ಜಿಲ್ಲೆಗಳು

ಮಲೆಮಹದೇಶ್ವರ ಹುಲಿ ಯೋಜನೆ ಶೀಘ್ರ ಅನುಮತಿ: ಸಿಎಂ

ಅರಣ್ಯ ಇಲಾಖೆ ಅಧಿಕಾರಿಗಳು ಕ್ಷೇತ್ರಕ್ಕೆ ಹೋಗಲು ಮುಖ್ಯಮಂತ್ರಿ ತಾಕೀತು

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ ಹುಲಿ ಯೋಜನೆಗೆ ಸದ್ಯವೇ ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ವನ್ಯಜೀವಿ ಮಂಡಳಿ ಸಭೆಗೆ ತಿಳಿಸಿದರು.

ಬೆಂಗಳೂರಿನಲ್ಲಿ ಗುರುವಾರ ನೆಡದ ವನ್ಯಜೀವಿ ಮಂಡಳಿಯ ೧೬ನೇ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಮಂಡಳಿ ಸದಸ್ಯ ಬಿ.ಆರ್.ಮಲ್ಲೇಶಪ್ಪ ಅವರಿಗೆ ಸಿಎಂ ಅವರು ಈ ಉತ್ತರ ನೀಡಿದರು.

ಮಲೈಮಹದೇಶ್ವರ ಹುಲಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ಮಂಡಳಿಯೂ ಒಪ್ಪಿಗೆ ನೀಡಿ ರಾಜ್ಯ ಸಚಿವ ಸಂಪುಟವೂ ಅನುಮೋದನೆ ನೀಡಿದೆ. ಆದೇಶ ಮಾತ್ರ ಜಾರಿಯಾಗಬೇಕಾಗಿದೆ ಎಂದು ಮಲ್ಲೇಶಪ್ಪ ಅವರು ಸಿಎಂ ಗಮನಕ್ಕೆ ತಂದರು.

ಈ ಬಗ್ಗೆ ನನಗೆ ಎಲ್ಲವೂ ತಿಳಿದಿದೆ. ನಮ್ಮ ಸಚಿವ ಸೋಮಣ್ಣ ಅವರಿಗೆ ವನ್ಯಜೀವಿಗಳ ಬಗ್ಗೆ ಕಾಳಜಿ ಇರುವುದರಿಂದ ವಿಳಂಬವಾಗುತ್ತಿದೆ. ಅವರಿಗೆ ಕೆಲ ವಿಚಾರ ಅರ್ಥವಾಗಿಲ್ಲ. ಆದಷ್ಟು ಬೇಗನೇ ಈ ಕುರಿತು ಅಧಿಸೂಚನೆ ಹೊರಡಿಸಲಾಗುವುದು. ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ದೃಷ್ಟಿಯಿಂದ ಯೋಜನೆ ಜಾರಿ ಮುಖ್ಯ ಎಂದು ಸಿಎಂ ತಿಳಿಸಿದರು.

ಅರಣ್ಯ ಇಲಾಖೆಯ ೪೦ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಬೆಂಗಳೂರಿನಲ್ಲಿದ್ದೀರಿ. ಬರೀ ಕಚೇರಿಯಲ್ಲೇ ಕೂಡದೇ ಕ್ಷೇತ್ರಗಳಿಗೆ ಹೋಗಿ. ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸಿ ಎಂದು ಸಲಹೆ ನೀಡಿದರು.

ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಸ್ಥಗಿತಗೊಳಿಸಿ. ಎಲ್ಲಾ ೩೦ ಕ್ರಷರ್‌ಗಳಿಗೆ ನೊಟೀಸ್ ನೀಡಿ. ಕಪ್ಪತ್ತಗುಡ್ಡದಲ್ಲಿ ಸೂಕ್ಷ್ಮ ಪರಿಸರ ವಲಯ ಆದೇಶವಾಗಿರುವುರಿಂದ ೧೦ ಕಿ.ಮಿ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆಗೆ ಅವಕಾಶವಿಲ್ಲ ಎಂದು ಸೂಚಿಸಿದರು.

ಸಭೆಯಲ್ಲಿ ಅರಣ್ಯ ನಿಗಮದ ಅಧ್ಯಕ್ಷೆ ತಾರಾ ಅನುರಾಧ, ಮಂಡಳಿ ಸದಸ್ಯ ವಿನೋದ್‌ಕುಮಾರ್ ಬಿ. ನಾಯ್ಕ, ಹಿರಿಯ ಅಧಿಕಾರಿಗಳಾದ ಜಾವೇದ್ ಅಖ್ತರ್, ಆರ್.ಕೆ.ಸಿಂಗ್, ವಿಜಯಕುಮಾರ್ ಗೋಗಿ, ಸಂಜಯ್ ಬಿಜ್ಜೂರ್, ಶಾಶ್ವತಿ ಮಿಶ್ರ ಮತ್ತಿತರರು ಹಾಜರಿದ್ದರು.

andolanait

Recent Posts

ಅಕ್ರಮ ವಿದ್ಯುತ್‌ ಸಂಪರ್ಕ: 31 ಪ್ರಕರಣ ದಾಖಲು, 2.17 ಲಕ್ಷ ರೂ. ದಂಡ

ಮೈಸೂರು : ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…

33 seconds ago

ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯ : ಸಮಿತಿ ರಚನೆ

ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸುವ ಕುರಿತಂತೆ ಪರಿಶೀಲಿಸಲು ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವರಾದ…

18 mins ago

5 ಹುಲಿಗಳ ದರ್ಶನ : ಸೆರೆಗೆ ಆನೆಗಳ ನೆರವು ; ಗ್ರಾಮದಲ್ಲಿ ನಿಷೇಧಾಜ್ಞೆ

ಚಾಮರಾಜನಗರ : ಜಿಲ್ಲೆಯ ನಂಜೇದೇವನಪುರ ಗ್ರಾಮದ ಕಲ್ಲು ಕ್ವಾರಿಯೊಂದರಲ್ಲಿ 5 ಹುಲಿಗಳ ಇರುವಿಕೆ ಡ್ರೋಣ್‌ನಲ್ಲಿ ಸೆರೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ…

53 mins ago

ಸಾರ್ವಜನಿಕರ ಅಹವಾಲು ಸ್ವೀಕಾರ : ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದ ಸಚಿವ ಮಹದೇವಪ್ಪ

ಮೈಸೂರು : ಬೆಳಗಾವಿಯಲ್ಲಿ ನಡೆದ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸೋಮವಾರ ನಗರದಲ್ಲಿ…

57 mins ago

ಜಿಲ್ಲಾಸ್ಪತ್ರೆಗಳ ಮೇಲ್ದರ್ಜೆಗೆ ಚಿಂತನೆ : ಸಚಿವ ದಿನೇಶ್‌ ಗುಂಡೂರಾವ್‌

ಬೆಂಗಳೂರು : ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಲು…

1 hour ago

India-New Zealand | ಮುಕ್ತ ವ್ಯಾಪಾರ ಒಪ್ಪಂದ : ಭಾರಿ ಪ್ರಮಾಣದ ಸುಂಕ ಕಡಿತ

ವೆಲ್ಲಿಂಗ್ಟನ್ : ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಅಂತಿಮವಾಗಿದೆ ಎಂದು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಸೋಮವಾರ ಹೇಳಿದ್ದಾರೆ.…

1 hour ago