ಲಕ್ಷ್ಮೀಕಾಂತ್ ಕೊಮಾರಪ್ಪ
ಸೋಮವಾರಪೇಟೆ: ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಮಲೆನಾಡಿನ ಕಾಡುಗಳಲ್ಲಿ ಅರಳಿರುವ ವಿಶಿಷ್ಟ ಗೌರಿ ಹೂವು ಮತ್ತಷ್ಟು ಮೆರುಗು ನೀಡುತ್ತಿದೆ. ಗೌರಿ ಹಬ್ಬದಂದು ಈ ಹೂವನ್ನು ಪೂಜೆಯಲ್ಲಿ ಇರಿಸಿ ಆರಾಧಿಸುವುದು ಮಲೆನಾಡಿನ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಮುಂದುವರಿದಿರುವ ವಿಶಿಷ್ಟ ಸಂಪ್ರದಾಯವಾಗಿದೆ.
ಗೌರಿ ಹೂವು ಎಂದು ಕರೆಯಲ್ಪಡುವ ಗ್ಲೋರಿ ಯೊಸಾ ಸುಪರ್ಬಾ (ಅಗ್ನಿಶಿಖೆ) ಪಶ್ಚಿಮಘಟ್ಟದ ಸಹಜ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಅಪರೂಪದ ಸಸ್ಯವಾಗಿದೆ. ಇಂಗ್ಲಿಷ್ನಲ್ಲಿ ಗ್ಲೋರಿ ಲಿಲ್ಲಿ ಅಥವಾ ಪ್ಲೇಮ್ ಲಿಲ್ಲಿ ಎಂದು ಕರೆಯಲ್ಪಡುವ ಈ ಹೂವು, ಬೆಂಕಿಯ ಜ್ವಾಲೆಯಂತೆ ಕಾಣುವುದರಿಂದ ಅಗ್ನಿಶಿಖೆ ಎಂಬ ಹೆಸರನ್ನೂ ಪಡೆದಿದೆ. ಕೋಳಿ ಜುಟ್ಟಿನಂತೆ ಕಾಣುವುದರಿಂದ ಕೋಳಿಜುಟ್ಟಿನ ಹೂ ಅಥವಾ ಕೋಳಿಕುಟುಮ ಎಂಬ ಹೆಸರಿನಿಂದಲೂ ಸ್ಥಳೀಯವಾಗಿ ಗುರುತಿಸಲಾಗುತ್ತದೆ.
ಹೂವಿನ ಎಸಳುಗಳ ಕೆಳಭಾಗ ಹಳದಿ ಬಣ್ಣದಿಂದ ಕೂಡಿದ್ದು, ಮೇಲ್ಭಾಗ ಕೆಂಪು- ಕಿತ್ತಳೆ ಮಿಶ್ರಿತ ಬಣ್ಣ ಹೊಂದಿರುತ್ತದೆ. ಹೂ ಅರಳಿದಾಗ ಅದರ ಬಣ್ಣ ವಿನ್ಯಾಸ ಕನ್ನಡ ಧ್ವಜದ ಬಣ್ಣಗಳನ್ನು ನೆನಪಿಸುವಂತಿರುತ್ತದೆ.
ಗೌರಿ-ಗಣೇಶ ಹಬ್ಬದ ಅವಧಿಯಲ್ಲೇ ಸಾಮಾನ್ಯವಾಗಿ ಹೂವು ಅರಳುವುದರಿಂದ ಇದಕ್ಕೆ ಗೌರಿ ಹೂವು ಎಂಬ ಹೆಸರು ರೂಢಿಯಾಗಿದೆ ಎನ್ನಲಾಗುತ್ತದೆ.
ಭಾದ್ರಪದ ಮಾಸದ ಬಳಿಕ ಸಸ್ಯದ ಮೇಲ್ಭಾಗ ಒಣಗಿ ಮಾಯವಾಗುತ್ತದೆ. ಆದರೆ ಗೆಡ್ಡೆಯ ರೂಪದಲ್ಲಿ ನೆಲದೊಳಗೆ ಉಳಿಯುವ ಸಸ್ಯವು ಮುಂದಿನ ವರ್ಷ ಮತ್ತೆ ಚಿಗುರಿ ಹೂ ಬಿಡುತ್ತದೆ. ಹೂವು ಹಳದಿ-ಕೆಂಪು ಮಿಶ್ರಿತ ಬಣ್ಣ ಹೊಂದಿದ್ದರೆ, ಇದರ ಕಾಯಿಗಳು ಪೂರ್ತಿ ಕೆಂಪು ಬಣ್ಣದಲ್ಲಿದ್ದು ನೋಡಲು ಆಕರ್ಷಕವಾಗಿರುತ್ತವೆ. ಆದರೆ ಸಸ್ಯದ ಕೆಲವು ಭಾಗಗಳಲ್ಲಿ ವಿಷಕಾರಿ ಗುಣಗಳಿರುವುದರಿಂದ ಅವುಗಳನ್ನು ಮುಟ್ಟುವಾಗ ಹಾಗೂ ಬಳಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ.
ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಗೌರಿ ಹೂವನ್ನು ಪೂಜೆಯಲ್ಲಿ ಬಳಸುವ ಸಂಪ್ರದಾಯ ಮಲೆನಾಡಿನ ಜನಜೀವನದೊಂದಿಗೆ ಅವಿನಾಭಾವವಾಗಿ ಬೆಸೆದುಕೊಂಡಿದೆ. ಇದು ಕೇವಲ ಪೂಜಾ ಸಾಮಗ್ರಿ ಅಥವಾ ಅಲಂಕಾರದ ಸಂಕೇತವಲ್ಲ, ಪ್ರಕೃತಿ, ಸಂಪ್ರದಾಯ ಹಾಗೂ ಸಂಸ್ಕೃತಿಯ ನಡುವಿನ ಸಂಬಂಧವನ್ನು ಪ್ರತಿಬಿಂಬಿಸುವ ವಿಶಿಷ್ಟ ಹೂವಾಗಿದೆ. ಹಿರಿಯರು ಪಾಲಿಸಿಕೊಂಡು ಬಂದಿರುವ ಈ ಸಂಪ್ರದಾಯವನ್ನು ಗ್ರಾಮೀಣ ಭಾಗದ ಜನರು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.
” ಗೌರಿ ಹೂವು ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲ, ನಮ್ಮ ಹಿರಿಯರು ಉಳಿಸಿಕೊಂಡು ಬಂದಿರುವ ಸಂಪ್ರದಾಯ ಮತ್ತು ಸಂಸ್ಕೃತಿಗೂ ಸಾಕ್ಷಿಯಾಗಿದೆ. ಹಬ್ಬದ ಸಂದರ್ಭದಲ್ಲಿ ಈಹೂವನ್ನು ಪೂಜೆಯಲ್ಲಿ ಬಳಸುವ ಮೂಲಕ ಪ್ರಕೃತಿಯೊಂದಿಗೆ ನಮ್ಮ ಬದುಕಿನ ಅವಿನಾಭಾವ ಸಂಬಂಧವನ್ನು ನೆನಪಿಸಿಕೊಳ್ಳುತ್ತೇವೆ. ಇಂತಹ ಅಪರೂಪದ ಸಸ್ಯಗಳು ಕಾಡಿನಲ್ಲಿ ಬೆಳೆಯುತ್ತಿದ್ದು, ಅವುಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.”
-ಶಿಲ್ಪಾ ವಿನಯ್, ಗೃಹಿಣಿ, ಕೂತಿ ಗ್ರಾಮ
ಶುಭಾ ಖಟಾವಕರ ಮ್ಹೆತ್ರಸ್ “ಕೇವಲ ಒಂದು ದಶಕದಲ್ಲಿ ಕೃತ್ರಿಮ ಬುದ್ಧಿಮತ್ತೆಯು (ಎಐ) ಮನುಕುಲವನ್ನು ನಾಶಪಡಿಸಲಿದೆ" ಎಂದು ಎಐನ ದೈತ್ಯ ಸಂಸ್ಥೆಯಾದ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ರಾಜ್ಯ ರಾಜಕೀಯದಲ್ಲಿ ೧೯೮೩ರ ರಾಜಕೀಯ ಸನ್ನಿವೇಶ ರೂಪುಗೊಳ್ಳುತ್ತಿದೆಯೇ ಎಂಬ ಅನುಮಾನಗಳು ಶುರುವಾಗಿವೆ. ಅಂದ ಹಾಗೆ…
ಎಂ.ಕೇಶವ ಎರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯಿಂದ ಕಂಗಾಲು; ಹಿರಿಯರು, ಮಹಿಳೆಯರು, ಸವಾರರಿಗೆ ಓಡಾಟವೇ ಸವಾಲು ಮೈಸೂರು: ಒಂದರ ಮೇಲೊಂದರಂತೆ ಎರಡು…
ಪ್ರಶಾಂತ್ ಎನ್.ಮಲ್ಲಿಕ್ ಸಾರ್ವಜನಿಕರಿಗೆ ತೊಂದರೆ ತಪ್ಪುತ್ತದೆ: ಸಮರ್ಥನೆ ಡಿಜೆಗೆ ಕಡಿವಾಣ ಸರಿಯಲ್ಲ: ಅಸಮಾಧಾನ ಮೈಸೂರು: ರಾಜ್ಯದಲ್ಲಿ ಗೌರಿ ಗಣೇಶ ಹಬ್ಬದ…
ಆರ್.ಶ್ರೀನಿವಾಸ್ ೪೦೦೦ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ, ಕುಡಿಯುವ ನೀರಿಗೂ ಹಾಹಾಕಾರ ಕೆ.ಆರ್.ಪೇಟೆ: ಸುಮಾರು ೫೦ ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ…
ಮಂಜು ಕೋಟೆ ಗಣೇಶ ಮೂರ್ತಿಗಳ ಮಾರಾಟದಲ್ಲಿ ಹೆಚ್ಚಳ; ಪೈಪೋಟಿಗೆ ಇಳಿದಿರುವ ಯುವ ಸಮುದಾಯ ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಹಿಂದೂ ಸಮುದಾಯದವರು ಗೌರಿ-ಗಣೇಶ…