ಜಿಲ್ಲೆಗಳು

ಭಯೋತ್ಪಾದನೆ ಸಾರ್ವಜನಿಕರಿಗೆ ಮೈಸೂರು ಎಷ್ಟು ಸುರಕ್ಷಿತ?

-ಜೆ.ಬಿ.ರಂಗಸ್ವಾಮಿ, ನಿವೃತ್ತ ಹಿರಿy ಪೊಲೀಸ್ ಅಧಿಕಾರಿ

ದಶಕಗಳಿಂದ ಇಲ್ಲಿ ಕೆಲಸ ಮಾಡಿದ ಪೊಲೀಸ್ ಅಧಿಕಾರಿಗಳು ಮಾಫಿಯಾ ಚಟುವಟಿಕೆ ತಲೆ ಎತ್ತದಂತೆ ಮೈಸೂರನ್ನು ಸುರಕ್ಷಿತಗೊಳಿಸಿದ್ದಾರೆ. ಹಿಂದೆ ಇಲ್ಲಿ ಕೆಲಸ ಮಾಡಿದ ಎಲ್.ರೇವಣಸಿದ್ದಯ್ಯ, ಡಿ.ಎನ್.ಮುನಿಕೃಷ್ಣ, ಎಚ್.ಆರ್.ಕಸ್ತೂರಿ ರಂಗನ್, ಕೆಂಪಯ್ಯ ಮುಂತಾದ ಅಧಿಕಾರಿಗಳು ರೌಡಿ ಚಟುವಟಿಕೆಗಳು, ಅಕ್ರಮ ದಂಧೆಗಳ ಮೇಲೆ ನಿರಂತರ ದಾಳಿ ನಡೆಸಿ ನಿುಂಂತ್ರಿಸಿದ್ದರಿಂದ ಮೈಸೂರು ಇಂದು ಸುರಕ್ಷಿತ ನಗರವೆನಿಸಿಕೊಂಡಿದೆ.

೧೯೭೫ರ ವೇಳೆಗಾಗಲೇ ಮೈಸೂರು ನಗರದಲ್ಲಿ ನಾನಾ ಬಗೆಯ ಅಕ್ರಮ ದಂಧೆಗಳು ತಲೆ ಎತ್ತ ತೊಡಗಿದ್ದವು. ಕಳ್ಳಬಟ್ಟಿ ಮದ್ಯ , ಶ್ರೀಗಂಧ, ಅಮೂಲ್ಯ ವಿಗ್ರಹ, ಹರಳುಗಳು ಮುಂತಾದ ಕಳ್ಳಸಾಗಾಣಿಕೆ ಚಟುವಟಿಕೆಗಳು, ಲಾಟರಿ, ಮಟ್ಕಾ ದಂಧೆಗಳು ಎಗ್ಗಿಲ್ಲದೆ ನಡೆಯುತ್ತಿದ್ದವು. ಸ್ವಲ್ಪ ಸಡಿಲ ಬಿಟ್ಟರೆ ಸಾಕಿತ್ತು. ತೆರೆಮರೆಯುಲ್ಲಿ ನಡೆಯುತ್ತಿದ್ದ ಈ ದಂಧೆಗಳು ಹಾದಿ ಬೀದಿಗಿಳಿಯುವ ಸ್ಥಿತಿಗೆ ಮೈಸೂರು ಬಂದಿತ್ತು. ಆಗ ಬಂತು ನೋಡಿ ೧೯೭೫ರ ಎಮರ್ಜೆನ್ಸಿ.
ಪೊಲೀಸರಿಗೆ ಇನ್ನಿಲ್ಲದ ಬಲ ಬಂತು. ತಾನುಂಟೋ ಮೂಲೋಕವುಂಟೋ ಎಂದು ಮೆರೆಯುತ್ತಿದ್ದ ರೌಡಿಗಳನ್ನು, ಕಾಳ ದಂಧೆ ಕೋರರನ್ನು ಅಟ್ಟಾಡಿಸಿ ಮಟ್ಟ ಹಾಕಿದರು. ೧೯೮೦ರ ವೇಳೆಗೆ ಅಕ್ರಮ ದಂಧೆಗಳು, ರೌಡಿಗಳ ಅಟ್ಟಹಾಸ ತಗ್ಗಿತ್ತು. ಹಾಗಾಗಿ ೧೦- ೧೫ ಲಕ್ಷ ಜನಸಂಖ್ಯೆಯ ನಗರಗಳಿಗೆ ಹೋಲಿಸಿದರೆ ಮೈಸೂರು ಅತ್ಯಂತ ಸುರಕ್ಷಿತ ನಗರ.

ಆದರೆ, ಇತ್ತೀಚೆಗೆ ಹೆಚ್ಚಾಗಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಮೈಸೂರು ನಿಧಾನಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಿದೆ. ಪಾಕಿಸ್ತಾನದಿಂದ ಬಂದಿದ್ದ ಅಕ್ರಮ ವಲಸಿಗರು, ಮುಂಬಯಿ ಮಾಫಿಯಾ ಗ್ಯಾಂಗಿನವರು ಗುಟ್ಟಾಗಿ ಅಡಗಿದ್ದಕ್ಕೆ ಲೆಕ್ಕವಿಲ್ಲ. ಹೆಚ್ಚುವರಿಾಂಗಿ ಭಾರತದಲ್ಲೇ ಉಳಿದಿದ್ದಕ್ಕೆ NOLI (no Objection To Leave India) ಪಡೆದು ಮೈಸೂರಿನ ಮೂಲಕ ಹೋದದ್ದಕ್ಕೂ ಲೆಕ್ಕವಿಲ್ಲ. ಅದಕ್ಕೆ ಕುಮ್ಮಕ್ಕು ನೀಡುತ್ತಿದ್ದವರನ್ನು ಮಟ್ಟ ಹಾಕಿದ್ದರಿಂದ ಅದೂ ನಿಂತಿತು.
೨೦೦೬ರಲ್ಲಿ ಎ.ಕೆ.- ೪೭ ಮಾರಕಾಸ್ತ್ರ ಹೊಂದಿದ್ದ ಮೂವರು ಉಗ್ರಗಾಮಿಗಳು ಸೆರೆಯಾದರು. ಅವರ ಲ್ಯಾಪ್‌ಟಾಪ್ ಸಂಪರ್ಕ ಸಾಧನಗಳೆಲ್ಲವೂ ಸೀಜ್ ಆದವು. ಅವರಲ್ಲಿ ಸಿಕ್ಕ ವಸ್ತುಗಳಾದರೂ ಏನು? ಬೇರೆ ದೇಶಗಳ ಪಾಸ್‌ಪೋರ್ಟ್‌ಗಳು, ಸ್ಛೋಟಕಗಳು, ಅಪಾರ ಹಣ, ವಿದೇಶೀ ಕರೆನ್ಸಿಗಳು ಇತ್ಯಾದಿ ಸಿಕ್ಕವು. ಹೊರಬಂದ ಸತ್ಯ ಸಂಗತಿ ಕೇಳಿ ಇಡೀ ದೇಶವೇ ದಂಗುಬಡಿಯಿತು.

ಇವರು ಸಿಕ್ಕಿಬಿದ್ದ ಪ್ರಸಂಗ ಕೂಡ ರೋಚಕ. ಉದಯಗಿರಿ ಪೊಲೀಸ್ ಠಾಣೆಗೆ ಇಬ್ಬರು ವಿದ್ಯಾರ್ಥಿಗಳ ಪಾಸ್‌ಪೋರ್ಟ್ ವೆರಿಫಿಕೇಷನ್ ಬಂದಿತ್ತು. ಪೊಲೀಸ್ ಇನ್‌ಸ್ಪೆಕ್ಟರ್ ಟೇಬಲ್ ಮೇಲೆ ಆ ಹುಡುಗರ ವೋಟರ್ ಐ.ಡಿ., ವಿಳಾಸ ಇತ್ಯಾದಿ ಇತ್ಯೋಪರಿಗಳೂ ಇದ್ದವು. ಫೋಟೊ ಐಡೆಂಟಿಫಿಕೇಷನ್ ಆಗಬೇಕಿತ್ತು. ಹುಡುಗರನ್ನು ಒಳ ಕರೆದರು ಇನ್‌ಸ್ಪೆಕ್ಟರ್. ಅವರಿಬ್ಬರೂ ಕೆಂಪಗೆ ಆರು ಅಡಿ ಎತ್ತರವಿದ್ದರು. ನೋಡಿದೊಡನೆ ನೆನಪಿಟ್ಟುಕೊಳ್ಳುವ ಆಕಾರ, ಕಳೆ.

ಇನ್‌ಸ್ಪೆಕ್ಟರ್ ಎಚ್.ಎಲ್.ನಾಗರಾಜ್ ಅವರ ಹೆಸರು ವಿಳಾಸ ಇತ್ಯಾದಿಗಳನ್ನು ಕನ್ನಡದಲ್ಲೇ ಕೇಳಲು ಶುರು ಮಾಡಿದರು. ಅವರಿಬ್ಬರೂ ಏನೇನೂ ಅರ್ಥವೇ ಅಗಲಿಲ್ಲವೆಂಬಂತೆ ವರ್ತಿಸಿದರು. ಹುಟ್ಟಿದ್ದು ಬೆಳೆದಿದ್ದು ಓದಿದ್ದು ಎಲ್ಲವೂ ಮೈಸೂರೇ. ಅದರೂ ಕನ್ನಡವೇ ಗೊತ್ತಿಲ್ಲವೆಂದರೆ?

‘‘ಇವರಿಬ್ಬರೂ ಇಂಗ್ಲಿಷ್ ಮತ್ತು ಉರ್ದು ಓದಿರೋದು ಸಾರ್. ಗುಜರಾತಿನಲ್ಲಿ ಬಹಳ ವರ್ಷ ಇದ್ದರು. ಮನೇಲೂ ಕನ್ನಡ ಮಾತಾಡೋದಿಲ್ಲ’’ ಎಂದು ಜೊತೆ ಬಂದಿದ್ದ ಪಾಸ್‌ಪೋರ್ಟ್ ಏಜೆಂಟ್, ಆ ಹುಡುಗರ ಪರ ಸಮಜಾಯಿಷಿ ನೀಡಿದ. ಇನ್‌ಸ್ಪೆಕ್ಟರ್ ಮುಲಾಜಿಲ್ಲದೆ ತಿರಸ್ಕರಿಸಿ ಕಳಿಸಿದರು. ಇದಾದ ನಂತರ ಅನೇಕ ಪುಡಾರಿಗಳು ಅಲಿಗೇಷನ್ ವಾಡಿದರು. ಜಾತಿಯ ಕಾರಣಕ್ಕೆ ತಾರತಮ್ಯ ಮಾಡಿದರೆಂದು ದೂರಿದರು.

ಇದಾಗಿ ನಾಲ್ಕಾರು ತಿಂಗಳು ಕಳೆದಿತ್ತು. ಎ.ಕೆ.-೪೭ ನೊಂದಿಗೆ ಸಿಕ್ಕಿ ಬಿದ್ದ ಮೂವರು ಉಗ್ರರಲ್ಲಿ ಇದೇ ಹುಡುಗರಿದ್ದರು. ಅಮಾಯಕ ಮುಗ್ಧರಾದ ಈ ವಿದ್ಯಾರ್ಥಿಗಳನ್ನು ಬಿಡಿಸಿಕೊಳ್ಳಲು ಅನೇಕ ದೇಶಭಕ್ತರ ಮತ್ತು ಸ್ಲೀಪರ್ ಸೆಲ್ ಬುದ್ಧಿಜೀವಿಗಳ ದಂಡೇ ಶ್ರಮಿಸಿತು. ಆರೋಪ ಸ್ಥಿರಪಟ್ಟಿದ್ದರಿಂದ ಮೈಸೂರು ನ್ಯಾಯಾಲಯ ಫಹಾದ್‌ಗೆ ೨೫ ವರ್ಷ ಮತ್ತು ಮತ್ತಿಬ್ಬರಿಗೆ ೧೦ ವರ್ಷಗಳ ಶಿಕ್ಷೆ ವಿಧಿಸಿದೆ.

ಸಮಾಜ ಘಾತುಕ ಕೃತ್ಯವೆಸಗುವ ರೌಡಿಗಳಿಗೂ, ಉಗ್ರರಿಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ. ಉಗ್ರರ ಚಟುವಟಿಕೆ ಸಾರ್ವಜನಿಕರಿಗೆ ಗೊತ್ತಾಗುವುದೇ ಇಲ್ಲ. ವಿದ್ಯಾರ್ಥಿಗಳಂತೆ, ಬೇರೇನೋ ಉದ್ಯೋಗ ಮಾಡುವವರಂತೆ ಅವರ ಪಾಡಿಗೆ ಅವರು ಮಿಣ್ಣಗಿರುತ್ತಾರೆ. ಯಾರ ತಂಟೆಗೂ ಹೋಗದ ಸಾಧು ಸತ್ಪುರುಷರಂತೆ ಇರುತ್ತಾರೆ. ಅವರಿರುವ ವಠಾರದವರಿಗೇ ಅವರ ಜಾಡು ತಿಳಿುುಂವುದಿಲ್ಲ.

ಆದರೆ, ಸಾರ್ವಜನಿಕರು ತಮ್ಮ ಆಜೂಬಾಜಿನಲ್ಲಿರುವ ವ್ಯಕ್ತಿಗಳ ಚಟುವಟಿಕೆy ಮೇಲೆ ನಿಗಾ ಇಡುವುದು ಅಗತ್ಯ. ಕೆಲವರ ಸಂಶಾಂಸ್ಪದ ನಡವಳಿಕೆ, ಅಪರಾತ್ರಿಯಲ್ಲಿ ತಿರುಗಾಟ, ಅಪರಿಚಿತರು ಆ ಮನೆಗೆ ಬಂದು ಹೋಗುವುದು ಇತ್ಯಾದಿ ವಿಲಕ್ಷಣ ಸಂಗತಿಗಳನ್ನು ಕಂಡಾಗ ಪೊಲೀಸ್ ಕಮಿಷನರಿಗೆ ತಕ್ಷಣ ಸುದ್ದಿ ಮುಟ್ಟಿಸುವುದು ಅತ್ಯಗತ್ಯ. ನಿಮ್ಮ ಗೋಪ್ಯತೆಯನ್ನು ಪೊಲೀಸರು ಕಾಪಾಡುತ್ತಾರೆ. ಅನುವಾನ ಬೇಡ.

andolana

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

8 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

8 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

10 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

12 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

15 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

15 hours ago