ಎಡಿಟೋರಿಯಲ್

ಆಂದೋಲನ ವಿ4 : ವಿತ್ತ ವಿಜ್ಞಾನ ವಿಶೇಷ ವಿಹಾರ

ಇಂಧನ ಬೆಲೆ ಇಳಿಕೆ ಇಲ್ಲ

ಕಳೆದ ವರ್ಷ ಜೂನ್ ತಿಂಗಳಲ್ಲಿ ೧೧೬ ಡಾಲರ್ ಗಳಷ್ಟಿದ್ದ ಕಚ್ಚಾ ತೈಲ ದರವು ಈಗ ಪ್ರತಿ ಬ್ಯಾರೆಲ್‌ಗೆ ೭೮ ರಿಂದ ೮೫ ಡಾಲರ್‌ಗೆ ಇಳಿದಿದೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಈಗ ಪ್ರತಿ ಲೀಟರ್ ಪೆಟ್ರೋಲ್ ನಿಂದ ೧೦ ರೂಪಾಯಿಗಳಷ್ಟು ಲಾಭ ಪಡೆಯುತ್ತಿವೆ. ಇಷ್ಟಾದರೂ ಇಂಧನ ಬೆಲೆ ಇಳಿಕೆಯಾಗಿಲ್ಲ. ಲಭ್ಯ ಮಾಹಿತಿ ಪ್ರಕಾರ ತೈಲ ಸಂಸ್ಥೆಗಳಿಗೆ ಹಿಂದಿನ ನಷ್ಟವನ್ನು ತುಂಬಿಕೊಳ್ಳಲು ಸರಕಾರ ಅವಕಾಶ ನೀಡಿದೆ. ಕಳೆದ ಏಪ್ರಿಲ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಮೂರು ಸರಕಾರಿ ತೈಲ ಸಂಸ್ಥೆಗಳು ೨೧,೨೦೧ ಕೋಟಿ ರೂಪಾಯಿ ನಷ್ಟ ಅನುಭವಿಸಿವೆ. ಈ ಕಾರಣದಿಂದ ಸದ್ಯಕ್ಕೆ ಇಂಧನ ಬೆಲೆ ಇಳಿಕೆ ಸಾಧ್ಯತೆ ಇಲ್ಲ ಎನ್ನಲಾಗಿದೆ.


ಪ್ರೀಮಿಯಂ ಸ್ಮಾರ್ಟ್-ನ್ ಬಿಡುಗಡೆ

ಹೊಸ ಮಾದರಿ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಭರವಸೆ ಮೂಡಿಸಿರುವ ‘ಟೆಕ್ನೋ’ ಕಂಪೆನಿಯು ಭಾರತದಲ್ಲಿ ತನ್ನ ಮೊತ್ತ ಮೊದಲ ಪ್ರೀಮಿಯಂ PHANTOM X2 ಸ್ಮಾರ್ಟ್‌ಪೋನ್ ಬಿಡು ಗಡೆಗೊಳಿಸಿ ೩೯,೯೯೯ ರೂ. ದರ ನಿಗದಿ ಮಾಡಿದೆ. ಜ.೨ರಿಂದ ಪ್ರಿ ಬುಕಿಂಗ್ ಆರಂಭವಾಗಿದ್ದು, ಜ.೯ರಿಂದ ಮಾರಾಟಕ್ಕೆ ಲಭ್ಯವಾಗ ಲಿದೆ ಎಂದು ಕಂಪೆನಿ ತಿಳಿಸಿದೆ. ೫ಜಿ ಫೋನ್ ಇದಾಗಿದ್ದು, ಡ್ಯುಯಲ್ ಸಿಮ್, 4nm Dimensity ೯೦೦೦ ಪ್ರೊಸೆಸರ್, ೬೪ ಎಂಪಿ ಕ್ಯಾಮೆರಾ, ಅಲ್ಟ್ರಾ ಕ್ಲಿಯರ್ ನೈಟ್ ಕ್ಯಾಮೆರಾ, ಇಮೇಜ್ ಸ್ಟೆಬಿಲೈಸೇಷನ್, ಡ್ಯುಯಲ್ ವಿಡಿಯೋ, ೪ಕೆ ವಿಡಿಯೋ, ೬.೮ ಇಂಚಿನ ಸ್ಕ್ರೀನ್, ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದೆ.


ಸೂರ್ಯ, ಚಂದ್ರನತ್ತ ನೌಕೆ ರವಾನೆ ಯೋಜನೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ಇಸ್ರೊ) ೨೦೨೩ರಲ್ಲಿ ಹಲವು ವೈಜ್ಞಾನಿಕ ಆವಿಷ್ಕಾರಗಳನ್ನು ನಡೆಸುವ ಬಗ್ಗೆ ಗಮನ ಹರಿಸಲಿದೆ. ಪರೀಕ್ಷಾರ್ಥವಾಗಿ ಹಲವು ಗಗನಯಾನ ಸಂಬಂಽಸಿದ ಯೋಜನೆ ಸಂಬಂಧ ಕಾರ್ಯಾಚರಣೆಗಳನ್ನು ನಡೆಸಲು ಇಸ್ರೊ ಸಂಸ್ಥೆಯು ನಿರ್ಧರಿಸಿದ್ದು, ಪೂರಕವಾಗಿ ೨೦೨೩ರಲ್ಲಿ ಸೂರ್ಯನಲ್ಲಿಗೆ ಒಂದು ಉಪಗ್ರಹ ಹಾಗೂ ಚಂದ್ರನಲ್ಲಿಗೆ ನೌಕೆ ರವಾನಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಭಾರತದ ಹಲವು ನವೋದ್ಯಮಗಳೂ ಬಾಹ್ಯಾಕಾಶದಲ್ಲಿ ಅನೇಕ ಹೊಸ ಆವಿಷ್ಕಾರಗಳನ್ನು ನಡೆಸುವ ಬಗ್ಗೆ ಚಿಂತನೆಯನ್ನು ನಡೆಸುತ್ತಿದ್ದು, ೨೦೨೩ಕ್ಕೆ ಕಾರ್ಯರೂಪಕ್ಕೆ ತರಲು ಚಿಂತಿಸುತ್ತಿವೆ.


ಕಾವೇರಿ ನದಿ ದಂಡೆಯ ಮೇಲಿನ ಜಪದ ಕಟ್ಟೆ

ಕಾವೇರಿ ನದಿಯ ದಂಡೆಯ ಮೇಲಿನ ನಿಶ್ಶಬ್ದದ ಪರಿಸರದ ನಡುವೆ ರಮಣೀಯವಾಗಿರುವ ಒಂದು ಸುಂದರ ತಾಣ ಜಪದಕಟ್ಟೆ ಎಂಬ ಸ್ಥಳದಲ್ಲಿ ಜಪೇಶ್ವರ ಎಂಬ ಹೆಸರಿನಲ್ಲಿ ಶಿವನು ನೆಲೆಸಿದ್ದಾನೆ ಎಂಬ ನಂಬಿಕೆ ಇದೆ. ಅನೇಕ ಋಷಿ ಮುನಿಗಳು ಇಲ್ಲಿ ತಪಸ್ಸನ್ನು ಆಚರಿಸುತ್ತಿದ್ದರಿಂದ ಈ ಕ್ಷೇತ್ರಕ್ಕೆ ಜಪದಕಟ್ಟೆ ಎಂಬ ಹೆಸರು ಬಂದಿದೆ. ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನಲ್ಲಿರುವ ಕ್ಷೇತ್ರವು ಮೈಸೂರಿನಿಂದ ೭೪ ಕಿ.ಮೀ., ಕೆ.ಆರ್.ನಗರದಿಂದ ೩೫ ಕಿ.ಮೀ. ಮತ್ತು ಸಾಲಿಗ್ರಾಮದಿಂದ ೧೦ ಕಿ.ಮೀ. ದೂರದಲ್ಲಿದೆ. ಹೆಸರೇ ಸೂಚಿಸುವಂತೆ ಶಾಂತಿ ಮತ್ತು ಮನಸ್ಸಿಗೆ ನೆಮ್ಮದಿಯ ವಾತಾವರಣವನ್ನು ನೀಡುವ ಕ್ಷೇತ್ರವಾಗಿ ಪ್ರಕೃತಿಯ ಮಡಿಲಲ್ಲಿ ಅರಳಿ ನಿಂತಿದೆ.

andolanait

Recent Posts

ನಾಳೆ ಶ್ರೀ ಅಯ್ಯಪ್ಪ ಕ್ಷೇತ್ರದ ಮುಖಮಂಟಪ ಲೋಕಾರ್ಪಣೆ

ಸುಂಟಿಕೊಪ್ಪದಲ್ಲಿ ೧೮ ಲಕ್ಷ ರೂ. ವೆಚ್ಚದ ಮಂಟಪ ನಿರ್ಮಾಣ ೩ ದಿನಗಳ ಧಾರ್ಮಿಕ ಕಾರ್ಯಕ್ರಮ ಸುಂಟಿಕೊಪ್ಪ: ಇಲ್ಲಿನ ಶ್ರೀ ಪುರಂ…

56 mins ago

‘ದೇಸಿ ಬೀಜಗಳನ್ನು ಉಳಿಸಿದರೆ ವಿಷಮುಕ್ತ ಆಹಾರ ನೀಡಲು ಸಾಧ್ಯ’

ಪಿರಿಯಾಪಟ್ಟಣ: ದೇಸಿ ಬೀಜಗಳನ್ನು ಉಳಿಸಿದರೆ ಮಾತ್ರ ಮುಂದಿನ ಯುವ ಜನಾಂಗಕ್ಕೆ ವಿಷಮುಕ್ತ ಆಹಾರ ನೀಡಲು ಸಾಧ್ಯ ಎಂದು ಸಾವಯವ ರೈತ…

1 hour ago

ಕ್ರಿಸ್‌ಮಸ್ ಹಬ್ಬಕ್ಕೆ ಅರಮನೆ ನಗರಿ ಸಜ್ಜು

ಮೈಸೂರು: ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೆ, ಚರ್ಚ್‌ಗಳ ಅಂಗಳವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವ ಕಾರ್ಯ…

1 hour ago

ಡಿಎಚ್‌ಒ ವರ್ಗಾವಣೆಯಲ್ಲಿ ಎಡವಟ್ಟು

ಕೆ.ಬಿ.ರಮೇಶನಾಯಕ ಟಿಎಚ್‌ಒ ಹುದ್ದೆಗೆ ಡಿಎಚ್‌ಒ ವರ್ಗಾವಣೆ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ…

1 hour ago

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

13 hours ago