ಎಚ್ ಡಿ ಕೋಟೆ ತಾಲ್ಲೂಕಿನಲಿ ಜರುಗಿದ ‘ಆಂದೋಲನ’ ದಿನಪತ್ರಿಕೆಯ ೫೦ ವರ್ಷಗಳ ಸಾರ್ಥಕ ಪಯಣದ ಮುನ್ನೋಟ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಸಾಧಕರಿಬ್ಬರಿಗೆ ಸನ್ಮಾನಿಸಿರುವುದು ಸಂತಸವಾಗಿದೆ. ಪತ್ರಿಕೆಯು ಎರಡು ತಾಲೂಕುಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳ ಮುಂದಿಟ್ಟು ಕಣ್ತೆರೆಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು, ಓದುಗರ ಹೃದಯದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ವಿಶೇಷ ಪುಟಗಳಲ್ಲಿ ವೈವಿಧ್ಯಮಯವಾಗಿ ತಾಲೂಕಿನ ಹಿರಿಮೆಯನ್ನು ಪ್ರಕಟಿಸಿದ್ದೀರಿ. ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಹಿಂದುಳಿದ ತಾಲ್ಲೂಕಿನ ಬಗ್ಗೆ ತೋರಿದ ಕಾಳಜಿ ಮತ್ತು ಪ್ರೀತಿಗೆ ಧನ್ಯವಾದಗಳು.
-ಪರಶಿವಮೂರ್ತಿ ಎ್.ಪಿ, ನಂಜೀಪುರ, ಸರಗೂರು ತಾಲ್ಲೂಕು.
ಸಿಇಟಿ ಫಲಿತಾಂಶ: ಬಾಲಕರು ಮೇಲುಗೈ
(ಆಂದೋಲನ, ಜು.೩೧)
ಪ್ರತಿ ಬಾರಿಯೂ ಪಿಯುಸಿ,
ಎಸ್ಸೆಸ್ಸೆಲ್ಸಿ ಪರೀಕ್ಷಾ
ಫಲಿತಾಂಶಗಳಲ್ಲಿ
ಬಾಲಕಿಯರೇ ಮೇಲುಗೈ!
ಸದ್ಯ , ಈ ಸಾರಿ
ಸಿಇಟಿಯಲ್ಲಾದರೂ
ತೋರಿಸಿ ಬಿಟ್ಟರಲ್ಲಾ
ನಮ್ಮಹುಡುಗರು
ನಾವೂ ಸೈ!!
-ಮ.ಗು.ಬಸವಣ್ಣ, ಜೆಎಸ್‌ಎಸ್ ಸಂಸ್ಥೆ, ಸುತ್ತೂರು.
‘ಹರ್ ಘರ್ ತಿರಂಗ’ ಭಾರತ ಸರ್ಕಾರದ ಮಹತ್ವದ ಯೋಜನೆಯೇ ಸರಿ. ಆದರೆ ಜನರಿಗೆ ರಾಷ್ಟ್ರೀಯ ದ್ವಜ ಬಳಸುವಿಕೆ ಕುರಿತಾಗಿ ಇರುವ ನಿಯಮಗಳನ್ನು ತಿಳಿಸುವುದು ಮತ್ತು ಅವುಗಳನ್ನು ಪಾಲಿಸುವಂತೆ ಸೂಚಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕರ್ತವ್ಯ. ದೇಶದ ಗೌರವ, ಸ್ವಾಭಿಮಾನ, ಸರ್ವಭೌಮತೆಯನ್ನು, ಪ್ರದರ್ಶಿಸುವ ದೇಶದ ತ್ರಿವರ್ಣಧ್ವಜವನ್ನು ಹಾರಿಸಲು ಸ್ಪಷ್ಟ ನೀತಿ ನಿಯಮಗಳನ್ನು ರೂಪಿಸಲಾಗಿದೆ.Flag code of India 2000 ಮತ್ತು Prevention of insults to national honour act 1971 ಇದರ ಕುರಿತು ತಿಳಿಸುತ್ತದೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ತಿಳುವಳಿಕೆ ಹೇಳಬೇಕು. ಈ ಮಹತ್ವಕಾಂಕ್ಷಿ ಯೋಜನೆಯಡಿ ಮೇಲಿನ ನೀತಿ ನಿಯಮಗಳನ್ನು ಪಾಲಿಸಿ ದೇಶ ಧ್ವಜದ ಗೌರವ ಉಳಿಸುವುದು ಅಗತ್ಯ.
-ಪ್ರಶಾಂತ. ಜಿ, ಮಹಾರಾಜ ಕಾಲೇಜು ಮೈಸೂರು.
ಮೈಸೂರಿನ ವಿಜಯನಗರ ೪ನೇ ಹಂತದಲ್ಲಿ ಕುಡಿಯುವ ನೀರಿಗೂ ಬರ ಬಂದಿದೆ. ನಮ್ಮ ಮನೆ ಇರುವುದು ವಿಜಯನಗರ ೪ನೇ ಹಂತ, ೨ನೇ ಫೇಸ್. ಇಲ್ಲಿ ೨ ದಿನಕ್ಕೆ ಒಮ್ಮೆರಾತ್ರಿ ೩-೦೦ ಗಂಟೆಯಿಂದ ಬೆಳಿಗ್ಗೆ ೬.೦೦ ರವರೆಗೆ ನೀರು ಬಿಡುತ್ತಾರೆ. ಅಂದರೆ ೩ ಗಂಟೆ ಮಾತ್ರ ನೀರು ಸೋರುತ್ತದೆ. ಅರ್ಧ ಸಂಪೂ ತುಂಬುವುದಿಲ್ಲ. ಕೆಲವೊಮ್ಮೆ ೨ನೇ ದಿನವು ನೀರು ಬಿಡುವುದಿಲ್ಲ. ವಾಟರ್ಮೆನ್ ಕೇಳಿದರೆ ೨ ಬೋರ್ವೆಲ್ ಮಾತ್ರ ಇರುವುದು ನೀರು ಸಾಕಾಗುವುದಿಲ್ಲ ಎನ್ನುತ್ತಾರೆ. ನಮಗೂ ಟ್ಯಾಂಕರ್ ನೀರು ಹಾಕಿಸಿ ಸಾಕಾಗಿ ಹೋಗಿದೆ. ನಾನು ಏರಿಯಾ ಇಂಜಿನಿಯರ್ ಗಮನಕ್ಕೂ ತಂದೆ ಏನು ಪ್ರಯೋಜನವಾಗಿಲ್ಲ. ಮೂಲಭೂತ ಸೌಲಭ್ಯ ಕೊಡುವುದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕರ್ತವ್ಯ. ಸಮರ್ಪಕವಾಗಿ ಪ್ರತಿದಿನ ನೀರು ಒದಗಿಸುವಂತೆ ಪ್ರಾಧಿಕಾರದ ಆಯುಕ್ತರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
– ಬಿ.ಜಿ.ರಂಗೇಗೌಡ, ವಿಜಯನಗರ ಮೈಸೂರು.
ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್ಗಳ ವಿಚಾರ…
ಈ ವರ್ಷದ ದಸರಾ ಮಹೋತ್ಸವದಲ್ಲಿನ ವಿದ್ಯುತ್ ದೀಪಾಲಂಕಾರಗಳು ಪ್ರತಿ ವರ್ಷದಂತೆ ಈ ವರ್ಷವೂ ಜನರ ಮನಸ್ಸನ್ನು ಆಕರ್ಷಿಸುತ್ತಿದೆ. ಅದರಲ್ಲೂ ದೇವರಾಜ…
‘ಮತ್ತೆ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ’- ಇದು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರ ಕುರಿತು…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ನನ್ನ ಮನೆಯಲ್ಲಿ ಇಟ್ಟಿದ್ದ ನೋಟಿನ ಕಂತೆಗಳನ್ನು ಪೊಲೀಸ್ ಸಿಬ್ಬಂದಿ ಮತ್ತು ಮಹಜರ್ ಸಾಕ್ಷಿದಾರರು ಎಣಿಸಿದರು.…
ಕೆ.ಎಸ್.ಚಂದ್ರಶೇಖರ ಮೂರ್ತಿ ಮೈಸೂರಿನ ಎನ್.ಆರ್. ಕ್ಷೇತ್ರದಲ್ಲಿ ೫೦೦ಕ್ಕೂ ಹೆಚ್ಚು ಮತದಾರರ ವಿರುದ್ಧ ಸುಳ್ಳು ಮಾಹಿತಿ ಸಲ್ಲಿಕೆ ಆರೋಪ; ಪೊಲೀಸ್ ತನಿಖೆ …
ಆರ್.ಎಲ್.ಮಂಜುನಾಥ್ ದಸರಾ ನೋಡಲು ಬಂದವರ ಪಾಡು ಅಯೋಮಯ; ತಾತ್ಕಾಲಿಕ ಶೆಲ್ಟರ್ ಅಳವಡಿಸಲು ಆಗ್ರಹ ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಸರಾ ಮಹೋತ್ಸವದ…