ್.ಶ್ರೀನಿವಾಸ್ ೪೦೦೦ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ, ಕುಡಿಯುವ ನೀರಿಗೂ ಹಾಹಾಕಾರ  ಕೆ.ಆರ್.ಪೇಟೆ: ಸುಮಾರು ೫೦ ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ…

34 mins ago