ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 04 ಮಂಗಳವಾರ 2022

ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ!
ಗರ್ಭಪಾತದ ಹಕ್ಕುಗಳ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮಹಿಳೆಗೆ ತನ್ನ ದೇಹದ ವಿಚಾರದಲ್ಲಿ ಇರುವ  ಸ್ವಾಯತ್ತತೆ ಹಾಗೂ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವಂತಿದೆ. ವಿವಾಹಿತರೇ ಇರಲಿ, ಅವಿವಾಹಿತರೇ ಆಗಲಿ ಎಲ್ಲಾ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳಲು ಅರ್ಹರು, ಇವರ ನಡುವೆ ತಾರತಮ್ಯ ಮಾಡುವುದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ಸ್ವಾಗತಾರ್ಹವಾಗಿದೆ. ಸಾಮಾನ್ಯವಾಗಿ ವಿವಾಹಿತ ಹಾಗೂ ಅವಿವಾಹಿತ ಮಹಿಳೆಯರು ತಮ್ಮ ದೇಹದ ಮೇಲೆ ಹಕ್ಕನ್ನು ಚಲಾಯಿಸಲು ಹೆಚ್ಚಿನ ಅಡೆತಡೆಗಳನ್ನು ಎದುರಿಸುತ್ತಾರೆ. ಇದರಿಂದಾಗಿ ಅಪಾಯಗಳು ಮತ್ತು ತೊಡಕುಗಳಿಗೆ ಕಾರಣವಾಗುತ್ತದೆ.  ಸುಪ್ರೀಂ ಕೋರ್ಟ್ ಗಮನಿಸಿರುವಂತೆ ಆಸುರಕ್ಷಿತ ಗರ್ಭಪಾತಗಳು ತಾಯಂದಿರ ಮರಣಕ್ಕೆ ಪ್ರಮುಖ ಕಾರಣವಾಗುತ್ತವೆ. ಅಸುರಕ್ಷಿತ ಗರ್ಭಪಾತಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಭಾರತದಲ್ಲಿ ನಡೆಸಲಾಗುವ ಶೇ. ೬೦ರಷ್ಟು ಗರ್ಭಪಾತಗಳು ಸುರಕ್ಷಿತವಾಗಿಲ್ಲ. ಸುರಕ್ಷಿತ ಗರ್ಭಪಾತ ಸೇವೆಗಳಿಗೆ ಅವಕಾಶ ನಿರಾಕರಿಸುವುದು, ನಿರ್ಬಂಧಿತ ಗರ್ಭಪಾತ ಅಭ್ಯಾಸಗಳು ಅಸುರಕ್ಷಿತ ಗರ್ಭಪಾತಗಳಿಗೆ ಎಡೆಮಾಡಿಕೊಡುತ್ತವೆ ಎಂದು ಅಭಿಪ್ರಾಯಪಟ್ಟಿದೆ.  ಪ್ರಸ್ತುತ ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ಹೆಣ್ಣಿನ ಹಕ್ಕು ಮತ್ತು ಘನತೆಗೆ ಹೆಚ್ಚಿನ ಒತ್ತಾಸೆ ನೀಡಿದಂತಾಗಿದೆ.
 -ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.


ಮೈಸೂರೆಂಬ ಸ್ವರ್ಗ- ನರಕ
ಮೈಸೂರಿನ ಪ್ರಸಕ್ತ ಸನ್ನಿವೇಶವನ್ನು ಗಮನಿಸಿದರೆ ‘ಸ್ವರ್ಗ ನರಕವೆಲ್ಲ ಮೇಲೆಲ್ಲೂ ಇಲ್ಲ ಮನುಜ’ ಎಂಬ ಅರ್ಥಪೂರ್ಣ ಸಾಲುಗಳು ನೆನಪಾಗುತ್ತವೆ. ರಾತ್ರಿ ಸ್ವರ್ಗದಂತೆ ಕಂಗೊಳಿಸುವ ಮೈಸೂರಿನ ದೀಪಾಲಂಕಾರ, ಬೆಳಿಗ್ಗೆಯಾದೊಡನೆ ಮೈಸೂರಿನ ಹೃದಯ ಭಾಗದಿಂದ ಹಿಡಿದು ರಾಜ
ಮಾರ್ಗದುದ್ದಕ್ಕೂ ಹೊಂದಿಕೊಂಡಿರುವ ರಸ್ತೆಗಳ ಗುಂಡಿಗಳು ನರಕ ದರ್ಶನ ಮಾಡಿಸುತ್ತವೆ. ಕಳೆದ ಎರಡು ವರ್ಷಗಳಿಂದ ‘ಕೋವಿಡ್ ಮಹಾಮಾರಿ’ ರೌದ್ರ ನರ್ತನಕ್ಕೆ ನಲುಗಿದ್ದ ಜನಸಾಮಾನ್ಯರು ದಸರಾ ಮೆರವಣಿಗೆ ನೋಡುವ ಭಾಗ್ಯದಿಂದ ವಂಚಿತರಾಗಿದ್ದರು.  ಈ ಬಾರಿ  ಅದ್ಧೂರಿ ದಸರಾ
ಆಚರಣೆ ನಡೆಸುತ್ತಿದ್ದು, ಇದಕ್ಕೆ ಪೂರಕವಾಗುವಂತೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ಮಾಡಿಕೊಳ್ಳದಿರುವುದು ಅಧಿಕಾರಿ ವಲಯ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ದಸರಾ ಕಣ್ತುಂಬಿಕೊಳ್ಳಲು  ಹೊರ ಜಿಲ್ಲೆ, ಹೊರ ರಾಜ್ಯ, ಹೊರ ದೇಶಗಳಿಂದ ಬರುವ ಪ್ರವಾಸಿಗರಿಗೆ  ಗುಂಡಿಗಳ ನರಕದರ್ಶನ ಮಾಡಿಸುವುದು ನಿಜ. ಅಕ್ಕ ಪಕ್ಕದ ತಾಲ್ಲೂಕು, ಜಿಲ್ಲೆಗಳಿಂದ ಬರುವ ಜನಸಾಮಾನ್ಯರು ರಾಜಮಾರ್ಗದ ಬದಿಗಳಲ್ಲಿ ಮೆರವಣಿಗೆ
ವೀಕ್ಷಿಸಲು ಜಮಾಯಿಸುತ್ತಾರೆ.    ಇರುವ ಇನ್ನೊಂದೆರಡು ದಿನಗಳಲ್ಲಾದರೂ ನಗರದ ಹೃದಯ ಭಾಗದಿಂದ ರಾಜಮಾರ್ಗಕ್ಕೆ ಅಂಟಿಕೊಂಡಿರುವ ರಸ್ತೆಗಳ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಪ್ರಯತ್ನ ಮಾಡಲಿ.
-ಎಂ.ಎನ್ ತುಕಾರಾಮ್ ರಾವ್, ವಿ.ವಿ ಮೊಹಲ್ಲಾ , ಮೈಸೂರು.

ಅಡಕೆ ಆಮದು ಆತಂಕಕಾರಿ
ಕೇಂದ್ರ ಸರಕಾರ ಭೂತಾನ್‌ನಿಂದ ೧೭,೦೦೦ ಟನ್ ಅಡಕೆ ಆಮದು ಮಾಡಿಕೊಳ್ಳುವ ನಿರ್ಧಾರ ಅಡಕೆ ಬೆಳೆಗಾರರಿಗೆ ತುಂಬಾ ಆತಂಕಕಾರಿ ಸಂಗತಿ. ನಮ್ಮ ದೇಶದಲ್ಲಿ ಒಂದು ಕೋಟಿಗೂ ಅಧಿಕ ಅಡಕೆ ಬೆಳೆಗಾರರ ಕುಟುಂಬಗಳಿವೆ ಎಂದು ಅಂದಾಜಿಸಲಾಗಿದೆ ಹಾಗೂ ಅಡಕೆ ಕೃಷಿ ಮತ್ತು ಅಡಕೆಗೆ ಸಂಬಂಧಿಸಿದ ಉದ್ಯಮದ ಮೇಲೆ ಅವಲಂಬಿತರು ಸುಮಾರು ಹತ್ತು ಕೋಟಿಗೂ ಅಧಿಕ ಎನ್ನಲಾಗಿದೆ, ಹೀಗಿರುವಾಗ ಈ ಹಿಂದೆ ಈ ಭಾರಿ ಪ್ರಮಾಣದ ಅಡಿಕೆ ಆಮದು ಆಗದಿರುವುದು ಈಗ ಏತಕ್ಕೆ ಎಂಬುದೇ  ಪ್ರಶ್ನೆ. ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಅಡಕೆ ಬೆಳೆಗಾರರ ಸಂಖ್ಯೆ ಅಧಿಕ. ಅತಿವೃಷ್ಟಿ,  ಅನಾವೃಷ್ಟಿ ಸಮಯದಲ್ಲೂ ಅಡಕೆ ತನ್ನ ಬೆಳೆಗಾರರ ಕೈ ಹಿಡಿಯುತ್ತಿದೆ ಎಂದರೆ ತಪ್ಪಾಗಲಾರದು. ಈ ಮಧ್ಯೆ ದೇಶದೆಲ್ಲೆಡೆ ಅಡಕೆ ಉತ್ಪಾದನೆ ಮತ್ತು ಉದ್ಯಮಗಳು ವೇಗವಾಗಿ ಬೆಳವಣಿಗೆ ಕಾಣುತ್ತಿವೆ.  ಕೇಂದ್ರ ಸರಕಾರದ ಆಮದಿನ ನಿರ್ಧಾರ ತೀರಾ ಖಂಡನಾರ್ಹ. ಅಡಕೆ ಬೆಳೆಗಾರರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರಕಾರ ಈ ದೊಡ್ಡ ಪ್ರಮಾಣದ ಅಡಕೆಯ ಆಮದಿನ ನಿರ್ಧಾರದ ಕೈ ಬಿಡಬೇಕು, ಇಲ್ಲದಿದ್ದರೆ ಈ ಆಮದು ಪಟ್ಟಭದ್ರ ಹಿತಾಸಕ್ತಿಗಳನ್ನು ಓಲೈಸಲು ಎಂಬ ಅನುಮಾನ ಅಡಕೆ ಅವಲಂಬಿತರಲ್ಲಿ ಮೂಡುವುದು ಸಹಜ.
-ವಿಜಯಕುಮಾರ್ ಎಚ್.ಕೆ., ಸಾಮಾಜಿಕ ಕಾರ್ಯಕರ್ತ.
andolanait

Recent Posts

ಚಿತ್ರದುರ್ಗದಲ್ಲಿ ಭೀಕರ ಬಸ್‌ ಅಪಘಾತ ಪ್ರಕರಣ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೋರ್ಲತ್ತು ಬಳಿ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 10ಕ್ಕೂ…

22 mins ago

ಭೀಕರ ರಸ್ತೆ ದುರಂತ: ಬಸ್‌ಗೆ ಬೆಂಕಿ ತಗುಲಿ 10ಕ್ಕೂ ಹೆಚ್ಚು ಮಂದಿ ಸಾವು

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೋರ್ಲತ್ತು ಕ್ರಾಸ್‌ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಸಜೀವ…

31 mins ago

ಓದುಗರ ಪತ್ರ:  ಮರ್ಯಾದಾ ಹತ್ಯೆಯಲ್ಲಿ ಜಾತಿ ಜೀವಂತಿಕೆ

ಜಾತಿ ವ್ಯವಸ್ಥೆಯು ಅಸಮಾನತೆಯನ್ನು ಸೃಷ್ಟಿ ಮಾಡಿದೆ. ಈ ಜಾತಿ ವ್ಯವಸ್ಥೆ ಈಗಲೂ ಜೀವಂತ ವಾಗಿದೆ ಎನ್ನುವುದಕ್ಕೆ ಬೇರೆ ಜಾತಿಯ ಹುಡುಗನನ್ನು…

45 mins ago

ಓದುಗರ ಪತ್ರ:  ಚಲನಚಿತ್ರ ರಂಗದಲ್ಲಿ ಏನಿದು ಗದ್ದಲ?

೬೦ರ ದಶಕದ ಸಿನಿಮಾರಂಗ ಯಾವ ಗಲಾಟೆ ಇಲ್ಲದೆ ಸಾಗಿತ್ತು. ರಾಜಕುಮಾರ್ ಅವರ ಸಮಕಾಲಿನ ನಟರಾದ ಕಲ್ಯಾಣ್ ಕುಮಾರ್, ಶ್ರೀನಾಥ್, ನರಸಿಂಹರಾಜು,…

46 mins ago

ಓದುಗರ ಪತ್ರ: ಚಾಮುಂಡಿಬೆಟ್ಟ ಯಥಾಸ್ಥಿತಿಯಲ್ಲೇ ಇರಲಿ

ನಾಡದೇವತೆಯಾದ ಶ್ರೀ ಚಾಮುಂಡೇಶ್ವರಿ ನೆಲೆಸಿರುವ ಬೆಟ್ಟವನ್ನು ಯಥಾಸ್ಥಿತಿಯಲ್ಲಿ ಇರುವಂತೆ ಉಳಿಸಿಕೊಳ್ಳುವುದು ಮೈಸೂರಿಗರ ಆದ್ಯ ಕರ್ತವ್ಯವಾಗಿದೆ. ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ…

48 mins ago

ಓದುಗರ ಪತ್ರ: ಪುಸ್ತಕ ಉಡುಗೊರೆ ಸಂಸ್ಕೃತಿ ಬೆಳೆಸಿ

ಚಿತ್ರದುರ್ಗದ ಪೇಟೆ ಬೀದಿಯ ಉಡುಗೊರೆ (ಗಿಫ್ಟ್) ಮಾರಾಟ ಮಳಿಗೆ ಮಕ್ಕಳು ಮತ್ತು ಪೋಷಕರಿಂದ ತುಂಬಿ ಹೋಗಿತ್ತು. ಅಲ್ಲಿದ್ದ ಹುಡುಗರನ್ನು ಏಕೆ…

1 hour ago