ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ಮುಂದುವರೆಯುತ್ತಿರುವ ಹೋಬಳಿ ಕೇಂದ್ರವಾಗಿದೆ. ಯಾವುದರಲ್ಲಿ ಮುಂದುವರೆಯುತ್ತಿರುವುದೋ ಗೊತ್ತಿಲ್ಲ, ಆದರೆ ಬಾರ್‌ಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ದುರಂತದ ಹಾಗೂ ಕಳವಳಕಾರಿ ಸಂಗತಿಯೆನಿಸಿವೆ. ಈ ಮೊದಲು ಒಂದಿದ್ದರೆ ಈಗ ರಾವಂದೂರಿನಲ್ಲಿ ಎರಡು ಖಾಸಗಿ, ಒಂದು ಎಂಎಸ್‌ಐಎಲ್, ಜತೆಗೆ ಈಗ ಹೊಸದಾಗಿ ಭೋಗನಹಳ್ಳಿ ತಿರುವಿನಲ್ಲಿ ಒಂದು, ಹೀಗೆ ನಾಲ್ಕು ಬಾರ್‌ಗಳು ತೆರೆದಿವೆ. ಹೀಗಾದರೆ ಜನರ ಆರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿ ಹೇಗೆ ಸುಧಾರಿಸಬೇಕು? ದಿನದ ಸಂಪಾದನೆಯೆಲ್ಲವೂ ರ್ಬಾ ಪಾಲಾದರೆ ಮನೆಯ ನಿರ್ವಹಣೆ ಹೇಗೆ ? ಕುಡಿತದ ಚಟ ಬೆಳೆಸಿಕೊಂಡ ಎಷ್ಟೋ ಮಂದಿ ಯುವಕರು, ಮಧ್ಯಮಯಸ್ಕರ ಜೀವನ ಹಾಗೂ ಅವರ ಮನೆಯವರ ಪಾಡು ದೇವರಿಗೆ ಪ್ರೀತಿ! ಸಂತೋಷ ಮತ್ತು ದುಃಖ ಎರಡಕ್ಕೂ ನೆಪಮಾಡಿಕೊಂಡು ಕುಡಿತಕ್ಕೆ ಹೋಗುವ ಜನರಿಗೆ ಈ ರ್ಬಾ ಗಳು ತವರುಮನೆಯಾಗಿವೆ. ಈ ಬಗ್ಗೆ ಸರ್ಕಾರ, ಜಿಲ್ಲಾಡಳಿತ ಹಾಗೂ ಗ್ರಾಮಾಡಳಿತ ಒಂದಷ್ಟು ಯೋಚಿಸಿ ಯಾವ ಪ್ರಭಾವಕ್ಕೂ ಒಳಗಾಗದೇ ಇವುಗಳಿಗೆ ಕಡಿವಾಣ ಹಾಕಬೇಕು.
-ಗೋವಿಂದೇಗೌಡ, ಅರೇನಹಳ್ಳಿ ಗ್ರಾಮ, ಪಿರಿಯಾಪಟ್ಟಣ ತಾಲ್ಲೂಕು.
ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…
ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ…
ಬೆಂಗಳೂರು : ಬಾಲಗಂಗಾಧರನಾಥ ಶ್ರೀಗಳ ಧಾರ್ಮಿಕ ಗದ್ದುಗೆ ಲೋಕಾರ್ಪಣೆ ಹಾಗೂ ಡಾ.ನಿರ್ಮಲಾನಂದನಾಥ ಶ್ರೀಗಳ ವಾರ್ಷಿಕ ಪಟ್ಟಾಭಿಷೇಕದಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ…
ಬೆಂಗಳೂರು : ಎಲ್ಲಾ ಅಧಿಕಾರಿಗಳು ಜಾತ್ಯಾತೀತ ದೃಷ್ಠಿಕೋನದಿಂದ ಕಾರ್ಯ ನಿರ್ವಹಿಸಬೇಕು. ಆಗಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ಬಳ್ಳಾರಿ : ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಗುರುವಾರ ಸಂಜೆ ನಡೆದ ಘರ್ಷಣೆ…
ಮಳೆಗಾಲದಲ್ಲಿ ಕೆರೆ ಕಟ್ಟೆಗಳು ತುಂಬಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅನಾಹುತಗಳೇ ಸೃಷ್ಟಿಯಾಗುತ್ತವೆ. ನಗರ ಪ್ರದೇಶಗಳಲ್ಲಿ ಇರುವ ಕೆರೆಗಳ ಹೂಳೆತ್ತಿ…