Andolana originals

ಗಣೇಶೋತ್ಸವಕ್ಕೆ ಡಿಜೆ ನಿಷೇಧ: ಮಿಶ್ರ ಪ್ರತಿಕ್ರಿಯೆ

ಪ್ರಶಾಂತ್ ಎನ್.ಮಲ್ಲಿಕ್

ಸಾರ್ವಜನಿಕರಿಗೆ ತೊಂದರೆ ತಪ್ಪುತ್ತದೆ: ಸಮರ್ಥನೆ ಡಿಜೆಗೆ ಕಡಿವಾಣ ಸರಿಯಲ್ಲ: ಅಸಮಾಧಾನ

ಮೈಸೂರು: ರಾಜ್ಯದಲ್ಲಿ ಗೌರಿ ಗಣೇಶ ಹಬ್ಬದ ಆಚರಣೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಡಿಜೆ (ಡಿಸ್ಕ್ ಜಾಕಿ) ಬಳಸಿ ಕರ್ಕಶ ಶಬ್ದ ಮಾಡುವುದನ್ನು ನಿಷೇಧಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಬಿರುಸಾಗಿದೆ.

ಹಬ್ಬವೆಂದರೆ ಶ್ರದ್ಧೆ, ಭಕ್ತಿ ಮತ್ತು ಒಗ್ಗಟ್ಟಿನ ಸಂಕೇತ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಬ್ಬದ ಹೆಸರಿನಲ್ಲಿ ನಡೆಯುವ ಅದ್ಧೂರಿ ಆಚರಣೆಗಳು, ಸೌಂಡ್ ಬಾಕ್ಸ್‌ಗಳ ಹಾವಳಿ ಹಾಗೂ ಡಿಜೆ ಬಳಕೆ ಸಮಾಜದ ಶಾಂತಿ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂಬುದು ಕೆಲವರ ಕಳವಳವಾದರೆ, ಇನ್ನೂ ಕೆಲವರು ಹಬ್ಬದ ಉತ್ಸಾಹ ಮತ್ತು ಆಚರಣೆಗೆ ಈ ರೀತಿಯ ನಿರ್ಬಂಧಗಳಿಗೆ ತಡೆಯೊಡ್ಡುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

” ಹಿಂದಿನ ಕಾಲದಲ್ಲಿ ಈ ಹಬ್ಬದ ಸಂದರ್ಭದಲ್ಲಿ ಬೀದಿಗೊಂದರಂತೆ ಅಥವಾ ಒಂದು ಊರಿಗೆ ಒಂದೇ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮನೆಮನೆಗೂ ಗಣಪತಿ ಕೂರಿಸಿ, ಮಿತಿಮೀರಿದ ಸೌಂಡ್ ಬಾಕ್ಸ್ ಮತ್ತು ಡಿಜೆ ಬಳಸಿ ಅಕ್ಕಪಕ್ಕದವರಿಗೆ ತೊಂದರೆ ಕೊಡುವ ಪ್ರವೃತ್ತಿ ಹೆಚ್ಚಾಗಿದೆ. ಇದು ಬಹಳ ಹಾನಿಕಾರಕವಾಗಿದೆ.”

-ಮಹೇಶ್, ಮೈಸೂರು

” ಹಿಂದಿನ ಕಾಲದಲ್ಲಿ ಜನರೆಲ್ಲ ಒಟ್ಟಾಗಿ ಸೇರಲು ಹಬ್ಬಗಳನ್ನು ಮಾಡುತ್ತಿದ್ದರು.ಮ ಆದರೆ ಈಗ ಡಿಜೆ ಮತ್ತು ಮಿತಿಮೀರಿದ ಸೌಂಡ್‌ನಿಂದ ಹಬ್ಬ ಆಚರಣೆಯ ಶಾಂತಿ ಹಾಳಾಗುತ್ತಿದೆ. ಹಬ್ಬದಿಂದ ಹಿರಿಯರ ಆರೋಗ್ಯಕ್ಕೆ ಅಥವಾ ಪರಿಸರಕ್ಕೆಮ ಯಾವುದೇ ರೀತಿಯ ಹಾನಿ ಅಥವಾ ಧಕ್ಕೆ ಆಗಬಾರದು. ಪರಿಸರ ಸ್ನೇಹಿಯಾಗಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸಬೇಕು.”

-ರೇಣುಕಾ, ಮೈಸೂರು

” ಸರ್ಕಾರ ಡಿಜೆ ಬಳಕೆಯನ್ನು ನಿಷೇಧಿಸಿರುವುದು ಸ್ವಾಗತಾರ್ಹ. ಆದರೆ ಹಳ್ಳಿಗಳಲ್ಲಿ ಇದು ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಡಿಜೆ ಬಳಕೆಯಿಂದ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಪಿಒಪಿ ಗಣಪತಿ ಬದಲು ಮಣ್ಣಿನ ಗಣಪತಿಯನ್ನು ಬಳಸಬೇಕು.”

-ಪಿ.ಮರಂಕಯ್ಯ, ರೈತ ಮುಖಂಡ

” ಚಿಕ್ಕಂದಿನಲ್ಲಿ ಹಬ್ಬವೆಂದರೆ ಹೊಸ ಬಟ್ಟೆ ಧರಿಸಿ, ಸಿಹಿ ತಿಂಡಿಗಳನ್ನು ಮಾಡಿ ಎಲ್ಲರೂ ಒಟ್ಟಾಗಿ ಸೇರಿ ಸೆಲೆಬ್ರೇಟ್ ಮಾಡುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಆ ರೀತಿಯ ಸಂಭ್ರಮ ಕಡಿಮೆಯಾಗಿದೆ. ಹಬ್ಬದಲ್ಲಿ ಆರ್ಟಿಫಿಷಿಯಲ್ ಬಣ್ಣಗಳು ಹಾಗೂ ಪರಿಸರಕ್ಕೆ ಹಾನಿ ಮಾಡುವಂತಹ ವಸ್ತುಗಳನ್ನು ಮತ್ತು ಧ್ವನಿವರ್ಧಕಗಳ ಬಳಕೆಯನ್ನು ಕಡಿಮೆ ಮಾಡಬೇಕು.”

-ಗೀತಾ, ಮೈಸೂರು

” ಡಿಜೆ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆ ಎನ್ನುವುದಾದರೆ, ಸರ್ಕಾರಗಳು, ರಾಜಕಾರಣಿಗಳು ಹಾಗೂ ಪಕ್ಷದ ಸಮಾವೇಶಗಳಲ್ಲಿ ದೊಡ್ಡ ದೊಡ್ಡ ಸೌಂಡ್ ಸಿಸ್ಟಮ್ ಮತ್ತು ಡಿಜೆ ಬಳಸುತ್ತಾರೆ. ಅದು ತಪ್ಪಲ್ಲವೇ? ಡಿಜೆ ಬಳಸಿಕೊಂಡು ಒಳ್ಳೆಯ ರೀತಿಯಲ್ಲಿ ಹಬ್ಬ ಆಚರಣೆಗೆ ಅವಕಾಶವಿರಲಿ.”

-ರಾಮು, ಮೈಸೂರು

” ಗಣೇಶೋತ್ಸವದಲ್ಲಿ ಡಿಜೆ ಬಳಕೆಗೆ ನಿರ್ಬಂಧ ಹೇರಿರುವುದು ಯುವಕರ ಉತ್ಸಾಹಕ್ಕೆ ಧಕ್ಕೆ ತರುತ್ತಿದೆ. ಗಣೇಶನ ಹಬ್ಬವನ್ನು ಶಾಂತಿಯುತವಾಗಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ಎಲ್ಲರೂ ಸಹಕರಿಸಬೇಕು. ಡಿಜೆ ಬಳಕೆಗೆ ಕಡಿವಾಣ ಹಾಕಬಾರದು. ನಿಯಮಗಳನ್ನು ವಿಧಿಸಿ, ಹಬ್ಬದ ಆಚರಣೆಗೆ ಅವಕಾಶ ನೀಡಬೇಕು.”

-ದಯಾನಂದ್ ಪಟೇಲ್, ಜಿಲ್ಲಾ ಕಾರ್ಯದರ್ಶಿ ಬಿಜೆಪಿ ಗ್ರಾಮಾಂತರ, ಮೈಸೂರು

 

 

ಆಂದೋಲನ ಡೆಸ್ಕ್

Recent Posts

ಎಐ; ಮನುಕುಲದ ವಿನಾಶಕ್ಕೆ ಕಾರಣವಾಗಲಿದೆಯೇ?

ಶುಭಾ ಖಟಾವಕರ ಮ್ಹೆತ್ರಸ್ “ಕೇವಲ ಒಂದು ದಶಕದಲ್ಲಿ ಕೃತ್ರಿಮ ಬುದ್ಧಿಮತ್ತೆಯು (ಎಐ) ಮನುಕುಲವನ್ನು ನಾಶಪಡಿಸಲಿದೆ" ಎಂದು ಎಐನ ದೈತ್ಯ ಸಂಸ್ಥೆಯಾದ…

1 min ago

ರಾಜ್ಯದಲ್ಲಿ ೧೯೮೩ರ ಇತಿಹಾಸ ಮರುಕಳಿಸುತ್ತದೆಯೇ?

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ರಾಜಕೀಯದಲ್ಲಿ ೧೯೮೩ರ ರಾಜಕೀಯ ಸನ್ನಿವೇಶ ರೂಪುಗೊಳ್ಳುತ್ತಿದೆಯೇ ಎಂಬ ಅನುಮಾನಗಳು ಶುರುವಾಗಿವೆ. ಅಂದ ಹಾಗೆ…

10 mins ago

ಕೆಎಚ್‌ಬಿ ಕಾಲೋನಿ ನಿವಾಸಿಗಳ ಜೀವನ ಹೈರಾಣ

ಎಂ.ಕೇಶವ ಎರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯಿಂದ ಕಂಗಾಲು; ಹಿರಿಯರು, ಮಹಿಳೆಯರು, ಸವಾರರಿಗೆ ಓಡಾಟವೇ ಸವಾಲು ಮೈಸೂರು: ಒಂದರ ಮೇಲೊಂದರಂತೆ ಎರಡು…

17 mins ago

50 ವರ್ಷಗಳ ನಂತರ ಮೊದಲ ಬಾರಿ ಬರಿದಾದ ಕಾರಿಗನಹಳ್ಳಿ ಅಣೆಕಟ್ಟೆ

ಆರ್.ಶ್ರೀನಿವಾಸ್ ೪೦೦೦ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ, ಕುಡಿಯುವ ನೀರಿಗೂ ಹಾಹಾಕಾರ  ಕೆ.ಆರ್.ಪೇಟೆ: ಸುಮಾರು ೫೦ ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ…

31 mins ago

ಗೌರಿ-ಗಣೇಶ ಹಬ್ಬಕ್ಕೆ ಕಂಗೊಳಿಸುತ್ತಿರುವ ಗೌರಿ ಹೂವು

ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಮಲೆನಾಡಿನ ಕಾಡುಗಳಲ್ಲಿ ಅರಳಿರುವ ವಿಶಿಷ್ಟ ಗೌರಿ ಹೂವು ಮತ್ತಷ್ಟು ಮೆರುಗು ನೀಡುತ್ತಿದೆ.…

37 mins ago

ಕೋಟೆಯಲ್ಲಿ ಗೌರಿ-ಗಣೇಶ ಹಬ್ಬದ ಆಚರಣೆಗೆ ಸಜ್ಜು

ಮಂಜು ಕೋಟೆ ಗಣೇಶ ಮೂರ್ತಿಗಳ ಮಾರಾಟದಲ್ಲಿ ಹೆಚ್ಚಳ; ಪೈಪೋಟಿಗೆ ಇಳಿದಿರುವ ಯುವ ಸಮುದಾಯ ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಹಿಂದೂ ಸಮುದಾಯದವರು ಗೌರಿ-ಗಣೇಶ…

44 mins ago