ಮೈಸೂರು: ನಾನು ರಂಗಾಯಣದ ನಿರ್ದೇಶಕನಾಗಿದ್ದ ಸಂದರ್ಭದಲ್ಲಿ ಗಿರೀಶ್ ಕಾರ್ನಾಡ್ ಅವರ ಟಿಪ್ಪು ಕಂಡ ಕನಸುಗಳು ನಾಟಕ ಪ್ರದರ್ಶನಕ್ಕೆ ಆರು ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಆದರೆ, ಈಗೀನ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ೧೫ ಲಕ್ಷ ರೂ.ಅನುದಾನ ಬಿಡುಗಡೆಯಾಗಿತ್ತು ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮಗಳ ಪ್ರಶ್ನೆಗೆ ಪತ್ರಿಕ್ರಿಯಿಸಿದ ಅವರು, ಟಿಪ್ಪು ಕಂಡ ನಿಜ ಕನಸುಗಳು ನಾಟಕದ ಮೂಲಕ ಚಾರಿತ್ರ್ಯ ಹರಣವಾಗಲಿದೆ. ಟಿಪ್ಪು ಕಂಡ ಕನಸುಗಳೆಂದು ಗಿರೀಶ್ ಕಾರ್ನಾಡ್ ಹತ್ತಾರು ವರ್ಷಗಳಿಂದೆಯೇ ಕೃತಿಯೊಂದನ್ನು ಹೊರ ರಚಿಸಿದ್ದಾರೆ. ಆದರೆ ಇವರು ಟಿಪ್ತ್ಯ್ಪು ಕಂಡ ನಿಜ ಕನಸುಗಳು ಎಂದು ಮಾಡಿಕೊಂಡಿದ್ದಾರೆ. ನಾಟಕದ ಹೆಸರನ್ನು ಕೂಡ ಸರಿಯಾಗಿ ಬದಲಾಯಿಸುವ ತಾಕತ್ತು ಸಹ ಇಲ್ಲ ಎಂದು ಲೇವಡಿ ಮಾಡಿದರು.
ನಾಟಕದಲ್ಲಿ ಸತ್ಯ ಇರಬೇಕು ಹೊರತು ರಾಜಕೀಯ ಅಜೆಂಡಗಳಲ್ಲ. ಜನರಿಗೆ ದ್ವೇಷ ಬಿತ್ತುವುದು ನಾಟಕದ ಉದ್ದೇಶವಲ್ಲ ನಾಟಕ ಮಾಡಿ ಸತ್ಯ ಹೇಳಿಲಿ ಆಗ ಯಾರು ವಿರೋಧಿಸುವುದಿಲ್ಲ. ಎಸ್.ಎಲ್.ಭೈರಪ್ಪ ಅವರ ಪರ್ವ ಮಾಡಿದಾಗ ಯಾರೊಬ್ಬರು ವಿರೋಧಿಸಲಿಲ್ಲ. ನಾನು ಮೊದಲು ಪ್ರದರ್ಶನಕ್ಕೆ ಬಂದು ನಾಟಕ ನೋಡಿದೆ. ಆದರೆ, ಟಿಪ್ಪು ನಿಜ ಕನಸುಗಳು ಎಂಬ ನಾಟಕದ ಸುಳ್ಳನ್ನು ಕೇಳಿ ಗಾಬರಿ ಆಂ. ಸಾವರ್ಕರ್ ಕುರಿತು ನಾಟಕ ಮಾಡುವುದಿದ್ದರೇ ಮಾಡಿ, ಆದ್ರೆ ಸತ್ಯ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಿಪ್ತ್ಯ್ಪು ಮತಾಂತರ ಮಾಡಿದ, ಕೊಂದ ಎಂದು ಹೇಳುತ್ತಾರೆ ಅದೆಲ್ಲ ಸುಳ್ಳು. ಸತ್ಯ ಹೇಳಬೇಕು. ಟಿಪ್ಪು ಕೊಡಗಿನಲ್ಲಿ ಮತಾಂತರ ಮಾಡಿದ ಎಂದು ಬಿಂಬಿಸುತ್ತಿದ್ದಾರೆ. ಒಂದು ಟಿಪ್ಪು ಮತಾಂತರ ಮಾಡಿz ಆದರೇ ಕೊಡಗಿನಲ್ಲಿ ಎಲ್ಲರು ಮುಸ್ಲಿಂರೇ ಆಗಬೇಕಿತ್ತಲ್ಲ? ಎಂದು ಪ್ರಶ್ನಿಸಿದರು.
ಈಗ ರಂಗಾಯಣದ ರಾಜಕೀಯ ಅಡ್ಡವಾಗಿದೆ. ಗಿರೀಶ್ ಕಾರ್ನಾಡ್ ಅವರನ್ನು ಅರ್ಬನ್ ನಕ್ಸಲ್ ಎಂದು ಟೀಕೆ ಮಾಡುತ್ತಾರೆ. ಅವರು ಅರ್ಬನ್ ನಕ್ಸಲ್ ಆಗಿದ್ದರೆ ಪದ್ಮಭೂಷಣ ಪ್ರಶಸ್ತಿ ಯಾಕೇ ನೀಡುತ್ತಿದ್ದರು?. ಗಾಂಧೀ ಕೊಂದವರೀಗ ದೇಶ ಪ್ರೇಮಿಗಳಾಗಿದ್ದಾರೆ. ದೇಶಕ್ಕಾಗಿ ಹುತಾತ್ಮರಾದವರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಇವರು ದೇಶ ಪ್ರೇಮವನ್ನು ಗುತ್ತಿಗೆ ಪಡೆದುಕೊಂಡಿದ್ದಾರ? ಪ್ರಸ್ತುತ ರಾಜಕಾರಣವನ್ನು ಧರ್ಮಕ್ಕೆ ಬೆರಸಲಾಗಿ ಈ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…
ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…